ಬಹುನಿರೀಕ್ಷಿತ ಟೊಯೋಟಾ ಇನ್ನೋವಾ ಹೈಬ್ರಿಡ್ MPV ಟೀಸರ್ ವಿಡಿಯೋ ಬಿಡುಗಡೆ: ಡಿಸೈನ್ ಬಹಿರಂಗ

ಟೊಯೋಟಾ ಕುಟುಂಬದಲ್ಲಿ ಕಳೆದ ಹಲವು ವರ್ಷಗಳಿಂದ ಉತ್ತಮ ಬೇಡಿಕೆಯೊಂದಿಗೆ ಮಾರುಕಟ್ಟೆಯಲ್ಲಿ ಸ್ಥಿರವಾಗಿರುವ ಒಂದೇ ಒಂದು ಕಾರೆಂದರೆ ಅದು ಇನ್ನೋವಾ ಅಂತಲೇ ಹೇಳಬಹುದು.

ಟೊಯೊಟಾ ಕಂಪನಿಯು ಬೇಡಿಕೆಗೆ ಅನುಗುಣವಾಗಿ ತನ್ನ ಹಳೆಯ ಇನ್ನೋವಾವನ್ನು ಪ್ರೀಮಿಯಂ ಉತ್ಪನ್ನವಾಗಿ ಬದಲಿಸಿ ಬಿಡುಗಡೆ ಮಾಡಿತ್ತು. ಇದನ್ನೇ ನಾವೀಗ ಇನ್ನೋವಾ ಕ್ರಿಸ್ಟಾ ಎನ್ನುತ್ತಿದ್ದೇವೆ, ಇದರ ಪ್ರೀಮಿಯಂ ಅಂಶವು ಹೊಸ ಎತ್ತರವನ್ನು ಮುಟ್ಟಿತ್ತು.

ಟೊಯೋಟಾ ಇನ್ನೋವಾ ಕ್ರಿಸ್ಟಾ ಎಂದು ಬಿಡುಗಡೆಯಾದಾಗ ಡಿಸೈನ್‌ನಲ್ಲಿ ಹೆಚ್ಚಾಗಿ ಬದಲಾವಣೆಗಳನ್ನು ಪಡೆದಿರಲಿಲ್ಲ. 2015 ರಿಂದ, ಇನ್ನೋವಾ ಕ್ರಿಸ್ಟಾ ಬೆಲೆಯು ಹಲವು ಪಟ್ಟು ಏರಿದೆ. ಆದರೂ ಭಾರತೀಯ ಗ್ರಾಹಕರಲ್ಲಿ ಡೀಸೆಲ್ ರೂಪಾಂತರಗಳು ಹಾಟ್ ಫೇವರಿಟ್ ಆಗಿವೆ. ಇಲ್ಲಿ ದುಃಖಕರ ವಿಷಯವೆಂದರೆ, ಟೊಯೊಟಾ ಕೆಲವು ಕಾರಣಾಂತರಗಳಿಂದ ಇನ್ನೋವಾ ಕ್ರಿಸ್ಟಾದ ಡೀಸೆಲ್ ರೂಪಾಂತರಗಳನ್ನು ಸ್ಥಗಿತಗೊಳಿಸಲಾಗಿದೆ.

ಇದು ಹೀಗಿದ್ದರೇ ಮಾರುಕಟ್ಟೆಯಲ್ಲಿ ಎಂಪಿವಿ ವಿಭಾಗದಲ್ಲಿನ ಪೈಪೋಟಿ ಹಾಗೂ ಇನ್ನೋವಾದಲ್ಲಿನ ಆಧುನಿಕ ಬದಲಾವಣೆ, ಮೈಲೇಜ್ ವಿಷಯವಾಗಿ ಗ್ರಾಹಕರಿಂದ ಹೆಚ್ಚಾದ ಬೇಡಿಕೆಯು ಕಂಪನಿಂದ ಹೈಬ್ರಿಡ್ ವರ್ಷನ್ ತರಲು ಕಾರಣವಾಗಿದೆ. ಇತ್ತೀಚೆಗೆ ಹೊಸ ಇನ್ನೋವಾ ಹೈಬ್ರಿಡ್ MPV ಟೀಸರ್ ಚಿತ್ರವನ್ನು ಹಂಚಿಕೊಂಡಿದ್ದ ಕಂಪನಿ ಇದೀಗ ವಿಡಿಯೋ ಟೀಸರ್ ಹಂಚಿಕೊಂಡಿದೆ.

ಹೊಸ ಟೊಯೋಟಾ ಇನ್ನೋವಾ ಹೈಬ್ರಿಡ್ ವಿಡಿಯೋ ಟೀಸರ್
ಹೊಸ ಇನ್ನೋವಾ ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ಮತ್ತು ಭಾರತದಲ್ಲಿಯೂ ಅನೇಕ ಬಾರಿ ಪರೀಕ್ಷಿಸಲ್ಪಟ್ಟಿದೆ. ಇದು ನವೆಂಬರ್ 25 ರಂದು ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ. ಇದೇ ಸಮಯದಲ್ಲಿ ಟೊಯೊಟಾ ಇಂಡಿಯಾ ಮುಂಬರುವ ಇನ್ನೋವಾ ಹೈಬ್ರಿಡ್‌ನ ಮೊದಲ ಅಧಿಕೃತ ವಿಡಿಯೋ ಟೀಸರ್ ಅನ್ನು ಹಂಚಿಕೊಂಡಿದೆ.

ಟೀಸರ್ ನಲ್ಲಿ 'ಹೈ' ಎಂಬ ಪದಕ್ಕೆ ವಿಶೇಷ ಗಮನ ನೀಡಲಾಗಿದೆ. ಟೊಯೋಟಾ ಹೆಸರಿಸುವ ಯೋಜನೆಗಳಿಗೆ ನಾವು ಈಗಾಗಲೇ ಪರಿಚಿತರು, ಹೈ ಎಂದರೆ ಅದು ಕನಿಷ್ಠ ಒಂದು ಹೈಬ್ರಿಡ್ ರೂಪಾಂತರವನ್ನು ಕೊಡುಗೆಯಲ್ಲಿ ಹೊಂದಿರುತ್ತದೆ ಎಂದರ್ಥ. ಇದೇ ತಂತ್ರವನ್ನು ಅರ್ಬನ್ ಕ್ರೂಸರ್ ಹೈರೈಡರ್‌ನಲ್ಲಿಯೂ ಬಳಸಲಾಗಿತ್ತು, ಇದು ಹೈಬ್ರಿಡ್ ಪವರ್‌ಟ್ರೇನ್ ಎಂಬುದನ್ನು ಸೂಚಿಸಲು ಹೈ ಅಕ್ಷರವನ್ನು ಹೊಂದಿರುತ್ತದೆ.

ಮುಂಬರುವ ಇನ್ನೋವಾ ಹೈಬ್ರಿಡ್ ಫ್ರಂಟ್-ವೀಲ್ ಡ್ರೈವ್ ಆರ್ಕಿಟೆಕ್ಚರ್ ಹೊಂದಿರುವ ಮೊನೊಕಾಕ್ ವಾಹನವಾಗಿದ್ದು ಅದು ಆರ್ಥಿಕ ಮತ್ತು ವೆಚ್ಚ-ಪರಿಣಾಮಕಾರಿಯಾಗಿದೆ. ಇದು ಹೈಬ್ರಿಡ್ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಸಂಯೋಜಿತವಾಗಿರುವ 2.0 ಲೀಟರ್ ಪೆಟ್ರೋಲ್ ಮೋಟಾರ್‌ನಿಂದ ಚಾಲಿತವಾಗಲಿದೆ ಎಂದು ತಿಳಿದುಬಂದಿದೆ.

ಮೇಲಿನ ಟೀಸರ್‌ನಲ್ಲಿ ಹೇಳಿದಂತೆ, ಮುಂಬರುವ ಟೊಯೋಟಾ ಇನ್ನೋವಾ ಹೈಬ್ರಿಡ್ SUV ಸ್ಟೈಲಿಂಗ್ ಅನ್ನು ಪಡೆಯುತ್ತದೆ. ಭಾರತದಲ್ಲಿ ಕಂಡುಬಂದಿರುವ ಇನ್ನೋವಾ ಹೈಬ್ರಿಡ್ ಪರೀಕ್ಷಾ ಹಂತದ ವಾಹಗಳು, ಏಷ್ಯಾದ ಮಾರುಕಟ್ಟೆಗಳಲ್ಲಿ ಈಗಾಗಲೇ ಮಾರಾಟದಲ್ಲಿರುವ ಟೊಯೋಟಾ ಅವಾಂಝಾವನ್ನು ಹೋಲುತ್ತವೆ. ವಿಶೇಷವಾಗಿ ಅದರ ಸಿ-ಪಿಲ್ಲರ್ ವಿನ್ಯಾಸ, ಟೈಲ್-ಲೈಟ್ ವಿನ್ಯಾಸ ಮತ್ತು ಅದರ ಒಟ್ಟಾರೆ ಹಿಂದಿನ ಪ್ರೊಫೈಲ್ ಹಾಗೆ ಇರಲಿದೆ.

2023 ಟೊಯೋಟಾ ಇನ್ನೋವಾ ಹೈಬ್ರಿಡ್ ಬುಕಿಂಗ್
ಇನ್ನೋವಾ ಹೈಕ್ರಾಸ್, ಇನ್ನೋವಾ ಕ್ರಿಸ್ಟಾದಂತೆಯೇ ದೊಡ್ಡದಾಗಿದೆ. ಇದು 2.0L ಪೆಟ್ರೋಲ್ ಎಂಜಿನ್ ಆಧಾರಿತ ಹೈಬ್ರಿಡ್ ಪವರ್‌ಟ್ರೇನ್ ಅನ್ನು ನೀಡುವ ಮತ್ತೊಂದು ಸಾಧ್ಯತೆಯಿದೆ. ತಾಂತ್ರಿಕವಾಗಿ ಉತ್ಕೃಷ್ಟವಾಗಿರಲಿದ್ದು, ಪನೋರಮಿಕ್ ಸನ್‌ರೂಫ್, ADAS ಸಿಸ್ಟಮ್‌ಗಳು ಮತ್ತು ಇನ್ನೂ ಹೆಚ್ಚಿನ ಪ್ರೀಮಿಯಂ ಅಂಶಗಳೊಂದಿಗೆ Innova Crysta ಗಿಂತ ಹೆಚ್ಚಿನ ವೈಶಿಷ್ಟ್ಯ-ಸಮೃದ್ಧವಾಗಿರುತ್ತದೆ. ಇನ್ನೋವಾ ಹೈಬ್ರಿಡ್ ಬುಕಿಂಗ್‌ಗಳು 25ನೇ ನವೆಂಬರ್, 2022 ರಂದು ಅಧಿಕೃತವಾಗಿ ತೆರೆಯಲ್ಪಡುತ್ತವೆ. ವಿತರಣೆಗಳು 2023 ರ ಆರಂಭದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

Most Read Articles

Kannada
Read more on ಟೊಯೋಟಾ toyota
English summary
Toyota innova hhybrid mpv teaser video launched
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X