ಪೂರ್ತಿಯಾಗಿ ಚಾರ್ಜ್ ಆದ ನಂತರ 1200 ಕಿ.ಮೀಗಳವರೆಗೆ ಚಲಿಸುತ್ತದೆ ಈ ಬೃಹತ್ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ

ಅಮೆರಿಕಾ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಟ್ರೈಟಾನ್ (Triton) ಇತ್ತೀಚೆಗೆ ಹೈದರಾಬಾದ್ ನಲ್ಲಿ ತನ್ನ ಮಾಡೆಲ್ ಹೆಚ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪ್ರದರ್ಶಿಸುವ ಮೂಲಕ ಭಾರತದಲ್ಲಿ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿದೆ. ಈ ಎಸ್‌ಯುವಿ ಟ್ರೈಟಾನ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಮೊದಲ ಕಾರ್ ಆಗಿರಲಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 1200 ಕಿ.ಮೀಗಳವರೆಗೆ ಚಲಿಸುತ್ತದೆ ಈ ಬೃಹತ್ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ

ಟ್ರೈಟಾನ್ ಹೆಚ್ ಎಲೆಕ್ಟ್ರಿಕ್ ಎಸ್‌ಯುವಿಯು ಸಾಕಷ್ಟು ದೊಡ್ಡದಾಗಿದ್ದು, ಚಂಕಿ ಫ್ರಂಟ್ ಲುಕ್ ಹಾಗೂ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಈ ಎಸ್‌ಯುವಿಯು 5,690 ಎಂಎಂ ಉದ್ದ, 2,057 ಎಂಎಂ ಎತ್ತರ ಹಾಗೂ 1,880 ಎಂಎಂ ಅಗಲ ಹೊಂದಿದೆ. ಈ ದೈತ್ಯ ಎಸ್‌ಯುವಿಯು 3,302 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಟ್ರೈಟಾನ್ ಹೆಚ್ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಎಂಟು ವಯಸ್ಕರು ಕುಳಿತು ಕೊಳ್ಳಬಹುದು.

ಪೂರ್ತಿಯಾಗಿ ಚಾರ್ಜ್ ಆದ ನಂತರ 1200 ಕಿ.ಮೀಗಳವರೆಗೆ ಚಲಿಸುತ್ತದೆ ಈ ಬೃಹತ್ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ

ಈ ಮೂಲಕ ಹೆಚ್ ಎಲೆಕ್ಟ್ರಿಕ್ ಎಸ್‌ಯುವಿ ಭಾರತದ ಅತ್ಯಂತ ವಿಶಾಲವಾದ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ 5,663 ಲೀಟರ್ (200 ಘನ ಅಡಿ) ಲಗೇಜ್ ಇಡಬಹುದಾದಷ್ಟು ಬೂಟ್ ಸ್ಪೇಸ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಸುಮಾರು ಏಳು ಟನ್‌ಗಳಷ್ಟು ತೂಕವನ್ನು ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 1200 ಕಿ.ಮೀಗಳವರೆಗೆ ಚಲಿಸುತ್ತದೆ ಈ ಬೃಹತ್ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ

ಟ್ರೈಟಾನ್ ಹೆಚ್ ಎಲೆಕ್ಟ್ರಿಕ್ ಎಸ್‌ಯುವಿಯು ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ. ಈ ಎಸ್‌ಯುವಿಯಲ್ಲಿ ಹೈಪರ್ ಚಾರ್ಜಿಂಗ್ ಆಯ್ಕೆಯನ್ನು ಹೊಂದಿರುವ 200 ಕಿ.ವ್ಯಾ ಬ್ಯಾಟರಿ ಪ್ಯಾಕ್‌ ನೀಡಲಾಗಿದೆ. ಈ ಹೈಪರ್ ಚಾರ್ಜರ್ ಬಳಸಿ ಹೆಚ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಎರಡು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಟ್ರೈಟಾನ್ ಕಂಪನಿ ಹೇಳಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 1200 ಕಿ.ಮೀಗಳವರೆಗೆ ಚಲಿಸುತ್ತದೆ ಈ ಬೃಹತ್ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ

ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಆದ ನಂತರ ಹೆಚ್ ಎಲೆಕ್ಟ್ರಿಕ್ ಎಸ್‌ಯುವಿ ಸುಮಾರು 1,200 ಕಿ.ಮೀ ದೂರ ಚಲಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಹೆಚ್ ಎಲೆಕ್ಟ್ರಿಕ್ ಎಸ್‌ಯುವಿ ವಿಶ್ವದ ಅತಿ ಉದ್ದದ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿದೆ. ಈ ಬಗ್ಗೆ ಮಾತನಾಡಿರುವ ಟ್ರೈಟಾನ್ ಇವಿ ಕಂಪನಿಯ ಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆದ ಹಿಮಾಂಶು ಬಿ ಪಟೇಲ್, ನಾವು ಮೊದಲೇ ಹೇಳಿದಂತೆ, ಭಾರತವು ಟ್ರೈಟಾನ್ ಇವಿಗಾಗಿ ಬಹಳ ಮುಖ್ಯವಾದ ಮಾರುಕಟ್ಟೆಯಾಗಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 1200 ಕಿ.ಮೀಗಳವರೆಗೆ ಚಲಿಸುತ್ತದೆ ಈ ಬೃಹತ್ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ

ತೆಲಂಗಾಣದ ಜಹೀರಾಬಾದ್ ನಲ್ಲಿರುವ ಉತ್ಪಾದನಾ ಘಟಕದಲ್ಲಿ ಸಂಪೂರ್ಣ ಮೇಕ್ ಇನ್ ಇಂಡಿಯಾ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆಗೊಳಿಸಲಾಗುವುದು. ಅಮೆರಿಕಾದ ನಂತರ ಈ ಉತ್ಪಾದನಾ ಘಟಕವು ವಿಶ್ವದ ಅತಿ ದೊಡ್ಡ ಟ್ರೈಟಾನ್ ಇವಿ ಉತ್ಪಾದನಾ ಕೇಂದ್ರವಾಗಲಿದೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ತೆಲಂಗಾಣ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯದ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್, ತೆಲಂಗಾಣ ರಾಜಧಾನಿಯಲ್ಲಿ ಮೊದಲ ಟ್ರೈಟಾನ್ ಹೆಚ್‌ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣಗೊಳಿಸಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 1200 ಕಿ.ಮೀಗಳವರೆಗೆ ಚಲಿಸುತ್ತದೆ ಈ ಬೃಹತ್ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ

ಇವಿ ಉದ್ಯಮದಲ್ಲಿ ಭಾರತದ ಶ್ರೇಷ್ಠ ಯಶಸ್ಸಿನ ಕಥೆಯ ಭಾಗವಾಗಿರುವುದಕ್ಕೆ ತಮಗೆ ಸಂತೋಷವಾಗಿದ್ದು, ತೆಲಂಗಾಣದಲ್ಲಿ ಈ ಇವಿಗಳನ್ನು ನಿರ್ಮಿಸಲು ಹೊರಟಿರುವುದರಿಂದ ಅವುಗಳು ಹೆಚ್ಚು ವಿಶೇಷವಾಗಿವೆ ಎಂದು ಹೇಳಿದರು. ಜಯೇಶ್ ರಂಜನ್ ರವರು ಸಹ ಟ್ರೈಟಾನ್ ಇವಿ ತಂಡಕ್ಕೆ ಶುಭ ಹಾರೈಸಿದರು. ಟ್ರೈಟಾನ್ ಇವಿ ವಿಶ್ವವ್ಯಾಪಿಯಾಗಿ ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಪೂರ್ತಿಯಾಗಿ ಚಾರ್ಜ್ ಆದ ನಂತರ 1200 ಕಿ.ಮೀಗಳವರೆಗೆ ಚಲಿಸುತ್ತದೆ ಈ ಬೃಹತ್ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ

ತೆಲಂಗಾಣ ಸರ್ಕಾರದ ಪೌರಾಡಳಿತ ಮತ್ತು ನಗರಾಭಿವೃದ್ಧಿ, ಕೈಗಾರಿಕೆಗಳು, ಐಟಿ ಮತ್ತು ವಾಣಿಜ್ಯ ಸಚಿವರಾದ ಕೆಟಿ ರಾಮರಾವ್ ರವರು ಮಾತನಾಡಿ, ಟ್ರೈಟಾನ್ ಇವಿ ಪರಿಣತಿ ಮತ್ತು ಇವಿ ಮಾರುಕಟ್ಟೆಯ ದೃಷ್ಟಿಕೋನವನ್ನು ತಿಳಿದುಕೊಳ್ಳಲು ಉತ್ಸುಕವಾಗಿದೆ ಎಂದು ಹೇಳಿದರು. ತೆಲಂಗಾಣ ರಾಜ್ಯದ ಪ್ರಯತ್ನಗಳಿಗೆ ಅವರು ಧನ್ಯವಾದ ಸಲ್ಲಿಸಿದರು. ಟ್ರೈಟಾನ್ ಹೆಚ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಏಳು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಪೂರ್ತಿಯಾಗಿ ಚಾರ್ಜ್ ಆದ ನಂತರ 1200 ಕಿ.ಮೀಗಳವರೆಗೆ ಚಲಿಸುತ್ತದೆ ಈ ಬೃಹತ್ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ

ಹೈದರಾಬಾದ್‌ನಲ್ಲಿ ಪ್ರದರ್ಶನಗೊಂಡ ಹೆಚ್ ಎಲೆಕ್ಟ್ರಿಕ್ ಎಸ್‌ಯುವಿಯು ಮೆಟಾಲಿಕ್ ಬ್ಲೂ ಬಣ್ಣದ್ದಲಿತ್ತು. ಮುಂದಿನ ಐದು ವರ್ಷಗಳಲ್ಲಿ 1.5 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಮೂಲಕ ಟ್ರೈಟಾನ್ ಇವಿ ಉತ್ಪಾದನಾ ಘಟಕವನ್ನು ಜಹೀರಾಬಾದ್ ಪ್ರದೇಶದಲ್ಲಿ ಒಂದು ಮಿಲಿಯನ್ ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾಗುವುದು ಎಂದು ಕಂಪನಿ ಹೇಳಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 1200 ಕಿ.ಮೀಗಳವರೆಗೆ ಚಲಿಸುತ್ತದೆ ಈ ಬೃಹತ್ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ

ಮುಂದಿನ ಕೆಲವು ತಿಂಗಳುಗಳಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಕಂಪನಿ ತಿಳಿಸಿದೆ. ಭಾರತದಿಂದ ಈಗಾಗಲೇ 2.4 ಬಿಲಿಯನ್ ಡಾಲರ್ ಖರೀದಿ ಆದೇಶಗಳನ್ನು ಸ್ವೀಕರಿಸಲಾಗಿದೆ ಎಂದು ಟ್ರೈಟಾನ್ ಕಂಪನಿ ಹೇಳಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 1200 ಕಿ.ಮೀಗಳವರೆಗೆ ಚಲಿಸುತ್ತದೆ ಈ ಬೃಹತ್ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ

ಟ್ರೈಟಾನ್ ಕಂಪನಿಯು ಭಾರತದಲ್ಲಿ ಮಾತ್ರವಲ್ಲದೇ ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ನೇಪಾಳದಂತಹ ಹಲವು ಮಾರುಕಟ್ಟೆಗಳಿಗೆ ಹಾಗೂ ಇಡೀ ಮಧ್ಯಪ್ರಾಚ್ಯದ ದೇಶಗಳಿಗೆ ಕಾರುಗಳನ್ನು ರಫ್ತು ಮಾಡಲು ಈ ಉತ್ಪಾದನಾ ಘಟಕವನ್ನು ಬಳಸಲಿದೆ.

Most Read Articles

Kannada
English summary
Triton showcases h electric suv which travels upto 1200 kms on single charge details
Story first published: Wednesday, October 13, 2021, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X