ಟಾಟಾ ಕಾರುಗಳ ಸಾಲಿಗೆ ಬೋಲ್ಟ್, ಜೆಸ್ಟ್ ಸೇರ್ಪಡೆ

ಬಹುನಿರೀಕ್ಷಿತ 2014 ಇಂಡಿಯಾ ಆಟೋ ಎಕ್ಸ್ ಪೋ ಆರಂಭಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿರುವಂತೆಯೇ ದೇಶದ ಅತಿದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ರಾಷ್ಟ್ರ ರಾಜಧಾನಿಯಲ್ಲಿ ತನ್ನ ಹೊಸ ಅವತರಣಿಗಳನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಿದೆ.

ಫಾಲ್ಕನ್ 4 ಎಂದು ಕೋಡ್ ಪಡೆದುಕೊಂಡಿರುವ ಟಾಟಾ ಬೋಲ್ಟ್ ಹ್ಯಾಚ್‌ಬ್ಯಾಕ್ ಹಾಗೂ ಫಾಲ್ಕನ್ 5 ಸಬ್ ಫೋರ್ ಮೀಟರ್ ಜೆಸ್ಟ್ ಕಾಂಪಾಕ್ಟ್ ಕಾರನ್ನು ಟಾಟಾ ಅನಾವರಣಗೊಳಿಸಿದೆ. ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲೂ ಪ್ರದರ್ಶನ ಕಾಣಲಿರುವ ಈ ಮಾದರಿಗಳು ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಟಾಟಾ ಕಾರುಗಳ ಸಾಲಿಗೆ ಬೋಲ್ಟ್, ಜೆಸ್ಟ್ ಸೇರ್ಪಡೆ

ಸಂಸ್ಥೆಯ ಎಕ್ಸ್1 ತಲಹದಿಯಲ್ಲಿ ನಿರ್ಮಾಣವಾಗಿರುವ ಜೆಸ್ಟ್, ಪ್ರಮುಖವಾಗಿಯೂ ದೇಶದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಹೋಂಡಾ ಅಮೇಜ್ ಮತ್ತು ಸ್ವಿಫ್ಟ್ ಡಿಜೈರ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ.

ಟಾಟಾ ಕಾರುಗಳ ಸಾಲಿಗೆ ಬೋಲ್ಟ್, ಜೆಸ್ಟ್ ಸೇರ್ಪಡೆ

ಫಾಲ್ಕನ್ 5 ಎಂದು ಕೋಡ್ ಪಡೆದುಕೊಂಡಿರುವ ಟಾಟಾ ಜೆಸ್ಟ್, ಸಂಸ್ಥೆ ಮಾಂಝಾ ಆವೃತ್ತಿಗೆ ಬದಲಿ ವ್ಯವಸ್ಥೆಯಾಗಿರಲಿದೆ. ಟಾಟಾದ ಹ್ಯೂಮಾನಿಟಿ ಆಧಾರದಲ್ಲಿ ಫ್ರಂಟ್ ಗ್ರಿಲ್ ರಚಿಸಲಾಗಿದೆ.

ಟಾಟಾ ಕಾರುಗಳ ಸಾಲಿಗೆ ಬೋಲ್ಟ್, ಜೆಸ್ಟ್ ಸೇರ್ಪಡೆ

ರೆವೊಟ್ರಾನ್ 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದರ ಮಗದೊಂದು ಪ್ರಮುಖ ವೈಶಿಷ್ಟ್ಯ ಏನೆಂದರೆ ಇದೇ ಮೊದಲ ಬಾರಿಗೆ ಜೆಸ್ಟ್‌ನಲ್ಲಿ ಎಫ್-ಟ್ರಾನಿಕ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾಣಿಸಿಕೊಳ್ಳಲಿದೆ. ಇದು ಮಾರುತಿ ಸುಜುಕಿಯಲ್ಲಿರುವುದಕ್ಕೆ ಸಮಾನವಾದ ಕ್ಲಚ್ ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಗಿದೆ.

ಟಾಟಾ ಜೈಸ್ಟ್ ವೈಶಿಷ್ಟ್ಯಗಳು

ಟಾಟಾ ಜೈಸ್ಟ್ ವೈಶಿಷ್ಟ್ಯಗಳು

ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲೈಟ್ಸ್, ಹೊಸತಾದ ಹಾರ್ಮಾನ್ ಮಾಹಿತಿ ಮನರಂಜನಾ ವ್ಯವಸ್ಥೆ, 5 ಇಂಚು ಪರದೆ, ಬ್ಲೂಟೂತ್ ಟೆಲಿಫೋನಿ, ವಾಯ್ಸ್ ರೆಕೊಗ್ನಿಷನ್, ಟೆಕ್ಸ್ಟ್ ಟು ಸ್ಪೀಚ್, ಸ್ಮಾರ್ಟ್‌ಫೋರ್ನ್ ಸಂಪರ್ಕದ ನೇವಿಗೇಷನ್ ಜತೆಗೆ ಹಲವಾರು.

ಟಾಟಾ ಕಾರುಗಳ ಸಾಲಿಗೆ ಬೋಲ್ಟ್, ಜೆಸ್ಟ್ ಸೇರ್ಪಡೆ

ಇನ್ನೊಂದೆಡೆ ಎಕ್ಸ್1 ತಲಹದಿಯಲ್ಲಿ ನಿರ್ಮಾಣವಾಗಿರುವ ಟಾಟಾ ಬೋಲ್ಟ್ ಹ್ಯಾಚ್‌ಬ್ಯಾಕ್, ರೆವೊಟ್ರಾನ್ ಎಂಪಿಎಫ್‌ಐ ಟರ್ಬೊಚಾರ್ಜ್ಡ್ 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಟಾಟಾ ಕಾರುಗಳ ಸಾಲಿಗೆ ಬೋಲ್ಟ್, ಜೆಸ್ಟ್ ಸೇರ್ಪಡೆ

ಟಾಟಾದಿಂದ ಅನಾವರಣಗೊಂಡಿರುವ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಹಾಗೆಯೇ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರುಗಳು 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿದೆ.

ಪ್ರಮುಖ ಅಂಶಗಳು:

ಪ್ರಮುಖ ಅಂಶಗಳು:

  • ಆನ್ ನ್ಯೂ ಡಿಸೈನ್
  • ಹೊಸತಾದ ಟಾಟಾ ಗ್ರಿಲ್
  • ಹೊಸತನದ ವಿನ್ಯಾಸ
  • ಪ್ರೀಮಿಯಂ ಇಂಟಿರಿಯರ್
  • ಆಲ್ ನ್ಯೂ ಕಲರ್
  • ಡ್ರೈವ್ ನೆಕ್ಸ್ಟ್

    ಡ್ರೈವ್ ನೆಕ್ಸ್ಟ್

    • ಫಾ-ಟ್ರಾನಿಕ್ ಆಟೋಮೇಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ತಂತ್ರಗಾರಿಕೆ,
    • ಜೆಸ್ಟ್ ಆವೃತ್ತಿಯಲ್ಲಿ ಕ್ಲಚ್ ರಹಿತ ಚಾಲನೆ,
    • ಬೆಸ್ಟ್ ಇನ್ ಕ್ಲಾಸ್ ರೆವೋಟ್ರಾನ್,
    • ಆಲ್ ನ್ಯೂ ಎಂಪಿಎಫ್‌ಐ-ಟರ್ಬೊ ಚಾರ್ಜ್ಡ್, 1.2ಟಿ ಪೆಟ್ರೋಲ ಎಂಜಿನ್,
    • ಆಕ್ಟಿವ್ ರಿಟರ್ನ್ ಫಂ7ನ್, ಸ್ಪೀಡ್ ಸೆನ್ಸೆಟಿವ್ ಪವರ್ ಸ್ಟೀರಿಂಗ್,
    • ಮುಂದುವರಿದ ಎಬಿಎಸ್ ತಂತ್ರಗಾರಿಕೆ
    • ಕನೆಕ್ಟ್ ನೆಕ್ಸ್ಟ್

      ಕನೆಕ್ಟ್ ನೆಕ್ಸ್ಟ್

      • ಆಲ್ ನ್ಯೂ ನೆಕ್ಸ್ಟ್ ಜನರೇಷನ್ ಹಾರ್ಮಾನ್ ಮಾಹಿತಿ ಮನರಂಜನಾ ಸಿಸ್ಟಂ
      • ಹೊಸತಾದ ಮ್ಯಾಪ್ ಮೈ ಇಂಡಿಯಾ ನೇವಿಷನ್ ಸಿಸ್ಟಂ,
      • ಸಂಗೀತ, ವೀಡಿಯೋಗಾಗಿ 5 ಇಂಚು ಟಚ್ ಸ್ಕ್ರೀನ್ ವ್ಯವಸ್ಥೆ,
      • ಮುಂದುವರಿದ ಬ್ಲೂಟೂತ್ ತಂತ್ರಗಾರಿಕೆ.

Most Read Articles

Kannada
English summary
Tata Motors today unveiled two all-new cars - the classy Sedan ZEST and the Sporty, dynamic premium hatchback, BOLT that look to redefine the passenger car market with new design aesthetics, segment-defining drive experience and high-tech Infoinment system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X