2014-15ರಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಕಾರುಗಳು
ದೇಶದ ಕಾರು ಮಾರುಕಟ್ಟೆಯಲ್ಲಿ ಇತರೆಲ್ಲ ಕಂಪನಿಗಳು ಹಿನ್ನಡೆ ಅನುಭವಿಸುತ್ತಿರುವ ನಡುವೆಯೂ ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಹೋಂಡಾ ಯಶಸ್ವಿಯಾಗಿದೆ. ಇವೆಲ್ಲಕ್ಕೂ ಮಾರುಕಟ್ಟೆಯಲ್ಲಿ ಹೋಂಡಾ ಅಮೇಜ್ ಸಾಧಿಸುತ್ತಿರುವ ಭರ್ಜರಿ ಮಾರಾಟ ಬೇಟೆಯೇ ಕಾರಣ.
ನಿಮ್ಮ ಮಾಹಿತಿಗಾಗಿ ಕಳೆದ ತಿಂಗಳು ಹೋಂಡಾ 11,000 ಯುನಿಟ್‌ಗಳಷ್ಟು ಕಾರುಗಳನ್ನು ಮಾರಾಟ ಮಾಡಿವೆ. ಈ ಪೈಕಿ 6,000ಗಳಷ್ಟು ಯುನಿಟ್ ಮಾರಾಟ ಕಂಡಿರುವ ಅಮೇಜ್ ಕಾಂಪಾಕ್ಟ್ ಸೆಡಾನ್, ಹೋಂಡಾ ಆವೇಗ ಕಾಯ್ದುಕೊಳ್ಳುವಲ್ಲಿ ನೆರವಾಗಿದೆ. ಇದನ್ನು ಹೋಂಡಾ ಬ್ರಿಯೊ ಹ್ಯಾಚ್‌ಬ್ಯಾಕ್ ಹಾಗೂ ಹೋಂಡಾ ಸಿಟಿ ಸೆಡಾನ್ ಹಿಂಬಾಲಿಸುತ್ತಿದೆ.
ಅಷ್ಟಕ್ಕೂ ದೇಶದ ಕಾರು ಪ್ರೇಮಿಗಳು ಹೋಂಡಾ ಮುಂಬರುವ ಕಾರುಗಳ ಬಗ್ಗೆ ತಿಳಿದುಕೊಳ್ಳುವ ಅತೀವ ಕುತೂಹಲದಿಂದಿದ್ದಾರೆ. ಇದರಂತೆ ಮುಂದಿನ ಎರಡು ವರ್ಷದೊಳಗೆ ಹೋಂಡಾದಿಂದ ದೇಶಕ್ಕೆ ಪರಿಚಯವಾಗಲಿರುವ ಕಾರುಗಳ ಬಗ್ಗೆ ನಾವು ಮಾಹಿತಿ ಕೊಡಲಿದ್ದೇವೆ.

2014 ಹೋಂಡಾ ಜಾಝ್
ವಾಹನ ಪ್ರಿಯರು ಕಾತರದಿಂದ ಕಾಯುತ್ತಿರುವ 2014 ಹೋಂಡಾ ಜಾಝ್ ಸದ್ಯದಲ್ಲೇ ತವರೂರಾದ ಜಪಾನ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದ್ದು, ಮುಂದಿನ ವರ್ಷಾರಂಭದಲ್ಲಿ ಭಾರತಕ್ಕೆ ಆಗಮಿಸಲಿದೆ.

2014 ಹೋಂಡಾ ಜಾಝ್
ನಿಮ್ಮ ಮಾಹಿತಿಗಾಗಿ ಇತ್ತೀಚೆಗಷ್ಟೇ ಹೋಂಡಾ ಜಾಝ್ ಹಳೆಯ ಆವೃತ್ತಿಯನ್ನು ದೇಶದಲ್ಲಿ ನಿಲುಗಡೆಗೊಳಿಸಲಾಗಿತ್ತು. ಇದು ಮತ್ತಷ್ಟು ಪವರ್‌ಫುಲ್ ಜಾಝ್ ಎಂಟ್ರಿಗೆ ಸೂಕ್ತ ವೇದಿಕೆಯೊದಗಿಸುತ್ತಿದ್ದು, 1.2 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಇದು ಪ್ರತಿ ಲೀಟರ್‌ಗೆ 36 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವಿದೆಯಂತೆ..!

ಹೋಂಡಾ ಬ್ರಿಯೊ ಕಾಂಪಾಕ್ಟ್ ಎಂಪಿವಿ
ನಿಕಟ ಭವಿಷ್ಯದಲ್ಲಿ ಆಗಮನವಾಗಲಿರುವ ಹೋಂಡಾ ಬ್ರಿಯೊ ಕಾಂಪಾಕ್ಟ್ ಎಂಪಿವಿ 2ಎನ್‌ಎಚ್ ಕೋಡ್ ನೇಮ್ ಪಡೆದುಕೊಂಡಿದೆ. ಅಂದರೆ ಮುಂದಿನ ಒಂದೆರಡು ತಿಂಗಳೊಳಗೆ ದಕ್ಷಿಣ ಕೊರಿಯಾ ಮಾರುಕಟ್ಟೆ ಪ್ರವೇಶಸಲಿದ್ದು, ಬೆನ್ನಲ್ಲೇ ಭಾರತ ಪ್ರವೇಶ ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿದೆ. ಇದು ಮಾರುತಿ ಸುಜುಕಿ ಎರ್ಟಿಗಾ ಆವೃತ್ತಿಗೆ ನೇರ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ iDtec ಡೀಸೆಲ್ ಎಂಜಿನ್ ಆಳವಡಿಸಲಾಗುತ್ತದೆ.

ಹೋಂಡಾ ಜಾಝ್ ಕಾಂಪಾಕ್ಟ್ ಎಸ್‌ಯುವಿ
ಸದ್ಯ ದೇಶದ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್‌ಗೆ ನೇರ ಪೈಪೋಟಿಯನ್ನು ಜಾಝ್ ಕಾಂಪಾಕ್ಟ್ ಎಸ್‌ಯುವಿ ಮುಖಾಂತರ ಹೋಂಡಾ ರಸ್ತೆಗಿಳಿಸಲಿದೆ. ಪ್ರಸ್ತುತ ಕಾರು 2014 ವರ್ಷಾಂತ್ಯದಲ್ಲಿ ಅಥವಾ 2015ರ ಆರಂಭದಲ್ಲಿ ಭಾರತ ಮಾರುಕಟ್ಟೆ ಆಗಮಿಸುವ ಸಾಧ್ಯತೆಗಳಿವೆ.

2014 ಹೋಂಡಾ ಸಿಟಿ
ಮುಂದಿನ ಜನಾಂಗದ ಹೋಂಡಾ ಸಿಟಿ ಸನ್ನದ್ಧಗೊಳ್ಳುತ್ತಿದ್ದು, ಮಿಡ್ ಸೈಜ್ ಸೆಗ್ಮೆಂಟ್‌ನಲ್ಲಿ ದೊಡ್ಡ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇದು ಭಾರತ ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಹ್ಯುಂಡೈ ವರ್ನಾ ಆವೃತ್ತಿಗಳಿಗೆ ಟಕ್ಕರ್ ನೀಡಲಿದೆ.

ಹೋಂಡಾ ಕ್ರೈಡರ್ ಕಾನ್ಸೆಪ್ಟ್
ಈಗಾಗಲೇ ಶಾಂಘೈ ಮೋಟಾರ್ ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಹೋಂಡಾ 'ಕ್ರೈಡರ್' ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಳ್ಳುತ್ತಿದೆ. ಇದು ಆಕಾರದಲ್ಲಿ ಹೋಂಡಾ ಸಿಟಿಗಿಂತಲೂ ಸ್ವಲ್ಪ ದೊಡ್ಡದಾಗಿರಲಿದೆ.

ಹೋಂಡಾ ಕ್ರೈಡರ್ ಕಾನ್ಸೆಪ್ಟ್
ಪ್ರಾಥಮಿಕ ಮಾಹಿತಿ ಪ್ರಕಾರ ಹೋಂಡಾ ಕ್ರೈಡರ್ 1.8 ಲೀಟರ್ ಎಂಜಿನ್ ಪಡೆದುಕೊಳ್ಳಲಿದ್ದು, ಫೈವ್ ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ. ಇದು ಮಾರುಕಟ್ಟೆಯಲ್ಲಿ ಪ್ರೀಮಿಯಂ ಮಿಡ್ ಸೈಜ್ ಸೆಗ್ಮೆಂಟ್‌ನಲ್ಲಿ ಸ್ಪರ್ಧೆಗಿಳಿಯಲಿದೆ.

ಎಂ-01 ಕಾನ್ಸೆಪ್ಟ್ ಎಂಪಿವಿ
ಭಾರತದಲ್ಲಿ ಮಲ್ಟಿ ಪರ್ಪಸ್ ವೆಹಿಕಲ್‌ಗೆ (ಎಂಪಿವಿ) ಭಾರಿ ಬೇಡಿಕೆಯಿದೆ. ಪ್ರಸ್ತುತ ಜಪಾನ್ ಕಾರು ತಯಾರಕ ಸಂಸ್ಥೆಯಾದ ಹೋಂಡಾದಿಂದ ತಯಾರಾಗುತ್ತಿರುವ ಎಂ-01 ಎಂಪಿವಿ ಕಾರು ಭಾರತಕ್ಕೆ ಪ್ರವೇಶ ಪಡೆಯಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಎಂ-01 ಕಾನ್ಸೆಪ್ಟ್ ಎಂಪಿವಿ
ಜಪಾನ್‌ನ ಆಟೋಮೊಬೈಲ್ ಆರ್ ಆಂಡ್ ಡಿ ಸೆಂಟರ್ ಆಫ್ ಹೋಂಡಾ ಆರ್ ಆಂಡ್ ಡಿ ಕಂಪನಿ ಲಿಮಿಟೆಡ್ ನೂತನ ಎಂ ಕಾನ್ಸೆಪ್ಟ್‌ನ್ನು ತಯಾರಿಸಿದೆ. ಇಂದು ಪ್ರೀಮಿಯಂ ಎಂಪಿವಿ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದು, ಮುಂದಿನ ವರ್ಷ ಜಪಾನ್ ಪ್ರವೇಶಿಸಿದ ಬೆನ್ನಲ್ಲೇ ಭಾರತಕ್ಕೆ ಆಗಮಿಸುವ ನಿರೀಕ್ಷೆಗಳಿವೆ.


Click it and Unblock the Notifications








