50ರ ಸಂಭ್ರಮದಲ್ಲಿ ಐಕಾನಿಕ್ ಸ್ಕೋಡಾ 1000ಎಂಪಿ

Written By:

ಜಗತ್ತಿನ ಐಕಾನಿಕ್ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಕೋಡಾ, ಸರಿ ಸುಮಾರು 119 ವರ್ಷಗಳ ಹಿಂದೆಯೇ ವಾಹನ ನಿರ್ಮಾಣವನ್ನು ಆರಂಭಿಸಿತ್ತು. ಇದು ಸ್ಕೋಡಾ ಸಂಸ್ಥೆಗಷ್ಟೇ ಅಲ್ಲ ಬದಲಾಗಿ ಇಡಿ ವಾಹನೋದ್ಯಮದ ಪಾಲಿಗೆ ಅತಿದೊಡ್ಡ ಮೈಲುಗಲ್ಲಾಗಿದೆ.

ಇದರಂತೆ ಜೆಕ್ ಗಣರಾಜ್ಯದ ವಾಹನ ತಯಾರಕ ಸಂಸ್ಥೆಯ ಹೆಸರನ್ನು ಇನ್ನಷ್ಟು ಉತ್ತುಂಗಕ್ಕೇರಿಸಿದ್ದ 1000ಎಂಬಿ ಮಾದರಿಯು ಇದೀಗ 50ನೇ ವಸಂತಕ್ಕೆ ಕಾಲಿರಿಸಿದೆ.

50ರ ಸಂಭ್ರಮದಲ್ಲಿ ಐಕಾನಿಕ್ ಸ್ಕೋಡಾ 1000ಎಂಪಿ

ನಿಮ್ಮ ಮಾಹಿತಿಗಾಗಿ, ಇದುವರೆಗೆ ಸ್ಕೋಡಾ 1000 ಎಂಬಿ ಮಾದರಿಯು 4,43,000 ಯುನಿಟ್‌ಗಳಷ್ಟು ನಿರ್ಮಾಣವಾಗಿದೆ. ಇದು ಜಗತ್ತಿನಲ್ಲೆಡೆಯ ರಾಷ್ಟ್ರಗಳಿಗೆ ರಫ್ತುಗೊಂಡಿದ್ದವು.

50ರ ಸಂಭ್ರಮದಲ್ಲಿ ಐಕಾನಿಕ್ ಸ್ಕೋಡಾ 1000ಎಂಪಿ

ಅಂದಿನ ದಿನಗಳಲ್ಲಿ ನಿರ್ವಹಣೆ, ಆರಾಮದಾಯಕತೆ ಹಾಗೂ ತಂತ್ರಗಾರಿಕೆಯಲ್ಲಿ 1000 ಎಂಬಿ ಮುಂದುವರಿದ ಕಾರಾಗಿತ್ತು. ಈ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿತ್ತು.

50ರ ಸಂಭ್ರಮದಲ್ಲಿ ಐಕಾನಿಕ್ ಸ್ಕೋಡಾ 1000ಎಂಪಿ

ಸ್ಕೋಡಾ 1000 ಎಂಬಿ ಮಾದರಿಯಲ್ಲಿ ರಿಯರ್ ಎಂಜಿನ್ ಜತೆ ರಿಯರ್ ವೀಲ್ ಡ್ರೈವ್ ಕೂಡಾ ಲಭ್ಯವಿತ್ತು. ಅಂದಿನ ದಶಕದಲ್ಲಿ ಇದು ವಿಶಿಷ್ಟತೆಗೆ ಪಾತ್ರವಾಗಿತ್ತು.

50ರ ಸಂಭ್ರಮದಲ್ಲಿ ಐಕಾನಿಕ್ ಸ್ಕೋಡಾ 1000ಎಂಪಿ

ಜೆಕ್ ಗಣರಾಜ್ಯ ಮೂಲದ ಸ್ಕೋಡಾ ಆಳವಡಸಿರುವ ಗರಿಷ್ಠ ಎಂಜಿನಿಯರಿಂಗ್ ತಂತ್ರಜ್ಞಾನವೇ 1960ರ ದಶಕದಲ್ಲಿ 1000 ಎಂಪಿ ಯಶಸ್ಸಿಗೆ ಸ್ಪೂರ್ತಿಯಾಗಿತ್ತು.

50ರ ಸಂಭ್ರಮದಲ್ಲಿ ಐಕಾನಿಕ್ ಸ್ಕೋಡಾ 1000ಎಂಪಿ

ಕ್ಲಾಸಿಕ್ ಕಾರು ಸಂಗ್ರಹಗಳ ಪೈಕಿ ಮುಂಚೂಣಿಯಲ್ಲಿರುವ 1000 ಎಂಬಿ ಇಂದಿಗೂ ಐಕಾನಿಕ್ ಕಾರುಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.

50ರ ಸಂಭ್ರಮದಲ್ಲಿ ಐಕಾನಿಕ್ ಸ್ಕೋಡಾ 1000ಎಂಪಿ

ಅಷ್ಟಕ್ಕೂ ಈ ಐಕಾನಿಕ್ ಕಾರಿಗೆ 1000ಎಂಬಿ ಎಂಬ ಹೆಸರನ್ನಿಡಲು ಕಾರಣವೊಂದಿದೆ. ಅಂದರೆ ಇಲ್ಲಿ 1000 ಎಂಬುದು ಪ್ರಸ್ತುತ ಕಾಂಪಾಕ್ಟ್ ಕಾರಿನ 1.0 ಲೀಟರ್ ಎಂಜಿನ್ ಪ್ರತಿಬಿಂಬಿಸುತ್ತದೆ. ಇನ್ನು ಎಂಬಿ ಎಂಬುದು ಸ್ಕೋಡಾ ನೆಲೆಸಿರುವ ಹಾಗೂ ಅಂದು 1000ಎಂಬಿ ನಿರ್ಮಾಣವಾಗುತ್ತಿದ್ದ ಮ್ಲಾಡಾ ಬೊಲೆಸ್ಲಾವ್ (Mlada Boleslav) ಪ್ರದೇಶವನ್ನು ಉಲ್ಲೇಖಿಸುತ್ತದೆ.

ಸ್ಕೋಡಾ 1000 ಎಂಬಿ ವರ್ಷನ್‌ ಇಂತಿದೆ:

ಸ್ಕೋಡಾ 1000 ಎಂಬಿ ವರ್ಷನ್‌ ಇಂತಿದೆ:

100​0 ಎಂಬಿ ಸ್ಟಾಂಡರ್ಡ್, ಒಟ್ಟು ನಿರ್ಮಾಣ (ಯುನಿಟ್‌ಗಳಲ್ಲಿ) 350,174, ವರ್ಷ -​1964 - 1969,

​1000 ಎಂಬಿ ಡಿಲಕ್ಸ್ (De Luxe) ಒಟ್ಟು ನಿರ್ಮಾಣ (ಯುನಿಟ್‌ಗಳಲ್ಲಿ) 52,606, ವರ್, - 1966 - 1969,

​1100 ಎಂಬಿ ಡಿಲಕ್ಸ್, ಒಟ್ಟು ನಿರ್ಮಾಣ (ಯುನಿಟ್‌ಗಳಲ್ಲಿ) 22,490, ವರ್ಷ 1967 - 1969,

​1000 ಎಂಬಿಟಿ ಟೂರಿಸ್ಟ್, ಒಟ್ಟು ನಿರ್ಮಾಣ (ಯುನಿಟ್‌ಗಳಲ್ಲಿ) 13,091, ವರ್ಷ - 1968 - 1969,

​1000 ಎಂಬಿಜಿ ಡಿಲಕ್ಸ್, ಒಟ್ಟು ನಿರ್ಮಾಣ (ಯುನಿಟ್‌ಗಳಲ್ಲಿ) ​3,278, ವರ್ಷ ​1966 - 1968,

​1000 ಎಂಬಿಎಕ್ಸ್ ಡಿಲಕ್ಸ್, ಒಟ್ಟು ನಿರ್ಮಾಣ (ಯುನಿಟ್‌ಗಳಲ್ಲಿ) 1,403, ವರ್ಷ 1966 - 1968,

​1100 ಎಂಬಿಎಕ್ಸ್ ಡಿಲಕ್ಸ್, ಒಟ್ಟು ನಿರ್ಮಾಣ (ಯುನಿಟ್‌ಗಳಲ್ಲಿ) 1,114, ವರ್ಷ 1967 - 1969

ಒಟ್ಟು ಉತ್ಪಾದನೆ 443,156 ಯುನಿಟ್‌ ​

English summary
Skoda has been manufacturing cars for the world for almost 119 years. This is a great milestone achieved by any automobile manufacturer.
Story first published: Friday, March 21, 2014, 12:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark