ಮಾರುತಿ ಕಾರೇ ಬೇಕು ಅಂತೀರಾ? ಇಲ್ಲಿದೆ ಹೊಸ ಕಾರುಗಳ ಪಟ್ಟಿ

By Nagaraja

ಭಾರತ ವಾಹನ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಸೃಷ್ಟಿಯಾಗಿರುವಂತೆಯೇ ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಗಳು ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ಮಗ್ನವಾಗಿದೆ. ಇದರಿಂದ ದೇಶದ ನಂ. 1 ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಹೊರತಾಗಿಲ್ಲ. ಪ್ರಸಕ್ತ ಸಾಲಿನಲ್ಲಿ ಮಾರುತಿ ಸೆಲೆರಿಯೊ, ಸಿಯಾಝ್ ಸೆಡಾನ್ ಮತ್ತು ಆಲ್ಟೊ ಕೆ10 ಫೇಸ್‌ಲಿಫ್ಟ್ ಮಾದರಿಗಳನ್ನು ಪರಿಚಯಿಸಿರುವ ಮಾರುತಿ ನಿಕಟ ಭವಿಷ್ಯದಲ್ಲೇ ಇನ್ನು ಕೆಲವು ಆಕರ್ಷಕ ಕಾರುಗಳನ್ನು ಕೊಡುಗೆ ನೀಡುವ ಯೋಜನೆಯಲ್ಲಿದೆ.

ಅಷ್ಟಕ್ಕೂ ನೀವು ಮಾರುತಿ ಕಾರನ್ನೇ ಖರೀದಿಸುವ ಯೋಜನೆಯಲ್ಲಿದ್ದೀರಾ? ನಿಮ್ಮ ನೆಚ್ಚಿನ ಸಂಸ್ಥೆಯು ಮುಂದಿನ ಅವಧಿಯಲ್ಲಿ ಬಿಡುಗಡೆ ಮಾಡಲಿರುವ ಪ್ರಮುಖ ಮಾದರಿಗಳು ಯಾವುವು? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಹುಡುಕುವ ಪ್ರಯತ್ನವನ್ನು ನಾವಿಲ್ಲಿ ಮಾಡಲಿದ್ದೇವೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಫೇಸ್‌ಲಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಫೇಸ್‌ಲಿಫ್ಟ್

ನಿಮ್ಮ ಮಾಹಿತಿಗಾಗಿ, ಮಾರುಕಟ್ಟೆಯಲ್ಲಿ ಈಗಲೂ ಸ್ವಿಫ್ಟ್ ಡಿಜೈರ್ 'ಹಾಟ್ ಕೇಕ್' ತರಹನೇ ಮಾರಾಟವಾಗುತ್ತಿದೆ. ಇದು ಸಂಸ್ಥೆಯ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಮಾದರಿಗಳಲ್ಲಿ ಒಂದಾಗಿದೆ. ಈಗಲೂ ಡಿಜೈರ್ ಪ್ರತಿ ತಿಂಗಳು 15,000 ಯುನಿಟ್‌ಗಿಂತಲೂ ಹೆಚ್ಚು ಮಾರಾಟ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹಾಗಿರುವಾಗ ಸಂಸ್ಥೆಯು ಫೇಸ್‌ಲಿಫ್ಟ್ ಮಾದರಿಯ ತಯಾರಿಯಲ್ಲಿ ತೊಡಗಿದೆ. ಹಾಗಿದ್ದರೂ ಕಾರಿನ ಹೊರಮೈ ಹಾಗೂ ಒಳಮೈಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವ ನಿರೀಕ್ಷೆಗಳಿಲ್ಲ.

ಮಾರುತಿ ಸ್ವಿಫ್ಟ್ ಡಿಜೈರ್

ಮಾರುತಿ ಸ್ವಿಫ್ಟ್ ಡಿಜೈರ್

ಸ್ವಿಫ್ಟ್ ಫೇಸ್‌ಲಿಫ್ಟ್ ತರಹನೇ ಮಾರುತಿ ಡಿಜೈರ್ ಕೂಡಾ ಹಿಂದಿಗಿಂತಲೂ ಹೆಚ್ಚು ಶ್ರೀಮಂತಿಕೆಯನ್ನು ಪಡೆದುಕೊಳ್ಳಲಿದೆ. ಇದು ಸೀಟು ಹೋದಿಕೆ, ಪುಶ್ ಬಟನ್ ಸ್ಟಾರ್ಟ್ ಬಟನ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಹೊಸ ಬ್ಲೂಟೂತ್, ಮ್ಯೂಸಿಕ್ ಸಿಸ್ಟಂಗಳಂತಹ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ.

ನಿರೀಕ್ಷಿತ ಬಿಡುಗಡೆ: 2014 ಡಿಸೆಂಬರ್

ನಿರೀಕ್ಷಿತ ದರ: 5ರಿಂದ 8 ಲಕ್ಷ ರು.

ಮಾರುತಿ ಎಕ್ಸ್‌ಎ ಆಲ್ಪಾ

ಮಾರುತಿ ಎಕ್ಸ್‌ಎ ಆಲ್ಪಾ

ಈ ಮೊದಲೇ ತಿಳಿಸಿರುವಂತೆಯೇ 2012 ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿದ್ದ ಮಾರುತಿ ಎಕ್ಸ್‌ಎ ಆಲ್ಪಾ, ಮಾರುತಿಯ ಬಹುನಿರೀಕ್ಷಿತ ಮಾದರಿಗಳಲ್ಲಿ ಒಂದಾಗಿದೆ. ಇದು ಕೊನೆಗೂ 2015ರಲ್ಲಿ ರಸ್ತೆ ಪ್ರವೇಶಿಸುವುದು ಖಚಿತವಾಗಿದೆ. ಕಳೆದೆರಡು ವರ್ಷಗಳಲ್ಲಿ ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್ ಮತ್ತು ನಿಸ್ಸಾನ್ ಟೆರನೊಗೆ ದೊರಕಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ ಮಾರುತಿ ಎಕ್ಸ್‌ಎ ಆಲ್ಪಾ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಮಾರುತಿ ಎಕ್ಸ್‌ಎ ಆಲ್ಪಾ

ಮಾರುತಿ ಎಕ್ಸ್‌ಎ ಆಲ್ಪಾ

ಅಂದ ಹಾಗೆ ಮಾರುತಿ ಎಕ್ಸ್‌ಎ ಆಲ್ಪಾದಲ್ಲಿ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಮತ್ತು 1.4 ಲೀಟರ್ ಪೆಟ್ರೋಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ.

ನಿರೀಕ್ಷಿತ ಬಿಡುಗಡೆ: 2015 ಮಧ್ಯಂತರ ಅವಧಿ

ನಿರೀಕ್ಷಿತ ದರ: 6.5ರಿಂದ 10 ಲಕ್ಷ ರು.

ಮಾರುತಿ ಎಸ್‌ಎಕ್ಸ್4 ಎಸ್-ಕ್ರಾಸ್

ಮಾರುತಿ ಎಸ್‌ಎಕ್ಸ್4 ಎಸ್-ಕ್ರಾಸ್

ಮಾರುತಿ ಎಸ್‌ಎಕ್ಸ್4 ಎಸ್ ಕ್ರಾಸ್ ಸಂಸ್ಥೆಯಿಂದ ಆಗಮನವಾಗಲಿರುವ ಮೊದಲ ಕ್ರಾಸೋವರ್ ಎನಿಸಿಕೊಳ್ಳಲಿದೆ. ಇದೇ ಕಾರಣಕ್ಕಾಗಿ ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. ಇದು ನೇರವಾಗಿ ಫೋಕ್ಸ್‌ವ್ಯಾಗನ್ ಪೊಲೊ, ಟೊಯೊಟಾ ಎಟಿಯೋಸ್ ಕ್ರಾಸ್ ಮತ್ತು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಫಿಯೆಟ್ ಅವೆಂಚ್ಯುರಾ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಮಾರುತಿ ಎಸ್‌ಎಕ್ಸ್4 ಎಸ್-ಕ್ರಾಸ್

ಮಾರುತಿ ಎಸ್‌ಎಕ್ಸ್4 ಎಸ್-ಕ್ರಾಸ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇತ್ತೀಚಿನ ಸಮಯದಲ್ಲಿ ಕ್ರಾಸೋವರ್ ವಿಭಾಗ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದ್ದು, ಹೊಸ ಹೊಸ ಮಾದರಿಗಳ ಪ್ರವೇಶವಾಗುತ್ತಿದೆ. ನಿಮ್ಮ ಮಾಹಿತಿಗಾಗಿ ಇದೇ ವಿಭಾಗದಲ್ಲಿ ಐ20 ಮಾದರಿಯ ಕ್ರಾಸೋವರ್ ಬಿಡುಗಡೆ ಮಾಡುವ ಯೋಜನೆಯನ್ನು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆ ಹೊಂದಿದೆ.

ಅಂದ ಹಾಗೆ ಮಾರುತಿ ಎಸ್‌ಎಕ್ಸ್4 ಎಸ್ ಕ್ರಾಸ್ ಯುರೋಪ್‌ನ ಎಸ್‌ಎಕ್ಸ್4 ಹ್ಯಾಚ್‌ಬ್ಯಾಕ್ ತಳಹದಿಯ ಎಸ್ ಕ್ರಾಸ್ ಮಾದರಿಯನ್ನು ಪ್ರತಿಬಿಂಬಿಸಲಿದೆ. ಇದರಲ್ಲಿ 1.3 ಲೀಟರ್ (92 ಬಿಎಚ್‌ಪಿ) ಮಲ್ಟಿಜೆಟ್ ಎಂಜಿನ್ ಮತ್ತು 1.4 ಲೀಟರ್ ಪೆಟ್ರೋಲ್ (94 ಬಿಎಚ್‌ಪಿ) ಎಂಜಿನ್ ಇರಲಿದೆ.

ನಿರೀಕ್ಷಿತ ಬಿಡುಗಡೆ: 2015 ವರ್ಷಾರಂಭದಲ್ಲಿ

ನಿರೀಕ್ಷಿತ ದರ: 6ರಿಂದ 8 ಲಕ್ಷ ರು.

ಮಾರುತಿ ಸೆಲೆರಿಯೊ ಡೀಸೆಲ್

ಮಾರುತಿ ಸೆಲೆರಿಯೊ ಡೀಸೆಲ್

ಭಾರತದಲ್ಲಿ ಬಿಡುಗಡೆಯಾಗಿದ್ದ ಸೆಲೆರಿಯೊ ಎಎಂಟಿ ಮಾದರಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಈ ಪೆಟ್ರೋಲ್ ಮಾದರಿಯ ಯಶಸ್ಸಿನ ಬಳಿಕ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಸೆಲೆರಿಯೊ ಡೀಸೆಲ್ ಮಾದರಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ನಾವು ಈ ಹಿಂದೆಯೇ ವರದಿ ಮಾಡಿರುವಂತೆಯೇ ಎಂಟ್ರಿ ವೆವೆಲ್ 800 ಸಿಸಿ ಡೀಸೆಲ್ ಎಂಜಿನ್ ಅಭಿವೃದ್ದಿಯಲ್ಲಿ ಮಾರುತಿ ತೊಡಗಿದ್ದು, ಇದು 50ರಿಂದ 55 ಬಿಎಚ್‌ಪಿ ಉತ್ಪಾದಿಸಲಿದೆ. ಇದು ನೇರವಾಗಿ ಷೆವರ್ಲೆ ಬೀಟ್ ಡೀಸೆಲ್ ಮತ್ತು ಟಾಟಾದ ಮುಂಬರುವ ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ ಮಾದರಿಗೆ ಪ್ರತಿಸ್ಪರ್ಧಿಯಾಗಿರಲಿದೆ.

 ಮಾರುತಿ ಸೆಲೆರಿಯೊ ಡೀಸೆಲ್

ಮಾರುತಿ ಸೆಲೆರಿಯೊ ಡೀಸೆಲ್

ಮಾರುತಿಯ ಸಣ್ಣ ಡೀಸೆಲ್ ಕಾರು ಅತಿ ಹೆಚ್ಚಿನ ಇಂಧನ ಕ್ಷಮತೆ ನೀಡಲಿದ್ದು, ಪ್ರತಿ ಲೀಟರ್‌ಗೆ 35 ಕೀ.ಮೀ. ಮೈಲೇಜ್ ನೀಡಲಿದೆ ಎಂಬುದು ಅಚ್ಚರಿ ಮೂಡಿಸಿದೆ.

ನಿರೀಕ್ಷಿತ ಬಿಡುಗಡೆ: 2015 ಮೊದಲಾರ್ಧದಲ್ಲಿ

ನಿರೀಕ್ಷಿತ ದರ: 4.5ರಿಂದ 5 ಲಕ್ಷ ರು.

ಮಾರುತಿ ವೈಆರ್‌ಎ ಪ್ರೀಮಿಯಂ ಹ್ಯಾಚ್‌ಬ್ಯಾಕ್

ಮಾರುತಿ ವೈಆರ್‌ಎ ಪ್ರೀಮಿಯಂ ಹ್ಯಾಚ್‌ಬ್ಯಾಕ್

ಹ್ಯುಂಡೈ ಗ್ರಾಂಡ್ ಐ20 ಯಶಸ್ಸಿನಿಂದ ಎಚ್ಚೆತ್ತುಕೊಂಡಿರುವ ಮಾರುತಿ ಸಂಸ್ಥೆಯು ಇದಕ್ಕೆ ವಿರುದ್ಧವಾಗಿ ಹೊಸತಾದ ಕಾರೊಂದನ್ನು ಸಿದ್ಧಪಡಿಸುತ್ತಿದೆ. ಈಗಾಗಲೇ ಅಭಿವೃದ್ಧಿ ಹಂತದಲ್ಲಿರುವ ಮಾರುತಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ವೈಆರ್‌ಎ ಎಂಬ ಕೋಡ್ ಪಡೆದುಕೊಂಡಿದೆ.

ಮಾರುತಿ ವೈಆರ್‌ಎ ಪ್ರೀಮಿಯಂ ಹ್ಯಾಚ್‌ಬ್ಯಾಕ್

ಮಾರುತಿ ವೈಆರ್‌ಎ ಪ್ರೀಮಿಯಂ ಹ್ಯಾಚ್‌ಬ್ಯಾಕ್

ಸ್ವಿಫ್ಟ್ ಮೇಲ್ಗಡೆ ಗುರುತಿಸಿಕೊಳ್ಳಲಿರುವ ಹೊಸ ಕಾರು, ಐಕಾನಿಕ್ ಮಾದರಿಯೊಂದಿಗೆ ತನ್ನ ವಿನ್ಯಾಸವನ್ನು ಹಂಚಿಕೊಳ್ಳಲಿದೆ. ಇದು ಹನಿಕಾಂಬ್ ಗ್ರಿಲ್ ಜೊತೆಗೆ ವಿ ಆಕಾರದ ಕ್ರೋಮ್‌ನಿಂದ ಸುತ್ತುವರಿಯಲ್ಪಡಲಿದೆ. ಅಂತೆಯೇ ಡೇ ಟೈಮ್ ರನ್ನಿಂಗ್ ಲೈಟ್ಸ್ ಸ್ಟಾಡಂರ್ಡ್ ವೈಶಿಷ್ಟ್ಯವಾಗಿ ಸಿಗಲಿದೆ. ಇದು ಸ್ವಿಫ್ಟ್‌ಗಿಂತಲೂ ಅಗಲ ಹಾಗೂ ಹೆಚ್ಚು ಸ್ಥಳಾವಕಾಶವನ್ನು ಪಡೆದುಕೊಳ್ಳಲಿದೆ.

ಅಂದ ಹಾಗೆ ಮಾರುತಿಯ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಎರಡು ಪೆಟ್ರೋಲ್ (1.2 ಲೀಟರ್ ಮತ್ತು 1.4 ಲೀಟರ್) ಮತ್ತು ಡೀಸೆಲ್ ಎಂಜಿನ್ (1.3 ಲೀಟರ್) ಆಯ್ಕೆಯಲ್ಲಿ ಲಭ್ಯವಾಗಲಿದೆ.

ನಿರೀಕ್ಷಿತ ಬಿಡುಗಡೆ: 2015 ಮಧ್ಯಂತರ ಅವಧಿ

ನಿರೀಕ್ಷಿತ ದರ: 5.5ರಿಂದ 9 ಲಕ್ಷ ರು.

ಮಾರುತಿ ಸೆಲೆರಿಯೊ

ಮಾರುತಿ ಸೆಲೆರಿಯೊ

ಪ್ರಸಕ್ತ ಸಾಲಿನಲ್ಲಷ್ಟೇ ಮಾರುತಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರನ್ನು ಮಾರುತಿ ಬಿಡುಗಡೆಗೊಳಿಸಿತ್ತು. ಇದರಲ್ಲಿ ಮೊತ್ತ ಮೊದಲ ಬಾರಿಗೆ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಆಳವಡಿಸಲಾಗಿತ್ತಲ್ಲದೆ ವಾಹನ ಪ್ರೇಮಿಗಳಿಂದ ಭಾರಿ ಬೇಡಿಕೆ ವ್ಯಕ್ತವಾಗಿತ್ತು.

ಮಾರುತಿ ಸೆಲೆರಿಯೊ ಕಾರನ್ನು ಹುಡುಕು

ಮಾರುತಿ ಸಿಯಾಝ್

ಮಾರುತಿ ಸಿಯಾಝ್

ಸೆಲೆರಿಯೊ ಬೆನ್ನಲ್ಲೇ ಮಗದೊಂದು ಮಧ್ಯದ ಗಾತ್ರದ ಸಿಯಾಝ್ ಸೆಡಾನ್ ಕಾರನ್ನು ಮಾರುತಿ ಬಿಡುಗಡೆಗೊಳಿಸಿತ್ತು. ಮಾರುತಿ ಎಸ್‌ಎಕ್ಸ್4 ಸ್ಥಾನವನ್ನು ತುಂಬಿಕೊಂಡಿದ್ದ ಸಿಯಾಝ್, ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಸೆಡಾನ್‌ ಹಾಗೂ ಹ್ಯುಂಡೈ ವೆರ್ನಾ ಮಾದರಿಗಳಿಗೆ ನೇರ ಪ್ರತಿಸ್ಪರ್ಧಿಯಾಗಿತ್ತು.

ಮಾರುತಿ ಸಿಯಾಝ್ ಕಾರನ್ನು ಹುಡುಕು

ಮಾರುತಿ ಆಲ್ಟೊ ಕೆ10 ಎಎಂಟಿ

ಮಾರುತಿ ಆಲ್ಟೊ ಕೆ10 ಎಎಂಟಿ

ಈ ಎಲ್ಲದರ ನಡುವೆ ಆಲ್ಟೊ ಕೆ10 ಫೇಸ್‌ಲಿಫ್ಟ್ ಬಿಡುಗಡೆಗೊಳಿಸಿದ್ದ ಮಾರುತಿ ಸಂಸ್ಥೆಯು ಸೆಲೆರಿಯೊ ತರಹನೇ ಈ ಎಂಟ್ರಿ ಲೆವೆಲ್ ಮಾದರಿಯನ್ನು ಎಎಂಟಿ ಮಾದರಿಯಲ್ಲಿ ಪರಿಚಯಿಸಿತ್ತು. ಇದು ಕೂಡಾ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮಾರುತಿ ಆಲ್ಟೊ ಕೆ10 ಕಾರನ್ನು ಹುಡುಕು

ಮುಂಬರುವ ಮಾರುತಿ ಕಾರುಗಳು

ಇದೀಗ ಮುಂಬರುವ ಮಾರುತಿ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

Most Read Articles

Kannada
English summary
Upcoming Maruti Suzuki Car launches in India
Story first published: Thursday, November 20, 2014, 12:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X