Tata Altroz ​​iCNG ಆಕರ್ಷಕ TVC: ಕಡಿಮೆ ಬೆಲೆ, ನೀರಿಕ್ಷೆಗೂ ಮೀರಿದ ವೈಶಿಷ್ಟ್ಯಗಳೊಂದಿರುವ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪಾರುಪತ್ಯ ಸಾಧಿಸಲು ಸಿಎನ್‌ಜಿ ಪ್ರಯಾಣಿಕ ವಾಹನ ಜಾಗವನ್ನು ಪ್ರವೇಶಿಸಿದ ಜನಪ್ರಿಯ ಸ್ವದೇಶೀ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಈಗ ತನ್ನ ಸಿಎನ್‌ಜಿ ವಾಹನ ವಿಭಾಗವನ್ನು ಮತ್ತಷ್ಟು ವಿಸ್ತರಿಸುತ್ತಿದೆ.ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್ಟ್ರೋಜ್ iCNG ಕಾರನ್ನು ಬಿಡುಗಡೆಗೊಳಿಸಿತು.

ಹೊಸ ಟಾಟಾ ಆಲ್ಟ್ರೊಜ್ iCNG ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.55 ಲಕ್ಷವಾಗಿದೆ. ಈ ಹೊಸ CNG ಹ್ಯಾಚ್‌ಬ್ಯಾಕ್ ಅನ್ನು ಟ್ವಿನ್-ಸಿಲಿಂಡರ್ ತಂತ್ರಜ್ಞಾನದೊಂದಿಗೆ ಪರಿಚಯಿಸಲಾಗಿದೆ. ಇದು ಭಾರತದಲ್ಲಿ ಮೊದಲನೆಯದು. ಈ ನವೀನ ತಂತ್ರಜ್ಞಾನದೊಂದಿಗೆ, ಕಂಪನಿಯು Altroz ​​iCNG ಹಿಂಭಾಗದಲ್ಲಿ ಎರಡು ಪ್ರತ್ಯೇಕ ಸಿಲಿಂಡರ್‌ಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಮಾರುಕಟ್ಟೆಯಲ್ಲಿನ ಇತರ CNG ಕಾರುಗಳಿಗೆ ಹೋಲಿಸಿದರೆ ಬೂಟ್‌ನಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸುತ್ತದೆ.

Tata Altroz iCNG

ಈ ಫೀಚರ್ಸ್ ಗಳನ್ನು ಹೈಲೈಟ್ ಮಾಡಲು ಕಂಪನಿಯು ಹೊಸ ಟೆಲಿವಿಷನ್ ಜಾಹೀರಾತನ್ನು ಸಹ ಬಿಡುಗಡೆ ಮಾಡಿದೆ. ಹೊಸದಾಗಿ ಪ್ರಾರಂಭಿಸಲಾದ ಟಾಟಾ ಆಲ್ಟ್ರೊಜ್ iCNG ಅನ್ನು ಪ್ರಚಾರ ಮಾಡಲು ಟಾಟಾ ಮೋಟಾರ್ಸ್‌ನ ಇತ್ತೀಚಿನ ಟೆಲಿವಿಷನ್ ಜಾಹೀರಾತನ್ನು ಬ್ರ್ಯಾಂಡ್‌ನ ಸೋಷಿಯಲ್ ಮೀಡಿಯಾಗಳು ಮತ್ತು ಟೆಲಿವಿಷನ್ ನಲ್ಲಿ ಹಂಚಿಕೊಳ್ಳಲಾಗಿದೆ. ಸಿಎನ್‌ಜಿ ಕಾರು ಸಾಕಷ್ಟು ಮೈಲೇಜ್ ನೀಡುತ್ತದೆ ಆದರೆ ಬೂಟ್ ಸ್ಪೇಸ್ ಕೊರತೆಯನ್ನು ಮಹಿಳಾ ನಟಿಯೊಬ್ಬರು ಉಲ್ಲೇಖಿಸುವುದರೊಂದಿಗೆ ಜಾಹೀರಾತು ಪ್ರಾರಂಭವಾಗುತ್ತದೆ.

ನಟಿ ಇದನ್ನು ಹೇಳುತ್ತಿರುವಾಗ, ಮುಂದೆ ಒಂದು Altroz ​​iCNG ಇರುತ್ತದೆ. ನೀವು ಸಿಎನ್‌ಜಿ ಕಾರನ್ನು ಖರೀದಿಸಿದಾಗ, ಕ್ಯಾರಿಯರ್ ಖರೀದಿಸುವುದು ಅತ್ಯಗತ್ಯ ಎಂದು ಹೇಳುವ ಇನ್ನೊಬ್ಬ ನಟ ರೂಫ್ ಕ್ಯಾರಿಯರ್‌ನೊಂದಿಗೆ ನಿಂತಿರುವುದನ್ನು ವೀಡಿಯೊ ತೋರಿಸುತ್ತದೆ. ಮತ್ತೊಮ್ಮೆ, ಮತ್ತೊಂದು Altroz ​​iCNG ಅವರ ಮುಂದೆ ಚಲಿಸುತ್ತದೆ. ಬ್ಯಾಕ್‌ಪ್ಯಾಕ್‌ಗಳನ್ನು ಹೊಂದಿರುವ ಸ್ನೇಹಿತರ ಗುಂಪು ಸಿಎನ್‌ಜಿ ಕಾರಿನಲ್ಲಿ ರಸ್ತೆ ಪ್ರವಾಸವನ್ನು ಹೇಗೆ ಮಾಡಬಹುದು ಎಂದು ಕೇಳುತ್ತಿರುವಾಗ ಮತ್ತೊಂದು Altroz ​​iCNG ಚಲಿಸುತ್ತದೆ.

ನಂತರ ವೈರ್‌ಲೆಸ್ ಚಾರ್ಜರ್, ವಾಯ್ಸ್-ಸಕ್ರಿಯಗೊಳಿಸಿದ ಸನ್‌ರೂಫ್ ಮತ್ತು ಏರ್ ಪ್ಯೂರಿಫೈಯರ್‌ನಂತಹ ಹೆಚ್ಚುವರಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತದೆ. ಹೊಸ ಆಲ್ಟ್ರೊಜ್ iCNG ಕಾರು XE, XM+, XM+ (S), XZ, XZ+ (S), ಮತ್ತು XZ+ O (S) ಎಂಬ ಆರು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ XE ಬೇಸ್ ವೆರಿಯೆಂಟ್ ಆದರೆ, XZ+ O (S) ಟಾಪ್-ಸ್ಪೆಕ್ ಆಗಿದೆ. ಇದು ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ ನೀಡಲಾಗುವ ಮೊದಲ CNG ಹ್ಯಾಚ್‌ಬ್ಯಾಕ್ ಆಗಿದೆ.

ಇನ್ನು ಈ ಕಾರಿನ XZ+ O (S) ಟಾಪ್-ಸ್ಪೆಕ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.55 ಲಕ್ಷವಾಗಿದೆ. ಇನ್ನು ಹೊಸ ಟಾಟಾ ಆಲ್ಟ್ರೊಜ್ iCNG ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯನ್ನು ಹೊಂದಿದೆ. ಹೆಚ್ಚು ಕೈಗೆಟುಕುವ ಕಾರುಗಳ ಬ್ರ್ಯಾಂಡ್ ಎಂದೇ ಜನಪ್ರಿಯವಾದ ಮಾರುತಿ ಸುಜುಕಿಯ ಬಲೆನೊ ಸಿಎನ್‌ಜಿ ಕಾರಿನ ಬೆಲೆಯು ರೂ.8.35 ಲಕ್ಷದಿಂದ ರೂ.9.28 ಲಕ್ಷವಾಗಿದೆ.

ಸ್ಟ್ಯಾಂಡರ್ಡ್ ಆಲ್ಟ್ರೊಜ್ ಕಾರಿನ ಬೂಟ್ ಸ್ಪೇಸ್ 345 ಲೀಟರ್‌ ಗಳಾಗಿದೆ. ಇದನ್ನು ಸಿಎನ್‌ಜಿ ಕಾರಿಗೆ ಹೋಲಿಸಿದರೆ 135 ಲೀಟರ್ ಹೆಚ್ಚು ಇದೆ, ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, ಟಾಟಾ ಆಲ್ಟ್ರೊಜ್ iCNG, ನ್ಯಾಚುರಲ್ ಆಸ್ಪೈರ್ಡ್, CNG-ಹೊಂದಾಣಿಕೆಯ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ CNG ಮೋಡ್‌ನಲ್ಲಿ 72.5bhp ಪವರ್ ಮತ್ತು 103Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪೆಟ್ರೋಲ್ ಮೋಡ್‌ನಲ್ಲಿ, ಈ ಎಂಜಿನ್ 85bhp ಮತ್ತು 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಸಿಎನ್‌ಜಿ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದ ಭಾರತದ ಏಕೈಕ ಹ್ಯಾಚ್‌ಬ್ಯಾಕ್ ಈ ಟಾಟಾ ಆಲ್ಟ್ರೋಜ್ ಆಗಿದೆ. ಆಲ್ಟ್ರೋಜ್ ಸಿಎನ್‌ಜಿಯು ಮಾರುತಿ ಬಲೆನೊ ಸಿಎನ್‌ಜಿ ಮತ್ತು ಟೊಯೊಟಾ ಗ್ಲಾಂಝಾ ಸಿಎನ್‌ಜಿಯಷ್ಟು ಪವರ್ ಫುಲ್ ಆಗಿದೆ.

Article Published On: Saturday, May 27, 2023, 11:36 [IST]
English summary
Tata altroz icng new tvc out details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+