ಕಾರು ಮಾರಾಟದಲ್ಲಿ ಹ್ಯುಂಡೈ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಟಾಟಾ ಮೋಟಾರ್ಸ್

ಭಾರತದಲ್ಲಿ ಮಾರುತಿ ಸುಜುಕಿ, ಹ್ಯುಂಡೈ ಕಾರುಗಳೊಂದಿಗೆ ಸ್ಪರ್ಧಿಸುವ ದೇಶದ ಪ್ರಮುಖ ವಾಹನ ತಯಾರಕರಲ್ಲಿ ಟಾಟಾ ಮೋಟಾರ್ಸ್ ಒಂದಾಗಿದೆ. ಇನ್ನು ಇತ್ತೀಚೆಗೆ ಟಾಟಾ ಕಾರುಗಳು ಉತ್ತಮ ಬೇಡಿಕೆಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಈ ನಡುವೆ 2022ರ ಡಿಸೆಂಬರ್ ತಿಂಗಳಿನ ಮಾರಾಟದ ಅಂಕಿಅಂಶಗಳನ್ನು ಬಹಿರಂಗ ಪಡಿಸಿದೆ.

2022ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಹ್ಯುಂಡೈ ಕಂಪನಿಯನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 2022ರ ಡಿಸೆಂಬರ್ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಯಾಣಿಕ ಕಾರುಗಳ 40,043 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ, ಇದರ ಪರಿಣಾಮವಾಗಿ ವರ್ಷಕ್ಕೆ 13.4 ರಷ್ಟು ಮಾರಾಟದ ಬೆಳವಣಿಗೆಯಾಗಿದೆ. ಇದನ್ನು ಹೋಲಿಸಿದರೆ, ಹ್ಯುಂಡೈ ಕಂಪನಿಯು ಅದೇ ಸಮಯದಲ್ಲಿ ತನ್ನ ಪ್ರಯಾಣಿಕ ಕಾರುಗಳ ಕೇವಲ 38,831 ಯುನಿಟ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ.

ಕಾರು ಮಾರಾಟದಲ್ಲಿ ಹ್ಯುಂಡೈ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಟಾಟಾ ಮೋಟಾರ್ಸ್

2022ರ ಡಿಸೆಂಬರ್ ತಿಂಗಳಿನಲ್ಲಿ ಟಾಟಾ ಮೋಟಾರ್ಸ್‌ನ ತಿಂಗಳಿನಿಂದ ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಶೇಕಡಾ 13 ರಷ್ಟು ಕುಸಿದಿದೆ. 2022ರ ನವೆಂಬರ್ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 46,037 ಯುನಿಟ್ ಪ್ರಯಾಣಿಕ ಕಾರುಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದ್ದರು. ನವೆಂಬರ್ ತಿಂಗಳಿನಲ್ಲಿ ಹಬ್ಬದ ಸೀಸನ್ ಆಗಿರುವುದರಿಂದ ಬಲವಾದ ಮಾರಾಟದ ಕಾರ್ಯಕ್ಷಮತೆಯನ್ನು ಪಡೆದುಕೊಂಡಿತು. ಆದರೆ ಡಿಸೆಂಬರ್ ತಿಂಗಳಿನಲ್ಲಿ ವರ್ಷದ ಕೊನೆಯ ತಿಂಗಳು ಆಗಿರುವುದರಿಂದ ಮಾರಾಟದಲ್ಲಿ ಕುಂಚ ಕುಸಿತವಾಗಿದೆ.ಆದರೂ ಉತ್ತಮ ಯೋಗ್ಯ ಸಂಖ್ಯೆಯ ಮಾರಾಟವನ್ನು ಕಂಡಿದೆ.

ಒಟ್ಟಾರೆ ಮಾರಾಟದ ಅಂಕಿಅಂಶಗಳನ್ನು ನೋಡಿದರೆ, 2022 ರಲ್ಲಿ ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕ ಕಾರುಗಳ ಒಟ್ಟು 5,26,819 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇದಲ್ಲದೆ, ಟಾಟಾ ಮೋಟಾರ್ಸ್ ಕಂಪನಿಯು ಕೇವಲ ಮಾರಾಟ ಮಾಡುವಲ್ಲಿ ಯಶಸ್ವಿಯಾದ ಕಾರಣ ಭಾರತೀಯ ಕಾರು ತಯಾರಕರು ಮಾರಾಟ ಬೆಳವಣಿಗೆಯಲ್ಲಿ ಶೇಕಡಾ 59 ರಷ್ಟು ಹೆಚ್ಚಳವನ್ನು ಕಂಡಿದ್ದಾರೆ. 2021 ರಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಕಾರುಗಳ 3,31,181 ಯುನಿಟ್‌ ಗಳನ್ನು ಮಾರಾಟವಾಗಿವೆ.

2022 ರ ವರ್ಷವನ್ನು ತ್ರೈಮಾಸಿಕಗಳಾಗಿ ವಿಂಗಡಿಸಿ, ಮೂರನೇ ತ್ರೈಮಾಸಿಕವು ಟಾಟಾ ಮೋಟಾರ್ಸ್‌ಗೆ ಪ್ರಬಲವಾದ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಏಕೆಂದರೆ ಟಾಟಾ ಮೋಟಾರ್ಸ್ ಕಂಪನಿಯು ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ 1,42,331 ಯುನಿಟ್ ಕಾರುಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ. ಎರಡನೇ ತ್ರೈಮಾಸಿಕದಲ್ಲಿ 102 ಪ್ರತಿಶತದಷ್ಟು ಹೆಚ್ಚಿನ ಮಾರಾಟದ ಬೆಳವಣಿಗೆಯನ್ನು ಕಂಡಿತು, ಎರಡನೇ ತ್ರೈಮಾಸಿಕದಲ್ಲಿ ಟಾಟಾ ಕಂಪನಿಯು ತನ್ನ 1,30,130 ಯುನಿಟ್ ಕಾರುಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ತನ್ನ ಪಾರುಪತ್ಯವನ್ನು ಮುಂದುವರೆಸುತ್ತಿದ್ದಾರೆ. ದೇಶದಲ್ಲಿ ಇಂಧನ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದ್ದಾರೆ. ಇದರಿಂದ ಜನರು ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಈ ವೇಳೆ ಟಾಟಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ.

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಟಾಟಾ ಮೋಟಾರ್ಸ್ ಪ್ರಸ್ತುತ ತಮ್ಮ ಸಾಲಿನಲ್ಲಿ ಮೂರು ಮಾದರಿಗಳನ್ನು ಹೊಂದಿದ್ದಾರೆ. ಶೀಘ್ರದಲ್ಲೇ ಹೆಚ್ಚಿನ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಯೊಂದಿಗೆ ಪ್ರಯಾಣಿಕ ಇವಿ ವಿಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಗುರುತಿಸುತ್ತದೆ. ಆಟೋ ತಯಾರಕರು ಇತ್ತೀಚೆಗೆ ತನ್ನ 50,000ನೇ ಇವಿಯನ್ನು ವಿತರಿಸಿದ್ದಾರೆ. ಟಾಟಾ ಗ್ರೂಪ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರಿಗೆ ಈ 50,000ನೇ ಎಲೆಕ್ಟ್ರಿಕ್ ಕಾರನ್ನು ವಿತರಿಸಲಾಗಿದೆ.

ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನಗಳ ವಿಭಾಗಕ್ಕೆ ಟಾಟಾ ನೆಕ್ಸಾನ್ ಇವಿಯು ಹೆಚ್ಚಿನ ಕೊಡುಗೆಯನ್ನು ನೀಡಿದೆ. ಇದರ ಮಾರಾಟವು ತಿಂಗಳ ಆರಂಭದಲ್ಲಿ 35 ಸಾವಿರ ಯುನಿಟ್ ಮಾರ್ಕ್ ಅನ್ನು ಮೀರಿದೆ. ಸದ್ಯಕ್ಕೆ, ಸಮಯೋಚಿತ ಶೈಲಿಯಲ್ಲಿ ಎಲೆಕ್ಟ್ರಿಕ್ ರೂಪಾಂತರಗಳನ್ನು ಪರಿಚಯಿಸುವ ಮೂಲಕ ಅದರ ಪ್ರಸ್ತುತ ಪೋರ್ಟ್‌ಫೋಲಿಯೊದ ವ್ಯಾಪ್ತಿಯನ್ನು ಗರಿಷ್ಠಗೊಳಿಸಲು ಇದು ಉತ್ತಮವಾಗಿದೆ. ಟಾಟಾ ಟಿಗೋರ್ ಇವಿ ಕೂಡ ಕೆಲವು ವರ್ಷಗಳಿಂದ ಲಭ್ಯವಿದೆ. ಇತ್ತೀಚೆಗಷ್ಟೇ, ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿತು.

Most Read Articles

Kannada
English summary
Tata motors overtakes hyundai december 2022 sales figures out details
Story first published: Monday, January 2, 2023, 13:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X