ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

Written By:

ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಪೈಪೋಟಿ ಕಾವೇರುತ್ತಿದೆ. ಒಂದರ ಬಳಿಕ ಒಂದರಂತೆ ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಗಳು ತನ್ನ ನೂತನ ಅವತರಣಿಕೆಯೊಂದಿಗೆ ಮುಂದೆ ಬರುತ್ತಿದೆ.

ಕಳೆದ ದಿನವಷ್ಟೇ ಟಾಟಾ ಜೆಸ್ಟ್ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಇದರ ಬೆನ್ನಲ್ಲೇ ಬಹುನಿರೀಕ್ಷಿತ ಆಟೋ ಎಕ್ಸ್ ಪೋ ಆರಂಭಕ್ಕೆ ಒಂದು ದಿನ ಮಾತ್ರ ಬಾಕಿ ಉಳಿದಿರುವಂತೆಯೇ ದೇಶದ ನಂ.1 ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ, ತನ್ನ ನೂತನ ಎಕ್ಸ್‌ಸೆಂಟ್ (Xcent) ಕಾಂಪಾಕ್ಟ್ ಸೆಡಾನ್ ಕಾರನ್ನು ಭರ್ಜರಿಯಾಗಿ ಅನಾವರಣಗೊಳಿಸಿದೆ.

ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

ಗ್ರಾಂಡ್ ಐ10 ತಲಹದಿಯಲ್ಲಿ ನೂತನ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರು ನಿರ್ಮಾಣಗೊಂಡಿದೆ.

ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

ಇದು ನಾಲ್ಕು ಮೀಟರ್ ಉದ್ದ ಪರಿಮಿತಿಯೊಳಗೆ ನಿರ್ಮಾಣವಾಗಲಿರುವುದರಿಂದ ಸರಕಾರದಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗವಾಗುವುದಲ್ಲದೆ ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲು ಸಹಕಾರಿಯಾಗಲಿದೆ.

ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

ನೂತನ ಹ್ಯುಂಡೈ ಎಕ್ಸ್‌ಸೆಂಟ್ ಕಾರು, ಈಗಾಗಲೇ ಮಾರುಕಟ್ಟೆಯಲ್ಲಿ ಮಾರುತಿ ಡಿಜೈರ್, ಹೋಂಡಾ ಅಮೇಜ್ ಹಾಗೂ ಇನ್ನಷ್ಟೇ ಆಗಮನವಾಗಲಿರುವ ಟಾಟಾ ಜೆಸ್ಟ್ ಕಾರಿಗೆ ಪೈಪೋಟಿ ಒಡ್ಡಲಿದೆ.

ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

ಗ್ರಾಂಡ್ ಐ10 ಸೆಡಾನ್ ಎಂದೇ ಬಿಂಬಿತವಾಗಿರುವ ಎಕ್ಸ್‌ಸೆಂಟ್ ಸಬ್ ಫೋರ್ ಮೀಟರ್ ವಿಭಾಗದಲ್ಲಿ ಹ್ಯುಂಡೈನ ಮೊದಲ ಮಾದರಿಯೆನಿಸಲಿದೆ.

ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

ಇದು ಗ್ರಾಂಡ್ ಐ10ನಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ಕಪ್ಪ 2 ಪೆಟ್ರೋಲ್ ಹಾಗೂ 1.1 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

ಅಲ್ಲದೆ ಪೆಟ್ರೋಲ್‌ನಲ್ಲಿ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಡೀಸೆಲ್‌ನಲ್ಲಿ ಫೈವ್ ಸ್ಪೇಡ್ ಮ್ಯಾನುವಲ್ ಆಯ್ಕೆಯಿರಲಿದೆ.

ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

ಇನ್ನು ಕಾರಿನೊಳಗೂ ಗ್ರಾಂಡ್ ಐ10ನಲ್ಲಿರುವುದಕ್ಕೆ ಸಮಾನವಾದ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಇದು ಡಿಜೈರ್ ಮತ್ತು ಅಮೇಜ್ ಸವಾಲನ್ನು ಎದುರಿಸಲು ನೆರವಾಗಲಿದೆ.

ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

ನೂತನ ಕಾರಿನಲ್ಲಿ ಹಿಂದುಗಡೆ ಎಸಿ ವೆಂಟ್ಸ್, ಸ್ಮಾರ್ಟ್ ಕೀ ಫುಶ್ ಬಟನ್ ಎಂಟ್ರಿ ಆಂಡ್ ಸ್ಟಾರ್ಟ್, 15 ಇಂಚು ಅಲಾಯ್ ವೀಲ್, ಆಟೋ ಫೋಲ್ಡಿಂಗ್ ಎಲೆಕ್ಟ್ರಿಕ್ ಔಟ್‌ಸೈಡ್ ರಿಯರ್ ವ್ಯೂ ಮಿರರ್ ಸೌಲಭ್ಯವಿರಲಿದೆ.

ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

ಇನ್ನು ಸುರಕ್ಷತೆಗೂ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಎಬಿಎಸ್, ಡ್ಯುಯಲ್ ಏರ್ ಬ್ಯಾಗ್ ಮತ್ತು ರಿಯರ್ ಪಾರ್ಕಿಂಗ್ ಅಸಿಸ್ಟ್, ಸೆಂಟ್ರಲ್ ಲಾಕಿಂಗ್, ರಿಯರ್ ಡಿಫಾಗರ್ ಜತೆಗೆ ಇತರ ಅನೇಕ ವೈಶಿಷ್ಟ್ಯಗಳು ಲಭ್ಯವಿರಲಿದೆ.

ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

ಒಟ್ಟಿನಲ್ಲಿ ಹ್ಯುಂಡೈ ಎಕ್ಸ್‌ಸೆಂಟ್, ದೆಹಲಿ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಲಿದ್ದು, ತದಾಕ್ಷಣ ಮಾರಾಟ ಪ್ರಕ್ರಿಯೆಯೂ ಆರಂಭವಾಗಲಿದೆ.

ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

ವಿಶ್ವದರ್ಜೆಯ ಎಕ್ಸ್‌ಸೆಂಟ್ ಕಾರನ್ನು ಪ್ರಮುಖವಾಗಿ ಭಾರತ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಇದು ದೇಶದ ಗ್ರಾಹಕರತ್ತ ಹ್ಯುಂಡೈ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹ್ಯುಂಡೈ ಮೋಟಾರ್ಸ್ ಇಂಡಿಯಾ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಬಿಎಸ್ ಸಿಯೋ ಹೇಳಿದ್ದಾರೆ.

ದೆಹಲಿಯಲ್ಲಿ ಮೊಳಗಿದ ಹ್ಯುಂಡೈ ಎಕ್ಸ್‌ಸೆಂಟ್ ಕರೆ ಗಂಟೆ

ಮುಂದಿನ ಎರಡು ವರ್ಷಗಳಲ್ಲಾಗಿ ನಾಲ್ಕು ನೂತನ ಮಾದರಿಗಳನ್ನು ಲಾಂಚ್ ಮಾಡುವ ಹ್ಯುಂಡೈ ಸಂಸ್ಥೆಯ ಯೋಜನೆಯ ಅಂಗವಾಗಿ ಹೊಸ ಮಾದರಿ ಆಗಮನವಾಗಿದೆ. ಇದರಲ್ಲಿ ಕಾಂಪಾಕ್ಟ್ ಎಸ್‌ಯುವಿ ಕೂಡಾ ಸೇರಿರಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

 • ರಿಯರ್ ಎಸಿ ವೆಂಟ್ಸ್,
 • ಸ್ಮಾರ್ಟ್ ಕೀ ಫುಶ್ ಬಟನ್ ಸ್ಟಾರ್ಟ್,
 • ರಿಯರ್ ಪಾರ್ಕಿಂಗ್ ಕ್ಯಾಮೆರಾ ಆಂಡ್ ಸೆನ್ಸಾರ್,
 • 15 ಇಂಚು ಡೈಮಾಂಡ್ ಕಟ್ ಅಲಾಯ್ ವೀಲ್ಸ್,
 • 2 ಡಿನ್ ಆಡಿಯೋ ಜತೆ ಯುಎಸ್‌ಬಿ, ಸಿಡಿ ಪ್ಲೇಯರ್ ಜತೆ 1 ಜಿಬಿ ಇಂಟರ್ನಲ್ ಮೆಮರಿ,
 • ಆಟೋ ಫೋಲ್ಡಿಂಗ್ ಮಿರರ್,
 • ಎಲೆಕ್ಟ್ರೊ ಕ್ರೋಮ್ ಮಿರರ್,
 • ಒನ್ ಟಚ್ ಎಲೆಕ್ಟ್ರಿಕ್ ಟ್ರಂಕ್ ಓಪನಿಂಗ್
ಇತರ ವೈಶಿಷ್ಟ್ಯಗಳು

ಇತರ ವೈಶಿಷ್ಟ್ಯಗಳು

 • ಆಂಟಿಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
 • ರಿಯರ್ ಆರ್ಮ್ ರೆಸ್ಟ್ ಜತೆ ಕಪ್ ಹೋಲ್ಡರ್,
 • ಗ್ಲೋವ್ ಬಾಕ್ಸ್ ಕೂಲಿಂಗ್,
 • ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಮತ್ತು ಬ್ಲೂಟೂತ್,
 • ಡ್ಯುಯಲ್ ಏರ್ ಬ್ಯಾಗ್,
 • ರಿಯರ್ ಪಾರ್ಕಿಂಗ್ ಅಸಿಸ್ಟ್,
 • ರಿಯರ್ ಡಿಫಾಗರ್,
 • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್
Story first published: Tuesday, February 4, 2014, 15:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark