7 ಲಕ್ಷದೊಳಗೆ ಹೊಸ ಮಾರುತಿ ಕಾರು ಬಿಡುಗಡೆಗೆ ಸಜ್ಜು... 25 ಕಿ.ಮೀ ಮೈಲೇಜ್, 6 ಏರ್‌ಬ್ಯಾಗ್‌!

ಭಾರತದಲ್ಲಿ 2024ರ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆಯಾಗಿದೆ, ಆದ್ರೆ ಹೊಸ ಜೆನ್ ಡಿಜೈರ್ ಬಿಡುಗಡೆ ಬಗ್ಗೆ ಯಾವುದೆ ಮಾಹಿತಿಯನ್ನು ಕಂಪನಿ ಬಿಟ್ಟುಕೊಟ್ಟಿಲ್ಲ. ಆದ್ರೆ ಇತ್ತೀಚೆಗೆ ಡಿಜೈರ್ ಬಿಡುಗಡೆ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಅಕ್ಟೋಬರ್ 15ರಂದು ಕಾರು ಬಿಡುಗಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಮುಂಬರಲಿರುವ ಡಿಜೈರ್ ಹೊಸ ನವೀಕರಣ ಹಾಗೂ ಹಲವು ಅಪ್‌ಡೇಟ್‌ಗಳನ್ನು ನೀಡುತ್ತಿರುವ ಕಾರಣ ತಡವಾಗುತ್ತಿರುವುದಾಗಿ ತಿಳಿದುಬಂದಿದೆ. ಇತ್ತೀಚೆಗೆ ಟೆಸ್ಟಿಂಗ್ ಮಾಡುವಾಗ ಡಿಜೈರ್‌ನಲ್ಲಿ ಸನ್‌ರೂಫ್ ಇರುವುದು ಕಂಡುಬಂದಿದೆ. ಇಂತಹ ಹಲವು ವಿಶೇಷತೆಗಳೊಂದಿಗೆ ಬರಲಿರುವ ಹೊಸ ಡಿಜೈರ್ ಅಪ್‌ಡೇಟ್‌ಗಳನ್ನು ಇಲ್ಲಿ ನೋಡೋಣ.

ನಿರೀಕ್ಷಿತ ಬೆಲೆ: ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆಯು ರೂ. 6.49 ಲಕ್ಷದಿಂದ ರೂ.9.56 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಉತ್ತಮ ಸ್ಟೈಲಿಂಗ್, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಇದೇ ಆಸುಪಾಸಿನ ಬೆಲೆಯಲ್ಲಿ ಡಿಜೈರ್ ಕೂಡ ಬಿಡುಗಡೆಯಾಗಲಿದೆ.

2024-maruti-suzuki-dzire-expected-launch-price-details

ವಿನ್ಯಾಸ: ನವೀಕರಿಸಿದ ಹಾರ್ಟೆಕ್ಟ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿ, ಹೊಸ 2024 ಮಾರುತಿ ಡಿಜೈರ್ ನವೀಕರಿಸಿದ ಬಂಪರ್, ಕ್ಲಾಮ್ ಶೆಲ್ ಬಾನೆಟ್, ದೊಡ್ಡ ಮತ್ತು ಮರುವಿನ್ಯಾಸಗೊಳಿಸಿದ ಮುಂಭಾಗದ ಗ್ರಿಲ್, ಹೊಸ ಅಲಾಯ್ ವೀಲ್‌ಗಳು, ನವೀಕರಿಸಿದ ಬಾಗಿಲುಗಳು ಮತ್ತು ಪಿಲ್ಲರ್‌ಗಳೊಂದಿಗೆ ಬರಲಿದೆ. ಹಾಗೆಯೇ ಹೊಸ ಸ್ವಿಫ್ಟ್ ನಂತೆ, ಮುಂದಿನ ತಲೆಮಾರಿನ ಡಿಜೈರ್ ಅನ್ನು ಹೊಸ ಬಾಹ್ಯ ಬಣ್ಣ ಆಯ್ಕೆಗಳೊಂದಿಗೆ ನೀಡಬಹುದು.

ಸುರಕ್ಷತೆ: ಇದು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಐಸೊಫಿಕ್ಸ್ ಆಂಕರ್‌ಗಳು, 6 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಸಹ ಹೊಂದಿರಲಿದೆ. ಹೊಸ ಪವರ್‌ಟ್ರೇನ್ ನೊಂದಿಗೆ, ಈ ಕಾಂಪ್ಯಾಕ್ಟ್ ಸೆಡಾನ್ ಅನ್ನು ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುವುದು.

2024-maruti-suzuki-dzire-expected-launch-price-details

ಎಂಜಿನ್: ಹೊಸ ಸ್ವಿಫ್ಟ್‌ನಲ್ಲಿ ನೀಡಿರುವ ಅದೇ ಝಡ್-ಸೀರಿಸ್ 1.2 ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಡಿಜೈರ್‌ನಲ್ಲೂ ಇರಲಿದೆ. ಇದು ಎಎಂಟಿ ಆಯ್ಕೆಯಲ್ಲಿ 25.75 ಕಿ.ಮೀ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 24.8 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳುಕೊಂಡಿದೆ.

ಫೀಚರ್‌ಗಳು: ಹೊಸ 2024 ಮಾರುತಿ ಡಿಜೈರ್ ಸ್ಮಾರ್ಟ್ಫೋನ್ ಕನೆಕ್ಟಿವಿಟಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಹೊಸ ಸೀಟ್ ಅಪ್ಹೋಲ್ಸ್ಟರಿ, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ರಿಯರ್ ಎಸಿ ವೆಂಟ್ಸ್, ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಫ್ಲೋಟಿಂಗ್ 9-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ.

2024-maruti-suzuki-dzire-expected-launch-price-details

ಇವಿಷ್ಟೇ ಅಲ್ಲದೇ ಹಿಂಭಾಗದ ಕ್ಯಾಮೆರಾ, ಪುಶ್ ಬಟನ್ ಸ್ಟಾರ್ಟ್ / ಸ್ಟಾಪ್ ಮತ್ತು ಪವರ್ ಅಡ್ಜಸ್ಟ್ ಮಾಡಬಹುದಾದ ಮತ್ತು ಮಡಚುವ ವಿಂಗ್ ಮಿರರ್‌ಗಳನ್ನು ಪಡೆಯಲಿದೆ. ಬಿಡುಗಡೆ ಬಳಿಕ ಹೊಸ ಡಿಜೈರ್ ಕಾರು ಟಾಟಾ ಟಿಗೋರ್, ಹ್ಯುಂಡೈ ಔರಾ ಮತ್ತು ಹೋಂಡಾ ಅಮೇಜ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, August 20, 2024, 11:49 [IST]
English summary
2024 maruti suzuki dzire expected launch price details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+