Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಅಧಿಕ ರೇಂಜ್ ಹೊಂದಿರುವ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ದೇಶದಲ್ಲಿ ಪರಿಚಯಿಸಲು ಸಿದ್ಧವಾಗಿದೆ. ಈ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು 2022ರ ಜೂನ್ 2 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಇದೀಗ ಕಿಯಾ ಕಂಪನಿಯು ಇದೀಗ ಈ ಹೊಸ ಇವಿ6 ಎಲೆಕ್ಟ್ರಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಹೊಸ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.3 ಲಕ್ಷದ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಕಾರನ್ನು ಭಾರತದ 12 ನಗರಗಳಲ್ಲಿ 15 ಆಯ್ದ ಡೀಲರ್‌ಶಿಪ್‌ಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಗ್ರಾಹಕರು ಕಂಪನಿಯ ವೆಬ್‌ಸೈಟ್‌ನಲ್ಲಿ ಇವಿ6 ಎಲೆಕ್ಟ್ರಿಕ್ ಕಾರನ್ನು ಬುಕ್ ಮಾಡಬಹುದು.

ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (E-GMP) ಅನ್ನು ಆಧರಿಸಿದೆ, ಇದು ಬ್ರ್ಯಾಂಡ್‌ನ ಭವಿಷ್ಯದ ಶ್ರೇಣಿಯ ಎಲೆಕ್ಟ್ರಿಕ್ ಕೊಡುಗೆಗಳ ಆಧಾರವಾಗಿದೆ. ಈಕಿಯಾ ಇವಿ6 ಅನ್ನು 77.4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ನೀಡಲಾಗುವುದು ಮತ್ತು ಸಂಪೂರ್ಣವಾಗಿ ಚಾರ್ಜ್ ಮಾಡಿದಾಗ 528 ಕಿ,ಮೀ ರೇಂಜ್ ಅನ್ನು ನೀಡುತ್ತದೆ.

ಬ್ಯಾಟರಿ ಪ್ಯಾಕ್ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಇದರ ಮೂಲಕ 4.5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 100 ಕಿಮೀ ಚಾರ್ಜ್ ಮಾಡಬಹುದು. ಇದನ್ನು 350kW ವೇಗದ ಚಾರ್ಜರ್ ಮತ್ತು 50kWh ವೇಗದ ಚಾರ್ಜರ್‌ನೊಂದಿಗೆ ಲಭ್ಯವಿರುತ್ತದೆ, ಇದು ಕ್ರಮವಾಗಿ 18 ನಿಮಿಷಗಳು ಮತ್ತು 73 ನಿಮಿಷಗಳಲ್ಲಿ 10% ರಿಂದ 80% ವರೆಗೆ ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾಗಿದೆ.

ಹೊಸ ಕಿಯಾ ಎಲೆಕ್ಟ್ರಿಕ್ ಕ್ರಾಸ್ಒವರ್ ಅನ್ನು ಒಂದೇ ಮೋಟಾರ್ ಅಥವಾ ಡ್ಯುಯಲ್ ಮೋಟಾರ್ ಸಟಪ್ ಅನ್ನು ಹೊಂದಬಹುದು. ಹಿಂದಿನದು RWD ಯೊಂದಿಗೆ ಬರುತ್ತದೆ ಮತ್ತು 350 ಎನ್ಎಂ ನೊಂದಿಗೆ 225 ಬಿಹೆಚ್‍ಪಿ ಮಾಡುತ್ತದೆ, ಎರಡನೆಯದು AWD ಅನ್ನು ಪಡೆಯುತ್ತದೆ ಮತ್ತು 321 ಬಿಹೆಚ್‍ಪಿ ಪವರ್ ಮತ್ತು 605 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕ್ರಾಸ್ಒವರ್ ಖರೀದಿದಾರರು ಸ್ನೋ ವೈಟ್ ಪರ್ಲ್, ಅರೋರಾ ಬ್ಲ್ಯಾಕ್ ಪರ್ಲ್, ಮೊನೊಸ್ಕೇಪ್, ರನ್ವೇ ರೆಡ್ ಮತ್ತು ಯಾಚ್ ಬ್ಲೂ ಸೇರಿದಂತೆ ಐದು ಬಾಹ್ಯ ಬಣ್ಣದ ಆಯ್ಕೆಗಳನ್ನು ಪಡೆಯುತ್ತಾರೆ. ಎಲೆಕ್ಟ್ರಿಕ್ ಕಾರು 469 ಎಂಎಂ ಉದ್ದ, 1890 ಎಂಎಂ ಅಗಲ ಮತ್ತು 1550 ಎಂಎಂ ಎತ್ತರವನ್ನು ಹೊಂದಿರಲಿದೆ.

ಈ ವೈಶಿಷ್ಟ್ಯಗಳ ಪಟ್ಟಿಯು ಡ್ಯುಯಲ್ 12.3-ಇಂಚಿನ ಡಿಸ್ಪ್ಲೇಗಳು, ಡ್ಯುಯಲ್ ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 10-ವೇ ಪವರ್ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟ್‌ಗಳು, ಪ್ಯಾಡಲ್ ಶಿಫ್ಟರ್‌ಗಳು, ರೈನ್ ಸೆನ್ಸಿಂಗ್ ವೈಪರ್‌ಗಳು, ಮಲ್ಟಿ ಡ್ರೈವ್ ಮೋಡ್‌ಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, 4 ಸ್ಪೀಕರ್ ಆಡಿಯೋ ಸಿಸ್ಟಮ್, ಕಿಯಾ 60+ ವೈಶಿಷ್ಟ್ಯಗಳು ಕೂಡ ಹೊಂದಿರಲಿದೆ.

ಈ ಹೊಸ ಕಿಯಾ ಇವಿ6 ಕಾರು 14 ಸ್ಪೀಕರ್‌ಗಳೊಂದಿಗೆ ಮೆರಿಡಿಯನ್ ಸೌಂಡ್ ಸಿಸ್ಟಮ್, ವರ್ಧಿತ ರಿಯಾಲಿಟಿ ಹೆಡ್ಸ್-ಅಪ್ ಡಿಸ್ಪ್ಲೇ, ಆಟೋಮ್ಯಾಟಿಕ್ ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಚಾಲಿತ ಟೈಲ್‌ಗೇಟ್‌ನಂತಹ ಕೆಲವು ವಿಶೇಷ ವಿನ್ಯಾಸದ ಅಂಶಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಹೊಸ ಕಿಯಾ ಎಲೆಕ್ಟ್ರಿಕ್ ಕಾರು 8 ಏರ್‌ಬ್ಯಾಗ್‌ಗಳು, ESC, ABS, HAC, BAS, VSM, ESS, ಎಲ್ಲಾ ವ್ಹೀಲ್ ಗಳಿಗೆ ಡಿಸ್ಕ್ ಬ್ರೇಕ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳು ಮತ್ತು Isofix ಚೈಲ್ಡ್ ಆಂಕರ್ ಜೊತೆಗೆ ADAS ಸೂಟ್ ಅನ್ನು ಒಳಗೊಂಡಿದೆ, ಕಿಯಾ ಇವಿ6 ಬಿಡುಗಡೆಯು ಭಾರತದಲ್ಲಿ ಎಲೆಕ್ಟ್ರಿಕ್ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅದರ ಜೊತೆಗೆ, ಜಾಗ್ವಾರ್, ಮರ್ಸಿಡಿಸ್-ಬೆಂಝ್, ಬಿಎಂಡಬ್ಲ್ಯು, ಆಡಿ, ಇತ್ಯಾದಿ ಪ್ರೀಮಿಯಂ ಕಾರ್ ಬ್ರಾಂಡ್‌ಗಳು ನೀಡುವ ಪ್ರಸ್ತುತ ಇವಿಗಳಿಗೆ ಹೋಲಿಸಿದರೆ ಕಿಯಾ ಇವಿ6 ಪ್ರೀಮಿಯಂ ಗ್ರಾಹಕರಿಗೆ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಲಭಿಸಬಹುದು.

ಕಿಯಾ ಇವಿ6 ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಟೆಸ್ಲಾ ಮಾಡೆಲ್ ವೈ, ಫೋರ್ಡ್ ಮಸ್ಟಾಂಗ್ ಮ್ಯಾಕ್-ಇ ಮತ್ತು ವಿಡಬ್ಲ್ಯೂ ಐಡಿ ಕಾರುಗಳಿಗೆ ಪೈಪೋಟಿ ನೀಡುತ್ತಿದೆ ಈ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು 4 ಟ್ರಿಮ್ ಗಳಲ್ಲಿ ಬಿಡುಗಡೆಗೊಳಿಸಬಹುದು. 2021ರ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಯುರೋಪ್ ನಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

ಈ ಕಿಯಾ ಇವಿ6 E-GMP ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್ ಅನ್ನು ಆಧರಿಸಿದ ಮೊದಲ BEV ಆಗಿದೆ ಮತ್ತು ಇದು ಹ್ಯುಂಡೈ Ioniq 5 ನೊಂದಿಗೆ ಸಾಕಷ್ಟು ಸಾಮ್ಯಾತೆ ಇದೆ. ಫೇಸ್‌ಲಿಫ್ಟೆಡ್ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಈ ವರ್ಷದ ನಂತರ ಬಿಡುಗಡೆಯಾಗಲಿದೆ ಮತ್ತು ಅದರ ಸೋದರಸಂಬಂಧಿ, ಕಿಯಾ ನಿರೋ ಇವಿ ಕೂಡ 2023ಕ್ಕೆ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಇನ್ನು ಕಿಯಾ ಕಂಪನಿಯು ಇತ್ತೀಚೆಗೆ ಇವಿ6 ಎಲೆಕ್ಟ್ರಿಕ್ ಕಾರ್ ಅನ್ನು ಎನ್‌ಸಿಎಪಿ (ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ) ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿದೆ. ಕಿಯಾ ಇವಿ6 ಪೂರ್ಣ 5 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ವಯಸ್ಕರ ಸುರಕ್ಷತೆಗಾಗಿ ಲಭ್ಯವಿರುವ 38 ರಲ್ಲಿ 34.48 ಅಂಕಗಳನ್ನು ಗಳಿಸಿದೆ. ಮಕ್ಕಳ ಸುರಕ್ಷತೆಗಾಗಿ, ಇದು 49 ರಲ್ಲಿ 42.96 ಅಂಕಗಳನ್ನು ಗಳಿಸಿದೆ. ರಸ್ತೆ ಬಳಕೆದಾರರ ರಕ್ಷಣೆಯನ್ನು 64% ಎಂದು ರೇಟ್ ಮಾಡಲಾಗಿದೆ ಆದರೆ ಸುರಕ್ಷತಾ ಸಹಾಯದ ವೈಶಿಷ್ಟ್ಯಗಳನ್ನು 88% ಎಂದು ರೇಟ್ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾದಾಗ, ಸಿಬಿಯು ಮೂಲಕ ತರಲಾದ ಕಿಯಾ ಇವಿ6 ಜಿಟಿ ಲೈನ್ ಬೆಲೆಯು ತುಸು ದುಬಾರಿಯಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಆದರೆ ಈ ಮಾದರಿಗಳು ಎಲ್ಲಾ ಆಯ್ಜೆಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಪ್ಯಾಕ್ ಮಾಡಲ್ಪಡಿರುತ್ತದೆ.