ಹೆಚ್ಚು ಮೈಲೇಜ್, ಆಕರ್ಷಕ ಬೆಲೆಯ ಟೊಯೊಟಾ ಇನೋವಾ ಹೈಕ್ರಾಸ್ ಕಾರಿನ ವಿಶೇಷತೆಗಳು

ಜಪಾನಿನ ವಾಹನ ತಯಾರಕ ಕಂಪನಿಯಾದ ಟೊಯೊಟಾ ಅಂತಿಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಇನೋವಾ ಹೈಕ್ರಾಸ್ 3-ಸಾಲಿನ ಎಂಪಿವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟೊಯೊಟಾ ಇನೋವಾ ಹೈಕ್ರಾಸ್ ಕಾರಿನ ಆರಂಬಿಕ ಬೆಲೆಯು ರೂ, 18.30 ಲಕ್ಷವಾಗಿದ್ದು, ಇದರ ಟಾಪ್-ಸ್ಪೆಕ್ ಸ್ಟ್ರಾಂಗ್ ಹೈಬ್ರಿಡ್ ಮಾದರಿಗೆ ರೂ. 28.97 ಲಕ್ಷವಾಗಿದೆ.

ಹೊಸ ಟೊಯೊಟಾ ಇನೋವಾ ಹೈಕ್ರಾಸ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ರೂ 50,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ಹೊಸ ಟೊಯೊಟಾ ಇನೋವಾ ಹೈಕ್ರಾಸ್ ಪೆಟ್ರೋಲ್ ಆವೃತ್ತಿಯು 2 ಟ್ರಿಮ್‌ಗಳಲ್ಲಿ ಲಭ್ಯವಿದ್ದು, ಇದು G-SLF ಮತ್ತು GX ಆಗಿದೆ. ಇನ್ನು ಒಟ್ಟು 4 ರೂಪಾಂತರಗಳಲ್ಲಿ. ಎರಡೂ ಟ್ರಿಮ್‌ಗಳನ್ನು 7 ಮತ್ತು 8-ಸೀಟ್ ಲೇಔಟ್‌ನಲ್ಲಿ ನೀಡಲಾಗುತ್ತದೆ. ಪೆಟ್ರೋಲ್ ಎಂಪಿವಿಯ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.18.30 ಲಕ್ಷದಿಂದ 19.20 ಲಕ್ಷ ವಾಗಿದೆ.

ರೂಪಾಂತರಗಳು
ಹೈಕ್ರಾಸ್ ಕಾರಿನ ಸ್ಟ್ರಾಂಗ್ ಹೈಬ್ರಿಡ್ ಮಾದರಿಯು 3 ಟ್ರಿಮ್ ಹಂತಗಳಲ್ಲಿ ಲಭ್ಯವಿದೆ. ಇದು VX, ZX ಮತ್ತು ZX(O) ಆಗಿದೆ. ಮೊದಲನೆಯದು 7 ಮತ್ತು 8-ಆಸನಗಳ ವಿನ್ಯಾಸದಲ್ಲಿ ಲಭ್ಯವಿದೆ. ಇದು ಮೂಲ VX 7-ಸೀಟರ್‌ಗೆ ರೂ.24.01 ಲಕ್ಷದ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ ಮತ್ತು ಟಾಪ್-ಸ್ಪೆಕ್ ZX (O) ಗೆ ರೂ.28.97 ಲಕ್ಷವಾಗಿದೆ. ಈ ಹೊಸ ಹೈಕ್ರಾಸ್ ಒಟ್ಟು ಐದು ಟ್ರಿಮ್ ಹಂತಗಳಲ್ಲಿ ಲಭ್ಯವಿದೆ. ಇದು G, GX, VX, ZX ಮತ್ತು ZX(O) ಆಗಿದೆ.

ಬಣ್ಣಗಳು
ಈ ಇನೋವಾ ಹೈಕ್ರಾಸ್ ಬ್ಲ್ಯಾಕ್ಲಿಶ್ ಅಗೆಹಾ ಗ್ಲಾಸ್ ಫ್ಲೇಕ್, ಪ್ಲಾಟಿನಂ ವೈಟ್ ಪರ್ಲ್, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಪರ್ಲ್ ಕ್ರಿಸ್ಟಲ್ ಶೈನ್, ಸಿಲ್ವರ್ ಮೆಟಾಲಿಕ್, ಅವಂತ್-ಗಾರ್ಡ್ ಬ್ರೋಂಜ್ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ ಮತ್ತು ಸೂಪರ್ ವೈಟ್ ಎಂಬ7 ಬಾಹ್ಯ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅನುಪಾತದಲ್ಲಿ, ಹೊಸ ಹೈಕ್ರಾಸ್ 4755 ಎಂಎಂ ಉದ್ದ, 1845 ಎಂಎಂ ಅಗಲ ಮತ್ತು 1785 ಎಂಎಂ ಎತ್ತರ ಮತ್ತು 2850 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಈ ಟೊಯೊಟಾ ಇನೋವಾ ಹೈಕ್ರಾಸ್ ಮಾದರಿಯು ಇನೋವಾ ಕ್ರಿಸ್ಟಾಗಿಂತ 20 ಎಂಎಂ ಉದ್ದ ಮತ್ತು ಅಗಲವಾಗಿದೆ. ಆದರೆ ಇದರ ಎತ್ತರವು ಒಂದೇ ಆಗಿರುತ್ತದೆ, ಆದರೆ ವೀಲ್ ಬೇಸ್ ಅನ್ನು 100 ಎಂಎಂವರೆಗೆ ವಿಸ್ತರಿಸಲಾಗಿದೆ. ವ್ಹೀಲ್‌ಬೇಸ್‌ನ ಹೆಚ್ಚಳವು ಉತ್ತಮ ಕ್ಯಾಬಿನ್ ಜಾಗವನ್ನು ನೀಡುತ್ತದೆ. ಈ ಹೊಸ ಹೈಕ್ರಾಸ್ ಎಂಪಿವಿಯು ಟೊಯೋಟಾ ಸೇಫ್ಟಿ ಸೆನ್ಸ್ ಸೂಟ್ ಆಫ್ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟ್ಸ್ ಸಿಸ್ಟಂ) ನೊಂದಿಗೆ ಬರುತ್ತದೆ.

ಫೀಚರ್ಸ್
ಈ ಕಾರಿನ ADAS ವೈಶಿಷ್ಟ್ಯಗಳು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರ್, ಲೇನ್ ಕೀಪ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಪ್ರಿ-ಕೊಲಿಷನ್ ಸಿಸ್ಟಂ ಅನ್ನು ಒಳಗೊಂಡಿದೆ.ಇತರ ಸುರಕ್ಷತಾ ವೈಶಿಷ್ಟ್ಯಗಳಲ್ಲಿ 6 ಏರ್‌ಬ್ಯಾಗ್‌ಗಳು, ಟ್ರ್ಯಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು EBD ಜೊತೆಗೆ ABS ಸೇರಿವೆ. ಕಿಯಾ ಕಾರ್ನಿವಲ್ ಮತ್ತು ಟೊಯೊಟಾ ಆಲ್ಫರ್ಡ್ ಸೇರಿದಂತೆ ಪ್ರೀಮಿಯಂ ಎಂಪಿವಿಗಳಲ್ಲಿರುವಂತೆ ಹೊಸ ಹೈಕ್ರಾಸ್ ಮಧ್ಯದ ಸಾಲಿನ ಆಸನಗಳಿಗೆ ಒಟ್ಟೋಮನ್ ಕಾರ್ಯದೊಂದಿಗೆ ಬರುತ್ತದೆ.

ವೈಶಿಷ್ಟ್ಯಗಳ ವಿಷಯದಲ್ಲಿ, ಈ ಎಂಪಿವಿಯಲ್ಲಿ ಸ್ಪೀಕರ್ BL ಆಡಿಯೊ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಕನೆಕ್ಟಿವಿಟಿ ಕಾರ್ ಟೆಕ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಸಂಪರ್ಕದೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪ್ಯಾಡಲ್ ಶಿಫ್ಟರ್‌ಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ದೊಡ್ಡ ಪನೋರಮಿಕ್ ಸನ್‌ರೂಫ್ ಮತ್ತು ಚಾಲಿತ ಟೈಲ್‌ಗೇಟ್ ಅನ್ನು ಹೊಂದಿದೆ, ಈ ಹೊಸ ಇನೋವಾ ಹೈಕ್ರಾಸ್ ಅನ್ನು ಟೊಯೊಟಾದ TNGA ಮೊನೊಕೊಕ್ ಚಾಸಿಸ್‌ನಲ್ಲಿ ಫ್ರಂಟ್ ವೀಲ್ ಡ್ರೈವ್ ಲೇಔಟ್‌ನೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಎಂಜಿನ್
ಈ ಹೊಸ ಇನೋವಾ ಹೈಕ್ರಾಸ್ ಮಾದರಿಯು ಇನ್ನೋವಾ ಕ್ರಿಸ್ಟಾಗಿಂತ ಉತ್ತಮ ನಿರ್ವಹಣೆ ಮತ್ತು ಡ್ರೈವ್ ಅನುಭವವನ್ನು ಒದಗಿಸುತ್ತದೆ, ಈ ಕಾರು ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದು 2.0-ಲೀಟರ್ ನ್ಯಾಚುರಲ್-ಆಸ್ಪೈರ್ಡ್ ಮತ್ತು 2.0-ಲೀಟರ್ ಪೆಟ್ರೋಲ್ ಜೊತೆಗೆ ಟೊಯೊಟಾದ ಸೆಲ್ಫ್ ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ. ಹೈಬ್ರಿಡ್ ಅಲ್ಲದ ಆವೃತ್ತಿಯು 172 ಬಿಹೆಚ್‍ಪಿ ಪವರ್ ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು CVT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹೈಬ್ರಿಡ್ ಪವರ್‌ಟ್ರೇನ್ 186 ಬಿಎಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Find here some top highlights of toyota innova hycross details
Story first published: Friday, December 30, 2022, 6:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X