ದೇಶದ ಟಾಪ್ 5 ಎಂಟ್ರಿ ಲೆವೆಲ್ ಸೆಡಾನ್ ಕಾರು

By Nagaraja

ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಕಾರುಗಳ ಪರಿಚಯವಾಗುತ್ತದೆ. ಒಂದರ ಬಳಿಕ ಒಂದರಂತೆ ಅನಿ ನೂತನ ಸೌಲಭ್ಯಗಳುಳ್ಳ ಕಾರುಗಳನ್ನು ಪರಿಚಯಿಸುವುದರಲ್ಲಿ ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳು ಮಗ್ನವಾಗಿದೆ.

ಈ ನಡುವೆ ದೇಶದಲ್ಲಿ ಲಭ್ಯವಿರುವ ಟಾಪ್ ಕಾರುಗಳನ್ನು ಪರಿಚಯ ಮಾಡಿಕೊಟ್ಟಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವೀಗ ಟಾಪ್ 5 ಎಂಟ್ರಿ ಲೆವೆಲ್ ಸೆಡಾನ್ ಕಾರುಗಳನ್ನು ಪರಿಚಯಿಸಲಿದೆ. ನಿಮ್ಮ ಮಾಹಿತಿಗಾಗಿ, ದೇಶದ ಮಾರುಕಟ್ಟೆಯಲ್ಲಿ ಮಿಡ್ ಲೆವೆಲ್ ಸೆಡಾನ್ ಕಾರುಗಳಿಗೆ ಭಾರಿ ಬೇಡಿಕೆಯಿದೆ.

ದೇಶದ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಕಡಿಮೆ ದರದ ಸೆಡಾನ್ ಕಾರುಗಳನ್ನು ಹೆಚ್ಚು ಬಯಸುತ್ತಾರೆ. ಇಂಧನ ದರ ವರ್ಧಿಸುತ್ತಿರುವುದು ಕೂಡಾ ಇದಕ್ಕೆ ಕಾರಣವಾಗಿದೆ. ಅಂದ ಹಾಗೆ ದೇಶದಲ್ಲಿ ಹಲವು ಮಾದರಿಗಳ ಮಿಡ್ ಲೆವೆಲ್ ಸೆಡಾನ್ ಕಾರುಗಳಿವೆ. ಅವುಗಳಲ್ಲಿ ಯಾವುದು ಅತ್ಯುತ್ತಮ ಎಂದು ಪರಿಗಣಿಸುವುದು ಕಷ್ಟಕರ.

ಒಂದು ವೇಳೆ ಸೆಡಾನ್ ಕಾರುಗಳನ್ನು ಖರೀದಿಸಲು ಯೋಜನೆ ಹಾಕಿಕೊಂಡಿದ್ದರೆ ಆತಂಕಕ್ಕೆ ಒಳಗಾಗಬೇಡಿರಿ. ನಾವೀಗ ದೇಶದ ಟಾಪ್ 5 ಎಂಟ್ರಿ ಲೆವೆಲ್ ಸೆಡಾನ್ ಕಾರುಗಳ ಬಗ್ಗೆ ತಿಳಿಸಲಿದ್ದೇವೆ.

ದೇಶದ ಟಾಪ್ 5 ಎಂಟ್ರಿ ಲೆವೆಲ್ ಕಾರು

ದೇಶದ ಟಾಪ್ 5 ಎಂಟ್ರಿ ಲೆವೆಲ್ ಕಾರು

ದೇಶದಲ್ಲಿ ಮಿಡ್ ಲೆಲೆವ್ ಸೆಡಾನ್ ಕಾರುಗಳಿಗೆ ಅತಿ ಹೆಚ್ಚು ಬೇಡಿಕೆಯಿದೆ. ಆಕರ್ಷಕ ವಿನ್ಯಾಸ, ಮೈಲೇಜ್ ಹಾಗೂ ಸ್ಪರ್ಧಾತ್ಮಕ ದರಗಳಲ್ಲಿ ಇದು ಗ್ರಾಹಕರನ್ನು ತಲುಪುತ್ತಿದೆ. ಮುಂದಿನ ಫೋಚೊ ಫೀಚರ್ ಕ್ಲಿಕ್ಕಿಸುತ್ತಾ ಟಾಪ್ 5 ಮಿಡ್ ಲೆವೆಲ್ ಸೆಡಾನ್ ಕಾರುಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿರಿ.

ಹೊಂಡಾ ಸೆಡಾನ್ ಸಿಟಿ

ಹೊಂಡಾ ಸೆಡಾನ್ ಸಿಟಿ

ಹೊಂಡಾ ಕಂಪನಿಯ ಈ ಮಿಡ್ ಲೆವೆಲ್ ಸೆಡಾನ್ ಸಿಟಿ ಒಂದೇ ನೋಟದಲ್ಲೇ ಹೆಚ್ಚು ಆಕರ್ಷಣೆಗೆ ಒಳಗಾಗುತ್ತದೆ. ಇದು ಅನೇಕ ವೈಶಿಷ್ಟ್ಯಗಳನ್ನು ಹೊಂದಿದ್ದು ಮೈಲೇಜ್ ಕೂಡಾ ಉತ್ತಮವಾಗಿದೆ. ಪೆಟ್ರೋಲ್ ವೆರಿಯಂಟ್‌ಗಳಲ್ಲಿ ಮಾತ್ರ ಲಭ್ಯವಾಗಿರುವ ಹೊರತಾಗಿಯೂ ದೇಶದ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟವನ್ನು ಕಾಯ್ದುಕೊಂಡಿದೆ. ಹೊಂಡಾ ಸಿಟಿ 14ರಿಂದ 17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ದರ 7.2ರಿಂದ 10.43 ಲಕ್ಷ ರು.ಗಳ ವರೆಗಿದೆ.

ಟೊಯೊಟಾ ಎಟಿಯೋಸ್

ಟೊಯೊಟಾ ಎಟಿಯೋಸ್

ಜಪಾನ್ ಕಾರು ತಯಾರಕ ಕಂಪನಿಯಾದ ಟೊಯೊಟಾದ ಆಕರ್ಷಕ ಎಟಿಯೋಸ್ ಟಾಪ್ 5 ಸೆಡಾನ್ ಕಾರುಗಳಲ್ಲಿ ಕಾಣಿಸಿಕೊಂಡಿದೆ. ಸ್ಪರ್ಧಾತ್ಮಕ ದರದಲ್ಲಿ ಲಭ್ಯವಾಗುವುದರಿಂದ ಎಟಿಯೋಸ್ ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ 1.4 ಲೀಟರ್ ಡಿ-4ಡಿ ಎಂಜಿನ್ ಪ್ರಯೋಗಿಸಲಾಗಿದೆ. ಹಾಗೆಯೇ ಇಂಟಿರಿಯರ್ ಸಹಿತ ಏಕ್ಸ್‌ಟೀರಿಯರ್ ಕೂಡಾ ಆಕರ್ಷಕವಾಗಿದೆ. ದೇಶದ ಮಾರುಕಟ್ಟೆಗಳಲ್ಲಿ ಎಂಟು ಮಾಡೆಲ್‌ಗಳಲ್ಲಿ ಲಭ್ಯವಿರುವ ಎಟಿಯೋಸ್ ಕೂಡಾ 14ರಿಂದ 17 ಕೀ. ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇದರ ಡೀಸೆಲ್ ವೆರಿಯಂಟ್ ಪ್ರತಿ ಲೀಟರ್ 23 ಕೀ.ಮೀ ತನಕ ಮೈಲೇಜ್ ನೀಡುತ್ತದೆ. ಇದರ ದರ 5.1ರಿಂದ 7.74 ಲಕ್ಷ ರು.ಗಳ ವರೆಗಿದೆ.

ನಿಸ್ಸಾನ್ ಸನ್ನಿ

ನಿಸ್ಸಾನ್ ಸನ್ನಿ

ಲಗ್ಷುರಿ ಲುಕ್ ಹಾಗೂ ವೈಶಿಷ್ಟ್ಯಗಳಿಗೆ ನಿಸ್ಸಾನ್ ಹೆಸರುವಾಸಿಯಾಗಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿದ್ದು, 5.9ರಿಂದ 8.9 ಲಕ್ಷ ರು.ಗಳ ವರೆಗಿನ ದರದಲ್ಲಿ ಲಭ್ಯವಿರಲಿದೆ. ಹಾಗೆಯೇ ಮಿಡ್ ಲೆವೆಲ್ ಹಾಗೂ ಟಾಪ್ ಎಂಡ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಕಂಪನಿಯು ಇದರಲ್ಲಿ 1.5 ಲೀಟರ್ ಕೆ9ಕೆ ಎಂಜಿನ್ ಪ್ರಯೋಗಿಸಿದೆ. ಹಾಗೆಯೇ ಸನ್ನಿ ಪೆಟ್ರೋಲ್ ಆವೃತ್ತಿಯು 15ರಿಂದ 17 ಹಾಗೂ ಡಿಸೇಲ್ ವೆರಿಯಂಟ್ 16ರಿಂದ 20 ಕೀ.ಮೀ. ಮೈಲೇಜ್ ನೀಡಲಿದೆ.

ಮಾರುತಿ ಸ್ವಿಫ್ಟ್ ಡಿಜೈರ್

ಮಾರುತಿ ಸ್ವಿಫ್ಟ್ ಡಿಜೈರ್

ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿಯ ಸ್ವಿಫ್ಟ್ ಡಿಜೈರ್ ಗ್ರಾಹಕರಲ್ಲಿ ಹೆಚ್ಚು ನಂಬಿಕೆಯನ್ನು ಉಳಿಸಿಕೊಂಡಿದೆ. ಈ ಕಾರಿನಲ್ಲಿ ಕೆ-12 ಎಂಜಿನ್ ಆಳವಡಿಸಲಾಗಿದೆ. ದೇಶದ ಮಾರುಕಟ್ಟೆಯಲ್ಲಿ ಒಂಟು 7 ವೆರಿಯಂಟ್‌ಗಳಲ್ಲಿ ಡಿಜೈರ್ ಲಭ್ಯವಿದ್ದು, 5.25ರಿಂದ 8.04 ಲಕ್ಷ ರು.ಗಳ ವರೆಗೆ ದರವಿದೆ. ಹಾಗೆಯೇ ಮಾರುತಿ ಡಿಜೈರ್‌ನಲ್ಲಿ 16ರಿಂದ 19 ಕೀ.ಮೀ ತನಕ ಮೈಲೇಜ್ ಸಿಗಲಿದೆ. ಅಂತೆಯೇ ಇದರ ಡೀಸೆಲ್ ವೆರಿಯಂಟ್ 18.5ರಿಂದ 23.5 ಕೀ.ಮೀ ಮೈಲೇಜ್ ನೀಡಲಿದೆ.

ಮಹೀಂದ್ರ ವೆರಿಟೊ

ಮಹೀಂದ್ರ ವೆರಿಟೊ

ಮಾರುತಿಯಂತೆ ಮಹೀಂದ್ರ ಕೂಡಾ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಹೀಂದ್ರ ವೆರಿಟೊದಲ್ಲಿ 1.4 ಲೀಟರ್ ಎಂಪಿಎಂಐ ಎಂಜಿನ್ ಆಳವಡಿಸಲಾಗಿದೆ. ಇದರ ಜತೆ ಡೀಸೆಲ್ ವೆರಿಯಂಟ್‌ಗಳಲ್ಲಿ 1.5 ಲೀಟರ್ ಡಿಸಿಐ ಕಾಮನ್ ರೈಲ್ ಎಂಜಿನ್ ಪ್ರಯೋಗಿಸಲಾಗಿದೆ. ದೇಶದ ಮಾರುಕಟ್ಟೆಯಲ್ಲಿ ಇದರ ದರ 5.3ರಿಂದ 6.9 ಲಕ್ಷ ರು.ಗಳ ವರೆಗಿದೆ. ವೆರಿಟೊ ಪೆಟ್ರೋಲ್ ಆವೃತ್ತಿ 15 ಹಾಗೂ ಡೀಸೆಲ್ ವೆರಿಯಂಟ್ 21 ಕೀ.ಮೀ. ತನಕ ಮೈಲೇಜ್ ನೀಡಲಿದೆ.

Article Published On: Thursday, January 31, 2013, 10:07 [IST]
English summary
Ever wondered which are best entry level sedan cars in India. Check out some best entry level sedan cars in pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+