ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಹ್ಯುಂಡೈ ಕಂಪನಿಯು ತನ್ನ ಬಹುನೀರಿಕ್ಷಿತ ವೆನ್ಯೂ ಎನ್ ಲೈನ್ ಪರ್ಫಾಮೆನ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.16 ಲಕ್ಷ ಬೆಲೆ ಹೊಂದಿದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಎನ್ ಲೈನ್ ಆವೃತ್ತಿಗಳ ಮೂಲಕ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುತ್ತಿರುವ ಹ್ಯುಂಡೈ ಇಂಡಿಯಾ ಕಂಪನಿಯು ಐ20 ನಂತರ ಇದೀಗ ವೆನ್ಯೂ ಮಾದರಿಯಲ್ಲೂ ಹೊಸ ಆವೃತ್ತಿಯನ್ನು ಪರಿಚಯಿಸಿದ್ದು, ಹೊಸ ವೆನ್ಯೂ ಎನ್ ಲೈನ್ ಆವೃತ್ತಿಯು ವಿವಿಧ ತಾಂತ್ರಿಕ ಅಂಶಗಳನ್ನು ಆಧರಿಸಿ ಎನ್6 ಮತ್ತು ಎನ್8 ಎನ್ನುವ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ವೆನ್ಯೂ ಎನ್ ಲೈನ್ ಎನ್6 ರೂಪಾಂತರ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 12.16 ಲಕ್ಷ ಬೆಲೆ ಹೊಂದಿದ್ದರೆ ಎನ್8 ರೂಪಾಂತರವು ರೂ. 13.15 ಲಕ್ಷ ಬೆಲೆ ಹೊಂದಿದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಹೊಸ ರೂಪಾಂತರಗಳು ಸ್ಟ್ಯಾಂಡರ್ಡ್ ರೂಪಾಂತರಗಳಿಂತ ಬೆಲೆಯಲ್ಲಿ ರೂ. 58 ಸಾವಿರದಿಂದ ರೂ. 1.19 ಲಕ್ಷ ಹೆಚ್ಚುವರಿ ಬೆಲೆ ಹೊಂದಿದ್ದು, ಬೆಲೆ ಹೆಚ್ಚಳಕ್ಕೆ ತಕ್ಕಂತೆ ಹೊಸ ಆವೃತ್ತಿಯಲ್ಲಿ ಹಲವಾರು ಹೊಸ ಫೀಚರ್ಸ್ ನೀಡಲಾಗಿದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಎನ್6 ಮತ್ತು ಎನ್8 ರೂಪಾಂತರಗಳು ಸ್ಟ್ಯಾಂಡರ್ಡ್ ರೂಪಾಂತರಗಳಾದ ಎಸ್(ಒ) ಮತ್ತು ಎಸ್ಎಕ್ಸ್(ಒ) ರೂಪಾಂತರಗಳನ್ನು ಆಧರಿಸಿದ್ದು, ಹೊಸ ಆವೃತ್ತಿಯನ್ನು ಕಂಪನಿಯು ಕೇವಲ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಮಾರಾಟ ಮಾಡುತ್ತಿದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಹೊಸ ವೆನ್ಯೂ ಎನ್ ಲೈನ್ ಆವೃತ್ತಿಯಲ್ಲಿ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ತಾಂತ್ರಿಕ ಅಂಶಗಳೊಂದಿಗೆ ಹಲವಾರು ಹೊಸ ಫೀಚರ್ಸ್ ನೀಡಿದ್ದು, ಇವು ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿಭಿನ್ನವಾಗಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿವೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಸ್ಟ್ಯಾಂಡರ್ಡ್ ವೆನ್ಯೂ ಮಾದರಿಗಳಿಗೆ ಹೋಲಿಸಿದರೆ ಎನ್ ಲೈನ್‌ನಲ್ಲಿ ಸಾಕಷ್ಟು ವಿನ್ಯಾಸಗಳು ಮತ್ತು ತಾಂತ್ರಿಕ ಬದಲಾವಣೆಗಳಾಗಿದ್ದು, ಇದು ಡಾರ್ಕ್ ಕ್ರೋಮ್ ಫ್ರಂಟ್ ಗ್ರಿಲ್, ಸ್ಪೋರ್ಟಿ ಟೈಲ್‌ಗೇಟ್ ಸ್ಪಾಯ್ಲರ್, ಗ್ರಿಲ್‌ನಲ್ಲಿ ಎನ್ ಲೈನ್ ಬ್ಯಾಡ್ಜ್, ಸೈಡ್ ಫೆಂಡರ್‌ಗಳು ಮತ್ತು ಟೈಲ್‌ಗೇಟ್‌ನಲ್ಲಿ ಎನ್ ಲೈನ್ ಬ್ಯಾಡ್ಜ್, 16-ಇಂಚಿನ ಮಿಶ್ರಲೋಹದ ಚಕ್ರಗಳೊಂದಿಗೆ ಎನ್ ಲೈನ್ ಬ್ರ್ಯಾಂಡಿಂಗ್ ಹೊಂದಿರುತ್ತದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಜೊತೆಗೆ ಸ್ಪೋರ್ಟಿ ಬಂಪರ್, ನವೀಕರಿಸಿದ ಫೆಂಡರ್‌ಗಳು, ಸೈಡ್ ಸಿಲ್ ಮತ್ತು ರೂಫ್ ರೈಲ್‌ಗಳು ಅಥ್ಲೆಟಿಕ್ ರೆಡ್ ಹೈಲೈಟ್‌ಗಳು, ಬ್ಲ್ಯಾಕ್ ಅಥ್ಲೆಟಿಕ್ ಸ್ಪೋರ್ಟಿ ವಿನ್ಯಾಸ ಪಡೆಯಲಿದ್ದು, ರೆಡ್ ಆಕ್ಸೆಂಟ್‌ನೊಂದಿಗೆ ಒಳಾಂಗಣ, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದ ಬ್ರೇಕ್‌ಗಳಲ್ಲಿ ರೆಡ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಹಾಗೆಯೇ ಸ್ಪೋರ್ಟಿ ಲುಕ್ ಹೆಚ್ಚಿಸಲು ಹೊಸ ಕಾರಿನಲ್ಲಿ ಡ್ಯುಯಲ್-ಟಿಪ್ ಹೊಂದಿರುವ ಎಕ್ಸಾಸ್ಟ್ ಪೈಪ್ ಅನ್ನು ಬಳಸಲಾಗಿದ್ದು, ಎನ್-ಲೈನ್ ಮಾದರಿಗೆ ಕೆಲವು ವಿನ್ಯಾಸ ಬದಲಾವಣೆಗಳನ್ನು ಮಾಡಲಾಗಿದೆ. 'ಪ್ಯಾರಾಮೆಟ್ರಿಕ್' ಗ್ರಿಲ್ ವಿನ್ಯಾಸದೊಂದಿಗೆ ಹೊಸ ಮುಂಭಾಗದ ಶೈಲಿಯು ಹೊಸ ಕಾರಿಗೆ ಮತ್ತಷ್ಟು ಮೆರಗು ನೀಡಲಿದ್ದು, ಸ್ಪೋರ್ಟಿ ವಿನ್ಯಾದಸದ ಪರಿಷ್ಕೃತ ಹೆಡ್‌ಲೈಟ್ಸ್ ಮತ್ತು ಸ್ಲೀಕರ್ ಟೈಲ್-ಲೈಟ್‌ಗಳನ್ನು ವೆನ್ಯೂ ಎನ್ ಲೈನ್‌ನಲ್ಲಿ ಕಾಣಬಹುದು.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಹೊಸ ಕಾರಿನ ಒಳಭಾಗದ ವೈಶಿಷ್ಟ್ಯಗಳ ಬಗೆಗೆ ಹೇಳುವುದಾದರೆ ಹೊಸ ವೆನ್ಯೂ ಎನ್-ಲೈನ್ ಮಾದರಿಯಲ್ಲಿ ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್‌ಕ್ಯಾಮ್ ಅನ್ನು ಹೊಂದಿರುತ್ತದೆ. ಹಾಗೆಯೇ ಬ್ಲೂಲಿಂಕ್ ಸಂಪರ್ಕಿತ ತಂತ್ರಜ್ಞಾನದ ಅಡಿಯಲ್ಲಿ 60 ಕ್ಕೂ ಹೆಚ್ಚು ಸಂಪರ್ಕಿತ ವೈಶಿಷ್ಟ್ಯಗಳು ಇದರಲ್ಲಿದ್ದು, ಇದು ಅಲೆಕ್ಸಾ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್‌ನೊಂದಿಗೆ ಹೋಮ್ ಟು ಕಾರ್ ಸೌಲಭ್ಯವನ್ನು ಒದಗಿಸಲಾಗುತ್ತದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಇದರೊಂದಿಗೆ ಪನೋರಮಿಕ್ ಸನ್‌ರೂಫ್, 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಆಂಬಿಯೆಂಟ್ ಲೈಟಿಂಗ್, ಎಲೆಕ್ಟ್ರಿಕ್ ಪವರ್ಡ್ ಡ್ರೈವರ್ ಸೀಟ್ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಹೊಸ ವೆನ್ಯೂ ಎನ್ ಲೈನ್ ಆವೃತ್ತಿಯಲ್ಲಿರುವ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮಾದರಿಯು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ 118 ಬಿಎಚ್‌ಪಿ ಮತ್ತು 172 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಇನ್ನು ಹೊಸ ಆವೃತ್ತಿಯು ಪೋಲಾರ್ ವೈಟ್, ಶ್ಯಾಡೋ ಗ್ರೇ ಸಿಂಗಲ್ ಟೋನ್ ಜೊತೆಗೆ ಪೋಲಾರ್ ವೈಟ್, ಶ್ಯಾಡೋ ಗ್ರೇ ಸಿಂಗಲ್ ಮತ್ತು ಟಂಡರ್ ಬ್ಲ್ಯೂ ಬಣ್ಣಗಳೊಂದಿಗ ಬ್ಲ್ಯಾಕ್ ರೂಫ್ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಭಾರತದಲ್ಲಿ ಹ್ಯುಂಡೈ ಕಂಪನಿಯು ಈಗಾಗಲೇ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲೂ ಎನ್ ಲೈನ್ ಆವೃತ್ತಿಯನ್ನು ಮಾರಾಟಗೊಳಿಸುತ್ತಿದ್ದು, ಈ ವರ್ಷಾಂತ್ಯದೊಳಗಾಗಿ ಮತ್ತೆರಡು ಹೊಸ ಕಾರು ಮಾದರಿಗಳಲ್ಲಿ ಹೊಸ ಪರ್ಫಾಮೆನ್ಸ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಕ್ರೆಟಾ ಎಸ್‌ಯುವಿ ಕಾರು ಮಾದರಿಯಲ್ಲೂ ಸಹ ಎನ್-ಲೈನ್ ಆವೃತ್ತಿಯನ್ನು ಪರಿಚಯಿಸಬಹುದಾದ ಸಾಧ್ಯತೆಗಳಿದ್ದು, ಎನ್ ಲೈನ್ ಆವೃತ್ತಿಗಳು ಹ್ಯುಂಡೈ ಕಂಪನಿಯು ಪ್ರಮುಖ ಕಾರುಗಳ ಸರಣಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ವಿಶೇಷ ಮಾದರಿಗಳನ್ನು ವಿಶ್ವಾದ್ಯಂತ ಮಾರಾಟ ಮಾಡುತ್ತಿದೆ.

ವಿನೂತನ ಫೀಚರ್ಸ್ ಹೊಂದಿರುವ ಹ್ಯುಂಡೈ ವೆನ್ಯೂ ಎನ್ ಲೈನ್ ವರ್ಷನ್ ಬಿಡುಗಡೆ

ಸದ್ಯ ಹ್ಯುಂಡೈ ಕಂಪನಿಯು ವೆನ್ಯೂ ಮಾದರಿಯನ್ನು ವಿವಿಧ ವೆರಿಯೆಂಟ್‌ಗಳೊಂದಿಗೆ ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು, ಸ್ಟ್ಯಾಂಡರ್ಡ್ ಮಾದರಿಗಳು 1.0 ಲೀಟರ್ ಟರ್ಬೊ, 1.2 ಲೀಟರ್ ಎನ್ಎ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಸದ್ಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.53 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.72 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Hyundai venue n line launched in india at starting rs 12 16 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X