Auto Expo 2023: ಒಂದೇ ಚಾರ್ಜ್‌ನಲ್ಲಿ 631 ಕಿ.ಮೀ ಮೈಲೇಜ್ ನೀಡುವ ಹ್ಯುಂಡೈ ಐಯೋನಿಕ್ 5 ಬಿಡುಗಡೆ

ಆಟೋಮೊಬೈಲ್ ಪ್ರಿಯರು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಆಟೋ ಎಕ್ಸ್‌ಪೋಗೆ ಅದ್ದೂರಿ ಚಾಲನೆ ದೊರೆತಿದೆ. ಈಗಲೇ ಹಲವು ಕಂಪನಿಗಳು ತಮ್ಮ ಕಾರುಗಳನ್ನು ಬಿಡುಗಡೆ ಮಾಡಿವೆ. ಇದೀಗ ಹ್ಯುಂಡೈ Ioniq 5 ಕಾರನ್ನು ರೂ.44.95 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಿದೆ (ಮೊದಲ 500 ಗ್ರಾಹಕರಿಗೆ ಅನ್ವಯ).

ದಕ್ಷಿಣ ಕೊರಿಯಾದ ಪ್ರಮುಖ ಕಾರು ತಯಾರಕ ಕಂಪನಿ ಹ್ಯುಂಡೈ, 'ಐಯೋನಿಕ್ 5' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಆಟೋ ಎಕ್ಸ್‌ಪೋದಲ್ಲಿ ಬುಧವಾರ ಬಿಡುಗಡೆ ಮಾಡುವ ಮೂಲಕ ಭಾರತೀಯ ಗ್ರಾಹಕರಿಗೆ ಪರಿಚಯಿಸಿದೆ. ಹ್ಯುಂಡೈ ಐಯೋನಿಕ್ 5 ಅನ್ನು x ವೇರಿಯಂಟ್ ಲೆವೆಲ್ ಗಳಲ್ಲಿ ಖರೀದಿಗೆ ದೊರೆಯಲಿದೆ. ಇದು 72.6kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದ್ದು, ಇದು ಒಂದೇ ಚಾರ್ಜಿನಲ್ಲಿ 621 ಕಿಲೋಮೀಟರ್‌ ARAI - ಪ್ರಮಾಣೀಕೃತ ರೇಂಜ್ ಅನ್ನು ನೀಡುತ್ತದೆ.

Auto Expo 2023: ಹ್ಯುಂಡೈ ಐಯೋನಿಕ್ 5 ಬಿಡುಗಡೆ

ಹುಂಡೈ ಐಯೋನಿಕ್ 5 ವಿಶೇಷತೆಗಳು:
ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಿರುವ ಐಯೋನಿಕ್ 5, ಹ್ಯುಂಡೈನ 800V eGMP ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಎಸ್‌ಯುವಿಯಲ್ಲಿ ಬ್ಯಾಟರಿ ಪ್ಯಾಕ್ ಎರಡು ಆಕ್ಸಲ್‌ಗಳ ನಡುವೆ ಇರಲಿದೆ. ಹ್ಯುಂಡೈ ಐಯೋನಿಕ್, ತ್ವರಿತ ವೇಗದ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸಲಿದ್ದು, ಇದನ್ನು 350kW ವೇಗದಲ್ಲಿ ರೀಚಾರ್ಜ್ ಮಾಡಬಹುದು. ವೇಗದ ಚಾರ್ಜಿಂಗ್ ಸಪೋರ್ಟ್ ಮಾಡುವ DC ಚಾರ್ಜರ್‌ಗೆ ಸಂಪರ್ಕಿಸಿದಾಗ, ಐಯೋನಿಕ್ 5ನ ಬ್ಯಾಟರಿಯನ್ನು ಕೇವಲ 18 ನಿಮಿಷಗಳಲ್ಲಿ ಶೇಕಡ 10 ರಿಂದ 80ರಷ್ಟು ರೀಚಾರ್ಜ್ ಮಾಡಬಹುದು.

ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಐಯೋನಿಕ್, 5 ಬ್ಯಾಟರಿ ಪ್ಯಾಕ್ ರೇರ್ ಆಕ್ಸಲ್‌ಗೆ ಸಂಪರ್ಕಗೊಂಡಿರುವ ಏಕೈಕ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಇದು 214.5 bhp ಗರಿಷ್ಠ ಪವರ್ ಮತ್ತು 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹ್ಯುಂಡೈ Ioniq 5 ಕೇವಲ 7.4 ಸೆಕೆಂಡುಗಳಲ್ಲಿ 0-100 km/h ವೇಗವನ್ನು ಪಡೆಯಲಿದ್ದು, ಈ ಎಲೆಕ್ಟ್ರಿಕ್ ಎಸ್‌ಯುವಿ 185 km/h ಟಾಪ್ ಸ್ವೀಡ್ ಹೊಂದಿದೆ.

Auto Expo 2023: ಹ್ಯುಂಡೈ ಐಯೋನಿಕ್ 5 ಬಿಡುಗಡೆ

ಹ್ಯುಂಡೈ ಐಯೊನಿಕ್ 5 ವಿನ್ಯಾಸ ಮತ್ತು ವೈಶಿಷ್ಟ್ಯಗಳು:
ಹ್ಯುಂಡೈ ಐಯೊನಿಕ್ 5 ಗ್ರಾಹಕರನ್ನು ಆಕರ್ಷಿಸುವ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ದೊಡ್ಡದಾಗಿರುವ ಈ ಎಸ್‌ಯುವಿ 1980ರ ಹ್ಯುಂಡೈ ಹ್ಯಾಚ್‌ಬ್ಯಾಕ್ ಅನ್ನು ಮತ್ತೆ ನೆನಪಿಸುತ್ತದೆ. ಇದು ಕೆಲವು ಅದ್ಭುತವಾದ ಮಾಡ್ರನ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಪ್ಯಾರಾಮೆಟ್ರಿಕ್ ಪಿಕ್ಸೆಲ್-ಶೈಲಿಯ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳನ್ನು ಪಡೆದುಕೊಂಡಿದೆ. ಬಾಕ್ಸಿಯಾಗಿ ಕಾಣುವ ಈ ಎಸ್‌ಯುವಿ, ಭಾರತದಲ್ಲಿ ಹೊಸ ಖರೀದಿದಾರರನ್ನು ಸೆಳೆಯಲಿದೆ.

ಹ್ಯುಂಡೈ ಐಯೊನಿಕ್ 5 ಕ್ಯಾಬಿನ್ ಡ್ಯುಯಲ್ 12.3-ಇಂಚಿನ ಫುಲ್ - TFT ಸ್ಕ್ರೀನ್ ನಂತಹ ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಅತ್ಯಾಧುನಿಕವಾಗಿ ಕಾಣುತ್ತದೆ. ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌, ADAS ಸೇರಿದಂತೆ ದೊಡ್ಡ ಪವರ್ ಬ್ಯಾಂಕ್, ORVMಗಳು, ಹ್ಯಾಂಡ್ಸ್-ಫ್ರೀ ಪರೇಟೆಡ್ ಟೈಲ್‌ಗೇಟ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಈ ಕಾರು ಹೊಂದಿದೆ. ಇದು ಯುವ ಗ್ರಾಹಕರನ್ನು ಕಂಪನಿಯು ತನ್ನತ್ತ ಆಕರ್ಷಿಸಲು ಸಾಧ್ಯವಾಗುತ್ತದೆ ಎಂದು ಹೇಳಬಹುದು.

ಇಷ್ಟೇ ಅಲ್ಲದೆ, ವೆಂಟಿಲೇಟೆಡ್ ಫ್ರಂಟ್ ಸೀಟ್‌, ಪವರ್ ಸೀಟ್‌ಗಳು, ಕ್ಲೈಮೇಟ್ ಕಂಟ್ರೋಲ್ ವೈಶಿಷ್ಟ್ಯಗಳನ್ನು ಹೊಂದಿದೆ. ಸದ್ಯ ಪ್ರತಿಯೊಬ್ಬ ಕಾರು ಖರೀದಿದಾರರು ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತಾರೆ. ಈ ಕಾರು, ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಹೊಸ ಹ್ಯುಂಡೈ ಐಯೋನಿಕ್ 5 ಬೆಲೆಯನ್ನು ಕಿಯಾ EV6ಗೆ ಹೋಲಿಸಿದರೆ, ಹೆಚ್ಚು ಕೈಗೆಟುಕುವ ಪರ್ಯಾಯ ಇವಿಯಾಗಿದೆ ಎಂದು ಹೇಳಬಹುದು. ಕಿಯಾ EV6 ಜೊತೆಗೆ, ಹ್ಯುಂಡೈ ಐಯೋನಿಕ್ 5, Volvo XC40 ರೀಚಾರ್ಜ್‌ಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲಿದೆ.

Auto Expo 2023: ಹ್ಯುಂಡೈ ಐಯೋನಿಕ್ 5 ಬಿಡುಗಡೆ

ಹ್ಯುಂಡೈ ಐಯೋನಿಕ್ 5 ಕಾರು, ದೇಶದ ಇವಿ ಮಾರುಕಟ್ಟೆ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಬಹುದು. ಅದರ ಮೈಲೇಜ್ ಸಹ ಅದೇರೀತಿ ಇದೆ. ಆದರೆ, ಕಾರಿನ ಬೆಲೆ ಮಧ್ಯಮ ವರ್ಗದ ಜನರಿಗೆ ಕೈಗೆಟುವುದು ಕಷ್ಟವೇ ಸರಿ. ಬಹುತೇಕ ಶ್ರೀಮಂತರು ಈ ಇವಿಯನ್ನು ಖರೀದಿಸಬಹುದು. ಹ್ಯುಂಡೈ ಸಹ ಅತಿಹೆಚ್ಚು ಮೈಲೇಜ್ ನೀಡುವ ಇತರೆ ಇವಿಗಳನ್ನು ಗ್ರಾಹಕರ ಕೈಗೆಟುವ ಬೆಲೆಯಲ್ಲಿ ಬಿಡುಗಡೆ ಮಾಡಿದರೆ ಕಂಪನಿಯ ಮಾರಾಟ ಪ್ರಗತಿ ಸಹ ಹೆಚ್ಚಾಗುತ್ತದೆ. ಮುಂಬರುವ ದಿನಗಳಲ್ಲಿ ಅದು ಸಾಧ್ಯವಾಗಬಹುದು.

Most Read Articles

Kannada
English summary
Hyundai ioniq 5 launched dalits kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X