ವಿಂಡ್‌ಸ್ಕ್ರೀನ್‌ ನಿಯಮಗಳನ್ನು ಒಂದು ವರ್ಷ ಮುಂದೂಡಿದ ಕೇಂದ್ರ ಸರ್ಕಾರ

2021ರಿಂದ ದೇಶಾದ್ಯಂತ ಐಎಸ್‌ಐ ಮಾರ್ಕ್ ಹೊಂದಿರುವ ಕಾರು ವಿಂಡ್‌ಸ್ಕ್ರೀನ್‌ಗಳನ್ನು ಬಳಸುವುದು ಕಡ್ಡಾಯವೆಂದು ಕೇಂದ್ರ ಸರ್ಕಾರ ತಿಳಿತ್ತು. ಈಗ ಈ ಹೊಸ ನಿಯಮಗಳನ್ನು ಜಾರಿಗೆ ಬರುವುದನ್ನು ಒಂದು ವರ್ಷ ಮುಂದೂಡಲಾಗಿದೆ.

ವಿಂಡ್‌ಸ್ಕ್ರೀನ್‌ ನಿಯಮಗಳನ್ನು ಒಂದು ವರ್ಷ ಮುಂದೂಡಿದ ಕೇಂದ್ರ ಸರ್ಕಾರ

ವರದಿಗಳ ಪ್ರಕಾರ ಐಎಸ್ಐ ಪ್ರಮಾಣೀಕರಣ ಹಾಗೂ ಅಗತ್ಯ ಪ್ರಕ್ರಿಯೆಗಳ ವಿಳಂಬದಿಂದಾಗಿ ದೇಶದಲ್ಲಿನ ವಾಹನ ಬಿಡಿಭಾಗಗಳ ತಯಾರಕರು ಹೊಸ ನಿಯಮಗಳ ಅಡಿಯಲ್ಲಿ ಉತ್ಪಾದಿಸಲು ಸಾಧ್ಯವಿಲ್ಲವೆಂದು ತಿಳಿಸಿದ್ದರು. ಬಿಡಿಭಾಗಗಳ ತಯಾರಕರ ಮನವಿಗೆ ಸ್ಪಂದಿಸಿರುವ ಸರ್ಕಾರವು ಐಎಸ್‌ಐ ಮಾರ್ಕ್ ಹೊಂದಿರುವ ವಿಂಡ್‌ಸ್ಕ್ರೀನ್‌ಗಳ ಬಳಕೆಯನ್ನು ಒಂದು ವರ್ಷ ಮುಂದೂಡಿದೆ.

ವಿಂಡ್‌ಸ್ಕ್ರೀನ್‌ ನಿಯಮಗಳನ್ನು ಒಂದು ವರ್ಷ ಮುಂದೂಡಿದ ಕೇಂದ್ರ ಸರ್ಕಾರ

ಕಳಪೆ ಗುಣಮಟ್ಟದ ವಿಂಡ್‌ಶೀಲ್ಡ್ ಬಳಕೆಯನ್ನು ತಡೆಯುವುದಕ್ಕಾಗಿ ಸರ್ಕಾರವು ಕಾರುಗಳಲ್ಲಿ ಐಎಸ್‌ಐ ಮಾರ್ಕ್ ಹೊಂದಿರುವ ವಿಂಡ್‌ಸ್ಕ್ರೀನ್‌ಗಳನ್ನು ಕಡ್ಡಾಯಗೊಳಿಸಲು ಮುಂದಾಗಿತ್ತು. ಅಪಘಾತಗಳಾದಾಗ ಕಳಪೆ ಗುಣಮಟ್ಟದ ವಿಂಡ್‌ಶೀಲ್ಡ್'ಗಳು ಸಂಪೂರ್ಣವಾಗಿ ಮುರಿದುಹೋಗುತ್ತವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಿಂಡ್‌ಸ್ಕ್ರೀನ್‌ ನಿಯಮಗಳನ್ನು ಒಂದು ವರ್ಷ ಮುಂದೂಡಿದ ಕೇಂದ್ರ ಸರ್ಕಾರ

ಹೊಸ ನಿಯಮಗಳ ಪ್ರಕಾರ, ದೇಶದಲ್ಲಿ ಆಮದು ಮಾಡಿಕೊಳ್ಳುವ ಕಾರುಗಳಲ್ಲಿ ಐಎಸ್‌ಐ ಮಾರ್ಕ್ ಇರುವುದು ಕಡ್ಡಾಯವಲ್ಲ. ಆದರೆ ಕಾರುಗಳನ್ನು ನಾಕ್-ಡೌನ್ ಯುನಿಟ್ (ಸಿಕೆಡಿ) ಆಗಿ ತಂದರೆ, ಕಂಪನಿಯು ಬಿಐಎಸ್ ಪ್ರಮಾಣಿತ ಐಎಸ್‌ಐ ವಿಂಡ್‌ಸ್ಕ್ರೀನ್ ಬಳಸಬೇಕು.

ವಿಂಡ್‌ಸ್ಕ್ರೀನ್‌ ನಿಯಮಗಳನ್ನು ಒಂದು ವರ್ಷ ಮುಂದೂಡಿದ ಕೇಂದ್ರ ಸರ್ಕಾರ

ಬಿಐಎಸ್ ದೇಶದಲ್ಲಿರುವ ಕಾರು ವಿಂಡ್‌ಸ್ಕ್ರೀನ್‌ಗಳನ್ನು ತಯಾರಿಸುವ ಕಂಪನಿಗಳ ಉತ್ಪನ್ನಗಳ ಪರಿಶೀಲನೆಯನ್ನು ಪೂರ್ಣಗೊಳಿಸಿಲ್ಲ. ಈ ಪರಿಸ್ಥಿತಿಯಲ್ಲಿ, ಮಾನ್ಯಪುರಾವೆ ಇಲ್ಲದ ಕಂಪನಿಗಳು ವಿಂಡ್‌ಶೀಲ್ಡ್'ಗಳಲ್ಲಿ ಐಎಸ್‌ಐ ಮಾರ್ಕ್ ಬಳಸಲು ಸಾಧ್ಯವಾಗುವುದಿಲ್ಲ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಿಂಡ್‌ಸ್ಕ್ರೀನ್‌ ನಿಯಮಗಳನ್ನು ಒಂದು ವರ್ಷ ಮುಂದೂಡಿದ ಕೇಂದ್ರ ಸರ್ಕಾರ

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನಿಂದ ಅನುಮೋದನೆ ಪಡೆದ ನಂತರವೇ ಐಎಸ್‌ಐ ಮಾರ್ಕ್ ಇರುವ ವಿಂಡ್‌ಶೀಲ್ಡ್ ಉತ್ಪಾದಿಸಬಹುದು ಎಂದು ಕಂಪನಿಗಳು ಹೇಳಿವೆ. ಹಲವು ಬಿಡಿಭಾಗ ತಯಾರಕ ಕಂಪನಿಗಳು ಇನ್ನೂ ಸಹ ಕೋವಿಡ್ -19 ಕರಿ ನೆರಳಿನಿಂದ ಹೊರಬರಲು ಸಾಧ್ಯವಾಗಿಲ್ಲವೆಂದು ತಿಳಿಸಿವೆ. ಇದರಿಂದ ಹೊಸ ನಿಯಮಗಳ ಅನ್ವಯ ಉತ್ಪನ್ನವನ್ನು ಬದಲಿಸುವುದು ಅಸಾಧ್ಯವಾಗುತ್ತದೆ.

ವಿಂಡ್‌ಸ್ಕ್ರೀನ್‌ ನಿಯಮಗಳನ್ನು ಒಂದು ವರ್ಷ ಮುಂದೂಡಿದ ಕೇಂದ್ರ ಸರ್ಕಾರ

ಬಹುತೇಕ ಕಾರುಗಳಲ್ಲಿ ಕಳಪೆ ಗುಣಮಟ್ಟದ ವಿಂಡ್‌ಸ್ಕ್ರೀನ್‌ಗಳನ್ನು ಅಳವಡಿಸಲಾಗಿರುತ್ತದೆ. ಕಳಪೆ ಗುಣಮಟ್ಟದ ವಿಂಡ್‌ಸ್ಕ್ರೀನ್'ಗಳು ಅಪಘಾತದ ಸಮಯದಲ್ಲಿ ಗಾಯದ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಕಳಪೆ ವಿಂಡ್‌ಸ್ಕ್ರೀನ್‌ಗಳ ಗಾಜುಗಳು ಚಾಲಕನ ಮುಖಕ್ಕೆ ಚುಚ್ಚಿ ಆತನ ಜೀವವನ್ನು ತೆಗೆಯುವ ಸಾಧ್ಯತೆಗಳಿರುತ್ತವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಿಂಡ್‌ಸ್ಕ್ರೀನ್‌ ನಿಯಮಗಳನ್ನು ಒಂದು ವರ್ಷ ಮುಂದೂಡಿದ ಕೇಂದ್ರ ಸರ್ಕಾರ

ಈ ಮುನ್ನ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಹೊರಡಿಸಿದ್ದ ಆದೇಶದಲ್ಲಿ ಕಾರು ಕಂಪನಿಗಳು ಹಾಗೂ ಬಿಡಿಭಾಗಗಳ ತಯಾರಕರು ಐಎಸ್‌ಐ ವಿಧಿಸಿರುವ ನಿಯಮಗಳ ಪ್ರಕಾರ ವಿಂಡ್‌ಸ್ಕ್ರೀನ್ ಹಾಗೂ ವಿಂಡೋ ಪೇನ್‌ಗಳನ್ನು ಉತ್ಪಾದಿಸುವಂತೆ ಸೂಚಿಸಲಾಗಿತ್ತು. ಗಾಜಿನ ಸುರಕ್ಷತಾ ತಪಾಸಣೆ ಹಾಗೂ ಪುರಾವೆಗಳನ್ನು ಪಡೆಯಲು ಬ್ಯೂರೋ ಆಫ್ ಸ್ಟ್ಯಾಂಡರ್ಡ್ಸ್ ಮಾರ್ಚ್ 2021ರವರೆಗೆ ಕಂಪನಿಗಳಿಗೆ ಗಡುವು ನೀಡಿತ್ತು. ಈ ಮೊದಲಿನ ಆದೇಶದಂತೆ ಈ ನಿಯಮವನ್ನು 2021ರ ಏಪ್ರಿಲ್ 1ರಿಂದ ದೇಶಾದ್ಯಂತ ಜಾರಿಗೊಳಿಸಬೇಕಿತ್ತು.

ವಿಂಡ್‌ಸ್ಕ್ರೀನ್‌ ನಿಯಮಗಳನ್ನು ಒಂದು ವರ್ಷ ಮುಂದೂಡಿದ ಕೇಂದ್ರ ಸರ್ಕಾರ

ಈ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಮುಂಚಿತವಾಗಿ ಅಗತ್ಯವಿರುವ ಎಲ್ಲ ಪುರಾವೆಗಳನ್ನು ಪಡೆಯಲು ಕಾರು ಕಂಪನಿಗಳಿಗೆ ಸೂಚಿಸಲಾಗಿತ್ತು. ಆದರೆ ಕರೋನಾ ವೈರಸ್'ನಿಂದಾಗಿ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿಲ್ಲ. ಬಿಐಎಸ್ ಐ‌ಎಸ್‌ಐ ಮಾರ್ಕ್ ಹೊಂದಿಲ್ಲದ ಹೆಲ್ಮೆಟ್‌ಗಳ ಬಳಕೆಯನ್ನು ನಿಷೇಧಿಸಿದೆ. ಅಪಘಾತದ ಸಮಯದಲ್ಲಿ ಐಎಸ್ಐ ಗುರುತು ಇಲ್ಲದ ಹೆಲ್ಮೆಟ್‌ಗಳು ಚಾಲಕನ ತಲೆಯನ್ನು ರಕ್ಷಿಸಲು ಸಾಧ್ಯವಿಲ್ಲದ ಕಾರಣ ಅವುಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವೆಂದು ಬಿಐಎಸ್ ತಿಳಿಸಿದೆ.

Most Read Articles

Kannada
English summary
Union government postpones ISI marked car windscreen regulations for one year. Read in Kannada.
Story first published: Thursday, February 25, 2021, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X