Just In
- 8 hrs ago
ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...
- 11 hrs ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 13 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 1 day ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
Don't Miss!
- News
ಶಿವಸೇನೆ-ಬಿಜೆಪಿ ಮೈತ್ರಿ ಸುಳಿವು ಕೊಟ್ಟ ಕರ್ನಾಟಕದ ಸಚಿವ!
- Sports
ಭಾರತ vs ಐರ್ಲೆಂಡ್: ಮೊದಲ ಟಿ20 ಪಂದ್ಯ, ಟಾಸ್ ಗೆದ್ದ ಭಾರತ, Live ಸ್ಕೋರ್, ಆಡುವ ಬಳಗ
- Movies
ಕೆ.ಎಲ್.ರಾಹುಲ್ ಜೊತೆ ಜರ್ಮನಿಗೆ ಹಾರಿದ ಆತಿಯಾ ಶೆಟ್ಟಿ
- Finance
Gold Rate Today: ನಿಮ್ಮ ನಗರದಲ್ಲಿ ಜೂ.26ರಂದು ಚಿನ್ನದ ಬೆಲೆ ಎಷ್ಟಿದೆ ನೋಡಿ
- Technology
ಬೇರೆಯವರು ನಿಮ್ಮ ನೆಟ್ಫ್ಲಿಕ್ಸ್ ಖಾತೆ ಬಳಸುತ್ತಿದ್ದರೆ ತಿಳಿಯಲು ಹೀಗೆ ಮಾಡಿ?
- Education
PGCIL Recruitment 2022 : 32 ಡೆಪ್ಯುಟಿ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಖಾಸಗಿ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಿದ ಮೆಜೆಂಟಾ
ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸುತ್ತಿರುವ ಮೆಜೆಂಟಾ ಕಂಪನಿಯು ಸಹಭಾಗೀತ್ವ ಯೋಜನೆಗಳೊಂದಿಗೆ ದೇಶಾದ್ಯಂತ ಇವಿ ನಿಲ್ದಾಣಗಳ ಹೆಚ್ಚಳಕ್ಕಾಗಿ ಬೃಹತ್ ಯೋಜನೆಗಳನ್ನು ಆರಂಭಿಸಿದ್ದು, ಇತ್ತೀಚೆಗೆ ಕಂಪನಿಯು ವಸತಿ ಸಮುಚ್ಚಯಗಳಲ್ಲಿ ಖಾಸಗಿ ಇವಿ ವಾಹನಗಳ ಚಾರ್ಜಿಂಗ್ ನಿಲ್ದಾಣಗಳಿಗೆ ಚಾಲನೆ ನೀಡಿದೆ.

ತೈಲ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚವು ಸಹ ಸಾಕಷ್ಟು ಏರಿಕೆಯಾಗುತ್ತಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಸರ್ಕಾರದ ಜೊತೆಗೆ ವಿವಿಧ ಖಾಸಗಿ ಕಂಪನಿಗಳು ಸಹ ಇವಿ ವಾಹನಗಳಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿವೆ.

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲಿ ದೆಹಲಿ ಸರ್ಕಾರವು ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ತದನಂತರ ವಿವಿಧ ಸರ್ಕಾರವು ಸಹ ರಾಜ್ಯ ಮಟ್ಟದಲ್ಲಿ ಹೊಸ ಇವಿ ನೀತಿ ಅಳವಡಿಸಿಕೊಳ್ಳುತ್ತಿವೆ.

ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಹೊರತುಪಡಿಸಿ ವಿವಿಧ ರಾಜ್ಯ ಸರ್ಕಾರಗಳು ರಾಜ್ಯ ಮಟ್ಟದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹಾಗೆಯೇ ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯ ಕೂಡಾ ಪ್ರಮುಖವಾಗಿದ್ದು, ಈಗಾಗಲೇ ಹಲವಾರು ಖಾಸಗಿ ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ವಿಸ್ತರಿಸುತ್ತಿವೆ.

ಮುಂಬೈ ಮೂಲದ ಮೆಜೆಂಟಾ ಕಂಪನಿಯು ಕೂಡಾ ದೇಶಾದ್ಯಂತ ನೂರಕ್ಕೂ ಹೆಚ್ಚು ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪನೆ ಮಾಡಿದ್ದು, ಗ್ರಾಹಕರ ಬೇಡಿಕೆ ಅನುಸಾರವಾಗಿ ಎಸಿ ಮತ್ತು ಡಿಸಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಜೋಡಣೆ ಮಾಡಿತ್ತಿದೆ.

ಮೆಜೆಂಟಾ ಕಂಪನಿಯು ಇದೀಗ ಹೊಸ ಸಹಭಾಗಿತ್ವ ಯೋಜನೆ ಅಡಿ ದೆಹಲಿಯಲ್ಲಿರುವ ಪ್ರಮುಖ ವಸತಿ ಸಮುಚ್ಚಯಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡುತ್ತಿದ್ದು, ಹೊಸ ಯೋಜನೆಗಾಗಿ ಕಂಪನಿಯು ಬಿಎಸ್ಇಎಸ್ ರಾಜಧಾನಿ ಪವರ್ ಲಿಮಿಟೆಡ್ ಜೊತೆ ಕೈಜೋಡಿಸಿದೆ.

ಬಿಎಸ್ಇಎಸ್ ರಾಜಧಾನಿ ಪವರ್ ಲಿಮಿಟೆಡ್ ಕಂಪನಿಯು ಮೆಜೆಂಟಾ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಿಗೆ ಬೇಡಿಕೆಯಿರುವ ವಿದ್ಯುತ್ ಪೂರೈಸಲು ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿಯೇ ಮೆಜೆಂಟಾ ಕಂಪನಿಯು ದೆಹಲಿಯ ಪ್ರಮುಖ ಕಡೆಗಳಲ್ಲಿ ಮತ್ತಷ್ಟು ಫಾಸ್ಟ್ ಚಾರ್ಜಿಂಗ್ ತೆರೆಯುವ ಯೋಜನೆಯಲ್ಲಿದೆ.

ಎಸಿ ಮತ್ತು ಡಿಸಿ ಚಾರ್ಜರ್‌ಗಳ ಸಂಯೋಜನೆಯು ದ್ವಿಚಕ್ರ ವಾಹನ, ತ್ರಿ ಚಕ್ರ ವಾಹನಗಳು ಮತ್ತು ಕಾರುಗಳಿಗೆ ಚಾರ್ಜಿಂಗ್ ಗ್ರಿಡ್ ಬೆಂಬಲಿಸಲಿದ್ದು, ಇವಿ ಚಾರ್ಜಿಂಗ್ ಸ್ಟೇಷನ್‌ಗಳು ಸಂಪೂರ್ಣವಾಗಿ ಆನ್‌ಲೈನ್ ರಿಮೋಟ್ ಮಾನಿಟರಿಂಗ್ ಸಿಸ್ಟಂ ಹೊಂದಿರಲಿವೆ.

ಹೊಸ ಚಾರ್ಜಿಂಗ್ ನಿಲ್ದಾಣಗಳನ್ನು ಕಂಪನಿಯು ಆನ್‌ಲೈನ್ ರಿಮೋಟ್ ಮಾನಿಟರಿಂಗ್ ಮೂಲಕವೇ ಮುಖ್ಯ ಕಚೇರಿಯಿಂದ ನಿರ್ವಹಿಸಲಿದ್ದು, ಆನ್‌ಲೈನ್ ರಿಮೋಟ್ ಮಾನಿಟರಿಂಗ್ ಸಿಸ್ಟಂ ಮೂಲಕವೇ ಸ್ವಯಂಚಾಲಿತ ಪಾವತಿ ಗೇಟ್‌ವೇ ಒದಗಿಸುತ್ತದೆ.

ಆನ್‌ಲೈನ್ ರಿಮೋಟ್ ಸಂಪರ್ಕ ಹೊಂದಿರುವುದರಿಂದ ಸ್ಥಳದಲ್ಲಿ ಚಾರ್ಜರ್‌ಗಳ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಸ್ಟೇಷನ್ ಮಾರ್ಷಲ್‌ಗಳ ಹೊಂದುವ ಅಗತ್ಯವನ್ನು ನಿವಾರಿಸುತ್ತದೆ.

ಇನ್ನು ಮೆಜೆಂಟಾ ಕಂಪನಿಯ ಅಧೀನದಲ್ಲಿ ಸದ್ಯ ಕಾರ್ಯನಿರ್ವಹಣೆಯಲ್ಲಿರುವ 4,500 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ 2950 ಚಾರ್ಜಿಂಗ್ ನಿಲ್ದಾಣಗಳನ್ನು ಫೇಮ್ 2 ಯೋಜನೆ ಅಡಿ ನಿರ್ಮಾಣ ಮಾಡಿದ್ದು, ಇನ್ನುಳಿದ 1200 ಚಾರ್ಜಿಂಗ್ ನಿಲ್ದಾಣಗಳನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್‌ಗಳಲ್ಲಿ, ಫ್ರೆನ್ ಹೋಟೆಲ್‌ಗಳ ಆವರಣದಲ್ಲಿ ಮತ್ತು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ ಜೊತೆಗೆ ಪ್ರಮುಖ ವಸತಿ ಕಟ್ಟಡಗಳಲ್ಲಿ ಫಾಸ್ಟ್ ಚಾರ್ಜರ್‌ಗಳನ್ನು ಸ್ಥಾಪನೆ ಮಾಡುತ್ತಿದೆ.

2026ರ ವೇಳೆಗೆ ಸಂಭಾವ್ಯವಾಗಿ ಸಂಚರಿಸಬಹುದಾದ ಎರಡು ಮಿಲಿಯನ್ ಎಲೆಕ್ಟ್ರಿಕ್ ವಾಹನಗಳ(ಇವಿ) ಚಾರ್ಜಿಂಗ್ ಅಗತ್ಯವನ್ನು ಪೂರೈಸಲು 4 ಲಕ್ಷ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಸರ್ಕಾರದ ಉಪಕ್ರಮವನ್ನು ಪ್ರಮುಖ ಚಾರ್ಜಿಂಗ್ ನಿಲ್ದಾಣ ನಿರ್ಮಾಣಗಳು ಬೆಂಬಲಿಸುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗಲಿವೆ.