ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುತ್ತಲೇ ಇವೆ. ಇಂಧನಗಳ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಹೈರಣಾಗಿದ್ದಾರೆ. ಭಾರತದ ಬಹುತೇಕ ಎಲ್ಲಾ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 110 ಗಳ ಗಡಿ ದಾಟಿದೆ. ಇನ್ನು ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 100 ರ ಗಡಿ ದಾಟಿದೆ.

ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

ಇಂಧನಗಳ ಬೆಲೆ ಏರಿಕೆಗೆ - ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ, ಒಪೆಕ್ ದೇಶಗಳು ಕಡಿಮೆ ಪ್ರಮಾಣದಲ್ಲಿ ಇಂಧನ ಉತ್ಪಾದಿಸುತ್ತಿರುವುದು, ಭಾರತದಲ್ಲಿ ಇಂಧನಗಳ ಮೇಲೆ ವಿಧಿಸಲಾಗುವ ವಿವಿಧ ತೆರಿಗೆಗಳು ಸೇರಿದಂತೆ ಹಲವು ಕಾರಣಗಳಿವೆ. ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು.

ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

ಇದಾದ ನಂತರ ಹಲವು ರಾಜ್ಯ ಸರ್ಕಾರಗಳು ಸಹ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ತಮ್ಮ ವ್ಯಾಟ್‌ ಶುಲ್ಕವನ್ನು ಕಡಿಮೆ ಮಾಡಿವೆ. ತೆರಿಗೆ ಕಡಿತದ ನಂತರ ವ್ಯಾಟ್ ಹಾಗೂ ಸೇವಾ ಶುಲ್ಕವು ಪೆಟ್ರೋಲ್ ಮೇಲೆ 50% ನಷ್ಟು ಹಾಗೂ ಡೀಸೆಲ್ ಮೇಲೆ 40% ನಷ್ಟು ಕಡಿಮೆಯಾಗಿದೆ. ಆದರೆ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಲಾಗುತ್ತಿರುವ ತೆರಿಗೆಗಳಿಂದ ಬಾರಿ ಆದಾಯ ಗಳಿಸಿದೆ.

ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

2020-21 ರ ಹಣಕಾಸು ವರ್ಷದಲ್ಲಿ (ಏಪ್ರಿಲ್ 2020 ರಿಂದ ಮಾರ್ಚ್ 2021ರ ವರೆಗೆ) ಪೆಟ್ರೋಲ್, ಡೀಸೆಲ್ ಇಂಧನಗಳಿಂದ ಕೇಂದ್ರ ಅಬಕಾರಿ ಸುಂಕವಾಗಿ ರೂ. 3.72 ಲಕ್ಷ ಕೋಟಿ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಾಹಿತಿ ನೀಡಿದೆ. ಮಂಗಳವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಈ ಅಂಕಿ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

ಅಂದ ಹಾಗೆ 2017ರ ಹಣಕಾಸು ವರ್ಷದಲ್ಲಿ ಇಂಧನಗಳಿಂದ ಒಟ್ಟು ರೂ. 2.22 ಲಕ್ಷ ಕೋಟಿ ಅಬಕಾರಿ ಸುಂಕ ಸಂಗ್ರಹಿಸಲಾಗಿದ್ದರೆ, 2018ರ ಹಣಕಾಸು ವರ್ಷದಲ್ಲಿ ರೂ. 2.25 ಲಕ್ಷ ಕೋಟಿ, 2019ರ ಹಣಕಾಸು ವರ್ಷದಲ್ಲಿ ರೂ. 2.13 ಲಕ್ಷ ಕೋಟಿ ಹಾಗೂ 2020ರ ಹಣಕಾಸು ವರ್ಷದಲ್ಲಿ ರೂ. 1.78 ಲಕ್ಷ ಕೋಟಿ ಅಬಕಾರಿ ಸುಂಕ ಸಂಗ್ರಹಿಸಲಾಗಿತ್ತು.

ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

2020-21 ರ ಹಣಕಾಸು ವರ್ಷದಲ್ಲಿ ಕೇಂದ್ರ ಅಬಕಾರಿ ಸುಂಕದಡಿಯಲ್ಲಿ ಸಂಗ್ರಹಿಸಲಾದ ನಿಧಿಯಿಂದ ರಾಜ್ಯ ಸರ್ಕಾರಗಳಿಗೆ ಒಟ್ಟು ರೂ. 19,972 ಕೋಟಿ ತೆರಿಗೆಯನ್ನು ವರ್ಗಾಯಿಸಲಾಗಿದೆ ಎಂದು ಪಂಕಜ್ ಚೌಧರಿ ಹೇಳಿದರು. ಮೂಲ ಅಬಕಾರಿ ಸುಂಕದಿಂದ ರಾಜ್ಯಗಳು ಕೇವಲ ಪಾಲು ಪಡೆಯಲು ಅರ್ಹರಾಗಿರುವ ಕಾರಣಕ್ಕೆ ರಾಜ್ಯಗಳು ಕಡಿಮೆ ಪಾಲು ಪಡೆಯುತ್ತವೆ.

ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

ಈ ಅಬಕಾರಿ ಸುಂಕದಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್‌ಗೆ ರೂ. 1.40 ರೂ ಹಾಗೂ ಡೀಸೆಲ್‌ಗೆ ರೂ. 1.80 ಶುಲ್ಕ ವಿಧಿಸಲಾಗುತ್ತದೆ. ಇದರ ಜೊತೆಗೆ ರೂ. 11 ವಿಶೇಷ ಹೆಚ್ಚುವರಿ ಅಬಕಾರಿ ಸುಂಕ, ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಗಾಗಿ ರೂ. 13, ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿಗಾಗಿ ರೂ. 2.50 ಸೆಸ್ ಅನ್ನು ಪ್ರತಿ ಲೀಟರ್ ಪೆಟ್ರೋಲ್‌ಗೆ ಮೂಲ ಅಬಕಾರಿ ಸುಂಕದ ಮೇಲೆ ವಿಧಿಸಲಾಗುತ್ತದೆ.

ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

ಅದೇ ರೀತಿ, ಡೀಸೆಲ್‌ ವಿಷಯದಲ್ಲಿ ಸರ್ಕಾರವು ಪ್ರತಿ ಲೀಟರ್ ಡೀಸೆಲ್‌ಗೆ ರೂ. 8 ರೂ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸುತ್ತದೆ. ಜೊತೆಗೆ, ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ರೂ. 4 , ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಎಂದು ರೂ. 4 ವಿಧಿಸಲಾಗುತ್ತದೆ. ಕೇಂದ್ರ ಸರ್ಕಾರವು ವಿಧಿಸುವ ಅಬಕಾರಿ ಸುಂಕದ ಮೇಲೆ ರಾಜ್ಯಗಳು ವ್ಯಾಟ್ ಅನ್ನು ವಿಧಿಸುತ್ತವೆ ಎಂಬುದು ಗಮನಾರ್ಹ.

ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

2016ರ ಏಪ್ರಿಲ್ ನಿಂದ 2021ರ ಮಾರ್ಚ್ ವರೆಗೆ ರಾಜ್ಯಗಳು ಇಂಧನದ ಮೇಲಿನ ವ್ಯಾಟ್ ಮೂಲಕ ರೂ. 9.57 ಲಕ್ಷ ಕೋಟಿ ಸಂಗ್ರಹಿಸಿದ್ದರೆ, ಕೇಂದ್ರ ಅಬಕಾರಿ ಸಂಗ್ರಹವು ರೂ. 12.11 ಲಕ್ಷ ಕೋಟಿಗಳಾಗಿದೆ. ಈಗ ಪೆಟ್ರೋಲ್ ಮೇಲೆ ವಿಧಿಸಲಾಗುವ ಕೇಂದ್ರ ಅಬಕಾರಿ ಸುಂಕವು ರೂ. 5 ಕಡಿತದ ನಂತರ ರೂ. 27.90 ಗಳಾಗಿದೆ. ಇನ್ನು ರೂ 10 ಕಡಿತದ ನಂತರ ಡೀಸೆಲ್ ಮೇಲಿನ ಸುಂಕವು ರೂ. 21.80 ಗಳಾಗಿದೆ.

ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

ಕಳೆದ ವರ್ಷ ಒಂದು ಲೀಟರ್ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರೂ. 32.98 ಗಳಾಗಿದ್ದರೆ, ಡೀಸೆಲ್ ಮೇಲೆ ರೂ. 31.83 ಸುಂಕ ವಿಧಿಸಲಾಗುತ್ತಿತ್ತು. ಈ ಅಬಕಾರಿ ಸುಂಕವನ್ನು ಈ ವರ್ಷದ ಬಜೆಟ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ. 32.90 ಹಾಗೂ ಪ್ರತಿ ಲೀಟರ್ ಡೀಸೆಲ್‌ಗೆ ರೂ. 31.80 ಗಳಿಗೆ ಇಳಿಸಲಾಗಿದೆ. ವಾಹನ ಇಂಧನದ ಮೇಲೆ ವಿಧಿಸಲಾದ ಒಟ್ಟು ಅಬಕಾರಿ ಸುಂಕದ ಪರಿಷ್ಕರಣೆಯ ಹೊರತಾಗಿಯೂ, 2019 ರ ವರ್ಷಕ್ಕೆ ಹೋಲಿಸಿದರೆ ಈ ದರವು ಇನ್ನೂ ಹೆಚ್ಚಾಗಿದೆ.

ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

2019 ರಲ್ಲಿ ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ರೂ. 19.98 ಹಾಗೂ ಡೀಸೆಲ್ ಮೇಲೆ ರೂ. 15.83 ರೂ ತೆರಿಗೆ ವಿಧಿಸಿದೆ. ಇದರ ಜೊತೆಗೆ ಸಾರಿಗೆಯಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಬಳಕೆಯ ಮೂಲಕ ಕಳೆದ ವರ್ಷ ರೂ. 9,580 ಕೋಟಿ ವಿದೇಶಿ ವಿನಿಮಯ ವೆಚ್ಚವನ್ನು ಉಳಿಸಲಾಗಿದೆ ಎಂದು ತಿಳಿದುಬಂದಿದೆ.

ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

ದೀಪಾವಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರವು ಇಂಧನಗಳ ಮೇಲೆ ವಿಧಿಸಲಾಗುತ್ತಿದ್ದ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಇದಾದ ನಂತರ ಹಲವು ರಾಜ್ಯ ಸರ್ಕಾರಗಳು ಸಹ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ತಮ್ಮ ವ್ಯಾಟ್‌ ಶುಲ್ಕವನ್ನು ಕಡಿಮೆ ಮಾಡಿವೆ. ತೆರಿಗೆ ಕಡಿತದ ನಂತರ ವ್ಯಾಟ್ ಹಾಗೂ ಸೇವಾ ಶುಲ್ಕವು ಪೆಟ್ರೋಲ್ ಮೇಲೆ 50% ನಷ್ಟು ಹಾಗೂ ಡೀಸೆಲ್ ಮೇಲೆ 40% ನಷ್ಟು ಕಡಿಮೆಯಾಗಿದೆ.

ಇಂಧನಗಳಿಂದ ಭಾರೀ ಪ್ರಮಾಣದ ಆದಾಯ ಸಂಗ್ರಹಿಸಿದ ಕೇಂದ್ರ ಸರ್ಕಾರ

ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಆದರೆ ಆದಾಯದ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹಲವು ರಾಜ್ಯ ಸರ್ಕಾರಗಳು ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸುತ್ತಿವೆ. ಕೆಲವು ದಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದಿಲ್ಲವೆಂದು ತಿಳಿಸಿತ್ತು. ಆದರೆ ಈಗ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Union government collects rs 3 72 lakh crore excise tax from petrol diesel details
Story first published: Thursday, December 2, 2021, 10:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X