Just In
Don't Miss!
- News
ಲಾಲು ಹಿರಿಯ ಪುತ್ರ, ಸೊಸೆ ವಿಚ್ಛೇದನ ಸಮಾಲೋಚನೆಗೆ ಹಾಜರ್
- Sports
Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್
- Movies
ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ಬಂದ ಆಮಿರ್ ಖಾನ್: 25 ಲಕ್ಷ ರೂ. ದೇಣಿಗೆ!
- Finance
ಜೂ.28ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Lifestyle
ಆಷಾಢ ಮಾಸ 2022: ಆಷಾಢದಲ್ಲಿ ಗರ್ಭವತಿಯಾದರೆ ಅಶುಭ ಎನ್ನಲು ವೈಜ್ಞಾನಿಕ ಕಾರಣ ಇದೇ ನೋಡಿ
- Technology
Reliance Jio: ಮುಖೇಶ್ ಅಂಬಾನಿ ರಾಜೀನಾಮೆ; ಆಕಾಶ್ ಅಂಬಾನಿ ನೂತನ ಸಾರಥಿ!
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಬಹುನೀರಿಕ್ಷಿತ 16ನೇ ಆಟೋ ಎಕ್ಸ್‌ಪೋ ಆಯೋಜನೆಗೆ ದಿನಾಂಕ ಫಿಕ್ಸ್..
ಕೋವಿಡ್ ಕಾರಣಕ್ಕೆ ಮಂದೂಡಲಾಗಿದ್ದ 16ನೇ ಆಟೋ ಎಕ್ಸ್‌ಪೋ ಆಯೋಜನೆಗೆ ದಿನಾಂಕ ನಿಗದಿಪಡಿಸಲಾಗಿದ್ದು, 2022ರ ಫೆಬ್ರವರಿಯಲ್ಲಿ ನಡೆಯಬೇಕಿದ್ದ 16ನೇ ಆವೃತ್ತಿಯ ಆಟೋ ಎಕ್ಸ್‌ಪೋ ಇದೀಗ 2023ರ ಜನವರಿ 13 ರಿಂದ ಆಯೋಜಿಸಲು ನಿರ್ಧರಿಸಲಾಗಿದೆ.

ದೇಶದ ಅತಿ ದೊಡ್ಡ ವಾಹನಗಳ ಪ್ರದರ್ಶನವಾಗಿರುವ ಆಟೋ ಎಕ್ಸ್‌ಪೋ ಅನ್ನು ಪ್ರತಿ ಎರಡು ವರ್ಷಗಳಿಗೆ ಒಂದು ಬಾರಿ ಆಯೋಜನೆ ಮಾಡಲಾಗುತ್ತಿದ್ದು, 16ನೇ ಆವೃತ್ತಿಯನ್ನು ಪೂರ್ವ ನಿಗದಿಯೆಂತೆ ಈ ವರ್ಷದ ಫೆಬ್ರವರಿಯಲ್ಲಿ ಆಯೋಜನೆ ಮಾಡಬೇಕಿತ್ತು. ಆದರೆ ಕೋವಿಡ್ ಮೂರನೇ ಅಲೆ ಭೀತಿಯಿಂದ ಆಟೋ ಎಕ್ಸ್‌ಪೋ ಮುಂದೂಡಿದ್ದ ಆಯೋಜಕರು ಮುಂದಿನ ವರ್ಷ ಜನವರಿ 13ರಿಂದ 18ರ ತನಕ ಆಯೋಜಿಸಲಾಗುತ್ತಿದೆ.

2023ರ ಜನವರಿ 13ರಂದು 18ರ ತನಕ ಗ್ರೆಟರ್ ನೋಯ್ಡಾದಲ್ಲಿರುವ ಇಂಡಿಯಾ ಮಾರ್ಟ್‌ನಲ್ಲಿ ಆಯೋಜಿಸಲಾಗುತ್ತಿದ್ದು, 2023ರ ಆಟೋ ಎಕ್ಸ್‌ಪೋದಲ್ಲಿ ಈ ಬಾರಿ ಹಲವಾರು ಹೊಸ ವಾಹನ ಮಾದರಿಗಳು ಅನಾವರರಣಗೊಳ್ಳಲಿವೆ.

ಆಟೋ ಎಕ್ಸ್‌ಪೋ ಅನ್ನು ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ACMA), ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ಮತ್ತು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಜಂಟಿಯಾಗಿ ಆಯೋಜಿಸುತ್ತವೆ.

ಭಾರತೀಯ ಆಟೋಮೊಟಿವ್ ಭವಿಷ್ಯದ ಕುರಿತು ಸಾರ್ವಜನಿಕವಾಗಿ ಮಾಹಿತಿಗಾಗಿ ಇದು ಮಹತ್ವದ ವೇದಿಕೆಯಾಗಿದ್ದು, 1986ರಿಂದ ಪ್ರತಿ ವರ್ಷಗಳಿಗೆ ಒಂದು ಬಾರಿ ನಡೆಯುತ್ತಿರುವ ಆಟೋ ಎಕ್ಸ್‌ಪೋದಲ್ಲಿ ಸಾವಿರಾರು ಕಾನ್ಸೆಪ್ಟ್ ವಾಹನಗಳು ಪ್ರದರ್ಶನಗೊಂಡಿವೆ.

1986ರಲ್ಲಿ ಮೊದಲ ಆಟೋ ಎಕ್ಸ್‌ಪೋ ನಂತರ ಎರಡನೇ ಆಟೋ ಎಕ್ಸ್‌ಪೋವನ್ನು 1993ರಲ್ಲಿ ಮೂರನೇ ಆವೃತ್ತಿಯನ್ನು 1996ರಲ್ಲಿ ನಾಲ್ಕನೇ ಆವೃತ್ತಿಯನ್ನು 1998ರಲ್ಲಿ ಆಯೋಜಿಸಿದ್ದ ಆಯೋಜಕರು ತದನಂತರ ಪ್ರತಿ ಎರಡು ವರ್ಷಗಳಿಗೆ ಒಂದು ಬಾರಿ ತಪ್ಪದೇ ಆಟೋ ಎಕ್ಸ್‌ಪೋ ಆಯೋಜಿಸುತ್ತಿದ್ದಾರೆ.

2020ರ ಆಟೋ ಎಕ್ಸ್‌ಪೋ ಕೂಡಾ ಕೂಡಾ ಕೋವಿಡ್ ಭೀತಿ ನಡುವೆಯೇ ಯಶಸ್ವಿಯಾಗಿ ಆಯೋಜಿಸಿದ್ದ ಆಯೋಜಕರು 2022ರ ಆವೃತ್ತಿಯನ್ನು ಕೋವಿಡ್ ಹೆಚ್ಚಳ ಪರಿಣಾಮ ತಾತ್ಕಾಲಿಕವಾಗಿ ಮುಂದೂಡಿದ್ದರು.

ಸದ್ಯಕ್ಕೆ ಕೋವಿಡ್ ಭೀತಿಯು ತುಸು ತಗ್ಗಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ವಿಶ್ವಾಸದೊಂದಿಗೆ ಆಯೋಜಕರು ಇದೀಗ 2023ರ ಜನವರಿ 13ರಿಂದ 16ನೇ ಆವೃತ್ತಿಯನ್ನು ಆಯೋಜಿಸಲು ನಿರ್ಧರಿಸಿದ್ದಾರೆ.

ಈ ಬಾರಿ ಭಾರತೀಯ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ಹೊಸ ಮಾದರಿಯ ಬೈಕ್ ಮತ್ತು ಕಾರು ಮಾದರಿಗಳು ಪ್ರದರ್ಶನಗೊಳ್ಳುವುದನ್ನು ಎದರು ನೋಡುತ್ತಿದ್ದು, ಆಟೋ ಎಕ್ಸ್‌ಪೋ ಮಾಹಿತಿಯನ್ನು ಡ್ರೈವ್‌ಸ್ಪಾರ್ಕ್ ತಂಡವು ಸಂಪೂರ್ಣವಾಗಿ ನಿಖರ ಮಾಹಿತಿಯನ್ನು ನೀಡಲಿದೆ.

2023ರ ಆಟೋ ಎಕ್ಸ್‌ಪೋದಲ್ಲಿ ಪ್ರಮುಖ ಕಾರುಗ ಫೇಸ್‌ಲಿಫ್ಟ್ ಜೊತೆಗೆ ಹೊಸ ಕಾರು ಮಾದರಿಗಳು ಸಹ ಪ್ರದರ್ಶನಗೊಳ್ಳಲಿದ್ದು, ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ಹೆಚ್ಚಿನ ಸಂಖ್ಯೆಯ ಇವಿ ವಾಹನ ಮಾದರಿಗಳು ಪ್ರದರ್ಶನಗೊಳ್ಳಲಿವೆ.

ಹಾಗೆಯೇ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಕಾರು ಮಾರಾಟ ಆರಂಭವಾಗುತ್ತಿರುವ ಪ್ರಮುಖ ಕಾನ್ಸೆಪ್ಟ್ ಕಾರು ಆವೃತ್ತಿಗಳನ್ನು ಪ್ರದರ್ಶನಗೊಳಿಸಲು ಸಿದ್ದವಾಗುತ್ತಿದ್ದು, 2023ರ ಆಟೋ ಎಕ್ಸ್‌ಪೋ ಈ ಬಾರಿ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ.

ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಒಂದು ವಾಹನದ ನಿರ್ಮಾಣಕ್ಕೂ ಮುನ್ನ ಅದರ ಪರಿಕಲ್ಪನೆಯ ಆಧಾರದ ಮೇಲೆ ನಿರ್ಮಾಣ ಮಾಡುವುದು ವಾಡಿಕೆ. ಇದರಿಂದ ಭವಿಷ್ಯ ವಾಹನ ಮಾದರಿಗಳನ್ನು ಜಗತ್ತಿಗೆ ಪರಿಚಯಿಸುವುದಕ್ಕೂ ಮುನ್ನ ಗ್ರಾಹಕರ ಕುತೂಹಲ ತಿಳಿಯಲು ಆಟೋ ಎಕ್ಸ್‌ಪೋಗಳು ಪ್ರಮುಖ ವೇದಿಕೆಯಾಗಿವೆ ಎನ್ನಬಹುದು.

ಇದೀಗ ನಡೆಯಲಿರುವ 16ನೇ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ ಮೋಟಾರ್ಸ್, ರೆನಾಲ್ಟ್, ನಿಸ್ಸಾನ್ ಕಂಪನಿಗಳ ಹಲವು ಎಲೆಕ್ಟ್ರಿಕ್ ಪರಿಕಲ್ಪನೆ ವಾಹನಗಳು ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ಗಮನ ಸೆಳೆಯಲಿವೆ.