2023ರ ಟಾಟಾ ನೆಕ್ಸಾನ್‌ನಲ್ಲಿ ಸ್ಟೀಯರಿಂಗ್ ವ್ಹೀಲ್‌ನೊಂದಿಗೆ ಹೊಸದೇನಿರಬಹುದು? ನಂ.1 ಪಕ್ಕಾ
ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ (Tata Nexon) ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ನೆಕ್ಸಾನ್ ಮಾದರಿಯು ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಪಾರುಪತ್ಯ ಮೆರೆಯುತ್ತಿದೆ. ಆದರೂ ತನ್ನ ಪ್ರತಿಸ್ಪರ್ಧಿಗಳಿಗೆ ಸೆಡ್ಡು ಹೊಡೆದು ತನ್ನ ಪಾರುಪತ್ಯವನ್ನು ಮುಂದುವರೆಸಲು ಹೊಸ ನವೀಕರಸುವುದು ಅನಿವಾರ್ಯವಾಗಿದ್ದು, ಇದೇ ಕಾರಣಕ್ಕೆ ನೆಕ್ಸಾನ್ ಹೊಸ ನವೀಕರಣವನ್ನು ಪಡೆದುಕೊಳ್ಳುಲು ರೆಡಿಯಾಗಿದೆ.
ಜನಪ್ರಿಯ ಸ್ವದೇಶಿ ಕಾರು ತಯಾರಕರಾದ ಟಾಟಾ ಮೋಟಾರ್ಸ್ 2017ರಲ್ಲಿ ಮೊದಲ ಬಾರಿಗೆ ಈ ನೆಕ್ಸಾನ್ ಮಾದರಿಯನ್ನು ಹೆಚ್ಚು ಪೈಪೋಟಿ ಇರುವ ಕಾಂಪ್ಯಾಕ್ಟ್ಎಸ್‍ಯುವಿ ವಿಭಾಗದಲ್ಲಿ ಬಿಡುಗಡೆಗೊಳಿಸಿತು. ಟಾಟಾ ನೆಕ್ಸಾನ್ ಬಿಡುಗಡೆಯಾದ ಆರಂಭದಲ್ಲಿ ಇದರ ಮಾರಾಟವು ಮಂಧಗತಿಯಲ್ಲಿತ್ತು. ಆದರೆ 2020ರ ಆರಂಭದಲ್ಲಿ ನೆಕ್ಸಾನ್‌ನ ಹೆಚ್ಚು ನವೀಕರಿಸಿದ ಆವೃತ್ತಿಯನ್ನು ತಂದರು. ಅಂದಿನಿಂದ ನೆಕ್ಸಾನ್ ಎಸ್‍ಯುವಿಗೆ ನಿಜವಾಗಿಯೂ ಮಾರಾಟದಲ್ಲಿ ಭಾರೀ ಏರಿಕೆಯನ್ನು ಪಡೆದುಕೊಂಡಿತು.

ಇತ್ತೀಚೆಗೆ ಈ ಟಾಟಾ ನೆಕ್ಸಾನ್ ಇತ್ತೀಚೆಗೆ 5 ಲಕ್ಷ ಯುನಿಟ್‌ಗಳ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ಈ ನಡುವೆ ಟಾಟಾ ನೆಕ್ಸಾನ್ ಮುಂಬರುವ ತಿಂಗಳುಗಳಲ್ಲಿ ನವೀಕರಣವನ್ನು ಸ್ವೀಕರಿಸಲು ಸಜ್ಜಾಗಿದೆ ಈ ಹೊಸ ಟಾಟಾ ನೆಕ್ಸಾನ್ ಎಸ್‍ಯುವಿಯ ಸ್ಪಾಟ್ ಟೆಸ್ಟ್ ಅನ್ನು ಪ್ರಾರಂಭಿಸಿದೆ. ನವೀಕರಿಸಿದ ಮಾದರಿಯ ಸ್ಪೈ ಚಿತ್ರಗಳಿಂದ ಆಸಕ್ತಿದಾಯಕ ವಿವರಗಳನ್ನು ಬಹಿರಂಗಪಡಿಸುವುದನ್ನು ನಾವು ನೋಡಿದ್ದೇವೆ. ಇತ್ತೀಚಿನ ಸ್ಪೈ ಚಿತ್ರಗಳಿಂದ ಅದರ ಹೊಸ, ಫ್ಲಾಟ್-ಬಾಟಮ್ ಟು-ಸ್ಪೋಕ್ ಸ್ಟೀರಿಂಗ್ ವೀಲ್ ಬಹಿರಂಗವಾಗಿದೆ.
ಈ ಫ್ಲಾಟ್-ಬಾಟಮ್ ಟು-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಟಾಟಾ ಕರ್ವ್ ನಿಂದ ಎರವಲು ಪಡೆಯಲಾಗಿದೆ ಎಂದು ತೋರುತ್ತದೆ . ಈ ಯುನಿಟ್ ಪಿಯಾನೋ ಬ್ಲ್ಯಾಕ್ ಫಿನಿಶಿಂಗ್ ಹೊಂದಿದೆ ಮತ್ತು ಎರಡೂ ಬದಿಗಳಲ್ಲಿ ನಿಯಂತ್ರಣ ಬಟನ್‌ಗಳೊಂದಿಗೆ ಆಯತಾಕಾರದ ಹಬ್ ವಿಭಾಗವನ್ನು ಹೊಂದಿದೆ. ಇಲ್ಲಿ ಆಸಕ್ತಿದಾಯಕ ಸಂಗತಿಯೆಂದರೆ, ಸ್ಪೈ ಚಿತ್ರಗಳಲ್ಲಿ ನೆಕ್ಸಾನ್ ಎಸ್‍ಯುವಿಯು ಸ್ಟೀರಿಂಗ್ ವ್ಹೀಲ್ ಲೋಗೋವನ್ನು ಹೊಂದಿಲ್ಲ.
ಹೊಸ 2023ರ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಇಂಟಿಗ್ರೇಟೆಡ್ ಡಿಜಿಟಲ್ ಸ್ಕ್ರೀನ್ ಅಥವಾ ಬ್ಯಾಕ್‌ಲಿಟ್ ಲೋಗೋದೊಂದಿಗೆ ಸ್ಟೀರಿಂಗ್ ವೀಲ್ ಅನ್ನು ಪಡೆಯಬಹುದು ಎಂಬ ಊಹಾಪೋಹಗಳು ಹೆಚ್ಚುತ್ತಿವೆ. ಇತ್ತೀಚೆಗೆ ಈ ಟಾಟಾ ನೆಕ್ಸಾನ್ ಇತ್ತೀಚೆಗೆ 5 ಲಕ್ಷ ಯುನಿಟ್‌ಗಳ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ಈ ನಡುವೆ ಟಾಟಾ ನೆಕ್ಸಾನ್ ಮುಂಬರುವ ತಿಂಗಳುಗಳಲ್ಲಿ ನವೀಕರಣವನ್ನು ಸ್ವೀಕರಿಸಲು ಸಜ್ಜಾಗಿದೆ ಖರೀದಿದಾರರಲ್ಲಿ ಉತ್ಸಾಹವನ್ನು ಮೂಡಿಸುವ ಸಲುವಾಗಿ, ಮಾರುಕಟ್ಟೆ ಆಗಮನದ ಮುಂಚೆಯೇ ಟೀಸರ್‌ಗಳನ್ನು ಬಿಡಲು ಪ್ರಾರಂಭಿಸಿದ್ದಾರೆ.
ಫೇಸ್‌ಲಿಫ್ಟೆಡ್ ಮಾಡೆಲ್ ಗಮನಾರ್ಹವಾದ ಆಂತರಿಕ ಮತ್ತು ಬಾಹ್ಯ ನವೀಕರಣಗಳೊಂದಿಗೆ ಬರುತ್ತದೆ. ಈ ಹೊಸ ಹೊಸ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 125bhp ಮತ್ತು 225Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಸ್‍ಯುವಿಯಲ್ಲಿ ಪ್ರಸ್ತುತ 1.2 ಲೀಟರ್ ಟರ್ಬೊ ಪೆಟ್ರೋಲ್ ಮೋಟಾರ್ 120bhp ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ನೆಕ್ಸಾನ್ ಫೇಸ್‌ಲಿಫ್ಟ್ ಎಸ್‍ಯುವಿಯು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸುವುದನ್ನು ಮುಂದುವರಿಸುತ್ತದೆ ಹೇಳಲಾಗುತ್ತಿದೆ.
ಈ ಎಂಜಿನ್ 113bhp ಮತ್ತು 260Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಹೊಸ ಟಾಟಾ ನೆಕ್ಸಾನ್ ಎಸ್‍ಯುವಿಯು ಗಮನಾರ್ಹವಾದ ಕಾಸ್ಮೆಟಿಕ್ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಹೊಸ 2023ರ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಅದರ ಕೆಲವು ಸ್ಟೈಲಿಂಗ್ ಬಿಟ್‌ಗಳನ್ನು ಕರ್ವ್ ಕೂಪೆ ಎಸ್‌ಯುವಿ ಕಾನ್ಸೆಪ್ಟ್ ನಿಂದ ಪಡೆಯುತ್ತದೆ. ಇನ್ನು ಹೊಸ ಆಕರ್ಷಕವಾದ ಗ್ರಿಲ್ ಅನ್ನು ಹೊಂದಿರಬಹುದು.
ಇನ್ನು ಈ ಎಸ್‍ಯುವಿಯು ಹೆಚ್ಚು ನೇರವಾದ ನಿಲುವು. ಹೆಡ್‌ಲ್ಯಾಂಪ್ ಕ್ಲಸ್ಟರ್‌ಗಳನ್ನು ಅಸ್ತಿತ್ವದಲ್ಲಿರುವ ಒಂದಕ್ಕಿಂತ ಸ್ವಲ್ಪ ಕಡಿಮೆ ಇರಿಸಲಾಗುತ್ತದೆ. 2023ರ ಟಾಟಾ ನೆಕ್ಸಾನ್ ಡಿಸಿಎ ಹೊಸ ಟು-ಸ್ಪೋಕ್, ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಪಡೆಯಲಿದೆ. ಇದು ಟಾಟಾ ಕರ್ವ್ ಕ್ಕಾನ್ಸೆಪ್ಟ್ ನಂತೆಯೇ ಹೆಚ್ಚಾಗಿ ಕಂಡುಬರುತ್ತದೆ. ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಗಳು, ಟಾಗಲ್ ಸ್ವಿಚ್‌ಗಳು ಮತ್ತು ಬಹು ಟಚ್-ಸೆನ್ಸಿಟಿವ್ ಹ್ಯಾಪ್ಟಿಕ್ ಬಟನ್‌ಗಳನ್ನು ಹೊಂದಿರುತ್ತದೆ.


Click it and Unblock the Notifications