ಎರಡು ವರ್ಷವು ಕಳೆದಿಲ್ಲ.. ನೆನಪಿಟ್ಟುಕೊಳ್ಳುವ ಇತಿಹಾಸ ನಿರ್ಮಿಸಿದ ಜನಪ್ರಿಯ 'Tata ಪಂಚ್'

ಭಾರತದಲ್ಲಿ ಟಾಟಾ ಕಂಪನಿ ಕಾರುಗಳು ವಿಶ್ವಾಸಾರ್ಹತೆಗೆ ಹೆಸರುವಾಸಿ. ಅದರಲ್ಲೂ ಗ್ರಾಹಕರ ಕೈಗೆಟುವ ಬೆಲೆಯಲ್ಲಿ ಖರೀದಿಗೆ ದೊರೆಯುವ ಮೈಕ್ರೋ ಎಸ್‌ಯುವಿ ಪಂಚ್ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದೆ. ಅದರ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಕ್ಕೆ ಮನಸೋಲದವರೇ ಇಲ್ಲ. ಇದೀಗ, ಈ ಕಾರಿನ ಉತ್ಪಾದನೆಯಲ್ಲಿ ಟಾಟಾ ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಿಸಿದೆ.

ಪಂಚ್ ಜನಪ್ರಿಯತೆ ಎಷ್ಟಿದೆ ಅಂದ್ರೆ ಕಂಪನಿಯ ಅತಿಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಕೂಡ ಸ್ಥಾನಗಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 2021ರಲ್ಲಿ ಈ ಮೈಕ್ರೋ ಎಸ್‌ಯುವಿಯನ್ನು ಟಾಟಾ ಬಿಡುಗಡೆ ಮಾಡಿತ್ತು. ಸದ್ಯ, ಎರಡು ವರ್ಷ ಕಳೆಯುವುದರಲ್ಲಿ ಬರೋಬ್ಬರಿ 2 ಲಕ್ಷ ಯುನಿಟ್‌ ಉತ್ಪಾದಿಸಿದೆ. ಪುಣೆಯಲ್ಲಿರುವ ತನ್ನ ಫ್ಯಾಕ್ಟರಿಯಲ್ಲಿ ಅದರ ಸಂಭ್ರಮಾಚರಣೆಯನ್ನು ಮಾಡಿದ್ದು, ಆ ಚಿತ್ರಗಳನ್ನು ಹಂಚಿಕೊಂಡಿದೆ.

ಎರಡು ವರ್ಷವು ಕಳೆದಿಲ್ಲ.. ನೆನಪಿಟ್ಟುಕೊಳ್ಳುವ ಇತಿಹಾಸ ನಿರ್ಮಿಸಿದ ಜನಪ್ರಿಯ Tata ಪಂಚ್

2022ರ ಆಗಸ್ಟ್ ನಲ್ಲಿ ಒಂದು ಲಕ್ಷ ಯುನಿಟ್ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿತ್ತು. ಜೊತೆಗೆ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಎಸ್‌ಯುವಿ ಪಟ್ಟಿಯಲ್ಲಿ ಪಂಚ್ ಮೂರನೇ ಸ್ಥಾನದಲ್ಲಿದ್ದು, ಕಳೆದ ಏಪ್ರಿಲ್ ತಿಂಗಳಲ್ಲಿ ಕಂಪನಿ, 10,934 ಯುನಿಟ್ ಸೇಲ್ ಮಾಡಿದೆ. ಇದರ ಬೆಲೆ ಬಗ್ಗೆ ಮಾತನಾಡುವುದಾದರೆ, ಇದು ಅತ್ಯಂತ ಕೈಗೆಟುಕುವ ದರದ ಕಾರಾಗಿದ್ದು, ರೂ.6 ಲಕ್ಷದಿಂದ ರೂ.9.52 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಟಾಟಾ ಪಂಚ್ ಗ್ರಾಹಕರನ್ನು ಆಕರ್ಷಿಸುವ ವಿನ್ಯಾಸ ಹೊಂದಿದೆ. ಪ್ರಮುಖವಾಗಿ ಫ್ರಂಟ್ ಸಿಗ್ನೇಚರ್ ಗ್ರಿಲ್ ಪಡೆದಿದ್ದು, ಎರಡು ಬದಿಯಲ್ಲಿ ಹೆಡ್‌ಲೈಟ್ ಇದ್ದು, ಅದರ ಕೆಳಗೆ ಫಾಗ್ ಲೈಟ್ ಹಾಕಲಾಗಿದೆ. ಸೈಡ್ ಪ್ರೊಫೈಲ್ ಫೋರ್ - ಸ್ಪೋಕ್ 16 ಇಂಚಿನ ಅಲಾಯ್ ವೀಲ್ಸ್, ORVMಗಳಲ್ಲಿ ಟರ್ನ್ ಇಂಡಿಕೇಟರ್ ಪಡೆಯುವ ಮೂಲಕ ಅತ್ಯಾಧುನಿಕವಾಗಿದೆ ಎಂದು ಹೇಳಿದಾದರೆ ತಪ್ಪಾಗುವುದಿಲ್ಲ.

ಇದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.2-ಲೀಟರ್, 3-ಸಿಲಿಂಡರ್, ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, 85 bhp ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದ್ದು, 18.8 - 20.09 kmpl ಮೈಲೇಜ್ ನೀಡಲಿದೆ.

ಟಾಟಾ ಪಂಚ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದಲ್ಲೂ ಇದು ಅತ್ಯುತ್ತಮ ಕಾರೆಂದು ಹೇಳಬಹುದಾಗಿದೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಳಿಸಿದ್ದು, ಹಲವು ಸುರಕ್ಷತಾ ಫೀಚರ್ಸ್ ಅನ್ನು ಹೊಂದಿದೆ.

ಇನ್ನು, ಟಾಟಾ ಪಂಚ್ ಕೈಗೆಟುಕುವ ಬೆಲೆಯ ಕಾರಾಗಿರುವುದರಿಂದ ಈ ಮಟ್ಟಿಗೆ ಯಶಸ್ಸು ಪಡೆಯಲು ಸಾಧ್ಯವಾಗಿದೆ. ಜೊತೆಗೆ ಉತ್ತಮ ಕಾರ್ಯಕ್ಷಮತೆ ಹಾಗೂ ಅತ್ಯಾಕರ್ಷಕ ವಿನ್ಯಾಸ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗಿದೆ. ಮುಂಬರುವ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಕಂಪನಿ, ಇದರ CNG ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದು, ರೂ.8.45 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ನಿಮ್ಮ ಸ್ನೇಹಿತ ಜೊತೆಗೂ ಶೇರ್ ಮಾಡಿ.

Article Published On: Sunday, May 14, 2023, 8:30 [IST]
English summary
Tata punch micro suv crosses 2 lakh units production milestone details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+