ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಮುಂಬೈ ಮೂಲದ ಇವಿ ಸ್ಟಾರ್ಟಪ್ ಪಿಎಂವಿ ಎಲೆಕ್ಟ್ರಿಕ್ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ EaS-E ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಪಿಎಂವಿ EaS-E ದೇಶದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ವಾಹನವಾಗಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಹೊಸ ಪಿಎಂವಿ EaS-E ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.79 ಲಕ್ಷವಾಗಿದೆ. ಇದು ಪರಿಚಯಾತ್ಮಕ ಬೆಲೆಯಾಗಿದ್ದು, ಇದು ಮೊದಲ 10,000 ಗ್ರಾಹಕರಿಗೆ ಅನ್ವಯಿಸುತ್ತದೆ. ಹೊಸ ಪಿಎಂವಿ EaS-E ಎಲೆಕ್ಟ್ರಿಕ್ ಕಾರಿಗೆ ಈಗಾಗಲೇ ಸುಮಾರು 6,000 ಮುಂಗಡ-ಬುಕ್ಕಿಂಗ್ ಗಳನ್ನು ಸ್ವೀಕರಿಸಿದೆ. ಆಸಕ್ತ ಗ್ರಾಹಕರು ಸಣ್ಣ ಎಲೆಕ್ಟ್ರಿಕ್ ವಾಹನವನ್ನು ಆನ್‌ಲೈನ್‌ನಲ್ಲಿ ರೂ 2,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಭಾರತದ ಈ ಚಿಕ್ಕ ಎಲೆಕ್ಟ್ರಿಕ್ ಕಾರಿನಲ್ಲಿ ಇಬ್ಬರು ವಯಸ್ಕರು ಮತ್ತು ಮಗುವಿಗೆ ಅವಕಾಶವನ್ನು ಹೊಂದಿದೆ. ನಗರ ಪ್ರದೇಶದ ಗ್ರಾಹಕರನ್ನು ಗುರಿಯಾಗಿಸಿಕೊಂಡ ಪಿಎಂವಿ EaS-E ಎಲೆಕ್ಟ್ರಿಕ್ ಕಾರು 2,915 ಎಂಎಂ, 1,1157 ಎಂಎಂ ಅಗಲ ಮತ್ತು 1,600 ಎಂಎಂ ಎತ್ತರವನ್ನು ಹೊಂದಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇನ್ನು ಈ ಪಿಎಂವಿ EaS-E ಎಲೆಕ್ಟ್ರಿಕ್ ಕಾರು 2,087 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ ಮತ್ತು 550 ಕೆಜಿ ತೂಕವನ್ನು ಹೊಂದಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

PMV EaS-E ಎಲೆಕ್ಟ್ರಿಕ್ ಕಾರು ಫಂಕಿ ಸ್ಟೈಲಿಂಗ್‌ನೊಂದಿಗೆ ಬರುತ್ತದೆ, ಈ ಕಾರಿನಲ್ಲಿ ರೌಂಡ್ ಹೆಡ್‌ಲ್ಯಾಂಪ್‌ಗಳು, ಅಗಲದ ಉದ್ದಕ್ಕೂ ಚಲಿಸುವ LED ಲೈಟ್ ಬಾರ್ ಮತ್ತು ಸ್ಲಿಮ್ LED ಲ್ಯಾಂಪ್‌ಗಳನ್ನು ಒಳಗೊಂಡಿದೆ. ಟೈಲ್-ಲೈಟ್‌ಗಳ ಮೇಲೆ ಅಡ್ಡಲಾಗಿ ಇರಿಸಲಾಗಿರುವ ಲೈಟ್ ಬಾರ್ ಅನ್ನು ನೋಡಬಹುದು.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಹೊಸ ಮಾದರಿಯು ಡಿಜಿಟಲ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಎಸಿ, ರಿಮೋಟ್ ಕೀಲೆಸ್ ಎಂಟ್ರಿ ಮತ್ತು ರಿಮೋಟ್ ಪಾರ್ಕ್ ಅಸಿಸ್ಟ್, ಕ್ರೂಸ್ ಕಂಟ್ರೋಲ್‌ಗಳು, ಏರ್‌ಬ್ಯಾಗ್‌ಗಳು, ಇತ್ಯಾದಿಗಳಂತಹ ಹಲವಾರು ಉನ್ನತ-ಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಸಣ್ಣ ಕಾರಿನಲ್ಲಿ ರಿಮೋಟ್ ಕಂಟ್ರೋಲ್ ಎಸಿ, ಲ್ಯಾಂಪ್ ಗಳು. ವಿಂಡೋಗಳು ಮತ್ತು ಹಾರ್ನ್‌ನೊಂದಿಗೆ ಬರುತ್ತದೆ. ಈ ಸಣ್ಣ ಕಾರು ಪುನರುತ್ಪಾದಕ ಬ್ರೇಕಿಂಗ್ ಮತ್ತು ಓವರ್-ದಿ-ಏರ್ ನವೀಕರಣಗಳನ್ನು ಬೆಂಬಲಿಸುತ್ತದೆ. ಇದು ವಿವಿಧ ಡ್ರೈವಿಂಗ್ ಮೋಡ್‌ಗಳು, ಅಡಿ-ಮುಕ್ತ ಚಾಲನೆ, ಬ್ಲೂಟೂತ್ ಸಂಪರ್ಕ, ಆನ್‌ಬೋರ್ಡ್ ನ್ಯಾವಿಗೇಷನ್, ಮ್ಯೂಸಿಕ್ ನಿಯಂತ್ರಣಕ್ಕೆ ಪ್ರವೇಶ ಮತ್ತು ಸಂಪರ್ಕಿತ ಸ್ಮಾರ್ಟ್‌ಫೋನ್‌ಗೆ ಟೆಲಿಫೋನಿ ನಿಯಂತ್ರಣವನ್ನು ನೀಡುತ್ತದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

PMV EaS-E ಎಲೆಕ್ಟ್ರಿಕ್ ಕಾರಿನಲ್ಲಿ 48B ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು 3 ರೇಂಜ್ ಆಯ್ಕೆಗಳನ್ನು ನೀಡುತ್ತದೆ. ಇದು 120km, 160km ಮತ್ತು 200km ಆಗಿದೆ. ಈ ಎಲೆಕ್ಟ್ರಿಕ್ ಕಾರಿನ ಟಾಪ್ ಸ್ಪೀಡ್ 70 ಕಿ.ಮೀ ಆಗಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಕಾರನ್ನು 4 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.ಯಾವುದೇ 15A ಔಟ್ಲೆಟ್ನಿಂದ ಇದನ್ನು ಚಾರ್ಜ್ ಮಾಡಬಹುದಾಗಿದೆ, ಆದರೆ ಗ್ರಾಹಕರು ಹೊಸ ಇವಿಯೊಂದಿಗೆ 3kW AC ಚಾರ್ಜರ್ ಅನ್ನು ಸಹ ಪಡೆಯಬಹುದು.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇನ್ನು ಈ ಎಲೆಕ್ಟ್ರಿಕ್ ಕಾರು 13 ಬಿಹೆಚ್‍ಪಿ ಪವರ್ ಮತ್ತು 50 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಸಣ್ಣ ಎಲೆಕ್ಟ್ರಿಕ್ ಕಾರು 5 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಪಿಎಂವಿ ಎಲೆಕ್ಟ್ರಿಕ್ ತನ್ನ ಉತ್ಪಾದನಾ ಘಟಕವನ್ನು ಪುಣೆಯಲ್ಲಿ ಸ್ಥಾಪಿಸಲು ಯೋಜಿಸುತ್ತಿದೆ. ಕಂಪನಿಯು 2023 ರ ಮಧ್ಯದ ವೇಳೆಗೆ ಸಣ್ಣ ಪಿಎಂವಿ EaS-E ಎಲೆಕ್ಟ್ರಿಕ್ ಕಾರಿನ ವಿತರಣೆಯನ್ನು ಪ್ರಾರಂಭಿಸಲು ಯೋಜಿಸಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಹೊಸ ಪಿಎಂವಿ ಎಲೆಕ್ಟ್ರಿಕ್ ಮೈಕ್ರೊಕಾರ್ 13-ಇಂಚಿನ ಚಕ್ರಗಳಲ್ಲಿ 145-80 R13 ಟೈರ್‌ಗಳನ್ನು ಹೊಂದಿದೆ. ಪಿಎಂವಿ ಇಎಎಸ್-ಇ ಸ್ಪೋರ್ಟ್ಸ್ ಡಿಸ್ಕ್ ಮುಂಭಾಗದಲ್ಲಿ ಮತ್ತು ಡ್ರಮ್ ಬ್ರೇಕ್ ಹಿಂಭಾಗದಲ್ಲಿ ಮತ್ತು ಎಲೆಕ್ಟ್ರಿಕ್ ಮೈಕ್ರೋಕಾರ್ ಪುನರುತ್ಪಾದಕ ಬ್ರೇಕಿಂಗ್‌ನಿಂದ ಪ್ರಯೋಜನ ಪಡೆಯುತ್ತದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇನ್ನು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದ್ದಾರೆ. ಇದರಿಂದ ಜನರು ಈಗ ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇತ್ತೀಚೆಗೆ ಹೆಚ್ಚಿನ ಗ್ರಾಹಕರು ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಈ ವೇಳೆ ಟಾಟಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಇದರ ನಡುವೆ ಮತ್ತೊಂದು ಸ್ವದೇಶಿ ಕಂಪನಿ ಪರ್ಸನಲ್ ಮೊಬಿಲಿಟಿ ವೆಹಿಕಲ್ (PMV) ಹೊಸ ಎಲೆಕ್ಟ್ರಿಯ ಕಾರನ್ನು ಬಿಡುಗಡೆಗೊಳಿಸಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಹೊಸ ಪಿಎಂವಿ EaS-E ಎಲೆಕ್ಟ್ರಿಕ್ ಕಾರು ಗ್ರಾಹಕರ ಬೇಡಿಕೆಯೆಂಂತೆ ಬಜೆಟ್ ಬೆಲೆಯೊಳಗೆ ಹೆಚ್ಚಿನ ಫೀಚರ್ಸ್ ಗಳೊಂದಿಗೆ ಬಿಡುಗಡೆಗೊಂಡಿದೆ. ಬಜೆಟ್ ಬೆಲೆಯೊಂದಿಗೆ ಈ ಎಲೆಕ್ಟ್ರಿಕ್ ಕಾರು ಹೆಚ್ಚಿನ ಗ್ರಾಹಕರು ಸೆಳೆಯುತ್ತಿದೆ. ವಿಶೆಷವಾಗಿ ಇದು ಸಿಟಿ ಜನರನ್ನು ಸೆಳೆಯಬಹುದು.

Most Read Articles

Kannada
English summary
New pmv eas e microcar launched specs battery charging details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X