ಲಂಬೋರ್ಗಿನಿ ಹ್ಯುರಕನ್ ಭಾರತದಲ್ಲಿ ಭರ್ಜರಿ ಬಿಡುಗಡೆ

Posted By:

ಇಟಲಿಯ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ಲಂಬೋರ್ಗಿನಿ ಅತಿ ನೂತನ ಹ್ಯುರಕನ್ ಮಾದರಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬೆಲೆ ಎಷ್ಟು ಗೊತ್ತೇ? ಬರೋಬ್ಬರಿ 3.43 ಕೋಟಿ ರು.ಗಳಾಗಿರಲಿದೆ (ದೆಹಲಿ ಎಕ್ಸ್ ಶೋ ರೂಂ).

ಗರಿಷ್ಠ 681 ಅಶ್ವಶಕ್ತಿ ಉತ್ಪಾದಿಸಲು ಶಕ್ತವಾಗಿರುವ ಈ ದುಬಾರಿ ಕಾರು ವಿ10 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಐಕಾನಿಕ್ ಗಲರ್ಡೊ ಉತ್ತರಾಧಿಕಾರಿಯಾಗಿರುವ ಹ್ಯುರಕನ್ ದೇಶದ ಸೂಪರ್ ಕಾರು ಮಾರುಕಟ್ಟೆಯಲ್ಲಿ ಹೊಸ ಅಲೆಯೆಬ್ಬಿಸಲಿದೆ.

ಲಂಬೋರ್ಗಿನಿ ಹ್ಯುರಕನ್ ಭಾರತದಲ್ಲಿ ಭರ್ಜರಿ ಬಿಡುಗಡೆ

5.2 ಲೀಟರ್ ವಿ10 ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಲಂಬೋರ್ಗಿನ್ ಹ್ಯುರಕನ್, 618 ಪಿಎಸ್ ಪವರ್ (560 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಸೆವನ್ ಸ್ಪೇಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಸಹ ಪಡೆದುಕೊಂಡಿದೆ.

ಲಂಬೋರ್ಗಿನಿ ಹ್ಯುರಕನ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಸಂಸ್ಥೆಯ ಪ್ರಕಾರ ಹೊಸ ಲಂಬೋರ್ಗಿನಿ ಕಾರು ಕೇವಲ 3.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಅಂತೆಯೇ ಗಂಟೆಗೆ ಗರಿಷ್ಠ 325 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಲಂಬೋರ್ಗಿನಿ ಹ್ಯುರಕನ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಆಲ್ ವೀಲ್ ಡ್ರೈವ್ ವ್ಯವಸ್ಥೆಯೊಂದಿಗೆ ಆಗಮನವಾಗಿರುವ ಹೊಸ ಲಂಬೋರ್ಗಿನಿ ಹೆಚ್ಚು ಹಗುರ, ಶಕ್ತಿಶಾಲಿ ಎನಿಸಿಕೊಂಡಿದೆ. ಅಂತೆಯೇ ಮುಂದಿನ ವರ್ಷ ರಿಯರ್ ವೀಲ್ ಡ್ರೈವ್ ಆಗಮನವಾಗುವ ಸಾಧ್ಯತೆಯಿದೆ.

ಲಂಬೋರ್ಗಿನಿ ಹ್ಯುರಕನ್ ಭಾರತದಲ್ಲಿ ಭರ್ಜರಿ ಬಿಡುಗಡೆ

ವರದಿಗಳ ಪ್ರಕಾರ ಲಂಬೋರ್ಗಿನಿ ಹ್ಯುರಕನ್ ಸೂಪರ್ ಕಾರಿಗೆ ದೇಶದ ಹೈ ಎಂಡ್ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ವಿತರಣೆ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

ಲಂಬೋರ್ಗಿನಿ ಹ್ಯುರಕನ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಲಂಬೋರ್ಗಿನಿ ಹ್ಯುರಕನ್ ಸೂಪರ್ ಕಾರು ಜಿನೆವಾ ಮೋಟಾರು ಶೋದಲ್ಲಿ ಬಿಡುಗಡೆಯಾಗಿದ್ದ ಬೆನ್ನಲ್ಲೇ 700ರಷ್ಟು ಬುಕ್ಕಿಂಗ್ ಗಿಟ್ಟಿಸಿಕೊಂಡಿತ್ತು. ಭಾರತದಲ್ಲೂ ಇಟಲಿಯ ಈ ಸೂಪರ್ ಕಾರು ನಿರೀಕ್ಷೆ ಮಾಡಿದಕ್ಕಿಂತಲೂ ಹೆಚ್ಚು ಆರ್ಡರ್‌ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಲಂಬೋರ್ಗಿನಿ ಹ್ಯುರಕನ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಅಂದ ಹಾಗೆ ಹೊಸ ಲಂಬೋರ್ಗಿನಿ ಐಷಾರಾಮಿ ಕಾರು, ಫೆರಾರರಿ 458, ಪೋರ್ಷೆ 911 ಟರ್ಬೊ, ಆಡಿ ಆರ್8 ವಿ10+ ಮತ್ತು ಆಸ್ಟನ್ ಮಾರ್ಟಿನ್ ವಾಂಗ್ವಿಷ್ ಮಾದರಿಗಳಿಗೆ ಕಠಿಣ ಪೈಪೋಟಿ ಒಡ್ಡಲಿದೆ.

ಲಂಬೋರ್ಗಿನಿ ಹ್ಯುರಕನ್ ಭಾರತದಲ್ಲಿ ಭರ್ಜರಿ ಬಿಡುಗಡೆ

ದೇಶದಲ್ಲಿ 2011ನೇ ಸಾಲಿನಲ್ಲಿ 14 ಸೂಪರ್ ಕಾರುಗಳನ್ನು ಮಾರಾಟ ಲಂಬೋರ್ಗಿನಿ, 2012 ಹಾಗೂ 2013ರಲ್ಲಿ ಅನುಕ್ರಮವಾಗಿ 17 ಹಾಗೂ 22 ಯುನಿಟ್‌ಗಳನ್ನು ಮಾರಾಟಗೈದಿತ್ತು. ಪ್ರಸಕ್ತ ಸಾಲಿನಲ್ಲಿ ಹ್ಯುರಕನ್ ಬಿಡುಗಡೆಯೊಂದಿಗೆ ಈ ಸಂಖ್ಯೆಯನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

 

English summary
The Italian automobile manufacturer Lamborghini has launched the Huracan in India at Rs 3.43 crore (ex-showroom, Delhi).

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark