ಮುಂದಿನ ಜನಾಂಗದ ಲ್ಯಾಂಡ್ ರೋವರ್ ಇನ್ನು ಮುಂದಕ್ಕೆ!

Written By:

ಕಳೆಗುಂದಿರುವ ಡಿಫೆಂಡರ್ ಆವೃತ್ತಿಯನ್ನು ಬದಲಾಯಿಸುವ ಲ್ಯಾಂಡ್ ರೋವರ್ ಯೋಜನೆ ಇನ್ನು ಸ್ವಲ್ಪ ಮುಂದೂಡಲ್ಪಟ್ಟಿದೆ. ಭವಿಷ್ಯದಲ್ಲಿ ಡಿಫೆಂಡರ್ ಬದಲಾವಣೆ ಆವೃತ್ತಿಯಾಗಿ ಪರಿಗಣಿಸಲ್ಪಟ್ಟಿದ್ದ ಡಿಸಿ100 2011ರಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತ್ತು. ಇದೀಗ 2015ರ ವೇಳೆಗೆ ಪರಿಚಯಿಸುವುದಾಗಿ ಲ್ಯಾಂಡ್ ರೋವರ್ ಘೋಷಿಸಿದೆ. ಹಾಗಾಗಿ ಗ್ರಾಹಕರು ಇನ್ನು ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಪ್ರಾಥಮಿಕ ಮಾಹಿತಿ ಅನುಸಾರವಾಗಿ ಭಾರತದಲ್ಲಿ ಡಿಫೆಂಡರ್ ಉತ್ಪಾದನೆಯಾಗಬೇಕಿತ್ತಲ್ಲದೆ ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪ್ರವೇಶ ಪಡೆಯಬೇಕಾಗಿತ್ತು. ಆದರೆ ಸದ್ಯ ಕಂಡುಬಂದಿರುವ ಬೆಳವಣಿಗೆಯು ಇದಕ್ಕೆ ಪೂರಕವಾಗಿಲ್ಲ.

ಏನೇ ಆದರೂ ಈಗ ಮಾರುಕಟ್ಟೆಯಲ್ಲಿರುವ ಡಿಫೆಂಡರ್ 2015ರಲ್ಲಿ ನಿವೃತ್ತಿ ಪಡೆಯುವುದು ಖಚಿತವಾಗಿದೆ. ಹಾಗಿದ್ದರೂ ಹೊಸ ಆವೃತ್ತಿ ಅನಾವರಣಕ್ಕೆ ವಿಳಂಬವಾಗುತ್ತಿರುವುದರ ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಮೂಲಗಳ ಪ್ರಕಾರ ನೂತನ ಡಿಫೆಂಡರ್ ಕೂಡಾ ಪ್ರೀಮಿಯಂ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಕಾಣಿಸಿಕೊಳ್ಳಲಿದೆ. ಆದರೆ ಭಾರತೀಯ ಕಾರು ಖರೀದಿ ದೃಷ್ಟಿಕೋನದಿಂದ ಇದು ಉತ್ತಮ ಬೆಳವಣಿಗೆಯಲ್ಲ.

ಲ್ಯಾಂಡ್ ರೋವರ್ ಡಿಸಿ100 ಕಾನ್ಸೆಪ್ಟ್

ಲ್ಯಾಂಡ್ ರೋವರ್ ಡಿಸಿ100 ಕಾನ್ಸೆಪ್ಟ್

ಲ್ಯಾಂಡ್ ರೋವರ್ ಡಿಸಿ100 ಕಾನ್ಸೆಪ್ಟ್

ಲ್ಯಾಂಡ್ ರೋವರ್ ಡಿಸಿ100 ಕಾನ್ಸೆಪ್ಟ್

ಲ್ಯಾಂಡ್ ರೋವರ್ ಡಿಸಿ100 ಕಾನ್ಸೆಪ್ಟ್

ಲ್ಯಾಂಡ್ ರೋವರ್ ಡಿಸಿ100 ಕಾನ್ಸೆಪ್ಟ್

ಲ್ಯಾಂಡ್ ರೋವರ್ ಡಿಸಿ100 ಕಾನ್ಸೆಪ್ಟ್

ಲ್ಯಾಂಡ್ ರೋವರ್ ಡಿಸಿ100 ಕಾನ್ಸೆಪ್ಟ್

ಲ್ಯಾಂಡ್ ರೋವರ್ ಡಿಸಿ100 ಕಾನ್ಸೆಪ್ಟ್

ಲ್ಯಾಂಡ್ ರೋವರ್ ಡಿಸಿ100 ಕಾನ್ಸೆಪ್ಟ್

English summary
Land Rover's plan to replace the aging Defender with a new model has been delayed. The DC100 concept vehicle, one of the future replacements for the Defender was showcased in 2011, with Land Rover revealing its plan to introduce the new range by 2015. The new range will now certainly not come out in 2015.
Story first published: Thursday, May 23, 2013, 12:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark