Just In
- 24 min ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 1 hr ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 1 hr ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 2 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- Movies
27, 100ರ ಸಂಭ್ರಮಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚ - ಶಿವಣ್ಣ, ದರ್ಶನ್!
- News
BBC ಸಾಕ್ಷ್ಯಚಿತ್ರಕ್ಕೆ ನಿರ್ಬಂಧ: ಕೇಂದ್ರಕ್ಕೆ ಸುಪ್ರೀಂ ನೋಟೀಸ್
- Sports
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
- Technology
ಅರ್ಧಕೋಟಿಗೂ ಅಧಿಕ ಬೆಲೆಯಲ್ಲಿ ಈ ಹಳೇ ಐಫೋನ್ ಮಾರಾಟ!..ಅದ್ಹೇಗೆ ಸಾಧ್ಯ ಅಂತೀರಾ!?
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅತ್ಯಂತ ಕಡಿಮೆ ಬೆಲೆಯ ಹೊಸ ಪಿಎಂವಿ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು
ಮುಂಬೈ ಮೂಲದ ಇವಿ ಸ್ಟಾರ್ಟಪ್ ಪಿಎಂವಿ ಎಲೆಕ್ಟ್ರಿಕ್ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಆದ EaS-E ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು.
ಈ ಹೊಸ ಪಿಎಂವಿ EaS-E ದೇಶದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ವಾಹನವಾಗಿದೆ. ಈ ಹೊಸ ಪಿಎಂವಿ EaS-E ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.79 ಲಕ್ಷವಾಗಿದೆ. ಇದು ಪರಿಚಯಾತ್ಮಕ ಬೆಲೆಯಾಗಿದೆ.
ಹೊಸ ಪಿಎಂವಿ EaS-E ಎಲೆಕ್ಟ್ರಿಕ್ ಕಾರಿಗೆ ಈಗಾಗಲೇ ಸುಮಾರು 6,000 ಮುಂಗಡ-ಬುಕ್ಕಿಂಗ್ ಗಳನ್ನು ಸ್ವೀಕರಿಸಿದೆ. ಆಸಕ್ತ ಗ್ರಾಹಕರು ಸಣ್ಣ ಎಲೆಕ್ಟ್ರಿಕ್ ವಾಹನವನ್ನು ಆನ್‌ಲೈನ್‌ನಲ್ಲಿ ರೂ 2,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ದೈನಂದಿನ ಪ್ರಯಾಣಕ್ಕಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಬರುತ್ತಿದೆ ಪಿಎಂವಿ ಎಲೆಕ್ಟ್ರಿಕ್ ಕಾರು. ಭಾರತದ ಈ ಚಿಕ್ಕ ಎಲೆಕ್ಟ್ರಿಕ್ ಕಾರಿನಲ್ಲಿ ಇಬ್ಬರು ವಯಸ್ಕರು ಮತ್ತು ಮಗುವಿಗೆ ಅವಕಾಶವನ್ನು ಹೊಂದಿದೆ.
ಉದ್ದಳತೆ
ನಗರ ಪ್ರದೇಶದ ಗ್ರಾಹಕರನ್ನು ಗುರಿಯಾಗಿಸಿಕೊಂಡ ಪಿಎಂವಿ EaS-E ಎಲೆಕ್ಟ್ರಿಕ್ ಕಾರು 2,915 ಎಂಎಂ, 1,1157 ಎಂಎಂ ಅಗಲ ಮತ್ತು 1,600 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಪಿಎಂವಿ EaS-E ಎಲೆಕ್ಟ್ರಿಕ್ ಕಾರು 2,087 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ ಮತ್ತು 550 ಕೆಜಿ ತೂಕವನ್ನು ಹೊಂದಿದೆ.
ವಿನ್ಯಾಸ ಮತ್ತು ಫೀಚರ್ಸ್
PMV EaS-E ಎಲೆಕ್ಟ್ರಿಕ್ ಕಾರು ಫಂಕಿ ಸ್ಟೈಲಿಂಗ್‌ನೊಂದಿಗೆ ಬರುತ್ತದೆ, ಈ ಕಾರಿನಲ್ಲಿ ರೌಂಡ್ ಹೆಡ್‌ಲ್ಯಾಂಪ್‌ಗಳು, ಅಗಲದ ಉದ್ದಕ್ಕೂ ಚಲಿಸುವ ಎಲ್ಇಡಿ ಲೈಟ್ ಬಾರ್ ಮತ್ತು ಸ್ಲಿಮ್ ಎಲ್ಇಡಿ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಹೊಸ ಮಾದರಿಯು ಡಿಜಿಟಲ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಎಸಿ, ರಿಮೋಟ್ ಕೀಲೆಸ್ ಎಂಟ್ರಿ ಮತ್ತು ರಿಮೋಟ್ ಪಾರ್ಕ್ ಅಸಿಸ್ಟ್, ಕ್ರೂಸ್ ಕಂಟ್ರೋಲ್‌ಗಳು, ಏರ್‌ಬ್ಯಾಗ್‌ಗಳು, ಇತ್ಯಾದಿಗಳಂತಹ ಹಲವಾರು ಉನ್ನತ-ಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಸಣ್ಣ ಎಲೆಕ್ಟ್ರಿಕ್ ಕಾರಿನಲ್ಲಿ ರಿಮೋಟ್ ಕಂಟ್ರೋಲ್ ಎಸಿ, ಲ್ಯಾಂಪ್ ಗಳು. ವಿಂಡೋಗಳು ಮತ್ತು ಹಾರ್ನ್‌ನೊಂದಿಗೆ ಬರುತ್ತದೆ. ಈ ಸಣ್ಣ ಕಾರು ಪುನರುತ್ಪಾದಕ ಬ್ರೇಕಿಂಗ್ ಮತ್ತು ಓವರ್-ದಿ-ಏರ್ ನವೀಕರಣಗಳನ್ನು ಬೆಂಬಲಿಸುತ್ತದೆ. ಇದು ವಿವಿಧ ಡ್ರೈವಿಂಗ್ ಮೋಡ್‌ಗಳು, ಅಡಿ-ಮುಕ್ತ ಚಾಲನೆ, ಬ್ಲೂಟೂತ್ ಸಂಪರ್ಕ, ಆನ್‌ಬೋರ್ಡ್ ನ್ಯಾವಿಗೇಷನ್, ಮ್ಯೂಸಿಕ್ ನಿಯಂತ್ರಣಕ್ಕೆ ಪ್ರವೇಶ ಮತ್ತು ಸಂಪರ್ಕಿತ ಸ್ಮಾರ್ಟ್‌ಫೋನ್‌ಗೆ ಟೆಲಿಫೋನಿ ನಿಯಂತ್ರಣ ಗಳನ್ನು ನೀಡುತ್ತದೆ.
ಬ್ಯಾಟರಿ ಪ್ಯಾಕ್
PMV EaS-E ಎಲೆಕ್ಟ್ರಿಕ್ ಕಾರಿನಲ್ಲಿ 48B ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು 3 ರೇಂಜ್ ಆಯ್ಕೆಗಳನ್ನು ನೀಡುತ್ತದೆ. ಇದು 120km, 160km ಮತ್ತು 200km ಆಗಿದೆ. ಈ ಎಲೆಕ್ಟ್ರಿಕ್ ಕಾರಿನ ಟಾಪ್ ಸ್ಪೀಡ್ 70 ಕಿ.ಮೀ ಆಗಿದೆ. ಈ ಕಾರನ್ನು 4 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.ಯಾವುದೇ 15A ಔಟ್ಲೆಟ್ನಿಂದ ಇದನ್ನು ಚಾರ್ಜ್ ಮಾಡಬಹುದಾಗಿದೆ, ಆದರೆ ಗ್ರಾಹಕರು ಹೊಸ ಇವಿಯೊಂದಿಗೆ 3kW AC ಚಾರ್ಜರ್ ಅನ್ನು ಸಹ ಪಡೆಯಬಹುದು.
ಈ ಎಲೆಕ್ಟ್ರಿಕ್ ಕಾರು 13 ಬಿಹೆಚ್‍ಪಿ ಪವರ್ ಮತ್ತು 50 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಸಣ್ಣ ಎಲೆಕ್ಟ್ರಿಕ್ ಕಾರು 5 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಪಿಎಂವಿ ಎಲೆಕ್ಟ್ರಿಕ್ ತನ್ನ ಉತ್ಪಾದನಾ ಯುನಿಟ್ ಅನ್ನು ಪುಣೆಯಲ್ಲಿ ಸ್ಥಾಪಿಸಲು ಯೋಜಿಸುತ್ತಿದೆ. ಕಂಪನಿಯು 2023ರ ಮಧ್ಯದ ವೇಳೆಗೆ ಸಣ್ಣ ಪಿಎಂವಿ EaS-E ಎಲೆಕ್ಟ್ರಿಕ್ ಕಾರಿನ ವಿತರಣೆಯನ್ನು ಪ್ರಾರಂಭಿಸಲು ಯೋಜಿಸಿದೆ.