ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗುತ್ತಿದೆ ಟಾಟಾ ಸಫಾರಿ: ಮಹೀಂದ್ರಾ ಎಕ್ಸ್‌ಯುವಿ700ಗೆ ಆತಂಕ
ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ನಡುವೆ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಸಫಾರಿ ಎಸ್‍ಯುವಿಯ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇತೀಚೆಗೆ ಈ ಹೊಸ ಟಾಟಾ ಸಫಾರಿ ಫೇಸ್‌ಲಿಫ್ಟ್ ಎಸ್‍ಯುವಿಯು ಸ್ಪಾಟ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ.
ಹೊಸ ಟಾಟಾ ಸಫಾರಿ ಫೇಸ್‌ಲಿಫ್ಟ್ ಎಸ್‍ಯುವಿವಿಭಿನ್ನವಾಗಿ ಕಾಣುವ ಲಂಬವಾಗಿ ಜೋಡಿಸಲಾದ ಹೆಡ್‌ಲೈಟ್‌ಗಳು, ರಿಪ್ರೊಫೈಲ್ಡ್ ಫ್ರಂಟ್ ಬಂಪರ್, ಹೆಚ್ಚು ನೇರವಾದ ಮುಂಭಾಗ, ನವೀಕರಿಸಿದ ಹಿಂಭಾಗದ ಬಂಪರ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಸಾಕಷ್ಟು ವಿನ್ಯಾಸ ಬದಲಾವಣೆಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂಬುದು ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ರೀತಿಯ ಈ ಹೊಸ ಸಫಾರಿ ಎಸ್‍ಯುವಿಯ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಕಂಡು ಬರುತ್ತದೆ.

ಮುಂಬರುವ ಈ ಹೊಸ ಟಾಟಾ ಸಫಾರಿ ಫೇಸ್‌ಲಿಫ್ಟ್ ಎಸ್‍ಯುವಿಯು ಹೊಸ ಫೀಚರ್ಸ್ ಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಮತ್ತು ಇತರ ಒಳಾಂಗಣ ವಿನ್ಯಾಸದ ಅಂಶಗಳೊಂದಿಗೆ ಎಸ್‌ಯುವಿಯನ್ನು ಹೆಚ್ಚು ಪ್ರೀಮಿಯಂ ಮತ್ತು ಸಮಕಾಲೀನವಾಗಿ ಕಾಣುವಂತೆ ಮಾಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟಾಟಾ ಸಫಾರಿ ಫೇಸ್‌ಲಿಫ್ಟ್ ಎಸ್‍ಯುವಿಯ ಸೈಡ್ ಪ್ರೊಫೈಲ್ ಪ್ರಸ್ತುತ ಮಾದರಿಗೆ ಹೆಚ್ಚು ಹೋಲುತ್ತದೆ.
ಈ ಹೊಸ ಟಾಟಾ ಸಫಾರಿ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಹತ್ತಿರದಿಂದ ನೋಡಿದಾಗ, ಈ ಎಸ್‍ಯುವಿಯು ಹೊಸ ಸೆನ್ಸರ್ ಗಳನ್ನು ಹೊಂದಿದ್ದು, ಅದು ವಿಂಡ್‌ಶೀಲ್ಡ್ ಮತ್ತು IRVM ನ ಹಿಂದೆ ಇರುತ್ತದೆ. ಮುಂಬರುವ ಟಾಟಾ ಸಫಾರಿ ಫೇಸ್‌ಲಿಫ್ಟ್‌ನಲ್ಲಿ ಈ ಹೊಸ ಸೆನ್ಸರ್ ADAS ತಂತ್ರಜ್ಞಾನದ ಭಾಗವಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಅದರ ಜೊತೆಗೆ, ಟಾಟಾ ಸಫಾರಿ ಎಸ್‌ಯುವಿಯ ಮುಂಬರುವ ಫೇಸ್‌ಲಿಫ್ಟೆಡ್ ಆವೃತ್ತಿಯಲ್ಲಿನ ADAS ತಂತ್ರಜ್ಞಾನದಲ್ಲಿ ಹೊಸ ಅಪ್ಡೇಟ್ ಬರಲಿದೆ.

ಟಾಟಾ ಸಫಾರಿ ರೆಡ್ ಡಾರ್ಕ್ ಆವೃತ್ತಿಯಲ್ಲಿನ ಲೇನ್-ಕೀಪಿಂಗ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಹೆಚ್ಚುವರಿ ಫೀಚರ್ಸ್ ಗಳೊಂದಿಗೆ ಹೆಚ್ಚು ಅತ್ಯಾಧುನಿಕವಾಗಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಒಮೆಗಾ ಪ್ಲ್ಯಾಟ್‌ಫಾರ್ಮ್‌ನಿಂದಾಗಿ ಟಾಟಾ ಹೊಸ ಕಾರಿಗೆ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಹೆಚ್ಚಿನ ಗ್ರಾಹಕರ ಗಮನಸೆಳೆಯುತ್ತಿದೆ.
ಮುಂಬರುವ, ಈ ಹೊಸ ಟಾಟಾ ಸಫಾರಿ ಫೇಸ್‌ಲಿಫ್ಟ್ ಎಸ್‍ಯುವಿಯು ಹೊಸ 1.5-ಲೀಟರ್, 4-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 168 bhp ಪವರ್ ಮತ್ತು 280 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 2023ರ ಆಟೋ ಎಕ್ಸ್‌ಪೋದಲ್ಲಿ ವಾಹನ ತಯಾರಕರು ಪ್ರದರ್ಶಿಸಿದ ಅದೇ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಗಿದೆ.

ಇನ್ನು ಡೀಸೆಲ್ ಎಂಜಿನ್ ಅದೇ 2.0-ಲೀಟರ್, 4-ಸಿಲಿಂಡರ್, ಟರ್ಬೋಚಾರ್ಜ್ಡ್ ಯುನಿಟ್ ಆಗಿರುವ ಸಾಧ್ಯತೆಯಿದ್ದರೂ, ಪವರ್ ಮತ್ತು ಟಾರ್ಕ್ ಅಂಕಿಅಂಶಗಳು ಸ್ವಲ್ಪ ಬದಲಾವಣೆಗಳಿರಬಹುದು. ಈ ಸಫಾರಿ ಎಸ್‍ಯುವಿಯ ಪ್ರಸ್ತುತ, 2.0-ಲೀಟರ್ ಡೀಸೆಲ್ ಎಂಜಿನ್ 168 bhp ಪವರ್ ಮತ್ತು 350 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಟಾಟಾ ಸಫಾರಿ ಎಸ್‌ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯು ತನ್ನ ಅತ್ಯಾಧುನಿಕ ಪ್ರತಿಸ್ಪರ್ಧಿಗಳಾದ ಎಂಜಿ ಹೆಕ್ಟರ್ ಪ್ಲಸ್ ಮತ್ತು ಮಹೀಂದ್ರಾ ಎಕ್ಸ್‌ಯುವಿ700 ವಿರುದ್ಧ ಉತ್ತಮವಾಗಿ ಪೈಪೋಟಿ ನೀಡಲು ವಾಹನ ತಯಾರಕರಿಗೆ ಸಹಾಯ ಮಾಡುತ್ತದೆ. ಅಲ್ಲದೇ ಇದು ವಾಹನ ತಯಾರಕರಿಗೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮತ್ತು ಒಟ್ಟಾರೆ ಮಾರಾಟದ ಅಂಕಿಅಂಶಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.


Click it and Unblock the Notifications