2021ರ ಅವಧಿಯ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿ ಜೆಡ್ಎಸ್ ಇವಿ ಮಾರಾಟದೊಂದಿಗೆ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದು, ಕಳೆದ ವರ್ಷ ಕಂಪನಿಯು ಜೆಡ್ಎಸ್ ಇವಿ ಮಾರಾಟದೊಂದಿಗೆ ಶೇ. 145ರಷ್ಟು ಬೆಳವಣಿಗೆ ಸಾಧಿಸಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಜೆಡ್ಎಸ್ ಇವಿ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿರುವ ಎಂಜಿ ಮೋಟಾರ್ ಕಂಪನಿಯು ಕಳೆದ ವರ್ಷ 2,798 ಯುನಿಟ್ ಮಾರಾಟದೊಂದಿಗೆ ಶೇ. 145ರಷ್ಟು ವಾರ್ಷಿಕವಾಗಿ ಬೆಳವಣಿಗೆ ಸಾಧಿಸಿದೆ. ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ನಂತರ ಎರಡನೇ ಸ್ಥಾನದಲ್ಲಿರುವ ಜೆಡ್ಎಸ್ ಇವಿ ಮಾದರಿಯು ತುಸು ದುಬಾರಿಯಾಗಿದ್ದರೂ ಹೆಚ್ಚಿನ ಮಟ್ಟದ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

2020ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಜೆಡ್ಎಸ್ ಇವಿ ಮಾದರಿಯು ಮೊದಲ ವರ್ಷದಲ್ಲಿ 1,142 ಯುನಿಟ್ ಮತ್ತು ಎರಡನೇ ವರ್ಷದಲ್ಲಿ 2,798 ಯುನಿಟ್ ಮಾರಾಟಗೊಂಡಿದೆ. ಬಿಡುಗಡೆಯ ಆರಂಭದಲ್ಲಿ ಕಡಿಮೆ ಮೈಲೇಜ್ ರೇಂಜ್ ಹೊಂದಿದ್ದ ಜೆಡ್ಎಸ್ ಇವಿ ಮಾದರಿಯು 2021ರ ಮಾದರಿಯೊಂದಿಗೆ ಹೆಚ್ಚಿನ ಮೈಲೇಜ್ ರೇಂಜ್ ಹೊಂದಿರುವುದು ಬೇಡಿಕೆ ಹೆಚ್ಚಳವಾಗುತ್ತಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಧನಗಳ ದುಬಾರಿ ಬೆಲೆ ಪರಿಣಾಮ 2021ರಲ್ಲಿ ಹಲವಾರು ಇವಿ ವಾಹನ ಕಂಪನಿಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಇವಿ ವಾಹನ ಮಾರಾಟವು ಮತ್ತಷ್ಟು ಹೆಚ್ಚಳವಾಗಲಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಇವಿ ವಾಹನಗಳಿಗೆ ಪೂರಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಜಿಂಗ್ ಸೌಲಭ್ಯಗಳನ್ನು ಜೋಡಿಸುತ್ತಿರುವುದು ಕೂಡಾ ಹೊಸ ವಾಹನ ಖರೀದಿದಾರರಿಗೆ ಇವಿ ವಾಹನ ಖರೀದಿಯು ಆಕರ್ಷಣೆಯಾಗುತ್ತಿದ್ದು, ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್ ವಿಚಾರವಾಗಿ ಜೆಡ್ಎಸ್ ಇವಿ ಉತ್ತಮ ಆಯ್ಕೆಯಾಗಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಸದ್ಯ ಮಾರಾಟ ಮಾಡುತ್ತಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು 44.5 kWh ಬ್ಯಾಟರಿ ಪ್ಯಾಕ್ ಜೊತೆ ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಂಡಿದ್ದು, ಪ್ರತಿ ಚಾರ್ಚ್‌ಗೆ 419 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಮುಂಬರುವ ದಿನಗಳಲ್ಲಿ 44.5 kWh ಬ್ಯಾಟರಿ ಪ್ಯಾಕ್ ಅನ್ನೇ ಪ್ರತಿ ಚಾರ್ಜ್‌ಗೆ 500 ಕಿಮೀ ಗೆ ಹೆಚ್ಟಳವಾಗುವ ನಿಟ್ಟಿಯಲ್ಲಿ ಸಂಶೋಧನೆಗಳನ್ನು ಕೈಗೊಂಡಿರುವುದಾಗಿ ಹೇಳಿಕೊಂಡಿರುವ ಎಂಜಿ ಮೋಟಾರ್ ಕಂಪನಿಯ ಮುಖ್ಯಸ್ಥರು ಉನ್ನತೀಕರಿಸಿದ ಆವೃತ್ತಿಯನ್ನು ಮುಂಬರುವ ಹೊಸ ಆವೃತ್ತಿಯಲ್ಲಿ ಬಿಡುಗಡೆ ಮಾಡಲಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಪ್ರಸ್ತುತ ಜೆಡ್ಎಸ್ ಇವಿಯಲ್ಲಿ ಜೋಡಿಸಲಾಗಿರುವ 44.5 kWh ಬ್ಯಾಟರಿ ಪ್ಯಾಕ್ ಮಾದರಿಯನ್ನೇ ಭವಿಷ್ಯದ ಇವಿ ಕಾರುಗಳಲ್ಲೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೇರೆ ಬೇರೆ ಮೈಲೇಜ್ ಪ್ರಮಾಣ ಮತ್ತು ತಂತ್ರಜ್ಞಾನ ಬಳಕೆ ಹೊಂದಿದ್ದು, ಬಿಡುಗಡೆಯಾಗಲಿರುವ ಹೊಸ ಇವಿ ಕಾರುಗಳು ಬೆಲೆ ವಿಚಾರವಾಗಿ ಗಮನಸೆಳೆಯಲಿವೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯು ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಎಕ್ಸೈಟ್ ಮಾದರಿಯು ರೂ. 21 ಲಕ್ಷ ಮತ್ತು ಎಕ್ಸ್‌ಕ್ಲೂಸಿವ್ ಮಾದರಿಯು ರೂ. 24.21 ಲಕ್ಷ ಬೆಲೆ ಹೊಂದಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಇನ್ನು ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಮುಂಬರುವ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಪ್ರೀಮಿಯಂ ಜೆಡ್ಎಸ್ ಇವಿ ಜೊತೆಗೆ ಬಜೆಟ್ ಬೆಲೆಯಲ್ಲೂ ಇವಿ ಕಾರು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಜಿ ಇವಿ ಕಾರು ಮಾದರಿಯು ರೂ.10 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಪ್ರತಿ ಚಾರ್ಜ್‌ಗೆ ಕನಿಷ್ಠ 300 ರಿಂದ 350 ಕಿ.ಮೀ ಮೈಲೇಜ್ ಪ್ರೇರಿತ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಧನಗಳ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಎಂಜಿ ಮೋಟಾರ್ ಕಂಪನಿಯು ತನ್ನ ಜೆಡ್ಎಸ್ ಇವಿ ನಂತರ ಬಜೆಟ್ ಬೆಲೆಯ ಇವಿ ಕಾರು ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಸದ್ಯ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಇವಿ ಕಾರು ಮಾದರಿಯು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ತುಸು ದುಬಾರಿ ಎನ್ನಿಸಲಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಯು ರೂ.10 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ನಂ.1 ಸ್ಥಾನ ಕಾಯ್ದುಕೊಂಡಿರುವ ಟಾಟಾ ನೆಕ್ಸಾನ್ ಇವಿ ಕಾರು ಮಾದರಿಗೆ ಪೈಪೋಟಿಯಾಗಿ ಎಂಜಿ ಕಂಪನಿಯು ಹೊಸ ಕಾರು ಮಾದರಿಯನ್ನು ನಿರ್ಮಾಣ ಮಾಡುತ್ತಿದ್ದು, ಹೊಸ ಕಾರು ಸಬ್ ಫೋರ್ ಮೀಟರ್ ಆವೃತ್ತಿಯಾಗಿರಲಿದೆ.

2021ರ ಅವಧಿಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.145 ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಇದರೊಂದಿಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಸ್ಥಳೀಯ ಸಂಪನ್ಮೂನ ಬಳಕೆಯು ಇವಿ ವಾಹನಗಳ ಬೆಲೆ ಇಳಿಕೆಯಲ್ಲಿ ಪಾತ್ರವಹಿಸುವುದಾಗಿ ಹೇಳಿರುವ ಎಂಜಿ ಮೋಟಾರ್ ಮುಖ್ಯಸ್ಥರು ಮುಂಬರುವ ದಿನಗಳಲ್ಲಿ ಸ್ಥಳೀಯವಾಗಿ ಉತ್ಪಾದನೆಯಾದ ಬ್ಯಾಟರಿ ಉತ್ಪನ್ನದೊಂದಿಗೆ ಮತ್ತಷ್ಟು ಬೆಲೆ ಇಳಿಕೆ ಮಾಡಲು ಸಹಕಾರಿಯಾಗಿದೆ ಎಂದಿದ್ದಾರೆ.

ಸದ್ಯ ಬಹುತೇಕ ಎಲೆಕ್ಟ್ರಿಕ್ ವಾಹನ ತಯಾಕ ಕಂಪನಿಗಳು ವಿದೇಶಿ ಮಾರುಕಟ್ಟೆಗಳಿಂದಲೇ ಹಲವಾರು ಬಿಡಿಭಾಗಗಳು ಮತ್ತು ಬ್ಯಾಟರಿ ಉತ್ಪನ್ನ ಆಮದು ಮಾಡಿಕೊಂಡು ಭಾರತದಲ್ಲಿ ಜೋಡಣೆ ಮಾಡಿ ಮಾರಾಟ ಮಾಡುತ್ತಿದ್ದು, ಇದು ಸ್ಥಳೀಯವಾಗಿ ಹೆಚ್ಚಳವಾದಾಗ ಮಾತ್ರವೇ ಇವಿ ವಾಹನಗಳ ಬೆಲೆಯನ್ನು ತಗ್ಗಿಸಲು ಸಾಧ್ಯವೆಂದಿದ್ದಾರೆ.

Most Read Articles

Kannada
English summary
Mg zs electric suv 2021 sales 2798 units
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X