ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಟಾಟಾ ನೆಕ್ಸಾನ್ ತನ್ನ ಎಲ್ಲಾ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಮಾರಾಟದಲ್ಲಿ ಮುನ್ನುಗ್ಗುತ್ತಿದೆ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಈ ಕಾರು ಸಂಪೂರ್ಣ 5-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಪ್ರಮಾಣಿತ ಕಾರೆಂಬ ಪಟ್ಟವನ್ನು ಗಿಟ್ಟಿಸಿಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಮಾರಾಟವು ಇತ್ತೀಚೆಗೆ ಗಮನಾರ್ಹವಾಗಿ ಹೆಚ್ಚುತ್ತಿದೆ. ಅದರಲ್ಲೂ ಕಳೆದ ಆಗಸ್ಟ್ ನಲ್ಲಿ ಟಾಟಾ ನೆಕ್ಸಾನ್ ಕಾರು ಮಾರಾಟದಲ್ಲಿ ದಾಖಲೆ ಸೃಷ್ಟಿಸಿದೆ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಟಾಟಾ ಮೋಟಾರ್ಸ್ ಈ ವರ್ಷದ ಆಗಸ್ಟ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 15,085 ನೆಕ್ಸಾನ್ ಕಾರುಗಳನ್ನು ಮಾರಾಟ ಮಾಡಿದೆ. ಇದು ಟಾಟಾ ನೆಕ್ಸಾನ್ ಕಾರಿನ ಅತಿ ಹೆಚ್ಚು ಮಾಸಿಕ ಮಾರಾಟದ ಅಂಕಿ ಅಂಶವಾಗಿದೆ. ಟಾಟಾ ಮೋಟಾರ್ಸ್ ಒಂದೇ ತಿಂಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ನೆಕ್ಸಾನ್ ಕಾರುಗಳನ್ನು ಹಿಂದೆದೂ ಮಾರಾಟ ಮಾಡಿರಲಿಲ್ಲ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಟಾಟಾ ನೆಕ್ಸಾನ್‌ನ IC ಎಂಜಿನ್ ರೂಪಾಂತರಗಳಲ್ಲಿ, 1.2-ಲೀಟರ್ ರೆವೊಟ್ರಾನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 1.5-ಲೀಟರ್ ರೆವೊಟಾರ್ಕ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗುತ್ತದೆ. ಇದರಲ್ಲಿ ಪೆಟ್ರೋಲ್ ಎಂಜಿನ್ ಗರಿಷ್ಠ 120 ಪಿಎಸ್ ಪವರ್ ಮತ್ತು 170 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಡೀಸೆಲ್ ಎಂಜಿನ್ ಗರಿಷ್ಠ 110 ಪಿಎಸ್ ಪವರ್ ಮತ್ತು 260 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ. ಟಾಟಾ ಮೋಟಾರ್ಸ್ ನೆಕ್ಸಾನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡುತ್ತಿದೆ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಟಾಟಾ ನೆಕ್ಸಾನ್ ಭಾರತೀಯ ಮಾರುಕಟ್ಟೆಯಲ್ಲಿ ಹುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ XUV300, ಹೋಂಡಾ WR-V ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳೊಂದಿಗೆ ಸ್ಪರ್ಧಿಸುತ್ತಿದೆ. ಅಲ್ಲದೆ, ಟಾಟಾ ನೆಕ್ಸಾನ್ ಕಿಯಾ ಸೋನೆಟ್ ಮತ್ತು ರೆನಾಲ್ಟ್ ಕಿಗರ್‌ಗಳಿಗೂ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಟಾಟಾ ಮೋಟಾರ್ಸ್ ನೆಕ್ಸಾನ್‌ನ ಐಸಿ ಎಂಜಿನ್ ಆವೃತ್ತಿಯನ್ನು ಮಾತ್ರವಲ್ಲದೆ ಎಲೆಕ್ಟ್ರಿಕ್ ಆವೃತ್ತಿಯನ್ನೂ ಮಾರಾಟ ಮಾಡುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಟಾಟಾ ನೆಕ್ಸಾನ್ ಇವಿ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರಾಗಿದ್ದು, ಕೆಲವು ತಿಂಗಳ ಹಿಂದೆ ಟಾಟಾ ಮೋಟಾರ್ಸ್ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಈ ಹೊಸ ಮಾದರಿಯನ್ನು ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಟಾಟಾ ಮೋಟಾರ್ಸ್ ಈಗಾಗಲೇ ಮಾರಾಟದಲ್ಲಿರುವ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ವಿವಿಧ ನವೀಕರಣಗಳನ್ನು ಮಾಡುವ ಮೂಲಕ ಹೊಸ ಸುಧಾರಿತ ಮಾದರಿಯಾಗಿ ಮಾರಾಟಕ್ಕೆ ತಂದಿದೆ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಟಾಟಾ ಮೋಟಾರ್ಸ್ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಅತಿದೊಡ್ಡ ಮಾರಾಟಗಾರ ಕಂಪನಿಯಾಗಿ ಹೊರಹೊಮ್ಮಿದೆ. ಇದಕ್ಕೆ ಪ್ರಮುಖ ಕಾರಣ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರೆಂದೇ ಹೇಳಬಹುದು. ಇದರ ಜೊತೆಗೆ ಟಾಟಾ ಟಿಗೊರ್ ಇವಿ ಕೂಡ ಇದಕ್ಕೆ ಮತ್ತೊಂದು ಕಾರಣವಾಗಿದೆ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಈ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಸಲುವಾಗಿ, ಮುಂಬರುವ ವರ್ಷಗಳಲ್ಲಿ ಟಾಟಾ ಮೋಟಾರ್ಸ್ ಅನೇಕ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟಕ್ಕೆ ಪರಿಚಯಿಸಲಿದೆ. ಮುಂಬರುವ ಹಬ್ಬದ ಸೀಸನ್‌ಗಾಗಿ, ಟಾಟಾ ಮೋಟಾರ್ಸ್ ಇತ್ತೀಚೆಗೆ ಜೆಟ್ ಎಡಿಷನ್ ಕಾರುಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಿದೆ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಸದ್ಯ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ದೇಶದಲ್ಲೇ ಅಗ್ರಸ್ಥಾನವನ್ನು ಅಲಂಕರಿಸಿದ್ದು, ಪ್ರತಿಸ್ಪರ್ಧಿಗಳು ಮಾರಾಟದಲ್ಲಿ ಹತ್ತಿರವು ಸುಳಿದಿಲ್ಲ. ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಮಾದರಿಗಳ ಅನಾವರಣಕ್ಕೆ ಟಾಟಾ ಮೋಟಾರ್ಸ್ ಸಜ್ಜಾಗುತ್ತಿದೆ. ಪ್ರಸ್ತುತ ಟಾಟಾ ನೆಕ್ಸಾನ್ ಇವಿ ಹಾಗೂ ಟಿಗೋರ್ ಇವಿಗಳಲ್ಲಿನ ವೈಶಿಷ್ಟ್ಯಗಳು, ಮೈಲೇಜ್ ಆಧರಿಸಿ ಹೊಸ ಮಾದರಿಗಳು ಮತ್ತಷ್ಟು ಪ್ರೀಮಿಯಂ ಆಗಿರಲಿವೆ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಮಾರುಕಟ್ಟಯಲ್ಲಿ ಪ್ರತಿಸ್ಪರ್ಧಿ ಕಾರುಗಳಲ್ಲಿ ನೀಡಲಾಗುತ್ತಿರುವ ಹೊಸ ಫೀಚರ್ಸ್ ಹಾಗೂ ಹೆಚ್ಚಿನ ಮೈಲೇಜ್ ಇದಕ್ಕೆ ಕಾರಣವಾಗಿದೆ. ಹಾಗಾಗಿ ಟಾಟಾ ಕೂಡ ತನ್ನ ಮಾದರಿಗಳಲ್ಲಿನ ವಿನ್ಯಾಸ ವೈಶಿಷ್ಟ್ಯಗಳನ್ನು ಮತ್ತಷ್ಟು ಸುಧಾರಿಸಿ ಮಾರುಕಟ್ಟೆಗೆ ತರಲಿದೆ ಎಂದು ಹೇಳಲಾಗುತ್ತಿದೆ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಇನ್ನು ಮಹೀಂದ್ರಾ ಕೂಡ ತನ್ನ ಹೊಸ ಸುಧಾರಿತ ಮಾದರಿಯಾದ ಎಕ್ಸ್‌ಯುವಿ 400 ಇವಿ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಇದು ಕೂಡ ಬಿಡುಗಡೆ ಬಳಿಕ ನೆಕ್ಸಾನ್ ಇವಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಈ ಎರಡೂ ಮಾದರಿಗಳ ಭಿನ್ನತೆ ಪರೀಕ್ಷಬೇಂದರೇ ಹೊಸ ಎಕ್ಸ್‌ಯುವಿ 400 ಇವಿ ಬಿಡುಗಡೆವರೆಗು ಕಾಯಬೇಕಿದೆ.

ಟಾಟಾ ನೆಕ್ಸಾನ್ ದಾಖಲೆಯ ಮಾರಾಟ: 5 ಸ್ಟಾರ್ ರೇಟಿಂಗ್‌ನೊಂದಿಗೆ ಗ್ರಾಹಕರಲ್ಲಿ ಭಾರೀ ಬೇಡಿಕೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟಾರ್ಸ್ ನ ನೆಕ್ಸಾನ್, ನೆಕ್ಸಾನ್ ಎಲೆಕ್ಟ್ರಿಕ್ ಕಾರ್, ಸಫಾರಿ ಮತ್ತು ಹ್ಯಾರಿಯರ್ ಮಾದರಿಗಳು ಜೆಟ್ ಎಡಿಷನ್ ಮಾದರಿಗಳೊಂದಿಗೆ ಬಿಡುಗಡೆಯಾಗಿದೆ. ಇದರೊಂದಿಗೆ, ಟಾಟಾ ಮೋಟಾರ್ಸ್ ಹಬ್ಬದ ಋತುವಿನಲ್ಲಿ ಈ ಕಾರುಗಳ ಮಾರಾಟದಲ್ಲಿ ಗಮನಾರ್ಹ ಹೆಚ್ಚಳವನ್ನು ನಿರೀಕ್ಷಿಸುತ್ತಿದೆ.

Most Read Articles

Kannada
English summary
Tata Nexon Record Sales Huge demand among customers with 5 star rating
Story first published: Tuesday, September 6, 2022, 11:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X