ವ್ಯಾಕ್ಸಿಂಗ್: ಹಳೆಕಾರಿಗೆ ಹೊಸ ಮೆರುಗು, ಹತ್ತು ಸಲಹೆ

* ವ್ಯಾಕ್ಸ್ ಹಚ್ಚುವ ಮುನ್ನ ಕಾರನ್ನು ತೊಳೆಯಿರಿ. ಕಾರಿನ ತೇವಾಂಶ ಒಣಗಿರಲಿ.
* ಒಳ್ಳೆಯ ಗುಣಮಟ್ಟದ ಕಾರು ವ್ಯಾಕ್ಸ್ ಬಳಸಿರಿ. ನಿಮಗೆ ಸಂಶಯ ಬಂದರೆ ಯಾವ ವ್ಯಾಕ್ಸ್ ಬಳಕೆ ಉತ್ತಮವೆಂದು ಕಾರು ಡೀಲರ್ ಬಳಿ ವಿಚಾರಿಸಿ.
* ಕಾರು ತುಂಬಾ ಬಿಸಿಯಾಗಿರುವಾಗ ಅಥವಾ ತಣ್ಣಗಾಗಿರುವಾಗ ವ್ಯಾಕ್ಸ್ ಹಚ್ಚದಿರಿ. ತಂಪು ಪ್ರದೇಶದಲ್ಲಿ ಕಾರು ಪಾರ್ಕ್ ಮಾಡಿ ವ್ಯಾಕ್ಸ್ ಹಚ್ಚಿರಿ.
* ವ್ಯಾಕ್ಸ್ ಹಚ್ಚಲು ಒಳ್ಳೆಯ ಸ್ಪಾಂಜ್ ಬಳಸಿರಿ.
* ಯಾವ ರೀತಿ ನೀವು ವ್ಯಾಕ್ಸ್ ಹಚ್ಚುತ್ತೀರಿ ಎಂಬುದು ಕೂಡ ಪ್ರಮುಖ ವಿಷಯ. ನಿಮಗೆ ಇಷ್ಟಬಂದಂತೆ ಉಜ್ಜಬೇಡಿ. ಎದುರಿನಿಂದ ಹಿಂದಕ್ಕೆ ವ್ಯಾಕ್ಸ್ ಉಜ್ಜುವುದು ಒಳ್ಳೆಯದು. ಕಾರಿನ ಸೈಡ್ ಗಳಲ್ಲಿ ಕೆಳಗಿನಿಂದ ಮೇಲಕ್ಕೆ ವ್ಯಾಕ್ಸ್ ಉಜ್ಜಿರಿ.
* ಹಳೆಯ ವ್ಯಾಕ್ಸ್ ತೆಗೆಯುವುದು ಕೂಡ ಮುಖ್ಯ. ನೀವು ಯಾವ ಕಡೆಯಿಂದ ವ್ಯಾಕ್ಸ್ ಹಚ್ಚಲು ಸುರುಮಾಡಿದಿರೋ ಅದೇ ಕಡೆಯಿಂದ ಉಜ್ಜುತ ಬರಬಹುದು. ಎಷ್ಟು ದಿನಕ್ಕೊಮ್ಮೆ ವ್ಯಾಕ್ಸ್ ಹಚ್ಚಬೇಕು ಅಥವಾ ಅಳಿಸಬೇಕು ಎಂಬುದನ್ನು ನಿಮ್ಮ ಕಾರು ಡೀಲರ್ ಬಳಿ ವಿಚಾರಿಸಿರಿ.
ನಿಮ್ಮ ಪ್ರೀತಿಯ ಕಾರಿಗೆ ವ್ಯಾಕ್ಸ್ ಹಚ್ಚುವಾಗ ಈ ಸಲಹೆಗಳನ್ನು ಪಾಲಿಸಿರಿ. ಇದರಿಂದ ನಿಮ್ಮ ಕಾರು ಮಿರಮಿರ ಮಿಂಚುತ್ತದೆ. ಕಾರಿಗೊಂದು ಹೊಸ ಲುಕ್ ಬರುತ್ತದೆ.


Click it and Unblock the Notifications








