ಭಾರತದಲ್ಲಿ ಇನ್ನೋವಾ ಹುಟ್ಟಿಕೊಂಡದ್ದು ಹೇಗೆ?...ಇನ್ನೋವಾ, ಕ್ರಿಸ್ಟಾ ಹಾಗೂ ಹೈಕ್ರಾಸ್ ನಡುವಿನ ವ್ಯತ್ಯಾಸ

2005 ರಲ್ಲಿ ಪ್ರಾರಂಭವಾದ ಇನ್ನೋವಾ ಮಾದರಿಯು ಟೊಯೋಟಾಗೆ ಅಗಾಧ ಯಶಸ್ಸನ್ನು ತಂದುಕೊಟ್ಟಿದೆ. ಇದು ದೇಶದಲ್ಲಿ ಜನಪ್ರಿಯ MPV ಮಾತ್ರವಲ್ಲದೆ ಅದರ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಕಳೆದ ಒಂದು ದಶಕದಲ್ಲಿ ಇನ್ನೋವಾ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಈಗ, ಟೊಯೋಟಾ ಹೊಸ ಇನ್ನೋವಾ ಹೈಕ್ರಾಸ್ ಅನ್ನು ಅನಾವರಣಗೊಳಿಸಿದೆ.

ಈ ಕಾರಿನ ಮೇಲೆ ಈಗಾಗಲೇ ನಿರೀಕ್ಷೆಗಳು ಹೆಚ್ಚಾಗಿದ್ದು, ಬಿಡುಗಡೆ ನಂತರ ಯಾವೆಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಈ ಲೇಖನದಲ್ಲಿ ಇನ್ನೋವಾ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ತಿಳಿಯೋಣ. ಮೊದಲಿಗೆ ಟೊಯೊಟಾ ಕ್ವಾಲಿಸ್ ಮಾದರಿಯೇ ಇನ್ನೋವಾ ಆಗಿ ಬದಲಾಗಿರುವುದು ಎಷ್ಟೋ ಮಂದಿಗೆ ತಿಳಿದಿಲ್ಲ. ಆದರೆ ನಾವು ಅದರ ಹಿಂದಿನ ಪೀಳಿಗೆಯ ಮಾದರಿಗಳು ಸೇರಿದಂತೆ ಪ್ರಸ್ತುತ ಅನಾವರಣಗೊಂಡ ಹೈಕ್ರಾಸ್ ವೆರೆಗೆ ಎಲ್ಲಾ ವಿವರಗಳನ್ನು ಇಲ್ಲಿ ನೀಡಿದ್ದೇವೆ.

ಟೊಯೊಟಾ ಕ್ವಾಲಿಸ್
ಇನ್ನೋವಾ ಕಥೆಯು 2000 ರಲ್ಲಿ ಟೊಯೊಟಾ ಕ್ವಾಲಿಸ್‌ನೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಮೂಲಕ ಪ್ರಾರಂಭವಾಯಿತು. ಕ್ವಾಲಿಸ್ ಮಾದರಿ ಮೂರನೇ ತಲೆಮಾರಿನ ಕಿಜಾಂಗ್ ಅನ್ನು ಆಧರಿಸಿದೆ, ಜೊತೆಗೆ ಕಿಜಾಂಗ್‌ನ ನಾಲ್ಕನೇ ತಲೆಮಾರಿನ ಮಾದರಿಯಿಂದ ಬಂಪರ್, ಸ್ವಿಚ್‌ಗೇರ್, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮುಂತಾದ ಕೆಲವು ಅಂಶಗಳನ್ನು ಎರವಲು ಪಡೆದಿತ್ತು. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) ಕ್ವಾಲಿಸ್ ಅನ್ನು ಮೂರು ರೂಪಾಂತರಗಳ ಆಯ್ಕೆಯಲ್ಲಿ ಬಿಡುಗಡೆ ಮಾಡಿತ್ತು.

ಅವುಗಳೆಂದರೆ FS, GS ಮತ್ತು GST, ಇದರ ಬೆಲೆಗಳು ರೂ 4.58 ಲಕ್ಷದಿಂದ ಆರಂಭವಾಗಿ ರೂ. 7.39 ಲಕ್ಷದವರೆಗೆ (ಎಕ್ಸ್ ಶೋ ರೂಂ)ಇತ್ತು. ಪ್ರಸ್ತುತ MPV ಗಳಿಗಿಂತ ಭಿನ್ನವಾಗಿ ಕ್ವಾಲಿಸ್ ರೂಪಾಂತರವನ್ನು ಎಂಟು ಅಥವಾ 10 ಪ್ರಯಾಣಿಕರು ಕೂರುವಂತೆ ಅವಕಾಶ ಕಲ್ಪಿಸಲಾಗಿತ್ತು. ಇದು ಗಂಟೆಗೆ 130 ಕಿ.ಮೀ ವೇಗವನ್ನು ಹೊಂದಿತ್ತು. ನಂತರ 2002 ರ ಆರಂಭದಲ್ಲಿ ಕ್ವಾಲಿಸ್ ಎಂಜಿನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. 2.0-ಲೀಟರ್, ನಾಲ್ಕು-ಸಿಲಿಂಡರ್, ಫ್ಯೂಲ್-ಇಂಜೆಕ್ಟೆಡ್ SOHC 1RZ-E ಎಂಜಿನ್ ಅನ್ನು 4ನೀಡಲಾಯಿತು.

ಈ ಪೆಟ್ರೋಲ್ ಎಂಜಿನ್ ಗಂಟೆಗೆ 140 ಕಿ.ಮೀ ವೇಗವನ್ನು ಹೊಂದಿತ್ತು. ಕ್ವಾಲಿಸ್ ಟೊಯೋಟಾಗೆ ಯಶಸ್ವಿ ಮಾದರಿಯಾಗಿ ಹೊರಹೊಮ್ಮಿದರೂ ಕಂಪನಿಯು 2005 ರಲ್ಲಿ ಅದನ್ನು ಸ್ಥಗಿತಗೊಳಿಸಿತು. ಆಗಲೇ ಮೊದಲ ಇನ್ನೋವಾ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತು. 2000 ಮತ್ತು 2005 ರ ನಡುವೆ ಟೊಯೊಟಾ ಕಂಪನಿಯು ಕ್ವಾಲಿಸ್‌ನ 1,42,000 ಕ್ಕೂ ಹೆಚ್ಚು ಘಟಕಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿತ್ತು. ಕ್ವಾಲಿಸ್ ಸ್ಥಗಿತಗೊಳ್ಳುವ ವೇಳೆಗೆ ಒಟ್ಟು MPV ಮಾರುಕಟ್ಟೆಯ ಶೇ30 ರಷ್ಟು ಪಾಲನ್ನು ಟೊಯೊಟಾ ಹೊಂದಿತ್ತು.

ಟೊಯೊಟಾ ಇನ್ನೋವಾ
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಭಾರತದಲ್ಲಿ 2005 ರ ಆರಂಭದಲ್ಲಿ ಇನ್ನೋವಾವನ್ನು ಪರಿಚಯಿಸಿತು. ಇದರ ಬೆಲೆಗಳು 6.74 ಲಕ್ಷದಿಂದ ಪ್ರಾರಂಭವಾಗಿ 9.95 ಲಕ್ಷದ (ಎಕ್ಸ್ ಶೋ ರೂಂ) ವರೆಗೆ ಇತ್ತು. ಇದರೊಂದಿಗೆ ಟೊಯೊಟಾ ಭಾರತೀಯ ಮಾರುಕಟ್ಟೆಗೆ ನಾಲ್ಕನೇ ತಲೆಮಾರಿನ ಕ್ವಾಲಿಸ್ ಅನ್ನು ಸಂಪೂರ್ಣ ಸ್ಥಗಿತಗೊಳಿಸಿತು. ಏಕೆಂದರೆ ಇನ್ನೋವಾ ಮೂಲಭೂತವಾಗಿ ಐದನೇ ತಲೆಮಾರಿನ ಮಾದರಿಯಾಗಿದ್ದು ಅದು ನಾಲ್ಕನೇ ತಲೆಮಾರಿನ ಕ್ವಾಲಿಸ್‌ಗೆ ಬದಲಿಯಾಗಿ ಪ್ರಾರಂಭವಾಯಿತು.

ಮೊದಲ ಜನ್ ಇನ್ನೋವಾ ಮತ್ತು ಕ್ವಾಲಿಸ್‌ಗಳು ಪರ್ಫಾಮೆನ್ಸ್ ಜೊತೆಗೆ ಬಾಹ್ಯ, ಆಂತರಿಕ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಭಿನ್ನವಾಗಿದ್ದವು. ಇನ್ನೋವಾ ಬಂದ ನಂತರ ಒಟ್ಟಾರೆ MPV ಮಾರುಕಟ್ಟೆಯ ಲೆಕ್ಕಾಚಾರಗಳೇ ಪದಲಾಯಿತು. ಆಗಿನ ಕಾಲಕ್ಕೆ ಇನ್ನೋವಾ ಪೈಪೋಟಿಯಿಲ್ಲದ ಆಧುನಿಕ ಫ್ಯಾಮಿಲಿ ಕಾರ್ ಆಗಿ ಸಾಕಷ್ಟು ಜನಪ್ರಿಯತೆ ಪಡೆಯಿತು. ಮುಂದೆ ಕಾರಿನ ಕೆಲವು ಫೆಸ್‌ಲಿಫ್ಟ್ ಆವೃತ್ತಿಗಳ ಎಂಟ್ರಿಯೊಂದಿಗೆ ಟೊಯೊಟಾ ಇನ್ನೋವಾ ಮಾದರಿಯು MPV ವಿಭಾಗದಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿಯಿತು.

ಟೊಯೊಟಾ ಇನ್ನೋವಾ ಕ್ರಿಸ್ಟಾ
ಟೊಯೋಟಾ ಭಾರತದಲ್ಲಿ 2016 ಆಟೋ ಎಕ್ಸ್‌ಪೋದಲ್ಲಿ ಎರಡನೇ-ಜನ್ ಇನ್ನೋವಾವನ್ನು ಪ್ರದರ್ಶಿಸಿತು. ಮಾರುಕಟ್ಟೆಗೆ ಈ ಹೊಸ MPV ಅನ್ನು ಇನ್ನೋವಾ ಕ್ರಿಸ್ಟಾ ಎಂದು ಪರಿಚಯಿಸಲಾಯಿತು. 2016 ರ ಮಧ್ಯದಲ್ಲಿ ಬಿಡುಗಡೆಯಾದ ಇನ್ನೋವಾ ಕ್ರಿಸ್ಟಾ ಅದರ ಪೂರ್ವವರ್ತಿಗಿಂತ ವಿನ್ಯಾಸ ಮತ್ತು ಒಳಾಂಗಣದ ದೃಷ್ಟಿಯಿಂದ ಸಾಕಷ್ಟು ಅಪ್‌ಡೇಟೆಡ್ ಮಾಡಲ್ ಆಗಿತ್ತು. ಇದು ಆಧುನಿಕ ವಿನ್ಯಾಸ, ವೈಶಿಷ್ಟ್ಯ-ಸಮೃದ್ಧ ಮತ್ತು ಹೆಚ್ಚು ಶಕ್ತಿಶಾಲಿ ಮತ್ತು ಪರಿಣಾಮಕಾರಿ ಪವರ್‌ಟ್ರೇನ್‌ಗಳೊಂದಿಗೆ ಬಂದಿತ್ತು.

ಈ MPV ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಾಗಿಸಲಾಗಿತ್ತು. 2.4-ಲೀಟರ್ ಟರ್ಬೊ-ಡೀಸೆಲ್ ಮತ್ತು 2.8-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್‌ನೊಂದಿಗೆ ನೀಡಲಾಗಿತ್ತು. ಇದರಲ್ಲಿ ಮೊದಲನೆಯದನ್ನು ಕೇವಲ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗೆ ಜೋಡಿಸಿದ್ದರೆ, ಎರಡನೆಯದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗಿತ್ತು. ನಂತರ ಕಂಪನಿಯು 2.8-ಲೀಟರ್ ಡೀಸೆಲ್ ಎಂಜಿನ್ ಅನ್ನು ಕಟ್ಟುನಿಟ್ಟಾದ ಹೊರಸೂಸುವಿಕೆಯ ಮಾನದಂಡಗಳ ಕಾರಣದಿಂದ ಹೊರಹಾಕಿತು.

ನಂತರ 2.7-ಲೀಟರ್ ಡ್ಯುಯಲ್ VVTi ಪೆಟ್ರೋಲ್ ಮೋಟಾರ್‌ನಿಂದ ಇದನ್ನು ಬದಲಾಯಿಸಲಾಯಿತು. ಎರಡನೇ ತಲೆಮಾರಿನ ಫೇಸ್‌ಲಿಫ್ಟ್ ಮಾದರಿಯನ್ನು ನವೆಂಬರ್ 2020 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಇದು 2.4-ಲೀಟರ್ ಡೀಸೆಲ್ ಮೋಟಾರ್ ಜೊತೆಗೆ BS6-ಕಂಪ್ಲೈಂಟ್ 2.7-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಫೇಸ್‌ಲಿಫ್ಟ್‌ನ ಭಾಗವಾಗಿ, ಇನ್ನೋವಾ ಕ್ರಿಸ್ಟಾ ಹೊಸ ಗ್ರಿಲ್, ಹೊಸ ಬಂಪರ್‌ಗಳು, ಟ್ವೀಕ್ ಮಾಡಿದ ಟೈಲ್ ಲೈಟ್‌ಗಳು ಮತ್ತು ಹೊಸ ಅಲಾಯ್ ವೀಲ್‌ಗಳನ್ನು ಒಳಗೊಂಡಂತೆ ಹೊಸ ಲುಕ್‌ನೊಂದಿಗೆ ಬಿಡುಗಡೆಯಾಯಿತು.

ಟೊಯೊಟಾ ಇನ್ನೋವಾ ಹೈಕ್ರಾಸ್
ಇದೀಗ ಜಪಾನಿನ ವಾಹನ ತಯಾರಕರು 2022 ನವೆಂಬರ್ 25 ರಂದು ಭಾರತದಲ್ಲಿ ಮೂರನೇ ತಲೆಮಾರಿನ Innova Hycross ಅನ್ನು ಅನಾವರಣಗೊಳಿಸಿದ್ದಾರೆ. ಈ ಪೀಳಿಗೆಯ ನವೀಕರಣವು Innova ಗೆ ಗಮನಾರ್ಹ ಬದಲಾವಣೆಗಳನ್ನು ತಂದಿದೆ, ಇದರಲ್ಲಿ ಹೊಸ ಮೊನೊಕಾಕ್ ಚಾಸಿಸ್ ಮತ್ತು SUV-ಶೈಲಿಯ ಹೊರಭಾಗವು ದಪ್ಪನಾದ ಕ್ಲಾಡಿಂಗ್‌ನೊಂದಿಗೆ ಸೇರಿದೆ. ಇದು 4,755 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,795 ಎಂಎಂ ಎತ್ತರದೊಂದಿಗೆ 2,850 ಎಂಎಂ ವ್ಹೀಲ್‌ಬೇಸ್ ಹೊಂದಿದೆ.

ಇನ್ನೋವಾವು 2.0-ಲೀಟರ್ ಇನ್‌ಲೈನ್-ನಾಲ್ಕು ಪೆಟ್ರೋಲ್ TNGA ಎಂಜಿನ್‌ನಿಂದ ಐದನೇ-ಜನ್ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಬಂದಿದೆ. ಈ ಪವರ್‌ಟ್ರೇನ್ ಅನ್ನು ಇ-ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಹೊಸ ಇನ್ನೋವಾ ಹೈಕ್ರಾಸ್ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಏಳು-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನಾರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಸೀಟುಗಳು, ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಮುಂತಾದ ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳನ್ನು ಹೊಂದಿದೆ.

Most Read Articles

Kannada
Read more on ಟೊಯೊಟಾ toyota
English summary
How toyota Innova was born difference between Innova crysta and hicross
Story first published: Wednesday, December 7, 2022, 16:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X