ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಸೆಡಾನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.19.50 ಲಕ್ಷವಾಗಿದೆ.

ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಸೆಡಾನ್ ತನ್ನ ಹೋಂಡಾ ಸೆನ್ಸಿಂಗ್ ತಂತ್ರಜ್ಞಾನ ಅಥವಾ ADAS ವೈಶಿಷ್ಟ್ಯಗಳನ್ನು ಭಾರತಕ್ಕೆ ತಂದ ಮೊದಲ ಹೋಂಡಾ ಕಾರು. ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಹೈಬ್ರಿಡ್ ಸೆಡಾನ್ ಅನ್ನು ಭಾರತದಲ್ಲಿ ರಾಜಸ್ಥಾನದಲ್ಲಿರುವ ಹೋಂಡಾದ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುವುದು. ಇಂದಿನಿಂದ ದೇಶಾದ್ಯಂತ ಅದರ ಡೀಲರ್ ನೆಟ್‌ವರ್ಕ್‌ನಿಂದ ವಿತರಣೆಗಳು ಪ್ರಾರಂಭವಾಗುತ್ತವೆ. ಹೈಬ್ರಿಡ್ ಮಾದರಿಯು ಸಿಟಿ ಸೆಡಾನ್‌ನ ಟಾಪ್-ಸ್ಪೆಕ್ 'ZX' ಟ್ರಿಮ್ ಅನ್ನು ಆಧರಿಸಿದೆ.

ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಹೈಬ್ರಿಡ್ 1.5 ಲೀಟರ್, ನಾಲ್ಕು-ಸಿಲಿಂಡರ್, ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಂದ ಚಾಲಿತವಾಗಿದೆ. ಇವುಗಳು 124 ಬಿಹೆಚ್‍ಪಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಸಿಟಿ ಹೈಬ್ರಿಡ್ ತನ್ನ ಪೆಟ್ರೋಲ್ ಪ್ರತಿರೂಪಕ್ಕಿಂತ 40 ಪ್ರತಿಶತ ಹೆಚ್ಚು ಇಂಧನ-ಸಮರ್ಥವಾಗಿದೆ ಮತ್ತು 26.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಹೋಂಡಾ ಹೇಳಿಕೊಂಡಿದೆ. ಹೈಬ್ರಿಡ್ ಸಿಟಿಯು ತನ್ನ ಪೆಟ್ರೋಲ್ ಚಾಲಿತ ಆವೃತ್ತಿಗಿಂತ 110 ಕೆಜಿ ಭಾರವಾಗಿದೆ. ಈ ಕಾರಿನಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ ನೀಡಲಾಗಿದೆ.

ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಹೈಬ್ರಿಡ್ ಸೆಡಾನ್ ಇವಿ, ಹೈಬ್ರಿಡ್ ಮತ್ತು ಪೆಟ್ರೋಲ್ ಎಂಬ ಮೂರು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಈ ಡ್ರೈವಿಂಗ್ ಮೋಡ್‌ಗಳನ್ನು ಸಿಟಿ ಇಹೆಚ್‌ಇವಿಯ ಆನ್‌ಬೋರ್ಡ್ ಎಲೆಕ್ಟ್ರಾನಿಕ್ಸ್ ಸೂಟ್‌ನಿಂದ ಆಟೋಮ್ಯಾಟಿಕ್ ಆಗಿ ನಿಯಂತ್ರಿಸಲಾಗುತ್ತದೆ.

ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಈ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಸೆಡಾನ್‌ನ ಸುರಕ್ಷತೆಯನ್ನು ಹೆಚ್ಚಿಸುವುದರ ಮೇಲೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿನ ಸುರಕ್ಷತಾ ಫೀಚರ್ಸ್ ಗಳಲ್ಲಿ ಕಾಲಿಷನ್ ಮೆಟಿಗೇಷನ್ ಬ್ರೇಕಿಂಗ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ರೋಡ್ ಡಿಪರ್ಚರ್ ಮೆಟಿಗೇಷನ್ ಒಳಗೊಂಡಿವೆ. ಹೋಂಡಾ ಸೆನ್ಸಿಂಗ್ ಸೂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಹೈ ಬೀಮ್ ಅಸಿಸ್ಟ್ ಹೊಂದಿದೆ.

ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಇದರೊಂದಿಗೆ ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಅಗೈಲ್ ಹ್ಯಾಂಡ್ಲಿಂಗ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಸೇರಿವೆ. ಸಿಟಿ ಇಹೆಚ್‌ಇವಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.

ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಈ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರಿನ ಒಳಭಾಗದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ, ಇದು Apple CarPlay ಮತ್ತು Android Auto ಅನ್ನು ಕನೆಕ್ಟಿವಿಟಿಯನ್ನು ಹೊಂದಿದೆ. ಇನ್ನು ಸರೌಂಡ್ ಸೌಂಡ್ ಸ್ಪೀಕರ್ ಸಿಸ್ಟಂ ಅನ್ನು ಸಹ ಹೊಂದಿದೆ. ಇತರ ವೈಶಿಷ್ಟ್ಯಗಳು ಸ್ಮಾರ್ಟ್ ಕೀ ಸಿಸ್ಟಮ್ ಅನ್ನು ಹೊಂದಿದೆ.

ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಮೊದಲ ನೋಟದಲ್ಲಿ, ಸ್ಟ್ಯಾಂಡರ್ಡ್ ಮಾದರಿಯ ವಿನ್ಯಾಸ ಮತ್ತು ಶೈಲಿಯನ್ನು ಹೈಬ್ರಿಡ್ ನಲ್ಲಿ ಉಳಿಸಿಕೊಳ್ಳಲಾಗಿದೆ. ಆದರೆ ಹತ್ತಿರದ ನೋಡುವಾಗ ಇ:ಹೆಚ್‌ಇವಿ ಸಣ್ಣ ಬದಲಾವಣೆಗಳನ್ನು ಬಹಿರಂಗಪಡಿಸುತ್ತದೆ .ಗ್ರಿಲ್‌ನ ಮೇಲ್ಭಾಗದಲ್ಲಿ ದಪ್ಪವಾದ ಕ್ರೋಮ್ ಸ್ಟ್ರಿಪ್ ನೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಸ್ಟ್ಯಾಂಡರ್ಡ್ ಮಾದರಿಯಿಂದ ಉಳಿಸಿಕೊಳ್ಳಲಾಗಿದೆ.

ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಇದು ಗ್ರಿಲ್ ಕೂಡ ಒಂದೇ ಎಂದು ನೀವು ನಂಬುವಂತೆ ಮಾಡುತ್ತದೆ. ಆದರೆ ಗ್ರಿಲ್ ಈಗ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಕಂಡುಬರುವ ಸಮತಲ ಸ್ಲ್ಯಾಟ್‌ಗಳಿಗೆ ವಿರುದ್ಧವಾಗಿ ಹನಿಕಾಂಬ್ ಮಾದರಿಯನ್ನು ಹೊಂದಿದೆ. ಫಾಗ್ ಲ್ಯಾಂಪ್ ಹೌಸಿಂಗ್ ಅನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಇನ್ನು ಎರಡು-ಟೋನ್ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳು, ಪರಿಷ್ಕೃತ ಗ್ರಿಲ್ ಮತ್ತು ಬೂಟ್ ಲಿಪ್ ಸ್ಪಾಯ್ಲರ್ ಅನ್ನು ಒಳಗೊಂಡಿವೆ.

ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಹೊಸ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಅಕ್ಸೆಸರೀಸ್ ಮಾಹಿತಿಗಳು ಬಹಿರಂಗವಾಗಿದೆ. ಈ ಹೊಸ ಸಿಟಿ ಹೈಬ್ರಿಡ್ ಸೆಡಾನ್ ಕ್ರೋಮ್‌ನೊಂದಿಗೆ ಡೋರ್ ವೈಸರ್, ಸ್ಟೆಪ್ ಇಲ್ಯುಮಿನೇಷನ್ ಲೈಟ್‌ಗಳು, ವಿಂಡೋ ಕ್ರೋಮ್ ಮೋಲ್ಡಿಂಗ್, ರೂಫ್ ಎಂಡ್ ವೈಸರ್ ಮತ್ತು ಸ್ಮಾರ್ಟ್‌ಫೋನ್ ಹೋಲ್ಡರ್‌ನೊಂದಿಗೆ ವೈರ್‌ಲೆಸ್ ಚಾರ್ಜರ್‌ನಂತಹ ಕಸ್ಟಮೈಸ್ ಆಯ್ಕೆಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಕಂಪನಿಯು ಮೂರು ವಿಭಾಗಗಳಲ್ಲಿ ಅಕ್ಸೆಸರೀಸ್ ಗಳನ್ನು ನೀಡುತ್ತದೆ. ಇದು ಬೆಸಿಕ್ ಕಿಟ್, ಕ್ರೋಮ್ ಪ್ಯಾಕೇಜ್ ಮತ್ತು ಯುಟಿಲಿಟಿ ಪ್ಯಾಕೇಜ್ ಆಗಿದೆ.

ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಇದರಲ್ಲಿ ಯುಟಿಲಿಟಿ ಪ್ಯಾಕೇಜ್‌ನಲ್ಲಿರುವ ವೈಶಿಷ್ಟ್ಯದ ಪಟ್ಟಿಯು ಮುಂಭಾಗ ಮತ್ತು ಹಿಂಭಾಗಕ್ಕೆ ಬಂಪರ್ ಪ್ರೊಟೆಕ್ಟರ್, ಡೋರ್ ಹ್ಯಾಂಡಲ್ ಪ್ರೊಟೆಕ್ಟರ್, ಡೋರ್ ಎಡ್ಜ್ ಗಾರ್ನಿಶ್ ಮತ್ತು ಬಾಡಿ ಸೈಡ್ ಮೋಲ್ಡಿಂಗ್‌ಗಳನ್ನು ಒಳಗೊಂಡಿದೆ. ಇನ್ನು ಕ್ರೋಮ್ ಪ್ಯಾಕೇಜ್ ಮುಂಭಾಗದ ಬಂಪರ್ ಸೈಡ್ ಗಾರ್ನಿಶ್, ಟ್ರಂಕ್ ಗಾರ್ನಿಶ್, ಟೈಲ್ ಲ್ಯಾಂಪ್ ಗಾರ್ನಿಶ್ ಮತ್ತು ಡೋರ್ ಲೋವರ್ ಗಾರ್ನಿಶ್ ಅನ್ನು ಒಳಗೊಂಡಿದೆ. ಬೇಸಿಕ್ ಕಿಟ್ ಬಕೆಟ್ ಮ್ಯಾಟ್, ಫ್ಲೋರ್ ಮ್ಯಾಟ್, ಕುಶನ್ಗಳು, ಕೀ ಚೈನ್, ಎಮರ್ಜನ್ಸಿ ಎಮರ್ ಮತ್ತು ಮೈಕ್ರೋಫೈಬರ್ ಬಟ್ಟೆಯಂತಹ ಅಗತ್ಯ ವಸ್ತುಗಳನ್ನು ಹೊಂದಿವೆ

ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆ

ಇವುಗಳ ಹೊರತಾಗಿ, ಬಿಡುಗಡೆಯ ನಂತರದ ಗ್ರಾಹಕರು ಕಾರ್ ಬಾಡಿ ಕವರ್, ಸಿಟಿ ಲೋಗೋ ಪ್ರೊಜೆಕ್ಟರ್, ಲೆಗ್‌ರೂಮ್ ಲ್ಯಾಂಪ್ ಮತ್ತು ಮುಂಭಾಗದ ಬಂಪರ್ ಸೆಂಟರ್ ಅಲಂಕರಿಸಲು ಸಹ ಆಯ್ಕೆ ಮಾಡಬಹುದು. ಹೋಂಡಾ ಸಿಟಿಯನ್ನು ಜಪಾನಿನ ಕಾರು ತಯಾರಕರು ಅಂತಿಮವಾಗಿ ತನ್ನ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆಗೊಳಿಸಿದೆ. ಈ ಬಹುನಿರೀಕ್ಷಿತ ಹೊಸ ಹೋಂಡಾ ಸಿಟಿ ಇಹೆಚ್‌ಇವಿ ಹೈಬ್ರಿಡ್ ಕಾರು ಭಾರತೀಯ ಗ್ರಾಹಕರನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
Read more on ಹೋಂಡಾ honda
English summary
Honda launched city e hev hybrid sedan in india specs features details
Story first published: Wednesday, May 4, 2022, 14:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X