Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
559 ಕಿ.ಮೀ ರೇಂಜ್ ನೀಡುವ ಹೊಸ ಟೊಯೊಟಾ bZ4X ಎಲೆಕ್ಟ್ರಿಕ್ ಕಾರು ಬಿಡುಗಡೆ
ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಯುಎಸ್ ಮತ್ತು ಜಪಾನ್ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಿದೆ. ಈ ಜಪಾನಿನ ಕಾರು ದೈತ್ಯರಿಂದ bZ4X BEV (ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್) ಮಾದರಿಯು ಸಂಪೂರ್ಣವಾಗಿ ಬ್ಯಾಟರಿ ಇವಿ ಮಾದರಿಯಾಗಿ ಅಭಿವೃದ್ಧಿಪಡಿಸಿದ ಮೊದಲ ಕಾರು ಇದಾಗಿದೆ.

ಭಾರತೀಯ ಮಾರುಕಟ್ಟೆ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಚ್ಚಿನ ಜನರು ಎಲೆಕ್ಟ್ರಿಕ್ ಕಾರುಗಳ ಕಡೆ ಗಮನಹರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಟೊಯೊಟಾ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಿದೆ. ಟೊಯೊಟಾ bZ4X ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಿಯಾ ಇವಿ6 ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡುತ್ತದೆ. ಟೊಯೊಟಾ bZ4X ಎಲೆಕ್ಟ್ರಿಕ್ ಕಾರನ್ನು ಜಪಾನ್‌ನಲ್ಲಿ ಉತ್ಪಾದಿಸುತ್ತಿದೆ ಮತ್ತು ಬಿಡುಗಡೆಯಾದ ಈ ಮೊದಲ ವರ್ಷದಲ್ಲಿ 5,000 ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಟೊಯೊಟಾ bZ4X ಎಲೆಕ್ಟ್ರಿಕ್ ಕಾರನ್ನು ಕಳೆದ ವರ್ಷದ ಏಪ್ರಿಲ್‌ನಲ್ಲಿ ಕ್ರಾಸ್‌ಒವರ್ ಕಾನ್ಸೆಪ್ಟ್ ರೂಪದಲ್ಲಿ bZ4X ಅನ್ನು ಅನಾವರಣಗೊಳಿಸಿತ್ತು. ಟೊಯೊಟಾ bz4X ಕಂಪನಿಯ e-TNGA ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಮಿಡ್ ಸೈಜ್ ಎಸ್‍ಯುವಿ ವಿಭಾಗದ ಮಾದರಿಯಾಗಿದೆ.

ಹೊಸ ಟೊಯೊಟಾ bZ4X ಎಲೆಕ್ಟ್ರಿಕ್ ಕಾರು ವಿಭಿನ್ನ ವಿನ್ಯಾಸ ಶೈಲಿಯನ್ನು ಹೊಂದಿದೆ. ಈಟೊಯೊಟಾ bZ4X ಬ್ರ್ಯಾಂಡ್‌ನ ಹೊಸ "ಹ್ಯಾಮರ್‌ಹೆಡ್" ವಿನ್ಯಾಸದೊಂದಿಗೆ ಅಗ್ರೇಸಿವ್ ಮುಂಭಾಗದ ಫಾಸಿಕವನ್ನು ಹೊಂದಿದೆ. ಇದು ತೀಕ್ಷ್ಣವಾಗಿ ಕಾಣುವ ಸಮಗ್ರ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ನಯವಾದ ಹೆಡ್‌ಲೈಟ್‌ಗಳನ್ನು ಸಹ ಪಡೆಯುತ್ತದೆ.

ಈ ಕಾರಿನ ಸೈಡ್ ಪ್ರೊಫೈಲ್ ಸಾಕಷ್ಟು ಸ್ಪೋರ್ಟಿಯಾಗಿದೆ, ಕಡಿಮೆ ಎತ್ತರ, ಸ್ಲಿಮ್ ಎ-ಪಿಲ್ಲರ್‌ಗಳು ಮತ್ತು ಬಿ-ಪಿಲ್ಲರ್‌ಗಳು, ಸ್ಕೊಪಿಂಗ್ ಬಾನೆಟ್ ಲೈನ್ ಮತ್ತು ಸ್ಕೊಪಿಂಗ್ ರೇರ್ ವಿಂಡ್‌ಸ್ಕ್ರೀನ್ ಅನ್ನು ಕೂಡ ಒಳಗೊಂಡಿದೆ. ಈ ಹೊಸ ಟೊಯೊಟಾ bZ4X ಎಲೆಕ್ಟ್ರಿಕ್ ಕಾರು ಟೈಲ್ ವಿಭಾಗವು ಫಾಸಿಕದಂತೆ ದಪ್ಪವಾಗಿರುತ್ತದೆ,

ಈ ಕಾರಿನ ಸಿಂಗಲ್-ಪೀಸ್ ವಿನ್ಯಾಸದೊಂದಿಗೆ ಸುತ್ತುವ ಟೈಲ್‌ಲೈಟ್‌ಗಳನ್ನು ಒಳಗೊಂಡಿದೆ.ಎಲೆಕ್ಟ್ರಿಕ್ ಎಸ್‌ಯುವಿಯನ್ನು ಸಂಪೂರ್ಣ ಅಂಡರ್‌ಬಾಡಿ ಕವರ್, ಸ್ಪ್ಲಿಟ್ ರೂಫ್ ಸ್ಪಾಯ್ಲರ್, ಡಕ್‌ಟೈಲ್ ಸ್ಪಾಯ್ಲರ್, ರಿಯರ್ ಡಿಫ್ಯೂಸರ್, ಕರಾರುವಾಕ್ಕಾಗಿ ಕೋನೀಯ ಹಿಂಬದಿಯ ವಿಂಡ್‌ಸ್ಕ್ರೀನ್ ಮತ್ತು ಮುಂಭಾಗದ ಬಂಪರ್‌ನಲ್ಲಿ ಹಲವಾರು ವಿನ್ಯಾಸ ಅಂಶಗಳನ್ನು ಕೂಡ ಕಾರು ತಯಾರಕರು ಸಂಯೋಜಿಸಿದ್ದಾರೆ.

ಈ ಎಲೆಕ್ಟ್ರಿಕ್ ಕಾರಿನ ಕಾಕ್‌ಪಿಟ್‌ನಿಂದ ವೀಕ್ಷಣೆಯನ್ನು ಹೆಚ್ಚು ಸ್ಪಷ್ಟವಾಗಿದೆ. ಟೊಯೊಟಾ ಎಲೆಕ್ಟ್ರಿಕ್ ಎಸ್‌ಯುವಿ 5.7 ಮೀಟರ್‌ಗಳಷ್ಟು ಉತ್ತಮವಾದ ಟರ್ನಿಂಗ್ ಸರ್ಕಲ್ ಅನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಟೊಯೊಟಾ bZ4X ಎಲೆಕ್ಟ್ರಿಕ್ ಕಾರು ಒಳಭಾಗವು ಪ್ರೀಮಿಯಂ ಆಗಿದೆ.

ಟೊಯೊಟಾ bZ4X ಎಲೆಕ್ಟ್ರಿಕ್ ಕಾರಿನಲ್ಲಿ ಮೃದುವಾದ, ನೇಯ್ದ ಟ್ರಿಮ್ ಟೆಕಶ್ಚರ್ ಮತ್ತು ಸ್ಯಾಟಿನ್-ಫಿನಿಶ್ ವಿವರಗಳನ್ನು ಹೊಂದಿದೆ, ಇದರಲ್ಲಿ ಪನೋರಮಿಕ್ ಸನ್‌ರೂಫ್, ಟಿಎಫ್ಟಿ ಇನ್‌ಸ್ಟ್ರುಮೆಂಟ್ ಕನ್ಸೋಲ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇತ್ಯಾದಿಗಳನ್ನು ಇಲ್ಲಿ ನೀಡುತ್ತಿರುವ ಫೀಚರ್ಸ್ ಗಳೊಂದಿಗೆ ಕ್ಯಾಬಿನ್‌ನಲ್ಲಿನ ಸ್ಥಳವು ಆಕರ್ಷಕವಾಗಿದೆ ಮತ್ತು ಈ ಎಲೆಕ್ಟ್ರಿಕ್ ಎಸ್‍ಯುವಿ ಹಿಂಭಾಗದ ಸೀಟುಗಳನ್ನು ಮಡಚಿದರೆ ಹೆಚ್ಚಿನ ಬೂಟ್ ಸ್ಪೇಸ್ ಹೊಂದಿದೆ.

ಹೊಸ bZ4X ಕಾರಿನಲ್ಲಿ ಡಿಜಿಟಲ್ ಕೀ, ಪನರೋಮಿಕ್ ರೂಫ್ ಮತ್ತು ಹೀಟೆಡ್ ಸೀಟ್ ಅನ್ನು ಒಳಗೊಂಡಿರುತ್ತದೆ. ಇನ್ನು ಈ ಟೊಯೊಟಾ ಕಾರಿನಲ್ಲಿ ಸೇಫ್ಟಿ ಸೆನ್ಸ್ ಪ್ಯಾಕೇಜ್ ಜೊತೆಗೆ ADAS ವೈಶಿಷ್ಟ್ಯಗಳಿಗಾಗಿ ಮತ್ತು ಸುಧಾರಿತ ಪಾರ್ಕಿಂಗ್ ಅಸಿಸ್ಟ್ ರಾಡಾರ್‌ಗಳು ಮತ್ತು ಕ್ಯಾಮೆರಾಗಳನ್ನು ಹೊಂದಿದೆ.

RAV4 ಹೈಬ್ರಿಡ್‌ಗೆ ಹೋಲಿಸಿದರೆ, ಇದು ಕಡಿಮೆ ಎತ್ತರವನ್ನು ಹೊಂದಿದೆ ಆದರೆ ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿದೆ (ಕಡಿಮೆ ಓವರ್‌ಹ್ಯಾಂಗ್‌ಗಳೊಂದಿಗೆ). ಬಾನೆಟ್ ಲೈನ್ ಸಹ ಕಡಿಮೆಯಾಗಿದೆ.ಟೊಯೊಟಾ ಈ ಎಲೆಕ್ಟ್ರಿಕ್ ಕಾರಿನಲ್ಲಿ ಪವರ್ ಫುಲ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಸಿದೆ. ಈ ಬ್ಯಾಟರಿಯು ಕಾರಿಗೆ ಪೂರ್ಣ ಚಾರ್ಜ್‌ನಲ್ಲಿ 559 ಕಿಮೀ ವರೆಗೆ ರೇಂಜ್ ಅನ್ನು ನೀಡುತ್ತದೆ. ಆದರೆ ಆಲ್ ವೀಲ್ ಡ್ರೈವ್ ಮಾದರಿಯು 540 ಕಿ.ಮೀ ರೇಂಜ್ ಅನ್ನು ಹೊಂದಿದೆ.

ಕಂಪನಿಯು ಈ ಎಲೆಕ್ಟ್ರಿಕ್ ಕಾರಿಗೆ ಫಾಸ್ಟ್ ಮತ್ತು ಸಾಮಾನ್ಯ ಚಾರ್ಜಿಂಗ್ ಆಯ್ಕೆಯನ್ನು ನೀಡಿದೆ. ಸರಳವಾದ ಹೋಮ್ ಚಾರ್ಜರ್‌ನೊಂದಿಗೆ ಸಂಪೂರ್ಣವಾಗಿ ಚಾರ್ಜ್ ಮಾಡಲು 9 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಆಲ್ ವೀಲ್ ಡ್ರೈವ್ ಮಾಡೆಲ್ 214 ಬಿಹೆಚ್ಪಿ ಪವರ್ ಮತ್ತು ಫ್ರಂಟ್ ವೀಲ್ ಡ್ರೈವ್ ಮಾಡೆಲ್ 204 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಕಾರು 7 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ..

ಟೊಯೊಟಾ ಮೋಟಾರ್ಸ್ ಈ ವರ್ಷದಿಂದಲೇ bZ4X ವಿತರಣೆಯನ್ನು ಪ್ರಾರಂಭಿಸಬಹುದು. ಕಂಪನಿಯು ಯುನೈಟೆಡ್ ಕಿಂಗ್‌ಡಂನಲ್ಲಿ ಅದರ ಬೆಲೆಯನ್ನು 41,950 ಯುರೋಗಳಿಗೆ ನಿಗದಿಪಡಿಸಿದೆ. ವಾಲ್‌ಬಾಕ್ಸ್ ಚಾರ್ಜರ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಹೊಂದಿದೆ.. ಕಂಪನಿಯು ಈ ಕಾರಿನ ಮೇಲೆ 10 ಲಕ್ಷ ಕಿಮೀ ವಾರಂಟಿಯನ್ನೂ ನೀಡುತ್ತಿದೆ.

ಇತ್ತೀಚೆಗೆ ಟೊಯೊಟಾ ಭಾರತದಲ್ಲಿ ಹೈಬ್ರಿಡ್ ಕಾರುಗಳನ್ನು ತರಲು ಮುಂದಾಗಿದೆ. ಭಾರತದಲ್ಲಿ ಹೈಬ್ರಿಡ್ ಕಾರುಗಳು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಭಾರತೀಯ ಮಾರುಕಟ್ಟೆಗೆ ಕೈಗೆಟುಕುವ ಬೆಲೆಯ ಹೈಬ್ರಿಡ್ ಕಾರುಗಳನ್ನು ತರುವುದಾಗಿ ಕಂಪನಿಯು ಹೇಳಿದೆ. ಹೊಸ ಟೊಯೊಟಾ bZ4X ಎಲೆಕ್ಟ್ರಿಕ್ ಕಾರು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.