India
YouTube

ಓವರ್ ಲೋಡ್‌ನಿಂದಾಗುವ ಅಪಘಾತಗಳಿಗೆ ಸಾರಿಗೆ ಸಂಸ್ಥೆಗಳೇ ಹೊಣೆ: ಸಚಿವ ನಿತಿನ್ ಗಡ್ಕರಿ

ಓವರ್‌ಲೋಡ್‌ನಿಂದ ಸಂಭವಿಸುವ ರಸ್ತೆ ಅಪಘಾತಗಳಿಗೆ ಸಾರಿಗೆ ಸಂಸ್ಥೆಗಳೇ ಹೊಣೆಯಾಗಲಿವೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎಚ್ಚರಿಕೆ ನೀಡಿದ್ದಾರೆ. ಸಾರಿಗೆ ಸಂಸ್ಥೆಗಳಿಗೆ ಛೀಮಾರಿ ಹಾಕಿದ ಅವರು, ಓವರ್‌ಲೋಡ್‌ನಿಂದ ಪ್ರತಿ ವರ್ಷ ಸಂಭವಿಸುವ ಸಾವಿರಾರು ಅಪಘಾತಗಳನ್ನು ಕಂಪನಿಗಳು ನಿಯಮ ಪಾಲಿಸುವುದರಿಂದ ತಡೆಯಬಹುದು ಎಂದಿದ್ದಾರೆ.

ಓವರ್ ಲೋಡ್‌ನಿಂದಾಗುವ ಅಪಘಾತಗಳಿಗೆ ಸಾರಿಗೆ ಸಂಸ್ಥೆಗಳೇ ಹೊಣೆ: ಸಚಿವ ನಿತಿನ್ ಗಡ್ಕರಿ

ಟ್ರೇಲರ್ ಮಾಲೀಕರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ಓವರ್‌ಲೋಡ್ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕಾನೂನುಗಳನ್ನು ಮಾಡಿದೆ ಆದರೆ ಸಾರಿಗೆದಾರರು ಇನ್ನೂ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇಂತಹ ಅನಿಯಂತ್ರಿತ ಸಾಗಣೆದಾರರ ವಿರುದ್ಧ ಕ್ರಮ ಕೈಗೊಂಡು ದಂಡವನ್ನೂ ವಿಧಿಸಲಾಗುತ್ತಿದೆ ಎಂದರು.

ಓವರ್ ಲೋಡ್‌ನಿಂದಾಗುವ ಅಪಘಾತಗಳಿಗೆ ಸಾರಿಗೆ ಸಂಸ್ಥೆಗಳೇ ಹೊಣೆ: ಸಚಿವ ನಿತಿನ್ ಗಡ್ಕರಿ

ಸಾಮಾನ್ಯವಾಗಿ ನಿತ್ಯವಸರ ವಸ್ತುಗಳು ಸೇರಿದಂತೆ ದೇಶದಲ್ಲಿನ ಬಹುತೇಕ ಕಂಪನಿಗಳ ಸರುಕು, ಸಾಮಾಗ್ರಿಗಳನ್ನು ಲಾರಿ, ಟ್ರಕ್‌ಗಳ ಮೂಲಕ ಸಾಗಿಸಲಾಗುತ್ತದೆ. ಆದರೆ ಲಾರಿ, ಟ್ರಕ್‌ಗಳಿಗೆ ಇಂತಿಷ್ಟೆ ಲೋಡ್ ತುಂಬುವ ನಿಯಮವಿದ್ದರೂ ಸಾರಿಗೆ ಸಂಸ್ಥೆಗಳು ಹೆಚ್ಚಿನ ಹಣ ಗಳಿಸಲು ಮನಬಂದಂತೆ ಲೋಡ್ ಮಾಡುವುದರಿಂದ ಲಾರಿಗಳು ಪಲ್ಟಿಯಾಗಿರುವ ಹಲವು ಉದಾಹರಣೆಗಳಿವೆ.

ಓವರ್ ಲೋಡ್‌ನಿಂದಾಗುವ ಅಪಘಾತಗಳಿಗೆ ಸಾರಿಗೆ ಸಂಸ್ಥೆಗಳೇ ಹೊಣೆ: ಸಚಿವ ನಿತಿನ್ ಗಡ್ಕರಿ

ಇಂತಹ ಘಟನೆಗಳಲ್ಲಿ ಹಲವರು ಜೀವವನ್ನೂ ಕಳೆದುಕೊಂಡಿದ್ದಾರೆ. ಲೋಡ್ ಜಾಸ್ತಿಯಾದಷ್ಟು ವಾಹನಗಳು ಕೆಪಾಸಿಟಿಯನ್ನು ಕಳೆದುಕೊಂಡು ಚಾಲನಕ ನಿಯಂತ್ರಣ ತಪ್ಪುತ್ತವೆ. ಇಂತಹ ಸಂದರ್ಭಗಳಲ್ಲಿ ಲಾಂಗ್ ಕರ್ವ (ಧೀರ್ಘ ತಿರುವು) ಇರುವ ರಸ್ತೆಗಳಲ್ಲಿ ಪಲ್ಟಿಯಾಗುವುದು ಸಾಮಾನ್ಯ. ಇಂತಹ ಘಟನೆಗಳು ದೇಶದಲ್ಲಿ ಪ್ರತಿ ತಿಂಗಳು ನೂರಾರು ಸಂಖ್ಯೆಯಲ್ಲಿ ದಾಖಲಾಗುತ್ತಿವೆ ಎಂದರು.

ಓವರ್ ಲೋಡ್‌ನಿಂದಾಗುವ ಅಪಘಾತಗಳಿಗೆ ಸಾರಿಗೆ ಸಂಸ್ಥೆಗಳೇ ಹೊಣೆ: ಸಚಿವ ನಿತಿನ್ ಗಡ್ಕರಿ

ಸಾರಿಗೆದಾರರಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಡಿಜಿಟಲೀಕರಣವನ್ನು ಗಡ್ಕರಿ ಪ್ರತಿಪಾದಿಸಿ, ಇದು ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು. ದುರದೃಷ್ಟವಶಾತ್ ವಿಷಯವು ಸಮಕಾಲೀನ ಪಟ್ಟಿಯಲ್ಲಿದೆ, ಅದರ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಗಳು ವಿಭಿನ್ನವಾಗಿ ಕಾನೂನನ್ನು ಜಾರಿಗೆ ತರುತ್ತವೆ.

ಓವರ್ ಲೋಡ್‌ನಿಂದಾಗುವ ಅಪಘಾತಗಳಿಗೆ ಸಾರಿಗೆ ಸಂಸ್ಥೆಗಳೇ ಹೊಣೆ: ಸಚಿವ ನಿತಿನ್ ಗಡ್ಕರಿ

ಸಾರಿಗೆ ಕ್ಷೇತ್ರದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಶ್ರಮಿಸಬೇಕಿದೆ. ಪ್ರಾದೇಶಿಕ ಸಾರಿಗೆ ಇಲಾಖೆಯಿಂದ (ಆರ್‌ಟಿಒ) ಪರವಾನಿಗೆ ಪಡೆಯುವಲ್ಲಿ ಸಾರಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನನಗೆ ತಿಳಿದಿದೆ ಎಂದ ಗಡ್ಕರಿ, ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿಯೂ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪ್ರಕ್ರಿಯೆಯನ್ನು ಡಿಜಿಟಲ್ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಓವರ್ ಲೋಡ್‌ನಿಂದಾಗುವ ಅಪಘಾತಗಳಿಗೆ ಸಾರಿಗೆ ಸಂಸ್ಥೆಗಳೇ ಹೊಣೆ: ಸಚಿವ ನಿತಿನ್ ಗಡ್ಕರಿ

ದೇಶದ ರಸ್ತೆ ಮೂಲಸೌಕರ್ಯಗಳ ಕುರಿತು ಮಾತನಾಡಿದ ಅವರು, ದೇಶದ ಪ್ರತಿಯೊಂದು ಪ್ರಮುಖ ಮತ್ತು ಸಣ್ಣ ಬಂದರುಗಳನ್ನು ಚತುಷ್ಪಥ ರಸ್ತೆಯಿಂದ ಸಂಪರ್ಕಿಸುವ ಯೋಜನೆಯಲ್ಲಿ ಶೀಘ್ರದಲ್ಲೇ ಕೆಲಸವನ್ನು ಪ್ರಾರಂಭಿಸಲು ಬಯಸುವುದಾಗಿ ಹೇಳಿದರು. ಇದರಿಂದ ಬಂದರಿನಿಂದ ಇತರೆ ಪ್ರದೇಶಗಳಿಗೆ ಸರಕು ಸಾಗಣೆ ವೇಗ ಹೆಚ್ಚಲಿದ್ದು, ದೇಶದಲ್ಲಿ ಅಗತ್ಯ ವಸ್ತುಗಳ ಪೂರೈಕೆ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಓವರ್ ಲೋಡ್‌ನಿಂದಾಗುವ ಅಪಘಾತಗಳಿಗೆ ಸಾರಿಗೆ ಸಂಸ್ಥೆಗಳೇ ಹೊಣೆ: ಸಚಿವ ನಿತಿನ್ ಗಡ್ಕರಿ

ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್‌ನ ಅಗತ್ಯವು ಕೊನೆಗೊಳ್ಳಲಿದೆ. ಕೇಂದ್ರ ಸಚಿವರ ಪ್ರಕಾರ, ದೇಶದಲ್ಲಿ ಜೈವಿಕ ಇಂಧನವನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ, ಇದರಿಂದ ದೇಶವು ಮುಂದಿನ ಕೆಲವು ವರ್ಷಗಳಲ್ಲಿ ಪೆಟ್ರೋಲ್‌ನಲ್ಲಿ ಸ್ವಾವಲಂಬಿಯಾಗಲಿದೆ ಎಂದು ನಿತಿನ್ ಗಡ್ಕರಿ ಅಭಿಪ್ರಾಯಪಟ್ಟರು.

ಓವರ್ ಲೋಡ್‌ನಿಂದಾಗುವ ಅಪಘಾತಗಳಿಗೆ ಸಾರಿಗೆ ಸಂಸ್ಥೆಗಳೇ ಹೊಣೆ: ಸಚಿವ ನಿತಿನ್ ಗಡ್ಕರಿ

ನಿತಿನ್ ಗಡ್ಕರಿ ಅವರು ಎಲೆಕ್ಟ್ರಿಕ್ ವಾಹನಗಳು ಮತ್ತು ಪರ್ಯಾಯ ಇಂಧನಗಳ ಬಳಕೆಯನ್ನು ಮುಕ್ತವಾಗಿ ಪ್ರತಿಪಾದಿಸಿ, ಮುಂದಿನ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಪೆಟ್ರೋಲ್ ಚಾಲಿತ ಕಾರುಗಳಿಗೆ ಸಮನಾಗಿರುತ್ತದೆ. ಭಾರತದಲ್ಲಿ ಟೊಯೊಟಾದ ಹೈಡ್ರೋಜನ್ ಫ್ಯೂಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ), ಮಿರಾಯ್‌ನಲ್ಲಿ ಪ್ರಾಯೋಗಿಕ ಅಧ್ಯಯನವನ್ನು ಪ್ರಾರಂಭಿಸಿದ್ದಾರೆ. ಈ ಹಕ್ಕುಗಳು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತವೆ ಎಂಬುದನ್ನು ನೋಡಬೇಕಾಗಿದೆ.

ಓವರ್ ಲೋಡ್‌ನಿಂದಾಗುವ ಅಪಘಾತಗಳಿಗೆ ಸಾರಿಗೆ ಸಂಸ್ಥೆಗಳೇ ಹೊಣೆ: ಸಚಿವ ನಿತಿನ್ ಗಡ್ಕರಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರೀ ಪ್ರಮಾಣದ ಸರಕು ಸಾಗಣೆಗೆ ಇಂದು ಬೃಹತ್ ವಾಹನಗಳು ನಿರ್ಣಾಯಕ ಸಾರಿಗೆಗಳಾಗಿವೆ. ಇವನ್ನು ಮಿತಿಗನುಣವಾಗಿ ಬಳಸಿಕೊಂಡರೆ ಯಾವುದೇ ಅವಘಡಗಳು ಇರುವುದಿಲ್ಲ ಆದರೆ ಕೆಲವೆಡೆ ಅವಸರಕ್ಕೆ ಮೀರಿ ಸಾಗಣೆ ಮಾಡಲಾಗುತ್ತಿದೆ. ಇದರಿಂದ ಸಂಭವಿಸುವ ಅಪಘಾತಗಳಿಂದ ಅಮಾಯಕ ಸಾರ್ವಜನಿಕರು ಕೂಡ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಆಯಾ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

Most Read Articles

Kannada
English summary
Transport companies are responsible for accidents due to overload Minister Nitin Gadkari warns
Story first published: Tuesday, July 12, 2022, 17:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X