Just In
- 3 hrs ago
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- 4 hrs ago
ಹೊಸ ನವೀಕರಣಗಳೊಂದಿಗೆ ಸಿಎಫ್ಮೋಟೋ 150ಎನ್ಕೆ ಬೈಕ್ ಬಿಡುಗಡೆ
- 6 hrs ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 6 hrs ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
Don't Miss!
- News
ಶಿವಮೊಗ್ಗ: ಮಳೆಯಲ್ಲಿ ಸಿಲುಕಿದ್ದ 150 ಮಂದಿಗೆ ಆಪತ್ಭಾಂಧವರಾದ ಅಗ್ನಿಶಾಮಕ ದಳ
- Sports
MI ಆಡುವ 11ರ ಬಳಗದಲ್ಲಿ ಮಗನಿಗೆ ಅವಕಾಶ ಸಿಗದ ಕುರಿತು ಸಚಿನ್ ತೆಂಡೂಲ್ಕರ್ ಹೇಳಿದ್ದೇನು?
- Lifestyle
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಲಾವಿಯಾ, ಕುಶಾಕ್ ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಂಡ ಸ್ಕೋಡಾ
ಸ್ಕೋಡಾ ಇಂಡಿಯಾ(skoda India) ಕಂಪನಿಯು ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿದ್ದು, ಕಂಪನಿಯು ಕಾರು ಮಾರಾಟದಲ್ಲಿ ಹೊಚ್ಚ ಹೊಸ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಸ್ಲಾವಿಯಾ ಸೆಡಾನ್ ಮಾದರಿಯು ಮಹತ್ವದ ಪಾತ್ರ ವಹಿಸುತ್ತಿವೆ.

ಸ್ಕೋಡಾ ಇಂಡಿಯಾ ಕಂಪನಿಯು ಕಳೆದ ತಿಂಗಳು ಮಾರ್ಚ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಕಳೆದ ವರ್ಷದ ಮಾರ್ಚ್ ಅವಧಿಗಿಂತಲೂ 5 ಪಟ್ಟು ಬೆಳವಣಿಗೆ ಸಾಧಿಸಿದ್ದು, ಕಂಪನಿಯ ಹೊಸ ಕಾರು ಮಾರಾಟದಲ್ಲಿ ಕುಶಾಕ್ ಮತ್ತು ಸ್ಲಾವಿಯಾ ಮಾದರಿಗಳು ಅಗ್ರಸ್ಥಾನದಲ್ಲಿವೆ. ಕಳೆದ ತಿಂಗಳು ಸ್ಕೋಡಾ ಕಂಪನಿಯು 5608 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಮಾರ್ಚ್ ಅವಧಿಯಲ್ಲಿ ಕೇವಲ 1,159 ಯುನಿಟ್ ಕಾರುಗಳು ಮಾರಾಟವಾಗಿದ್ದವು.

ಈ ಮೂಲಕ ಕಂಪನಿಯು ಕಳೆದ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 13,120 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಇದುವರೆಗಿನ ಗರಿಷ್ಠ ತ್ರೈಮಾಸಿಕ ಮಾರಾಟವಾಗಿದೆ. ಕಂಪನಿಯು ಮಾರ್ಚ್ 2021ರಲ್ಲಿ 1,159 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಇದಕ್ಕೆ ಹೋಲಿಸಿದರೆ ಕಳೆದ ತಿಂಗಳ ತ್ರೈಮಾಸಿಕ ಅವಧಿಯಲ್ಲಿನ ಮಾರಾಟವು ಐದು ಪಟ್ಟು ಹೆಚ್ಚಳವಾಗಿದೆ.

ಸ್ಕೋಡಾ ಕಂಪನಿಯ ಕಾರು ಮಾರಾಟದಲ್ಲಿ ಸ್ಲಾವಿಯಾ, ಕುಶಾಕ್ ಮಾತ್ರವಲ್ಲದೆ ಕೊಡಿಯಾಕ್, ಆಕ್ಟೇವಿಯಾ ಮತ್ತು ಸೂಪರ್ಬ್‌ನಂತಹ ಪ್ರಮುಖ ಕಾರು ಮಾದರಿಗಳು ಸಹ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಸ್ಲಾವಿಯಾ ಮತ್ತು ಕುಶಾಕ್ ಮಾದರಿಗಳು ಬಜೆಟ್ ಬೆಲೆಯಲ್ಲಿರುವ ಪ್ರೀಮಿಯಂ ಕಾರು ಮಾದರಿಯಾಗಿ ಹೊರಹೊಮ್ಮಿವೆ.

ಸ್ಲಾವಿಯಾ, ಕುಶಾಕ್ ಮಾದರಿಗಳು ಸ್ಕೋಡಾ ಮತ್ತು ಫೋರ್ಕ್ಸ್‌ವ್ಯಾಗನ್ ಕಂಪನಿಗಳ ಸಹಭಾಗಿತ್ವ ಯೋಜನೆಯ ಭಾಗವಾಗಿ ಬಿಡುಗಡೆಗೊಂಡಿದ್ದು, ಎರಡು ಮಾದರಿಗಳು ಒಂದೇ ಎಂಜಿನ್ ಆಯ್ಕೆ ಪಡೆದುಕೊಂಡಿದ್ದರೂ ವಿವಿಧ ಸೆಗ್ಮೆಂಟ್ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿವೆ.

ಸ್ಲಾವಿಯಾ ಸೆಡಾನ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೇಸ್‌ನೊಂದಿಗೆ 560 ಲೀಟರ್ ನಷ್ಟು ಬೂಟ್‌ಸ್ಪೆಸ್ ಹೊಂದಿದೆ.

ಸ್ಕೋಡಾ ಕಂಪನಿಯು ಸ್ಲಾವಿಯಾ ಸೆಡಾನ್ ಮಾದರಿಯನ್ನು 1.0-ಲೀಟರ್ ಟಿಎಸ್ಐ ಮತ್ತು 1.5 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ವಿವಿಧ ಎಂಜಿನ್ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.

ಸ್ಲಾವಿಯಾ ಕಾರು ಮಾದರಿಯು ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರುಗಳಲ್ಲಿ 1.0 ಲೀಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.39 ಲಕ್ಷ ಬೆಲೆ ಹೊಂದಿದ್ದರೆ 1.5 ಲೀಟರ್ ಮಾದರಿಯು ಆರಂಭಿಕವಾಗಿ ರೂ. 16.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.79 ಲಕ್ಷ ಬೆಲೆ ಹೊಂದಿದೆ.

1.0 ಲೀಟರ್ ಮಾದರಿಯು ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದರೆ 1.5 ಲೀಟರ್ ಮಾದರಿಯು ಕೇವಲ ಸ್ಟೈಲ್ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, 1.5 ಲೀಟರ್ ಮಾದರಿಯು 1.0 ಲೀಟರ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಹೊಸ ಕಾರಿನಲ್ಲಿ 1.0 ಲೀಟರ್ ಮಾದರಿಯು ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

1.5 ಲೀಟರ್ ಮಾದರಿಯು ನಾಲ್ಕು ಸಿಲಿಂಡರ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಾಗೆಯೇ ಪ್ರತಿಸ್ಪರ್ಧಿಗಳಿಂತಲೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಹೊಂದಲಿರುವ ಕುಶಾಕ್ ಕಾರು ಮಾದರಿಯು ಆರಂಭಿಕವಾಗಿ ರೂ. 10.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.19 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದೆ.

ಹೊಸ ಕುಶಾಕ್ ಕಾರಿನಲ್ಲಿ ಸ್ಕೋಡಾ ಕಂಪನಿಯು 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಕುಶಾಕ್ ಕಾರಿನ ಒಳಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ವಿಶಾಲವಾದ ಕ್ಯಾಬಿನ್‌ನೊಂದಿಗೆ ವರ್ಚುವಲ್ ಕಾಕ್‌ಪಿಟ್ ಹೊಂದಿದೆ. ಇದರಲ್ಲಿ ಟು ಸ್ಪೋಕ್ ಸ್ಟೀರಿಂಗ್ ವೀಲ್ಹ್, ವೆಂಟಿಲೆಟೆಡ್ ಲೆದರ್ ಆಸನಗಳು, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 10.1 ಇಂಚಿನ ಇನ್ಟೋಟೈನ್‌ಮೆಂಟ್ ಸ್ಕ್ರೀನ್ ಸೌಲಭ್ಯವಿದೆ.

ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳ ಹೊಸ ಯೋಜನೆಯಡಿ ಈಗಾಗಲೇ ಮೂರು ಕಾರು ಮಾದರಿಗಳು ಬಿಡುಗಡೆಗೊಂಡಿದ್ದು, ಸ್ಕೋಡಾ ಕಂಪನಿಯು ಕುಶಾಕ್ ಮತ್ತು ಸ್ಲಾವಿಯಾ ಮಾದರಿಯನ್ನು ಬಿಡುಗಡೆ ಮಾಡಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಸಹ ಹೊಸ ಯೋಜನೆಯ ಭಾಗವಾಗಿ ಟೈಗುನ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಸ್ಲಾವಿಯಾ ಮಾದರಿಯನ್ನು ಆಧರಿಸಿರುವ ವರ್ಟಸ್ ಮಾದರಿಯನ್ನು ಕೂಡಲೇ ಬಿಡುಗಡೆ ಮಾಡಲಿದೆ.

ಕುಶಾಕ್, ಟೈಗುನ್ ಮತ್ತು ಸ್ಲಾವಿಯಾ, ವಿರ್ಟಸ್ ಮಾದರಿಗಳು ಬ್ರಾಂಡ್ ವಿನ್ಯಾಸ ಹೊರತುಪಡಿಸಿ ಒಂದೇ ಮಾದರಿಯ ಎಂಜಿನ್ ಆಯ್ಕೆ ಹೊಂದಿದ್ದು, ಹೊಸ ಮಾದರಿಗಳೊಂದಿಗೆ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.