ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಹಿತಿ ಬಹಿರಂಗ

ನೆಕ್ಸಾನ್ ಇವಿ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಕಂಪನಿಯು 2022ರ ನೆಕ್ಸಾನ್ ಇವಿ ಆವೃತ್ತಿಯನ್ನು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚಿನ ಮೈಲೇಜ್‌ನೊಂದಿಗೆ ಹೆಚ್ಚುವರಿ ಫೀಚರ್ಸ್ ಪಡೆದುಕೊಳ್ಳಲಿದೆ.

ಸದ್ಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಎಕ್ಸ್‌ಎಂ, ಎಕ್ಸ್‌ಜೆಡ್ ಪ್ಲಸ್, ಎಕ್ಸ್‌ಜೆಡ್ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್‌ಗಳಿವೆ.

ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಹಿತಿ ಬಹಿರಂಗ

ಪ್ರಸ್ತುತ ಮಾರಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಕಾರಿನಲ್ಲಿ 95kW ಎಲೆಕ್ಟ್ರಿಕ್ ಮೋಟಾರ್ ಮತ್ತು 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, 2022ರ ಆವೃತ್ತಿಯಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯನ್ನು ಆಧರಿಸಿ 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಿದೆ ಎನ್ನಲಾಗಿದೆ.

ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಹಿತಿ ಬಹಿರಂಗ

ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸದಂತೆ ಸದ್ಯ 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ನೆಕ್ಸಾನ್ ಇವಿ ಕಾರು ಇಕೋ ಡ್ರೈವ್ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದರೆ 2022ರ ಆವೃತ್ತಿಯಲ್ಲಿನ ಮೈಲೇಜ್ ರೇಂಜ್ ಪ್ರಮಾಣವು ಪ್ರತಿ ಚಾರ್ಜ್ 400 ಕಿ.ಮೀ ಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ನೆಕ್ಸಾನ್ ಇವಿ ಮಾದರಿಯಲ್ಲಿ ಹೆಚ್ಚಿನ ಮೈಲೇಜ್ ರೇಂಜ್ ಹೊಂದಿರುವ ಮಾದರಿಗಾಗಿ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಅಭಿವೃದ್ದಿಗೊಳಿಸಿದೆ.

ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಹಿತಿ ಬಹಿರಂಗ

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ನೆಕ್ಸಾನ್ ಇವಿ ಮಾದರಿಯು 127 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಸುಧಾರಿತ ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲಾಗುತ್ತಿರುವ ಹೊಸ ಮಾದರಿಯು ಪ್ರಸ್ತುತ ಮಾದರಿಯಲ್ಲಿ ಬಳಕೆ ಮಾಡಲಾಗುತ್ತಿರುವ 95kW ಎಲೆಕ್ಟ್ರಿಕ್ ಮೋಟಾರ್ ಮೂಲಕವೇ 134 ಬಿಎಚ್‌ಪಿ ಉತ್ಪಾದನಾ ವೈಶಿಷ್ಟ್ಯತೆ ಹೊಂದಿರಲಿದೆ.

ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಹಿತಿ ಬಹಿರಂಗ

ಇದರೊಂದಿಗೆ ಹೊಸ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪ್ರಮುಖ ಸೇಫ್ಟಿ ಫೀಚರ್ಸ್‌ಗಳನ್ನು ಉನ್ನತೀಕರಿಸುತ್ತಿದ್ದು, ಹೊಸ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ವೆಂಟಿಲೆಟೆಡ್ ಸೀಟುಗಳು ಸೇರಿದಂತೆ ಕೆಲವು ಹೊಸ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಿದೆ.

ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಹಿತಿ ಬಹಿರಂಗ

ಹಾಗೆಯೇ ಹೊಸ ನೆಕ್ಸಾನ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹ್ಯುಂಡೈ ಕೊನಾ ಕಾರುಗಳಿಗೆ ಪೈಪೋಟಿಯಾಗಿ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿರುವುದೇ ಟಾಟಾ ಹೊಸ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಹಿತಿ ಬಹಿರಂಗ

ಜಿಪ್‌ಟ್ರಾನ್ ತಂತ್ರಜ್ಞಾನವು ಟಾಟಾ ಕಂಪನಿಯನ್ನು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದ್ದು, ಎಲೆಕ್ಟ್ರಿಕ್ ಕಾರುಗಳ ಕಾರ್ಯಕ್ಷಮತೆ, ಬ್ಯಾಟರಿ ದಕ್ಷತೆ ಮತ್ತು ಗ್ರಾಹಕರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಯಲ್ಲಿ ಸಹಕಾರಿಯಾಗುತ್ತಿದೆ.

ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಹಿತಿ ಬಹಿರಂಗ

ನೆಕ್ಸಾನ್ ಇವಿ ಮಾದರಿಯಲ್ಲಿ ಬಳಕೆ ಮಾಡಲಾಗುತ್ತಿರುವ ಹೈ-ವೊಲ್ಟೆಜ್ ಆರ್ಕಿಟೆಕ್ಚರ್ ಪ್ರೇರಿತ ಜಿಪ್‌ಟ್ರಾನ್ ತಂತ್ರಜ್ಞಾನವು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳಿಂದ ಕೂಡಿದೆ.

ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಹಿತಿ ಬಹಿರಂಗ

ಜೊತೆಗೆ ಜಿಪ್‌ಟ್ರಾನ್ ತಂತ್ರಜ್ಞಾನವು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅಳವಡಿಕೆ ಹಿನ್ನಲೆಯಲ್ಲಿ ಕಾರು ಚಾಲನೆ ವೇಳೆ ನೀರ್ದಿಷ್ಟ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜಿಂಗ್ ಪ್ರಕ್ರಿಯೆಯು ಮರಳಿ ಪಡೆಯಬಹುದಾಗಿದ್ದು, ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನವು ಬ್ಯಾಟರಿ ದೀರ್ಘಕಾಲದ ಬಾಳಿಕೆಗೆ ಸಹಕರಿಸಲಿದೆ.

ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಹಿತಿ ಬಹಿರಂಗ

ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.54 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.15 ಲಕ್ಷ ಬೆಲೆ ಪಡೆದುಕೊಂಡಿದ್ದು, ನವೀಕೃತ ಮಾದರಿಯು ಪ್ರಸ್ತುತ ಮಾದರಿಯ ಬೆಲೆಗಿಂತಲೂ ರೂ 1.50 ಲಕ್ಷದಿಂದ ರೂ. 2 ಲಕ್ಷದ ತನಕ ಹೆಚ್ಚುವರಿ ಬೆಲೆ ಹೊಂದಬಹುದಾಗಿದೆ.

ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಹಿತಿ ಬಹಿರಂಗ

ಉನ್ನತೀಕರಿಸಿದ ಬ್ಯಾಟರಿ ಪ್ಯಾಕ್ ಮೂಲಕ ಮೈಲೇಜ್ ಪ್ರಮಾಣವನ್ನು ಹೆಚ್ಚಿಸಲಾಗುತ್ತಿರುವದರಿಂದ ಕಾರಿನ ದರದಲ್ಲೂ ಹೆಚ್ಚಳವಾಗುತ್ತಿದ್ದು, ಬೆಲೆ ಏರಿಕೆಯನ್ನು ಆಧರಿಸಿ ಬ್ಯಾಟರಿ ಪ್ಯಾಕ್ ಕಾರ್ಯಕ್ಷಮತೆಯಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ.

Most Read Articles

Kannada
English summary
Tata nexon ev long range model to be launched 11 th may
Story first published: Saturday, April 30, 2022, 0:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X