ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

2022ರ ವರ್ಷ ಪ್ರಾರಂಭವಾಗಿದೆ, ಈ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾದ ಎಲ್ಲಾ ಹೊಸ ವಾಹನಗಳ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ. ಜಪಾನಿನ ಕಾರು ತಯಾರಕ ಟೊಯೊಟಾ (Toyota) ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಹೊಸ ಮಾದರಿಗಳನ್ನು ಪರಿಚಯಿಸಲು ಯೋಜಿಸಿದೆ.

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

ಬಿಡುಗಡೆಯಾಗಲಿರುವ ಹೊಸ ಟೊಯೊಟಾ ಕಾರುಗಳ ಬಗ್ಗೆ ಖರೀದಿದಾರರಲ್ಲಿ ನಿರೀಕ್ಷೆಯು ಸಾಕಷ್ಟು ಹೆಚ್ಚಾಗಿದೆ. ಈಗಗಾಲೇ ಟೊಯೊಟಾ ಕಂಪನಿಯು ಬಹುತೇಕ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಇದರ ನಡುವೆ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿ ಟೊಯೊಟಾ ವಾಹನ ಮಾರಾಟದ ಸಂಖ್ಯೆ ಹೆಚ್ಚಿಸಲು ಸಜ್ಜಾಗುತ್ತಿದೆ, ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಐದು ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

ಟೊಯೊಟಾ ಹಿಲಕ್ಸ್

ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳು ಸಂಕ್ರಾಂತಿ ವೇಳೆಗೆ ಬಿಡುಗಡೆಗೊಳಿಸಬಹುದಾಗಿದೆ. ಈ ಪಿಕ್ಅಪ್ ಟ್ರಕ್ ಈಗಾಗಲೇ ಡೀಲರ್‌ಶಿಪ್‌ಗಳಿಗೆ ಆಗಮಿಸಲು ಪ್ರಾರಂಭಿಸಿದೆ. ಈ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಟ್ರಕ್ ಮಾದರಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಾಗುವ ನಿರೀಕ್ಷೆಯಿದೆ.

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

ಇದು 2.4 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 2.8-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಹಿಲಕ್ಸ್ ಟಾಪ್ ರೂಪಾಂತರಗಳು AWD ಆಯ್ಕೆಯನ್ನು ಪಡೆಯುವ ನಿರೀಕ್ಷೆಯಿದೆ, ಇದು ಆಫ್-ರೋಡಿಂಗ್‌ಗೆ ಉತ್ತಮವಾಗಿರುತ್ತದೆ.

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

ಟೊಯೊಟಾ ಬೆಲ್ಟಾ

ಟೊಯೊಟಾ ಮುಂದಿನ ವರ್ಷ ಭಾರತದಲ್ಲಿ ಮಾರುತಿ ಸುಜುಕಿ ಸಿಯಾಜ್ ಆಧಾರಿತ ಕಾಂಪ್ಯಾಕ್ಟ್ ಸೆಡಾನ್ ಅನ್ನು ಪರಿಚಯಿಸಲು ಯೋಜಿಸಿದೆ. ಈಗ ಸ್ಥಗಿತಗೊಂಡಿರುವ ಯಾರಿಸ್ ಬದಲಿಗೆ ಇದು ಹೆಜ್ಜೆ ಹಾಕಲಿದೆ. ಜಪಾನಿನ ಕಾರು ತಯಾರಕರು ಟೊಯೋಟಾ ಬೆಲ್ಟಾವನ್ನು ಮಧ್ಯಪ್ರಾಚ್ಯ ಮಾರುಕಟ್ಟೆಗಳಿಗಾಗಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಹೊಸ ಕಾರು ಸಿಯಾಜ್ ಮಾದರಿಯಲ್ಲಿರುವಂತೆ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆಯಲಿದೆ,

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

ಟೊಯೊಟಾ ಬೆಲ್ಟಾವು ಮಾರುತಿ ಸೆಡಾನ್‌ನಂತೆಯೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ರೀಬ್ಯಾಡ್ಜ್ ಆವೃತ್ತಿಯಲ್ಲಿ ಟೊಯೊಟಾ ಬ್ಯಾಡ್ಜ್ ಸೇರಿದಂತೆ ಮುಂಭಾಗದ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ. ಮೂಲ ಮಾದರಿಗಿಂತ ರೀಬ್ಯಾಡ್ಜ್ ಕಾರನ್ನು ತುಸು ಆಕರ್ಷಕಗೊಳಿಸುವುದಕ್ಕಾಗಿ ಕೆಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೊಸ ರೀಬ್ಯಾಡ್ಜ್ ಕಾರು ಮೂಲ ಸಿಯಾಜ್ ಕಾರು ಮಾದರಿಗಿಂತಲೂ ತುಸು ದುಬಾರಿಯಾಗಲಿದೆ.

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

ಟೊಯೊಟಾ ರೂಮಿಯನ್

ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರೂಮಿಯನ್ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದೆ. ಇದರಿಂದ 7-ಸೀಟರ್ ಎಂಪಿವಿಯನ್ನು ಭಾರತದಲ್ಲಿ ಅದೇ ಹೆಸರಿನಲ್ಲಿ ಪರಿಚಯಿಸಲಾಗುವುದು ಎಂದು ತಿಳಿಯುತ್ತದೆ. ಆದರೆ ಟೊಯೊಟಾ ಕಂಪನಿಯು ಇದರ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಎಂಪಿವಿ ಮಾದರಿಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆ ಇದೆ.

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

ಅಲ್ಲದೇ ಕೈಗೆಟುಕು ದರದಲ್ಲಿ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಿ ಮಾರಾಟವನ್ನು ಹೆಚ್ಚಿಸಿ ತಂತ್ರವನ್ನು ಹೊಂದಿರಬಹುದು. ಟೊಯೊಟಾ ರೂಮಿಯನ್ (Toyota Rumion) ಎಂದು ಕರೆಯಲ್ಪಡುವ ಹೊಸ ಎಂಪಿವಿ ಭಾರತದಲ್ಲಿ ಮಾರಾಟದಲ್ಲಿರುವ ಮಾರುತಿ ಸುಜುಕಿ ಎರ್ಟಿಗಾವನ್ನು ಹೋಲುತ್ತದೆ. ಈ ಹೊಸ ಟೊಯೊಟಾ ರೂಮಿಯನ್ ಎಂಪಿವಿ ತನ್ನನ್ನು ಮಾರುತಿ ಎರ್ಟಿಗಾದಿಂದ ಪ್ರತ್ಯೇಕಿಸಲು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ.

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

ರೂಮಿಯನ್ ಗ್ಲೆನ್ಜಾ/ಸ್ಟಾರ್ಟ್ಲೆಟ್ ಮತ್ತು ಅರ್ಬನ್ ಕ್ರೂಸರ್ ಸೇರಿದಂತೆ ಇತರ ರೀ-ಬ್ಯಾಡ್ಜ್ಡ್ ಟೊಯೊಟಾ ಕಾರುಗಳನ್ನು ಕ್ರಮವಾಗಿ ಬಲೆನೊ ಮತ್ತು ಬ್ರೆಝಾವನ್ನು ಆಧರಿಸಿದೆ. ಇದು ಶೀಘ್ರದಲ್ಲೇ ಭಾರತದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಇನ್ನು ಟೊಯೊಟಾ ರೂಮಿಯನ್ ಎಂಪಿವಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ಹೊಸ ರೂಮಿಯನ್ ಎಂಪಿವಿಯು ಟೊಯೋಟಾ ಬ್ಯಾಡ್ಜ್‌ನೊಂದಿಗೆ ವಿಭಿನ್ನ ಗ್ರಿಲ್ ಅನ್ನು ಪಡೆಯುತ್ತದೆ.

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

ನ್ಯೂ ಜನರೇಷನ್ ಟೊಯೊಟಾ ಅರ್ಬನ್ ಕ್ರೂಸರ್

ಟೊಯೊಟಾ ಅರ್ಬನ್ ಕ್ರೂಸರ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯ ರಿಬ್ಯಾಡ್ಜ್ ಮಾದರಿಯಾಗಿದೆ. ಈ ಟೊಯೊಟಾ ಅರ್ಬನ್ ಕ್ರೂಸರ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯು ತನ್ನದೇ ಆದ ಖ್ಯಾತಿಯನ್ನು ಯಶಸ್ವಿಯಾಗಿ ನಿರ್ಮಿಸಿದೆ ಈ ಟೊಯೊಟಾ ಎಸ್‍ಯುವಿಯು ಪ್ರತಿ ತಿಂಗಳು ಯೋಗ್ಯವಾದ ಮಾರಾಟವನ್ನು ದಾಖಲಿಸುವಲ್ಲಿ ಯಶಸ್ವಿಯಾಗುತ್ತಿದೆ.

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

ಈ ಟೊಯೊಟಾ ಅರ್ಬನ್ ಕ್ರೂಸರ್ ಬದಲಾವಣೆಗೆ ಒಳಗಾಗಲು ಸಿದ್ಧವಾಗಿದೆ. ಪ್ರಮುಖ ಬದಲಾವಣೆಗಳೊಂದಿಗೆ ನ್ಯೂ ಜನರೇಷನ್ ಮಾದರಿಯಾಗಿ ಬಿಡುಗಡೆಯಾಗಲಿದೆ. ಈ ಹೊಸ ಮಾದರಿಯಲ್ಲಿ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ.

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

ಅದೇ 1.5-ಲೀಟರ್ ಕೆ-ಸೀರೀಸ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರುತ್ತದೆ. ಇದು 104 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5-ಮ್ಯಾನುವಲ್ ಜೊತೆಗೆ ನಾಲ್ಕು-ಸ್ಪೀಡ್ ಟಾರ್ಕ್-ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೆನ್ನು ನೀಡಲಾಗಿದೆ.

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ Toyota ಕಾರುಗಳಿವು..

ಹೊಸ ಮಿಡ್ ಸೈಜ್ ಎಸ್‍ಯುವಿ

ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಜಂಟಿಯಾಗಿ ಹೊಸ ಮಿಡ್ ಎಸ್‍ಯುವಿಯನ್ನು ಅಭಿವೃದ್ಧಿಪಡಿಸುತ್ತಿವೆ. ಇದು ಈ ವರ್ಷ ಆಗಮಿಸಲಿದೆ. ಇದು ಟೊಯೊಟಾದ DNGA ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಅರ್ಬನ್ ಕ್ರೂಸರ್ ಮತ್ತು ಫಾರ್ಚುನರ್ ನಡುವೆ ಸ್ಥಾನವನ್ನು ಪಡೆದುಕೊಳ್ಳುತ್ತದೆ.

Most Read Articles

Kannada
English summary
Upcoming new toyota cars in india in 2022 read to find more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X