Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಜಿಟಿ ಕಾರಿನ ಆಕರ್ಷಕ ಟೀಸರ್ ಬಿಡುಗಡೆ
ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ (Volkswagen) ಇಂಡಿಯಾ ತನ್ನ ಹೊಸ ಮಿಡ್ ಸೈಜ್ ಸೆಡಾನ್ ಅನ್ನು ದೇಶದಲ್ಲಿ ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಲಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಮಿಡ್ ಸೈಜ್ ಸೆಡಾನ್ 2022ರ ಮಾರ್ಚ್ 8 ರಂದು ಅನಾವರಣವಾಗಲಿದೆ.

ಮುಂದಿನ ತಿಂಗಳು ಅನಾವರಣವಗಲಿರುವ ಹೊಸ ಮಿಡ್ ಸೈಜ್ ಸೆಡಾನ್ ಮಾದರಿಯು ಕರೆಯಲಾಗುವುದು ಎಂದು ಖಚಿತಪಡಿಸಿದೆ, ಇದೀಗ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರಿನ ಟಾಪ್-ಎಂಡ್ ಜಿಟಿ ವೆರಿಯೆಂಟ್ ಹೊರಭಾಗವನ್ನು ಬಹಿರಂಗಪಡಿಸುವ ಟೀಸರ್ ಅನ್ನು ಬಿಡುಗಡೆಗೊಳಿಸಿದೆ, ಇತ್ತೀಚಿನ ಟೀಸರ್ ಫೋಕ್ಸ್‌ವ್ಯಾಗನ್ ವಿರ್ಟಸ್ ಸೆಡಾನ್‌ನ ಅನೇಕ ಬಾಹ್ಯ ವಿನ್ಯಾಸ ಅಂಶಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಮಾರಾಟವಾಗಲಿದೆ. ಈ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಮೇ ತಿಂಗಳ ವೇಳೆಗೆ ದೇಶದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇದು ಮೂಲತಃ ದಕ್ಷಿಣ ಅಮೆರಿಕಾದಲ್ಲಿ ಈಗಾಗಲೇ ಮಾರಾಟದಲ್ಲಿರುವ ಸೆಡಾನ್‌ನ ಫೇಸ್‌ಲಿಫ್ಟ್ ಆಗಿದೆ.ಇತ್ತೀಚಿನ ಟೀಸರ್ ವಿರ್ಟಸ್ ಸೆಡಾನ್‌ನ ಟಾಪ್-ಎಂಡ್ ಜಿಟಿ ರೂಪಾಂತರವನ್ನು ಬಹಿರಂಗಪಡಿಸುತ್ತದೆ ಮತ್ತು ಟೀಸರ್ ಮುಂಬರುವ ಫೋಕ್ಸ್‌ವ್ಯಾಗನ್ ವಿರ್ಟಸ್ ಸೆಡಾನ್‌ನ ಮುಂಭಾಗ, ಬದಿ ಮತ್ತು ಹಿಂಭಾಗವನ್ನು ಸಹ ಬಹಿರಂಗಪಡಿಸುತ್ತದೆ.

ಇತ್ತೀಚಿನ ಟೀಸರ್ ಪ್ರಕಾರ, ಮುಂಬರುವ ಫೋಕ್ಸ್‌ವ್ಯಾಗನ್ ವರ್ಟಸ್ ಸೆಡಾನ್‌ನ ಮುಂಭಾಗದ ಭಾಗವು ತುಂಬಾ ಕಡಿಮೆ ಮತ್ತು ಸೊಗಸಾದ ಮತ್ತು ಫೋಕ್ಸ್‌ವ್ಯಾಗನ್ ವೆಂಟೊದ ವಿಕಾಸಾತ್ಮಕ ವಿನ್ಯಾಸದಂತೆ ಕಾಣುತ್ತದೆ. ಇದಲ್ಲದೆ, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್-ಆಕಾರದ ಡಿಆರ್‌ಎಲ್‌ಗಳೊಂದಿಗೆ ಹೊಸ ಹೆಡ್‌ಲೈಟ್‌ಗಳು ಕಾರನ್ನು ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತದೆ.

ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಪುಣೆಯ ಚಕನ್‌ನಲ್ಲಿರುವ ಕಂಪನಿಯ ಘಟಕದಲ್ಲಿ ತಯಾರಿಸಲಾಗುವುದು. ಅಂತರರಾಷ್ಟ್ರೀಯವಾಗಿ, ಹಿಂದಿನ ಫೋಕ್ಸ್‌ವ್ಯಾಗನ್ ವಿರ್ಟಸ್ ಬ್ರೆಜಿಲ್‌ನಲ್ಲಿ ಮಾತ್ರ ಮಾರಾಟದಲ್ಲಿದೆ, ವೆಂಟೊ ಮಾದರಿ ಬದಲಿಗೆ ಮತ್ತು ಮೂಲಭೂತವಾಗಿ ಆರನೇ ತಲೆಮಾರಿನ ಪೊಲೊ ಹ್ಯಾಚ್‌ಬ್ಯಾಕ್‌ನ ಸೆಡಾನ್ ಆವೃತ್ತಿಯಾಗಿದೆ.

ಈ ಮಿಡ್ ಸೆಡಾನ್ ಅನ್ನು ಎಂಕ್ಯೂಬಿ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿ ಪಡಿಸಲಾಗುತ್ತದೆ. ಜೊತೆಗೆ ಅದರ ಆಧಾರವನ್ನು ಸ್ಕೋಡಾ ಸ್ಲಾವಿಯಾದೊಂದಿಗೆ ಹಂಚಿಕೊಳ್ಳುತ್ತದೆ.ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ಸೆಡಾನ್ ಅನ್ನು ಸ್ಥಳಿಯವಾಗಿ ಅಭಿವೃದ್ದಿ ಪಡಿಸಬಹುದು ಎಂದು ಹೇಳಲಾಗುತ್ತಿದೆ.

ಈ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಮಾದರಿಯು ಭಾರತದಲ್ಲಿ ಹಲವು ಬಾರಿ ಸ್ಫಾಟ್ ಟೆಸ್ಟ್ ಅನ್ನು ನಡೆಸುವಾಗ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಸ್ಕೋಡಾ-ಫೋಕ್ಸ್‌ವ್ಯಾಗನ್ ಇಂಡಿಯಾ 2.0 ಯೋಜನೆಯಡಿ ಎಂಕ್ಯೂಬಿ ಪ್ಲಾಟ್‌ಫಾರ್ಮ್ ಅನ್ನು ಎಂಕ್ಯೂಬಿ ಎಒ ಇನ್ ಎಂದು ಸ್ಥಳೀಕರಿಸಲಾಗುತ್ತದೆ. ಇದರ ಪರಿಣಾಮವಾಗಿ, ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಪ್ರತ್ಯೇಕವಾಗಿ ತಯಾರಿಸಲು ಮೂಲ ಮಾದರಿಯಾಗಿ ಬಳಸಲಾಬಹುದು.

ಈ ಹೊಸ ಕಾಂಪ್ಯಾಕ್ಟ್ ಸೆಡಾನ್ ಮಾದರಿಗೆ ಯಾವ ಟಿಎಸ್‌ಐ ಎಂಜಿನ್ ಅನ್ನು ಅಳವಡಿಸಬಹುದು ಎಂದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ವಿಡಬ್ಲ್ಯೂ 1.5-ಲೀಟರ್ ಮತ್ತು 1.0-ಲೀಟರ್ ಎಂಜಿನ್ ಆಯ್ಕೆಗಳನ್ನು ನೀಡುವ ಸಾಧ್ಯತೆಗಳಿದೆ. ದೇಶದಲ್ಲಿ ಮಾರಾಟವಾಗುವ ಹಲವಾರು ಮಾದರಿಗಳಲ್ಲಿ ಈ ಎರಡು ಎಂಜಿನ್ ಗಳನ್ನು ಹೊಂದಿರಬಹುದು.

ಇದರಲ್ಲಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 5500 ಆರ್‌ಪಿಎಂನಲ್ಲಿ 108 ಬಿಹೆಚ್‍ಪಿ ಪವರ್ ಮತ್ತು 1750 ಆರ್‌ಪಿಎಂನಲ್ಲಿ 175 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 5000 ಆರ್‌ಪಿಎಂನಲ್ಲಿ 148 ಬಿಹೆಚ್‍ಪಿ ಪವರ್ ಮತ್ತು 1500 ಆರ್‌ಪಿಎಂನಲ್ಲಿ 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಈ ಹೊಸ ವಿರ್ಟಸ್ ಕಾಂಪ್ಯಾಕ್ಟ್ ಸೆಡಾನ್ ಇಂಟಿರಿಯರ್ ನಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ನ್ಸೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು ಇತರ ಫೀಚರ್ಸ್ ಹೊಂದಿರುತ್ತದೆ.

ಅಂತರರಾಷ್ಟ್ರೀಯ-ಸ್ಪೆಕ್ ಫೋಕ್ಸ್‌ವ್ಯಾಗನ್ ವಿರ್ಟಸ್ ಮಾದರಿಯನ್ನು ದೊಡ್ಡ ಬದಲಾವಣೆಗಳಿಲ್ಲದೇ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರಿನ ಆಯಾಮಗಳು ಜಾಗತಿಕ-ಸ್ಪೆಕ್ ವರ್ಚಸ್‌ನಂತೆಯೇ ಇರುತ್ತದೆ.ಇದು 4,482 ಎಂಂ ಉದ್ದ, 1,751 ಎಂಂ ಅಗಲ ಮತ್ತು 1,472 ಎಂಂ ಎತ್ತರವನ್ನು ಹೊಂದಿದೆ. ಇನ್ನು ಈ ಸೆಡಾನ್ 2,651 ಎಂಎಂ ವ್ಹೀಲ್‌ಬೇಸ್ ಅನ್ನು ಒಳಗೊಂಡಿದೆ,

ಇನ್ನು ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಟಿ-ಕ್ರಾಸ್ ಎಸ್‍ಯುವಿ ಮಾದರಿಯನ್ನು ಭಾರತದಲ್ಲಿ ಉತ್ಪಾದಿಸಿ ವಿದೇಶಕ್ಕೆ ರಫ್ತನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ. ಮಹಾರಾಷ್ಟ್ರದ ಪುಣೆ ಬಳಿಯ ಚಕನ್‌ನಲ್ಲಿರುವ ಬ್ರ್ಯಾಂಡ್‌ನ ಉತ್ಪಾದನಾ ಘಟಕದಿಂದ ಇದನ್ನು ಉತ್ಪಾದಿಸಲಾಗಿದೆ. ಮೊದಲ ಬ್ಯಾಚ್ ಟಿ-ಕ್ರಾಸ್‌ನ 1,232 ಯುನಿಟ್‌ಗಳನ್ನು ಒಳಗೊಂಡಿದೆ ಮತ್ತು ಮುಂಬೈ ಬಂದರಿನಿಂದ ದಕ್ಷಿಣ ಅಮೆರಿಕಾದ ಮೆಕ್ಸಿಕೋ ದೇಶಕ್ಕೆ ರವಾನೆಯಾಗುತ್ತದೆ. ಭಾರತದಲ್ಲಿ ಮಾರಾಟವಾಗುವ ಟೈಗನ್ ಮಿಡ್ ಸೈಜ್ ಎಸ್‍ಯುವಿಯೊಂದಿಗೆ ಭಾರತ-ನಿರ್ಮಿತ ಟಿ-ಕ್ರಾಸ್ ಸಾಕಷ್ಟು ಸಾಮಾನ್ಯವಾಗಿದೆ.

ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮೇ ತಿಂಗಳಿನಲ್ಲಿ ಬಿದುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಮಿಡ್ ಸೈಜ್ ಸೆಡಾನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಮತ್ತು ಮಾರುತಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.