ಶೀಘ್ರದಲ್ಲೇ ಹೊಸ ಫೇಸ್‌ಲಿಫ್ಟ್‌ ಹ್ಯುಂಡೈ ಕ್ರೆಟಾ ಬಿಡುಗಡೆ...ವಿನ್ಯಾಸ, ವೈಶಿಷ್ಟ್ಯಗಳಲ್ಲಿ ಪ್ರಮುಖ ಬದಲಾವಣೆ

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಮುಂದಿನ ವರ್ಷದ ಮಧ್ಯಭಾಗದಲ್ಲಿ ಕ್ರೆಟಾದ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಪರಿಚಯಿಸುವ ಸಾಧ್ಯತೆಯಿದೆ. 2015 ರಲ್ಲಿ ಭಾರತೀಯ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದ ಕ್ರೆಟಾ, ಹ್ಯುಂಡೈ ಬ್ರಾಂಡ್‌ ಅನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದಿಗೂ ಉತ್ತಮ ಮಾರಾಟದೊಂದಿಗೆ ಕಂಪನಿಯು ಭಾರತಲ್ಲಿ ಮುನ್ನುಗ್ಗುತ್ತಿದೆ.

ಮಧ್ಯಮ ಗಾತ್ರದ ಹ್ಯುಂಡೈ ಕ್ರೆಟಾ SUV ಪ್ರಸ್ತುತ ಹೊಸ ಪ್ರತಿಸ್ಪರ್ಧಿಗಳ ಆಗಮನದ ಹೊರತಾಗಿಯೂ ಹೆಚ್ಚು ಮಾರಾಟವಾಗುವ ಮಾದರಿಯಾಗಿದೆ. ಆದರೂ ಪ್ರತಿಸ್ಪರ್ಧಿಗಳ ಪೈಪೋಟಿಯನ್ನು ಎದುರಿಸಲು ಹೊಸ ನವೀಕರಣ ಅಗತ್ಯವಿರುವುದರಿಂದ ಕ್ರೆಟಾ ಫೇಸ್‌ಲಿಫ್ಟ್‌ ಮಾದರಿಯನ್ನು ಹೊರತರಲು ಕಂಪನಿ ಸಜ್ಜಾಗುತ್ತಿದೆ. ಎರಡನೇ ತಲೆಮಾರಿನ ಹ್ಯುಂಡೈ ಕ್ರೆಟಾಕ್ಕೆ ಮೊದಲ ಪ್ರಮುಖ ನವೀಕರಣವು ಅದರ ಡಿಸೈನ್ ಆಗರಲಿದೆ. ಏಕೆಂದರೆ ಹೊರಭಾಗ ಮತ್ತು ಒಳಾಂಗಣವು ದೀರ್ಘ ಕಾಲದಿಂದ ಹಾಗೇ ಇರುವುದರಿಂದ ಪರಿಷ್ಕರಿಸಲಾಗುವುದು.

ಪ್ರಮುಖವಾಗಿ ಹೊರಭಾಗದಲ್ಲಿ 2023 ಹ್ಯುಂಡೈ ಕ್ರೆಟಾ, ಹೊಸ ತಲೆಮಾರಿನ ಟ್ಯೂಸಾನ್‌ನಿಂದ ಸಾಕಷ್ಟು ವಿನ್ಯಾಸ ಸ್ಫೂರ್ತಿಯನ್ನು ಪಡಿಯಲಿದೆ. ಟ್ಯೂಸಾನ್ ಅನ್ನು ಕೆಲವು ತಿಂಗಳ ಹಿಂದೆ ಭಾರತದಲ್ಲಿ ಪ್ರಾರಂಭಿಸಲಾಯಿತು. ಇದರ ಮುಂಭಾಗದ ಗ್ರಿಲ್ ಪ್ಯಾರಾಮೆಟ್ರಿಕ್ ಗ್ರಿಲ್ ವಿಭಾಗ ಮತ್ತು ಹೊಸ LED DRL ಗಳನ್ನು ಪಡೆಯುತ್ತದೆ. ಇದು ಉತ್ತಮ ಪ್ರತಿಕ್ರಿಯೆ ಪಡೆದಿರುವುದರಿಂದ ಕ್ರೆಟಾ ಮಾದರಿಗೂ ಕೆಲವು ಅಂಶಗಳನ್ನು ಎರವಲು ಪಡಿಯಲು ಕಂಪನಿ ಮುಂದಾಗಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಸ್ಪೋರ್ಟಿನೆಸ್ ಸ್ಟೈಲಿಂಗ್‌ನೊಂದಿಗೆ ನವೀಕರಿಸಿದ ಹ್ಯುಂಡೈ ಕ್ರೆಟಾ ಹೊಸ LED ಹೆಡ್‌ಲ್ಯಾಂಪ್‌ಗಳು, ನವೀಕರಿಸಿದ ಬಂಪರ್, ವಿಶಾಲವಾದ ಏರ್‌ ಇಂಟೇಕ್, ಹೊಸ ಸ್ಕಿಡ್ ಪ್ಲೇಟ್ ಮತ್ತು ಹೆಚ್ಚು ಆಕ್ರಮಣಕಾರಿ ಬಾನೆಟ್‌ನೊಂದಿಗೆ ಬರುತ್ತದೆ. ಉಳಿದಂತೆ ಸ್ಲೀಕರ್ ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಮರುವಿನ್ಯಾಸಗೊಳಿಸಲಾದ ಬೂಟ್ಲಿಡ್, ನವೀಕರಿಸಿದ ಹಿಂಭಾಗದ ಬಂಪರ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಿದ ಅಲಾಯ್ ವೀಲ್‌ಗಳನ್ನು ಸಹ ಕಾಣಬಹುದು. ಹುಂಡೈ ಹೊಸ ಬಣ್ಣದ ಯೋಜನೆಗಳನ್ನು ಸಹ ನೀಡುತ್ತದೆ ಎಂದು ಹೇಳಲಾಗುತ್ತಿದೆ.

ಈ ಮೂಲಕ ಹೊಸ ಕ್ರೆಟಾದ ಹೊರಭಾಗವು ಪ್ರಮುಖ ಬದಲಾವಣೆಗಳನ್ನು ಪಡೆದರೆ, ಒಳಭಾಗವು ಅದರ ಡ್ಯಾಶ್‌ಬೋರ್ಡ್ ಮತ್ತು ಸೆಂಟರ್ ಕನ್ಸೋಲ್ ಅನ್ನು ಸಣ್ಣ ಪರಿಷ್ಕರಣೆಗಳೊಂದಿಗೆ ಬರಲಿದೆ. ಆದಾಗ್ಯೂ, ಪ್ರಮುಖ ಅಪ್‌ಡೇಟ್‌ನ ಭಾಗವಾಗಿ ಅಲ್ಕಾಜರ್‌ನಲ್ಲಿ ಕಂಡುಬರುವ ಹೊಸ 10.25-ಇಂಚಿನ ಡಿಜಿಟಲ್ ಇನ್‌ಸ್ಟ್ರೂಮೆಂಟಲ್ ಕನ್ಸೋಲ್ ಆಗಿರುತ್ತದೆ. ನಾವು ಹೆಚ್ಚು ಪ್ರೀಮಿಯಂ ಮೇಲ್ಮೈ ಟ್ರಿಮ್‌ಗಳು ಮತ್ತು ವಸ್ತುಗಳನ್ನು ನಿರೀಕ್ಷಿಸಬಹುದು, ಆದರೆ ಕ್ಯಾಬಿನ್ ಸ್ಥಳವು ಹೆಚ್ಚಾಗಿ ಒಂದೇ ಆಗಿರುತ್ತದೆ.

2023 ಹ್ಯುಂಡೈ ಕ್ರೆಟಾದ ಬೆಲೆಗಳು ಸುಮಾರು ರೂ. 11 ಲಕ್ಷದಿಂದ ಆರಂಭವಾಗಿ ರೂ. 19.5 ಲಕ್ಷ (ಎಕ್ಸ್ ಶೋ ರೂಂ). ವರೆಗೆ ಹೋಗಬಹುದು. ಐದು ಆಸನಗಳೊಂದಿಗೆ ಟ್ಯೂಸಾನ್‌ನಲ್ಲಿ ಕಂಡುಬರುವ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಪಡೆಯುವ ನಿರೀಕ್ಷೆಯಿದೆ. ಬಾನೆಟ್ ಅಡಿಯಲ್ಲಿ, ಪರಿಚಿತ 1.5-ಲೀಟರ್ ನಾಲ್ಕು ಸಿಲಿಂಡರ್ NA ಪೆಟ್ರೋಲ್ ಮತ್ತು 1.5-ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ CRDI ಡೀಸೆಲ್ ಆಯ್ಕೆಯನ್ನು ನೀಡಲಿದೆ.

ಆದರೆ 1.4-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸುಮಾರು 140 PS ಗರಿಷ್ಠ ಪವರ್ ಮತ್ತು 242 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 PS ಮತ್ತು 253 Nm ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿರಲಿದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳು ಲಭ್ಯವಿರುತ್ತವೆ ಎಂದು ತಿಳಿದು ಬಂದಿದೆ. ಇದು ಮುಂದಿನ ವರ್ಷ ಮಧ್ಯಂತರದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
New facelift hyundai creta launching soon
Story first published: Friday, December 30, 2022, 13:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X