'ಹಿಂದುಜಾ ಗ್ರೂಪ್'ನ ಸ್ವಿಚ್ ಮೊಬಿಲಿಟಿಯಿಂದ ವಾಣಿಜ್ಯ ಇವಿ ವಾಹನಗಳ ವಿತರಣೆ ಪ್ರಾರಂಭ
'ಹಿಂದುಜಾ ಗ್ರೂಪ್'ನ ಭಾಗವಾಗಿರುವ ಎಲೆಕ್ಟ್ರಿಕ್ ಬಸ್‌ಗಳು ಮತ್ತು ಲಘು ವಾಣಿಜ್ಯ ವಾಹನಗಳ ತಯಾರಕ 'ಸ್ವಿಚ್ ಮೊಬಿಲಿಟಿ', 1.25 ಟನ್ ಪೇಲೋಡ್ ವಿಭಾಗದಲ್ಲಿ ತನ್ನ ಬಹು ನಿರೀಕ್ಷಿತ ಸ್ವಿಚ್ ಐಇವಿ3 (SWITCH IeV3) ವಾಹನದ ಮೊದಲ ಡೆಲಿವರಿಯನ್ನು ನೀಡುವ ಮೂಲಕ, ಸುಸ್ಥಿರ ನಗರ ಲಾಜಿಸ್ಟಿಕ್ಸ್‌ನಲ್ಲಿ ಮಹತ್ವದ ಮೈಲಿಗಲ್ಲು ತಲುಪಿರುವುದಾಗಿ ಹೇಳಿದೆ. ಸ್ವಿಚ್ ಮೊಬಿಲಿಟಿಯ ಸಿಇಒ ಮಹೇಶ್ ಬಾಬು ಅವರು, ಗ್ರಾಹಕರಿಗೆ ಹೊಸ ಸ್ವಿಚ್ ಐಇವಿ3 ವಾಹನಗಳ ಕೀಗಳನ್ನು ಹಸ್ತಾಂತರಿಸಿದರು, ಸಾಟಿಯಿಲ್ಲದ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ನೀಡುವ ಅಸಾಧಾರಣ ಉತ್ಪನ್ನಗಳೊಂದಿಗೆ ಭಾರತದಲ್ಲಿ ಸುಸ್ಥಿರ ಚಲನಶೀಲತೆಯನ್ನು ಸುಗಮಗೊಳಿಸುವುದಾಗಿ ಹೇಳಿದರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರದರ್ಶಿಸಲಾದ SWITCH IeV3 ಅನ್ನು ಈ ತಿಂಗಳು ಹೊಸೂರಿನ ಉತ್ಪಾದನಾ ಘಟಕದಿಂದ ಹೊರತರಲಾಯಿತು. ಈಗ ಭಾರತದಲ್ಲಿ 30 ಡೀಲರ್‌ಶಿಪ್‌ಗಳಲ್ಲಿ ಈ ವಾಹನಗಳು ಖರೀದಿಗೆ ಲಭ್ಯವಿವೆ. SWITCH IeV4 ನ ಯಶಸ್ಸಿನ ನಂತರ, ಸ್ವಿಚ್ ಐಇವಿ3 ಮಾದರಿಯು SWITCH IeV ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿದೆ.

ಸ್ವಿಚ್ ಐಇವಿ3 ವಿಶೇಷತೆಗಳು: SWITCH IeV3 ಅತ್ಯುತ್ತಮ ಎಲೆಕ್ಟ್ರಿಕ್ ವಾಣಿಜ್ಯ ವಾಹನವಾಗಿದ್ದು, 25.6 kWh ಬ್ಯಾಟರಿ ಮತ್ತು 1,250 ಕೆ.ಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶಾಲವಾದ ಸರಕು ಪರಿಮಾಣದೊಂದಿಗೂ 140 ಕಿ.ಮೀ ರೇಂಜ್ ನೀಡುತ್ತದೆ. ಸುರಕ್ಷಿತ, ಆರಾಮದಾಯಕ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗಳನ್ನು ಖಾತ್ರಿಪಡಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಹೊಸ ಸ್ವಿಚ್ ಐಇವಿ3 ವಾಹನವು 40 kW ಮೋಟಾರ್ ಮತ್ತು 190 Nm ಟಾರ್ಕ್‌ನೊಂದಿಗೆ ಸಜ್ಜುಗೊಂಡಿದ್ದು, ಬಲವಾದ ಪರ್ಫಾಮೆನ್ಸ್ ಒದಗಿಸುತ್ತದೆ. ಹೆಚ್ಚುವರಿಯಾಗಿ ಸ್ವಿಚ್ ಐಯಾನ್ ಸಿಸ್ಟಮ್, ಸಂಪರ್ಕಿತ ತಂತ್ರಜ್ಞಾನ ಟೆಲಿಮ್ಯಾಟಿಕ್ಸ್ ಪರಿಹಾರ, ವಾಹನದ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಕಂಪನಿ ಹೇಳಿಕೊಂಡಿದೆ.
ಈ ಸುಧಾರಿತ ಟೆಲಿಮ್ಯಾಟಿಕ್ಸ್ ವ್ಯವಸ್ಥೆಯು ನೈಜ - ಸಮಯದ (ರಿಯಲ್ ಟೈಮ್) ಡೇಟಾ ಮತ್ತು ವಿಶ್ಲೇಷಣೆಗಳನ್ನು ಒದಗಿಸುತ್ತದೆ. ಚುರುಕಾದ ಮತ್ತು ಹೆಚ್ಚು ವೆಚ್ಚ ಪರಿಣಾಮಕಾರಿ ನಿರ್ವಹಣೆಗಾಗಿ ತಮ್ಮ ಫ್ಲೀಟ್ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅತ್ಯುತ್ತಮವಾಗಿಸಲು ವ್ಯಾಪಾರಗಳಿಗೆ ಅನುವು ಮಾಡಿಕೊಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
ಸ್ವಿಚ್ ಮೊಬಿಲಿಟಿಯ ಸಿಇಒ ಮಹೇಶ್ ಬಾಬು ಮಾತನಾಡಿ, "ಇಂದು ಜಗತ್ತು ಮಹತ್ವದ ಬದಲಾವಣೆಗೆ ಕಾರಣವಾಗುವ ಚಿಂತನಶೀಲ ನಿರ್ಧಾರಗಳೊಂದಿಗೆ ಹೆಚ್ಚು ಸುಸ್ಥಿರ ಭವಿಷ್ಯದತ್ತ ಸಾಮೂಹಿಕವಾಗಿ ಶ್ರಮಿಸುತ್ತಿದೆ. ಸ್ವಿಚ್ ಮೊಬಿಲಿಟಿ ಈ ಆಂದೋಲನವನ್ನು ಮುನ್ನಡೆಸಲು ಹೆಮ್ಮೆಪಡುತ್ತದೆ. ಈ ನಿಟ್ಟಿನಲ್ಲಿ SWITCH IeV3 ವಾಹನವನ್ನು ನಮ್ಮ ಮೌಲ್ಯಯುತ ಗ್ರಾಹಕರಿಗೆ ಹಸ್ತಾಂತರಿಸಲು ನಾವು ಸಂತೋಷಪಡುತ್ತೇವೆ ಎಂದರು.
ಈ ವಾಹನ ನಮ್ಮ ಗ್ರಾಹಕರ ಅವಸರಗಳಿಗೆ ಅನುಗಿಣವಾಗಿ ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಪರಿಹಾರಗಳನ್ನು ಒದಗಿಸುತ್ತದೆ. ಸುಧಾರಿತ ಬ್ಯಾಟರಿ ತಂತ್ರಜ್ಞಾನ, ಪ್ರಭಾವಶಾಲಿ ರೇಂಜ್ ಮತ್ತು ಉತ್ತಮ ವಿನ್ಯಾಸವನ್ನು ಹೊಂದಿದೆ. ಇದರ ಸ್ಪರ್ಧಾತ್ಮಕ ಬೆಲೆಯು ವ್ಯಾಪಕ ಶ್ರೇಣಿಯ ವ್ಯವಹಾರಗಳಿಗೆ ಒಂದು ಕಾರ್ಯತಂತ್ರದ ಆಯ್ಕೆಯಾಗಿದೆ, ಇದು ಸುಸ್ಥಿರ ಭವಿಷ್ಯಕ್ಕಾಗಿ ಬದಲಾವಣೆಯನ್ನು ವೇಗಗೊಳಿಸುತ್ತದೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








