ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಟೊಯೊಟಾ ಇಂಡಿಯಾ ಕಂಪನಿಯು ಭಾರತದಲ್ಲಿ ಇನೋವಾ ಎಂಪಿಯ ಹೊಸ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಹೈಕ್ರಾಸ್ ಹೆಸರಿನಲ್ಲಿ ಬಿಡುಗಡೆಯಾಗಲಿರುವ ಹೊಸ ಮಾದರಿಯು ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಭಾರತದಲ್ಲಿ ಇತ್ತೀಚೆಗೆ ಇನೋವಾ ಕ್ರಿಸ್ಟಾ ಕಾರಿನ ಡೀಸೆಲ್ ಎಂಜಿನ್ ಮಾದರಿಯ ಬುಕಿಂಗ್ ಸ್ಥಗಿತಗೊಳಿಸಿರುವ ಟೊಯೊಟಾ ಕಂಪನಿಯು ಸದ್ಯಕ್ಕೆ ಪೆಟ್ರೋಲ್ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಮುಂದಿನ ತಲೆಮಾರಿನ ಇನೋವಾ ಹೈಕ್ರಾಸ್ ಮಾದರಿಯು 2023ರ ಆರಂಭದಲ್ಲಿ ಬಿಡುಗಡೆಗೊಳ್ಳಲು ಸಾಧ್ಯತೆಗಳಿವೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಹೊಸ ತಲೆಮಾರಿನ ಇನೋವಾ ಹೈಕ್ರಾಸ್‌ನಲ್ಲಿ ಕಂಪನಿಯು ಡೀಸೆಲ್ ಎಂಜಿನ್ ತೆಗೆದುಹಾಕುವ ಸುಳಿವು ನೀಡಿದ್ದು, ಕೇವಲ ಪೆಟ್ರೋಲ್ ಮತ್ತು ಸ್ಟಾಂಗ್ ಹೈಬ್ರಿಡ್ ಮಾದರಿಯನ್ನು ಪರಿಚಯಿಸುವ ಯೋಜನೆಯಲ್ಲಿದೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಡೀಸೆಲ್ ಕಾರುಗಳ ಮಾಲಿನ್ಯ ತಡೆಯಲು ಜಾರಿಗೊಳಿಸಲಾಗುತ್ತಿರುವ ಹೊಸ ಮಾನದಂಡಗಳನ್ನು ಜಾರಿಗೊಳಿಸುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಡೀಸೆಲ್ ಕಾರುಗಳ ಬೆಲೆ ಇನ್ನಷ್ಟು ಹೆಚ್ಚಳವಾಗಲಿದ್ದು, ಇದರಿಂದ ಡೀಸೆಲ್ ಮಾದರಿಗೆ ಪರ್ಯಾಯವಾಗಿ ಹೈಬ್ರಿಡ್ ಮಾದರಿಯನ್ನು ಪರಿಚಯಿಸಲು ಮುಂದಾಗಿದೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಒಂದು ವೇಳೆ ಹೊಸ ತಲೆಮಾರಿನ ಇನೋವಾದಲ್ಲಿ ಡೀಸೆಲ್ ಮಾದರಿಯನ್ನು ಪರಿಚಯಿಸಿದರೆ ಹೊಸ ಮಾನದಂಡ ಪೂರೈಸಬೇಕಿರುವ 2.4 ಲೀಟರ್ ಡೀಸೆಲ್ ಮಾದರಿಯು ಹೆಚ್ಚಿನ ಬೆಲೆ ಪಡೆದುಕೊಳ್ಳಲಿದೆ. ಜೊತೆಗೆ ಭವಿಷ್ಯದಲ್ಲಿ ಡೀಸೆಲ್ ಕಾರುಗಳ ಸಂಚಾರಕ್ಕೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುತ್ತಿರುವುದರಿಂದ ಕಂಪನಿಯು ಹೈಬ್ರಿಡ್ ಮತ್ತು ಪೆಟ್ರೋಲ್ ಮಾದರಿಗಳ ಮೇಲೆ ಮಾತ್ರ ಗಮನಹರಿಸಲು ನಿರ್ಧರಿಸಿದೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಹೈಬ್ರಿಡ್ ತಂತ್ರಜ್ಞಾನದಲ್ಲಿ ಈಗಾಗಲೇ ಯಶಸ್ವಿ ಕಂಡಿರುವ ಟೊಯೊಟಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳನ್ನು ಈಗಾಗಲೇ ಸಂಪೂರ್ಣವಾಗಿ ಹೈಬ್ರಿಡ್ ಎಂಜಿನ್‌ನಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದು, ಇದೀಗ ಡೀಸೆಲ್ ಮಾದರಿಯೊಂದಿಗೆ ಜನಪ್ರಿಯವಾಗಿ ಇನೋವಾ ಎಂಪಿವಿಯಲ್ಲೂ ಹೊಸ ಬದಲಾವಣೆ ಸಿದ್ದವಾಗಿದೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಕ್ಯಾಮ್ರಿ ಸೆಡಾನ್ ಮಾದರಿಯಲ್ಲಿರುವ 2.5 ಲೀಟರ್ ಆಟ್ಕಿನ್ಸ್ ಸೈಕಲ್ ಹೈಬ್ರಿಡ್ ಎಂಜಿನ್ ಅನ್ನು ಇನೋವಾ ಹೈಕ್ರಾಸ್‌ನಲ್ಲಿ ಬಳಕೆ ಮಾಡಬಹುದಾಗಿದ್ದು, ಇದು ಸೆಲ್ಫ್ ಚಾರ್ಜಿಂಗ್ ವೈಶಿಷ್ಟ್ಯತೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 17 ರಿಂದ 19 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಹೀಗಾಗಿ ಇದು ಇನೋವಾ ಡೀಸೆಲ್ ಮಾದರಿಯಲ್ಲಿ ಹೆಚ್ಚಿನ ಮೈಲೇಜ್ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದ್ದು, ಹೆಚ್ಚಿನ ಮಟ್ಟದ ಫೀಚರ್ಸ್‌ಗಳಿಂದಾಗಿ ಇದು ಸಾಮಾನ್ಯ ಡೀಸೆಲ್ ಮಾದರಿಗಿಂತಲೂ ತುಸು ದುಬಾರಿಯಾಗಬಹುದಾಗಿದೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳಲಿರುವ ಇನೋವಾ ಹೈಕ್ರಾಸ್ ಮಾದರಿಯು ಕೇವಲ ಎಂಜಿನ್‌ನಲ್ಲಿ ಮಾತ್ರವಲ್ಲದೆ ಹಲವಾರು ಹೊಸ ಫೀಚರ್ಸ್ ಮತ್ತು ಸುರಕ್ಷಾ ಸೌಲಭ್ಯಗಳೊಂದಿಗೆ ರಸ್ತೆಗಿಳಿಯಲಿದೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಇನೋವಾ ಹೈಕ್ರಾಸ್ ಎಂಪಿವಿಯಲ್ಲಿ ಕಂಪನಿಯು ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟ್) ಸೌಲಭ್ಯವನ್ನು ಪರಿಚಯಿಸುತ್ತಿದ್ದು, ಇದು ಕಾರು ಚಾಲನೆ ವೇಳೆ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸೌಲಭ್ಯದಲ್ಲಿ ಟೊಯೊಟಾ ಸೆಫ್ಟಿ ಸೆನ್ಸ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೈನ್ ಕೀಪ್ ಅಸಿಸ್ಟ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ ಒಳಗೊಂಡಿರಲಿದೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಇದರೊಂದಿಗೆ ಹೊಸ ಕಾರಿನಲ್ಲಿ ಇದುವರೆಗೆ ನೀಡದೆ ಇರಲಾದ ಎಲೆಕ್ಟ್ರಿಕ್ ಸನ್‌ರೂಫ್, ಪ್ರಸ್ತುತ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಇನ್ಪೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಮತ್ತು ಕಾರ್ ಕನೆಕ್ಟ್ ಸೌಲಭ್ಯಗಳಿವೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಪ್ರಸ್ತುತ ಮಾರುಕಟ್ಟೆಯಲ್ಲಿ ಜಿ, ಜಿ ಪ್ಲಸ್, ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಇನೋವಾ ಕ್ರಿಸ್ಟಾ ಕಾರು ಮಾದರಿಯು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 17.86 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 26.54 ಲಕ್ಷ ಬೆಲೆ ಹೊಂದಿದೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಪ್ರತಿಸ್ಪರ್ಧಿ ಮಾದರಿಗಳಿಂತಲೂ ವಿನೂತನ ಸೌಲಭ್ಯಗಳೊಂದಿಗೆ ಎಂಪಿವಿ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನದಲ್ಲಿರುವ ಇನೋವಾ ಕ್ರಿಸ್ಟಾ ಕಾರು ಮಾದರಿಯು ಕಾಲ ಕಾಲಕ್ಕೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಇದುವರೆಗೆ ಇದು ಬರೋಬ್ಬರಿ 10 ಲಕ್ಷ ಯುನಿಟ್ ಮಾರಾಟಗೊಳ್ಳುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ಎಡಿಎಎಸ್ ಸೇರಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್

ಭಾರತದಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಗೊಂಡಿದ್ದ ಇನೋವಾ ಮಾದರಿಯುು ಹಲವಾರು ಬದಲಾವಣೆಗಳೊಂದಿಗೆ ಬೇಡಿಕೆ ಕಾಯ್ದುಕೊಂಡಿದ್ದು, ಇದೀಗ ಇನೋವಾ ಕ್ರಿಸ್ಟಾ ಹೆಸರಿನಲ್ಲಿ ಮಾರಾಟಗೊಳ್ಳುತ್ತಿದೆ.

Most Read Articles

Kannada
Read more on ಟೊಯೊಟಾ toyota
English summary
New gen toyota innova hycross likely to get hybrid engine and adas
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X