ಪುಟ್ಟ ಮಗುವಿದೆ ಕಾರಿನಲ್ಲಿ, ಸ್ವಲ್ಪ ನೋಡಿಕೊಳ್ಳಿ

ಮಕ್ಕಳೊಂದಿಗೆ ಕಾರು ಪ್ರಯಾಣ ಮಾಡುವಾಗ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಮಕ್ಕಳು ಅಂದ್ರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಮಗೆ ಗೊತ್ತಾಗದ ಹಾಗೇ ಯಾವುದಾದರೂ ಬಟನ್ ಪ್ರೆಸ್ ಮಾಡುತ್ತಾರೆ. ಮಕ್ಕಳನ್ನು ಎದುರು ಸೀಟಿನಲ್ಲಿ ಕುಳಿತುಕೊಳ್ಳಲು ಬಿಡಬಾರದಂತೆ. ಎಲ್ಲಾದರೂ ಗಕ್ಕನೆ ಬ್ರೇಕ್ ಹಾಕಿದರೆ ಎದುರಿನ ಡ್ಯಾಷ್ ಬೋರ್ಡ್ ಗೆ ಅವರ ತಲೆ ಬಡಿಯಬಾರದಲ್ವ. ಅನಿರುದ್ಧನಾದರೆ ಒಂದಿಷ್ಟು ದೊಡ್ಡ ಹುಡುಗ. ಅವನನ್ನು ಕೆಲವೊಮ್ಮೆ ಎದುರು ಸೀಟಿನಲ್ಲೂ ಕುಳಿತುಕೊಳ್ಳಲು ಬಿಡುತ್ತೇವೆ.
ಶ್ರೇಯಸ್ಸ್ ಗೆ ಇನ್ನೂ ಎರಡು ವರ್ಷ ತುಂಬಿಲ್ಲ. ಆರಂಭದಲ್ಲಿ ಅವನನ್ನು ಮಡಿಲಲ್ಲಿ ಮಲಗಿಸಿಕೊಂಡು ಪ್ರಯಾಣ ಮಾಡುತ್ತಿದ್ದೆ. ಅದು ಹೆಚ್ಚು ಅಪಾಯ ಅಂತ ಗೊತ್ತಾಯ್ತು. ಮಕ್ಕಳ ಡಾಕ್ಟರ್ ಸಲಹೆಯಂತೆ ಅವನಿಗಾಗಿ ಕಾರ್ ಸೀಟ್ ಜೋಡಿಸಿದ್ದೇವೆ. ದೂರದ ಊರಿಗೆ ಶ್ರೇಯಸ್ಸ್ ನೊಂದಿಗೆ ಪ್ರಯಾಣ ಬೆಳೆಸುವುದಾದರೆ ಡಾಕ್ಟರ್ ಸಲಹೆ ಪಡೆದೇ ಪ್ರಯಾಣಿಸುತ್ತೇವೆ. ಅಷ್ಟು ಚಿಕ್ಕ ಮಗುವಿನೊಂದಿಗೆ ದೂರದ ಪ್ರಯಾಣ ಒಳ್ಳೆಯದಲ್ಲವಂತೆ. ನಮಗೆ ಅನಿವಾರ್ಯ. ಅದಕ್ಕೆ 20 ಕಿ.ಮೀ. ಪ್ರಯಾಣಕ್ಕೊಮ್ಮೆ 15 ನಿಮಿಷ ಎಲ್ಲಾದರೂ ಕಾರು ನಿಲ್ಲಿಸಿ, ನಿಲ್ಲಿಸಿ ಪ್ರಯಾಣ ಕೈಗೊಳ್ಳುತ್ತೇವೆ. ಹೀಗೆ ಮಾಡುವಂತೆ ಡಾಕ್ಟರೇ ಹೇಳಿದ್ದು.
ಅನಿರುದ್ಧ ಶ್ರೇಯಸ್ಸಿಗಿಂತ ಒಂದೆರಡು ವರ್ಷ ದೊಡ್ಡವನಾದರೂ ಹೇಳಿದ್ದನ್ನು ಕೇಳೋದಿಲ್ಲ. ಮಕ್ಕಳೆಂದರೆ ಹಾಗೇ ತಾನೇ. ಕಾರಿನಲ್ಲಿ ಸುಮ್ಮಗೆ ಕುಳಿತುಕೊಳ್ಳುವುದಿಲ್ಲ. ಡೋರ್ ಬಟನ್, ಲಾಕ್ ಪ್ರೆಸ್ ಮಾಡುತ್ತಿರುತ್ತಾರೆ. ಮಕ್ಕಳೊಂದಿಗೆ ದೂರದೂರಿಗೆ ಪ್ರಯಾಣಿಸುವಾಗ ಡೋರ್ ಲಾಕ್, ಕಿಟಕಿ ಹಾಕಿಕೊಳ್ಳಲು ನಾವು ಮರೆಯುವುದಿಲ್ಲ.
ಅನಿರುದ್ಧ ಒಮ್ಮೊಮ್ಮೆ ಶ್ರೇಯಸ್ ನನ್ನ ಮಡಿಲಲ್ಲಿ ಕೂರಿಸುತ್ತಾನೆ. ಅನಿರೀಕ್ಷಿತವಾಗಿ ಬ್ರೇಕ್ ಹಾಕಿದಾಗ, ಅಪಘಾತದಂತಹ ಸಂದರ್ಭದಲ್ಲಿ ಇದು ಅಪಾಯಕಾರಿಯಂತೆ. ಈ ರೀತಿ ಪ್ರಯಾಣದಲ್ಲಿ ಮಕ್ಕಳ ಮೇಲೆ ಮಕ್ಕಳು ಕುಳಿತುಕೊಳ್ಳಬಾರದು ಎಂದು ಗೊತ್ತಾದ ಮೇಲೆ ಅವರಿಬ್ಬರನ್ನೂ ಬೇರೆ ಬೇರೆಯಾಗಿಯೇ ಕುಳ್ಳಿರಿಸಿ ಸೀಟ್ ಬೆಲ್ಟ್ ಹಾಕುತ್ತೇವೆ. ಮಕ್ಕಳೊಂದಿಗೆ ಕಾರು ಪ್ರಯಾಣ ಮಾಡುವಾಗ ಅವರ ಸುರಕ್ಷತೆ ಕುರಿತು ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ.
ಟಿಪ್ಸ್ ಗಳು
* ಮಗುವಿನೊಂದಿಗೆ ದೂರದ ಪ್ರಯಾಣ ಅವಾಯ್ಡ್ ಮಾಡಿ.
* ಮಕ್ಕಳನ್ನು ಹಿಂದಿನ ಸೀಟ್ ನಲ್ಲಿಯೇ ಕುಳ್ಳಿರಿಸಿ.
* ಸೀಟ್ ಬೆಲ್ಟ್ ಹಾಕಲು ಮರೆಯಬೇಡಿ.
* ಪುಟ್ಟ ಮಗುವಿದ್ದರೆ ವಿಶೇಷ ಮಕ್ಕಳ ಕಾರು ಸೀಟು ಜೋಡಿಸಿ. ಇದರಲ್ಲಿ ಸಾಕಷ್ಟು ಸೇಫ್ಟಿ ಫೀಚರ್ ಗಳಿರುತ್ತವೆ. ಅಪಘಾತದಂತಹ ಸಂದರ್ಭದಲ್ಲೂ ಇಂತಹ ಸೀಟ್ ಗಳು ಮಗುವನ್ನು ಕಾಪಾಡುತ್ತವೆ.
* ದೂರದ ಪ್ರಯಾಣ ಕೈಗೊಳ್ಳುವಾಗ ಮಕ್ಕಳಲ್ಲಿ ಏನಾದರೂ ಮಾತನಾಡುತ್ತೀರಿ. ಅವರನ್ನು ಹೆಚ್ಚು ಅಂತರ್ಮುಖಿಯಾಗಲು ಬಿಡುವುದಕ್ಕಿಂತ ಏನಾದರೂ ಅವರಲ್ಲಿ ಮಾತನಾಡುತ್ತ ಡ್ರೈವ್ ಮಾಡಿ.
* ದೂರದ ಪ್ರಯಾಣ ಕೈಗೊಳ್ಳುವಾಗ ಮಕ್ಕಳಲ್ಲಿ ಏನಾದರೂ ಮಾತನಾಡುತ್ತೀರಿ. ಅವರನ್ನು ಹೆಚ್ಚು ಅಂತರ್ಮುಖಿಯಾಗಲು ಬಿಡುವುದಕ್ಕಿಂತ ಏನಾದರೂ ಅವರಲ್ಲಿ ಮಾತನಾಡುತ್ತ ಡ್ರೈವ್ ಮಾಡಿ.
* ವಿಂಡೋ ಲಾಕ್, ಲಿವರ್ ಗಳನ್ನು ಮಕ್ಕಳು ಮುಟ್ಟುತ್ತಿದ್ದರೆಯೇ ಪರೀಕ್ಷಿಸುತ್ತೀರಿ.
* ಕಿಟಕಿ, ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳಿ.
* ಮಗುವನ್ನು ಕಾರಿನಲ್ಲಿ ಬಿಟ್ಟು, ಬಾಗಿಲು ಹಾಕಿಕೊಂಡು ಮಾಲ್ ಗೆ ಹೋಗಬೇಡಿ.
ಮಕ್ಕಳನ್ನು ನಿರ್ಲಕ್ಷ್ಯದಿಂದ ಕಾರಿನಲ್ಲಿ ಕರೆದೊಯ್ಯುವ ಎಷ್ಟೋ ತಂದೆ ತಾಯಂದಿರನ್ನು ನೋಡಿದಾಗ ಇದನ್ನೆಲ್ಲ ಬರೆಯಬೇಕೆನಿಸಿತು.
;

Click it and Unblock the Notifications








