YouTube

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

2022ರ ಜುಲೈ ತಿಂಗಳಿನಲ್ಲಿ ಕಿಯಾ ಇಂಡಿಯಾವನ್ನು ಮಹೀಂದ್ರಾ 5,000 ಯುನಿಟ್‌ಗಳಿಗಿಂತ ಹೆಚ್ಚು ಮಾರಾಟ ಮಾಡಿತು. ಕಿಯಾ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟವಾಗುತ್ತಿದೆ.

ಸೆಮಿಕಂಡಕ್ಟರ್ ಪೂರೈಕೆಯಲ್ಲಿ ನಡೆಯುತ್ತಿರುವ ಕೊರತೆಯ ಹೊರತಾಗಿಯೂ, ಕಿಯಾ ಇಂಡಿಯಾ ಜುಲೈ 2021 ರಲ್ಲಿ 15,016 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಕಳೆದ ತಿಂಗಳು 22,022 ಯುನಿಟ್ ಮಾರಾಟದೊಂದಿಗೆ ಶೇಕಡಾ 46.7 ರಷ್ಟು ಬಲವಾದ ಬೆಳವಣಿಗೆಯನ್ನು ದಾಖಲಿಸಿದೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಭಾರತದಲ್ಲಿ ಮಾರುತಿ ಸುಜುಕಿಯಂತಹ ಕಾರುಗಳೊಂದಿಗೆ ಸ್ಪರ್ಧಿಸುವ ದೇಶದ ಪ್ರಮುಖ ವಾಹನ ತಯಾರಕರಲ್ಲಿ ಕಿಯಾ ಇಂಡಿಯಾ ಒಂದಾಗಿದೆ. ಕಿಯಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ಕಾರು ಉತ್ಪನ್ನಗಳ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದೆ. ಆದರೆ ಕಳೆದ ತಿಂಗಳು ಕೆಲವು ಕಿಯಾ ಕಾರುಗಳು ಉತ್ತಮ ಮಾರಾಟವನ್ನು ಕಂಡಿದೆ. ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಕಿಯಾ ಸೆಲ್ಟೋಸ್

2021 ಜುಲೈ ತಿಂಗಳಿನಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯ 6,983 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಜುಲೈ 2022 ರಲ್ಲಿ 8,541 ಯುನಿಟ್ ಮಾರಾಟವನ್ನು ದಾಖಲಿಸಿದೆ, ಇದರಿಂದಾಗಿ 22 ಶೇಕಡಾ ಬೆಳವಣಿಗೆಯನ್ನು ಕಂಡಿದೆ. ಇತ್ತೀಚೆಗೆ, ಕಿಯಾ ಇಂಡಿಯಾ ಸೆಲ್ಟೋಸ್ ಲೈನ್ ಅಪ್ ಅನ್ನು ಹೊಸ ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಎಲ್ಲಾ ನಾಲ್ಕು ಚಕ್ರಗಳಲ್ಲಿ ಆರು ಏರ್‌ಬ್ಯಾಗ್‌ಗಳು ಮತ್ತು ಡಿಸ್ಕ್ ಬ್ರೇಕ್‌ಗಳೊಂದಿಗೆ ನವೀಕರಿಸಿದೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಸೆಲ್ಟೋಸ್ ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಭಾರತೀಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಯಶ್ವಸಿಯಾಗಿದೆ. ಭಾರತದ ಗ್ರಾಹಕರು ಈ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಮಾರಾಟದಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಸೆಲ್ಟೋಸ್ ಯಶಸ್ಸು ದೇಶದಲ್ಲಿ ದಕ್ಷಿಣ ಕೊರಿಯಾದ ವಾಹನ ತಯಾರಕರಾದ ಕಿಯಾಗೆ ಅಡಿಪಾಯ ಹಾಕಿತು. ಪ್ರಸ್ತುತ ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಹಲವು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಇವುಗಳಲ್ಲಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಗಳಾಗಿವೆ. ಈ ಎಸ್‍ಯುವಿ ಮಾದರಿಯ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 115 ಬಿ‍ಎಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 138 ಬಿಎಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಎಲ್ಲಾ ಎಂಜಿನ್ ಗಳು ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿದ್ದು, 1.5 ಲೀಟರ್ ಪೆಟ್ರೋಲ್ ಸಿವಿ‍ಟಿ, 1.5 ಲೀಟರ್ ಡೀಸೆಲ್‍ಗೆ ಐವಿ‍ಟಿ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 6 ಸ್ಪೀಡಿನ ಮ್ಯಾನುವಲ್ ಹಾಗೂ 7 ಸ್ಪೀಡಿನ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಕೂಡ ಅಳವಡಿಸಲಾಗಿದೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಕಿಯಾ ಸೊನೆಟ್

ಕಳೆದ ತಿಂಗಳು ಆರು ಶೇಕಡಾ ಕುಸಿತದ ಹೊರತಾಗಿಯೂ ಕಿಯಾ ಸೊನೆಟ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕಂಪನಿಯು ಕಳೆದ ತಿಂಗಳು ಭಾರತದಲ್ಲಿ ಕಿಯಾ ಸೊನೆಟ್ 7,215 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಜುಲೈ 2021 ರಲ್ಲಿ 7,675 ಯುನಿಟ್ ಮಾರಾಟಕ್ಕೆ ಹೋಲಿಸಿದರೆ. ಕಳೆದ ತಿಂಗಳು ಮಾರಾಟದಲ್ಲಿ ಕುಸಿತವು ಸೆಮಿಕಂಡಕ್ಟರ್ ಪೂರೈಕೆಯಲ್ಲಿ ನಡೆಯುತ್ತಿರುವ ಕೊರತೆಯಿಂದಾಗಿದೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಕಿಯಾ ಇಂಡಿಯಾ ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಸೊನೆಟ್(Sonet) ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಸೆಲ್ಟೋಸ್, ಕಾರ್ನಿವಲ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಕಿಯಾ ಸೊನೆಟ್ ಬಿಡುಗಡೆಯಾದ ಎರಡು ವರ್ಷದೊಳಗೆ ದೇಶೀಯ ಮಾರುಕಟ್ಟೆಯಲ್ಲಿ 1.5 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಈ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಈ ಎಸ್‍ಯುವಿಯು ಅದರ ಬೆಲೆ ಮತ್ತು ವೈಶಿಷ್ಟ್ಯಗಳ ಕಾರಣದಿಂದಾಗಿ ಸಾಕಷ್ಟು ಗಮನ ಸೆಳೆಯಿತು .ಹೆಚ್ಚು ಸ್ಥಳೀಯವಾಗಿರುವ ಈ ಎಸ್‍ಯುವಿ ಕಳೆದ 21 ತಿಂಗಳುಗಳಲ್ಲಿ ಕಂಪನಿಗೆ ಅಗ್ರ ಮಾರಾಟಗಾರ ಎಂದು ಸಾಬೀತಾಗಿದೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಜನಪ್ರಿಯ ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯ ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ. ಇದರಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ 84 ಬಿಹೆಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಇನ್ನು ಟಾಪ್ ಸ್ಪೆಕ್ ಮಾದರಿಯಲ್ಲಿರುವ 1.0-ಲೀಟರ್ ಪೆಟ್ರೋಲ್ ಎಂಜಿನ್ 119 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಅಥವಾ 6-ಸ್ಪೀಡ್ ಐಎಂಟಿ ಅನ್ನು ಕೂಡ ಜೋಡಿಸಲಾಗಿದೆ. ಈ ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯ ಡೀಸೆಲ್ ಎಂಜಿನ್ ಬಗ್ಗೆ ಹೇಳುವುದಾದರೆ, 1.5-ಲೀಟರ್ ಡೀಸೆಲ್ ಡಬ್ಲ್ಯುಜಿಟಿ ಎಂಜಿನ್ 99 ಬಿಹೆಚ್‌ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ವಿಜಿಟಿ ಎಂಜಿನ್ 114 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಕಿಯಾ ಕಾರೆನ್ಸ್

ಈ ಕಿಯಾ ಕಾರೆನ್ಸ್ ಜುಲೈ 2022 ರಲ್ಲಿ ಮೂರನೇ ಶ್ರೇಯಾಂಕವನ್ನು ಪಡೆದುಕೊಂಡಿದೆ. ವಾಹನ ತಯಾರಕರು ಕಳೆದ ತಿಂಗಳು ಕ್ಯಾರೆನ್ಸ್‌ನ 5,978 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ.ಈ ವಾಹನವನ್ನು ಇತ್ತೀಚೆಗೆ GNCAP ಮೂಲಕ ಪರೀಕ್ಷಿಸಲಾಗಿದೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಸದ್ಯ ಕಿಯಾ ಕಾರೆನ್ಸ್ ಕಾರು ಮಾದರಿಯು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್‌ ಹೊಂದಿರುವ ಎಂಪಿವಿ ಕಾರು ಮಾದರಿಯಾಗಿದ್ದು, ಹೊಸ ಕಾರು ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಹೊಸ ಕಾರು ಖರೀದಿಗೆ ಲಭ್ಯವಿದೆ. ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಮಧ್ಯಮ ಕ್ರಮಾಂಕದ ಎಂಪಿವಿ ಮತ್ತು ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಹೊಸ ಕಾರು ಮಾದರಿಯಲ್ಲಿ ಪೆಟ್ರೋಲ್ ಮಾದರಿಗಳಿಂತಲೂ ಡೀಸೆಲ್ ಮಾದರಿಗಳಿಗೆ ಹೆಚ್ಚು ಬೇಡಿಕೆಯಿದೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...

ಹೊಸ ಕಾರಿನಲ್ಲಿ ವಿವಿಧ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದ್ದು, 1.5-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.4-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 140-ಬಿಎಚ್‌ಪಿ, 242-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Here is list kia top 3 bestselling cars in july 2022 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X