Just In
- 4 min ago
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- 1 hr ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 2 hrs ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 3 hrs ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
Don't Miss!
- Lifestyle
ಮಾಘ ಪೂರ್ಣಿಮೆ: ಮಾಘ ಸ್ನಾನ ಯಾವಾಗ? ಈ ಸ್ನಾನದ ಮಹತ್ವವೇನು ಗೊತ್ತಾ?
- News
ಒಂದು ವಾರದಲ್ಲಿ ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಬಾಂಡ್ ಪಡೆಯದ ಬ್ಯಾಂಕರ್ಗಳು, ಕುಸಿದ ಷೇರುಗಳು-ಮಂದೇನು ಕಾದಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Movies
Sathya: ದಿವ್ಯಾ ಹೇಳಿದ ಸುಳ್ಳಿನಿಂದ ಸಂಕಷ್ಟಕ್ಕೆ ಸಿಲುಕಿದ ಬಾಲ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭರ್ಜರಿ ಆಫರ್.. ಹ್ಯುಂಡೈ ಕಾರುಗಳ ಮೇಲೆ 1.50 ಲಕ್ಷದವರೆಗೆ ರಿಯಾಯಿತಿ ಘೋಷಣೆ
ಪ್ರಮುಖ ಕಾರು ತಯಾರಿಕ ಕಂಪನಿ 'ಹ್ಯುಂಡೈ' ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದೆ. ಈ ಮೂಲಕ ವರ್ಷಾಂತ್ಯದಲ್ಲಿ ತನ್ನ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಇಟ್ಟುಕೊಂಡಿದೆ. ಬೇರೆ ಕಾರು ತಯಾರಿಕ ಕಂಪನಿಗಳಿಗೆ ಹೋಲಿಸಿದರೆ ಹ್ಯುಂಡೈ ತನ್ನ ವಾಹನಗಳಿಗೆ ಕೊಂಚ ಜಾಸ್ತಿಯೇ ರಿಯಾಯಿತಿ ನೀಡಿದೆ.
ಹ್ಯುಂಡೈ ಈ ಡಿಸೆಂಬರ್ ತಿಂಗಳಲ್ಲಿ ಕೋನಾ ಎಲೆಕ್ಟ್ರಿಕ್, ಗ್ರ್ಯಾಂಡ್ i10 Nios, i20 ಮತ್ತು Aura ಸೆಡಾನ್‌ಗಳ ಮೇಲೆ 1.50 ಲಕ್ಷದವರೆಗೆ ರಿಯಾಯಿತಿ ಹಾಗೂ ಆಕರ್ಷಕ ಪ್ರಯೋಜನಗಳನ್ನು ನೀಡುತ್ತಿದೆ. ಇದರಲ್ಲಿ ಎಕ್ಸ್‌ಚೇಂಜ್ ಬೋನಸ್, ನಗದು ರಿಯಾಯಿತಿ ಮತ್ತು ಕಾರ್ಪೊರೇಟ್ ಪ್ರಯೋಜನಗಳು ಇವೆ. ಔರಾ ಸೆಡಾನ್ ಮತ್ತು ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಗಳು ಸಹ ಈ ತಿಂಗಳು ರಿಯಾಯಿತಿಯೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.
ಹುಂಡೈ ಕೋನಾ ಎಲೆಕ್ಟ್ರಿಕ್ (1.50 ಲಕ್ಷ ರೂ.ವರೆಗೆ ಆಫರ್):
ಈ ವರ್ಷಾಂತ್ಯದಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‌ಯುವಿ ಗರಿಷ್ಠ ಪ್ರಯೋಜನವನ್ನು ಪಡೆಯುತ್ತಿದೆ. ಯಾವುದೇ ಕಾರ್ಪೊರೇಟ್ ಪ್ರಯೋಜನ ಅಥವಾ ಎಕ್ಸ್‌ಚೇಂಜ್ ಬೋನಸ್‌ಗಳಿಲ್ಲದಿದ್ದರೂ ಗ್ರಾಹಕರು 1.50 ಲಕ್ಷ ರೂ. ಫ್ಲಾಟ್ ನಗದು ರಿಯಾಯಿತಿಯನ್ನು ಪಡೆಯಬಹುದು. ಕೋನಾ ಎಲೆಕ್ಟ್ರಿಕ್ ಭಾರತದಲ್ಲಿ ಹ್ಯುಂಡೈ ಬಿಡುಗಡೆ ಮಾಡಿರುವ ಮೊದಲ EV ಆಗಿದೆ. ಇದು MG ZS EV ಮತ್ತು ಇತ್ತೀಚೆಗೆ ಬಿಡುಗಡೆಯಾದ BYD-Atto 3 ಗೆ ಪ್ರತಿಸ್ಪರ್ಧಿಯಾಗಿದೆ.
ಹುಂಡೈ ಕೋನಾ ಎಲೆಕ್ಟ್ರಿಕ್, 39 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು 136 hp ಪವರ್ ಮತ್ತು 395 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರನ್ನು 50kW DC ಚಾರ್ಜರ್ ಬಳಸಿಕೊಂಡು 57 ನಿಮಿಷಗಳಲ್ಲಿ 0-80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಇದು 452km ARAI- ಪ್ರಮಾಣೀಕೃತ ರೇಂಜ್ ಅನ್ನು ನೀಡುತ್ತದೆ. ಕೋನಾ ಎಲೆಕ್ಟ್ರಿಕ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯು ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ.
ಹುಂಡೈ ಗ್ರ್ಯಾಂಡ್ i10 Nios (63,000 ರೂ.ವರೆಗೆ ರಿಯಾಯಿತಿ):
ಡಿಸೆಂಬರ್‌ಗೆ ತಿಂಗಳಲ್ಲಿ ಹ್ಯುಂಡೈ ಕಂಪನಿ ಹುಂಡೈ ಗ್ರ್ಯಾಂಡ್ i10 Nios ಕಾರಿಗೆ 63,000 ರೂ.ವರೆಗೆ ಒಟ್ಟು ರಿಯಾಯಿತಿಯನ್ನು ನೀಡುತ್ತಿದೆ. 50,000 ರೂ. ನಗದು ರಿಯಾಯಿತಿಗಳು (1.0-ಲೀಟರ್ ಆವೃತ್ತಿಗೆ), 10,000 ರೂ. ಮೌಲ್ಯದ ಎಕ್ಸ್‌ಚೇಂಜ್ ಬೋನಸ್ ಮತ್ತು 3,000 ರೂ. ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ. CNG ಮತ್ತು 1.2-ಲೀಟರ್ ಆವೃತ್ತಿಗಳಿಗೆ, ಹುಂಡೈ ಕ್ರಮವಾಗಿ 25,000 ರೂ. ಮತ್ತು 20,000 ರೂ.ವರೆಗೆ ನಗದು ರಿಯಾಯಿತಿಯನ್ನು ನೀಡುತ್ತಿದೆ.
ಹುಂಡೈ ಗ್ರ್ಯಾಂಡ್ i10 Nios, ಮಾರುತಿ ಸ್ವಿಫ್ಟ್ ಮತ್ತು ಟಾಟಾ ಟಿಯಾಗೊಗೆ ದೇಶೀಯ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಕಾರು, ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. 100hp, 1.0-ಲೀಟರ್, ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 83hp, 1.2-ಲೀಟರ್, ಪೆಟ್ರೋಲ್ ಎಂಜಿನ್. ಎರಡನೇಯದು ಸಿಎನ್‌ಜಿ-ಸ್ಪೆಕ್‌ನಲ್ಲಿ ಸಿಗಲಿದ್ದು, ಇದು 69 ಎಚ್‌ಪಿ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.
ಹ್ಯುಂಡೈ ಔರಾ (43,000 ರೂ.ವರೆಗೆ ರಿಯಾಯಿತಿ)
ಈ ವರ್ಷಾಂತ್ಯದಲ್ಲಿ ಹುಂಡೈ 43,000 ರೂ.ವರೆಗೆ ಈ ಕಾರಿಗೆ ಒಟ್ಟು ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ 30,000 ರೂ. ನಗದು ರಿಯಾಯಿತಿ (CNG ಆವೃತ್ತಿ), 10,000 ರೂ. ಮೌಲ್ಯದ ಎಕ್ಸ್‌ಚೇಂಜ್ ಬೋನಸ್ (1.2-ಲೀಟರ್ ಮತ್ತು CNG), 3,000 ರೂ. ಕಾರ್ಪೊರೇಟ್ ರಿಯಾಯಿತಿ ನೀಡಲಾಗಿದೆ. ಔರಾ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್ ಮತ್ತು ಹೋಂಡಾ ಅಮೇಜ್‌ನಂತಹ ಇತರ ಕಾಂಪ್ಯಾಕ್ಟ್ ಸೆಡಾನ್‌ಗಳಿಗೆ ಭಾರೀ ಪೈಪೋಟಿ ನೀಡಲಿದೆ.
ಹ್ಯುಂಡೈ i20 (30,000 ರೂ.ವರೆಗೆ ಆಫರ್):
ಹ್ಯುಂಡೈ i20ಯ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳಿಗೆ 30,000 ರೂ.ವರೆಗೆ ಒಟ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರಲ್ಲಿ 20,000 ರೂ.ನಗದು ರಿಯಾಯಿತಿ, 10,000 ರೂ. ಎಕ್ಸ್‌ಚೇಂಜ್ ಬೋನಸ್‌ಗಳು ಸೇರಿವೆ. ಆದರೆ, ಮಿಡ್-ಸ್ಪೆಕ್ ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ಟ್ರಿಮ್‌ಗಳಲ್ಲಿ ಮಾತ್ರ ಈ ಪ್ರಯೋಜನ ಸಿಗುತ್ತಿದೆ. i20 83hp, 1.2-ಲೀಟರ್ ಪೆಟ್ರೋಲ್, 120hp, 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 100hp, 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಈ ಕಾರು ಮಾರುತಿ ಸುಜುಕಿ ಬಲೆನೊ, ಟಾಟಾ ಆಲ್ಟ್ರೋಜ್ ಮತ್ತು ಟೊಯೋಟಾ ಗ್ಲಾನ್ಜಾಗಳಿಗೆ ಪ್ರತಿಸ್ಪರ್ಧಿಯಾಗಿದೆ.