ವಾಹನ ಸಾಲ ಪಡೆಯುವುದು ಹೇಗೆ ಗೊತ್ತಾ?

Automobiles loan
ಈಗ ಹಣಕಾಸು ಸಂಸ್ಥೆಗಳು ಪೈಪೋಟಿಗೆ ಬಿದ್ದು ಸಾಲ ನೀಡುತ್ತಿವೆ. ವಾಹನ ಸಾಲಮೇಳ, ಬಡ್ಡಿದರ ಕಡಿತ, ಹಬ್ಬದ ಆಫರ್, ಹೊಸ ವರ್ಷದ ಆಫರ್ ಹೀಗೆ ನಾನಾ ಆಮೀಷಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಇಷ್ಟೆಲ್ಲ ಕಂಪನಿಗಳ ನಡುವ ಯಾರು ಹಿತವರು ಅಂತ ಸಂದಿಗ್ಧತೆಯೂ ಕಾಡುತ್ತದೆ.

ವಾಹನ ಸಾಲ ಪಡೆಯಲು ಬ್ಯಾಂಕ್ ಪ್ರಮುಖ ಮೂಲ. ಬ್ಯಾಂಕ್ ಬ್ಯಾಂಕ್ ಗಳು ಪೈಪೋಟಿಗೆ ಬೀಳುತ್ತಿರುವುದರಿಂದ ಬ್ಯಾಂಕ್ ಗಳು ಅತ್ಯುತ್ತಮ ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಆದರೆ ಅವರು ಕೇಳುವ ದಾಖಲೆಗಳು, ಪೇಪರ್ ವರ್ಕ್ ನಿಮ್ಮ ತಲೆ ಚಿಟ್ಟು ಹಿಡಿಸಲೂ ಬಹುದು.

ಕೆಲವು ವಾಹನ ಕಂಪನಿಗಳು ಮತ್ತು ಡೀಲರ್ ಗಳು ಸಹ ಹಣಕಾಸು ಸಂಸ್ಥೆಗಳನ್ನು ನಡೆಸುತ್ತವೆ. ಇದು ಬ್ಯಾಂಕ್ ಗಳಿಗಿಂತ ತ್ವರಿತವಾಗಿ ನಿಮಗೆ ಸಾಲ ಒದಗಿಸುತ್ತವೆ. ಝೀರೊ ಪರ್ಸೆಂಟ್ ಬಡ್ಡಿದರ ಮತ್ತು ಆಕರ್ಷಕ ಬಡ್ಡಿದರಗಳು ಸೇರಿದಂತೆ ಹಲವು ಹಣಕಾಸು ಸ್ಕೀಮ್ ಗಳನ್ನು ಇವು ನೀಡುತ್ತಿವೆ.

ಝೀರೊ ಪರ್ಸೆಂಟ್ ಬಡ್ಡಿದರದಲ್ಲಿ ನೀಡುವುದು ಹಣಕಾಸು ಸಂಸ್ಥೆಗಳಿಗೆ ನಷ್ಟದಾಯಕವಾಗಿ ಕಂಡು ಬಂದರೂ ಇದರಲ್ಲಿ ಡೀಲರ್ ಶುಲ್ಕ ವಿನಾಯಿತಿ ಇರುತ್ತದೆ. ಆದರೆ ಇಂತಹ ಝೀರೊ ಪರ್ಸೆಂಟ್ ಬಡ್ಡಿದರ ಸ್ಕೀಮ್ ಗಳು ಅಲ್ಪಾವಧಿಯದಾಗಿರುತ್ತದೆ.

ಆಕರ್ಷಕ ಕಡಿಮೆ ದರದ ಬಡ್ಡಿದರಗಳೂ ದೊರಕುತ್ತಿವೆ. ಇಲ್ಲಿ ಹಣಕಾಸು ಸಂಸ್ಥೆಗಳಿಗೆ ಶೇಕಡ ಮುಖ್ಯವಾಗಿರದೇ ಹಣದ ಹರಿವು ಎಷ್ಟಿದೆ ಎಂಬುದು ಮುಖ್ಯವಾಗುತ್ತದೆ. ವಾಹನ ಸಾಲದ ಕುರಿತು ತಿಳಿದಿರಬೇಕಾದ ಸಾಮಾನ್ಯ ಮಾಹಿತಿ ಇಲ್ಲಿದೆ.

ಅರ್ಹತೆ
* ವಯಸ್ಸು: ಕಂಪನಿಗಳಲ್ಲಿ ವೇತನ ಪಡೆಯುವರಿಗೆ ಕನಿಷ್ಠ ವಯಸ್ಸು 18, ಸ್ವ ಉದ್ಯೋಗಿಗಳಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.
* ವೇತನ ಪಡೆಯುವ ಉದ್ಯೋಗಿ ಪ್ರಸಕ್ತ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಕನಿಷ್ಠ ಒಂದು ವರ್ಷವಾದರೂ ದುಡಿದಿರಬೇಕು.
* ಸ್ವ ಉದ್ಯೋಗಿ ಕನಿಷ್ಠ 2 ವರ್ಷ ವಹಿವಾಟು ಮಾಡಿರಬೇಕು.
* ಕನಿಷ್ಠ ಕಾರ್ ಸಾಲದ ಮೊತ್ತ ಸಾಮಾನ್ಯವಾಗಿ 1 ಲಕ್ಷ ರೂಪಾಯಿ.

ಯಾವೆಲ್ಲ ದಾಖಲೆಗಳು ಬೇಕು:
ವಾಹನ ಸಾಲ ಪಡೆಯಲು ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸಲೇಬೇಕು ಅದು ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಅನುಗುಣವಾಗಿರುತ್ತದೆ.

ವೇತನ ಪಡೆಯುವರಿಗೆ:
* ವಿಳಾಸದ ದಾಖಲೆ( ಕೆಳಗೆ ಸೂಚಿಸಿದ ಯಾವುದಾದರೂ ಒಂದು ದಾಖಲೆ)
ಮನೆ ಲೀಸ್/ ಅಥವಾ ಅಗ್ರಿಮೆಂಟ್ ದಾಖಲೆ, ಪಡಿತರ ಚೀಟಿ, ಡ್ರೈವಿಂಗ್ ಲೈಸನ್ಸ್, ಮನೆ ತೆರಿಗೆ ರಸೀದಿ, ಚುನಾವಣಾ ಗುರುತಿನ ಚೀಟಿ, ಪಾಸ್ ಪೋರ್ಟ್, ಟೆಲಿಫೋನ್ ಬಿಲ್, ವಿದ್ಯುತ್ ಬಿಲ್ಲ, ಲ್ಯಾಂಡ್ ಲೈನ್ ಫೋನ್ ಬಿಲ್ಲ, ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್, ಪೋಸ್ಟ್ ಪೆಯ್ಡ್ ಮೊಬೈಲ್ ಬಿಲ್( 6 ತಿಂಗಳ ಮುಂಚಿನ ಮತ್ತು ಈಗಿನ ಬಿಲ್ ಸೇರಿದಂತೆ ಎರಡು ಬಿಲ್ ಪಾವತಿಸಬೇಕು).

ಐಡೆಂಟೆಟಿ ಪ್ರೂಫ್(ಕೆಳಗಿನವುಗಳಲ್ಲಿ ಯಾವುದಾದರೊಂದು)
ಪಾಸ್ ಪೋರ್ಟ್, ಫೋಟೊ ಕ್ರೆಡಿಟ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಡ್ರೈವಿಂಗ್ ಲೈಸನ್ಸ್, ಉದ್ಯೋಗದ ಐಡಿ(ಭಾರತ ಸರಕಾರ ನೀಡಿರುವುದು, ಪಿಎಸ್ ಯು ಅಥವಾ ಕೆಲವು ಪ್ರಮುಖ ಖಾಸಗಿ ಕಂಪನಿಗಳ ಐಡಿ ಮಾತ್ರ). ಸ್ಥಳೀಯ ಪಂಚಾಯತಿಗಳಲ್ಲಿ ನೀಡಿದ ಐಡಿ, ರೋಟರಿಯಿಂದ ಪಡೆದ ದಾಖಲೆ(ಭಾವಚಿತ್ರದೊಂದಿಗೆ), ಸ್ಯಾಲರಿ ಸ್ಲಿಪ್ ನೊಂದಿಗೆ ಫಾರ್ಮ್ 16, ಆದಾಯ ದಾಖಲೆ ಇತ್ಯಾದಿಗಳು.

ಸ್ವ ಉದ್ಯೋಗಿಗಳಿಗೆ
* ವಿಳಾಸ ದಾಖಲೆ- ಪ್ರಸಕ್ತ ವಿಳಾಸಗಳಿಗೆ ಸಂಬಂಧಿಸಿದ ಯಾವುದೇ ದಾಖಲೆ, ಸ್ವ ಉದ್ಯೋಗಕ್ಕೆ ಸಂಬಂಧಿಸಿದ ಕಂಪನಿ ದಾಖಲೆ ಕೂಡ ಆಗಬಹುದು.
* ಐಡೆಂಟೆಟಿ ಪ್ರೂಫ್(ಕೆಳಗಿನ ಯಾವುದಾದರೊಂದು)
ಪಾಸ್ ಪೋರ್ಟ್, ಪಾನ್ ಕಾರ್ಡ್, ಮತದಾರರ ಚೀಟಿ, ಡ್ರೈವಿಂಗ್ ಲೈಸನ್ಸ್, ಇತ್ತೀಚಿನ ತೆರಿಗೆ ಪಾವತಿ ಚೀಟಿ, ಮಾರಾಟ ತೆರಿಗೆ ದಾಖಲೆ

ಆದಾಯ ದಾಖಲೆ: ಇತ್ತೀಚಿನ ಆದಾಯ ತೆರಿಗೆ ಪಾವತಿ ಚೀಟಿ

More from DriveSpark

Article Published On: Thursday, February 10, 2011, 13:11 [IST]
English summary
English Summary: Too many car buyers overlook the importance of financing a car properly. Getting the right car loan, at a good interest rate, is the best way to cut car-related costs. How you go about your vehicle financed? Here's answer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+