ಚಿತ್ತಚಾಂಚಲ್ಯವಿಲ್ಲದ ವಾಹನ ಚಾಲನೆ ಮಾಡಲು ಹತ್ತು ಸಲಹೆ

ಮನಸ್ಸು ಮಾಯಾವಿ. ಅದು ನಿಂತಲ್ಲಿ ನಿಲ್ಲೋದಿಲ್ಲ. ಕುಂತಲ್ಲಿ ಕೂರೋದಿಲ್ಲ. ನಾವು ಮನೆಯಲ್ಲಿ ಕುಳಿತಲ್ಲೇ ಅಮೆರಿಕಕ್ಕೆ ಹೋಗಿ ಬಿಡುತ್ತೇವೆ. ಆದರೆ ವಾಹನದ ಡ್ರೈವಿಂಗ್ ಸೀಟ್ ನಲ್ಲಿ ಕುಳಿತಾಗ ಮನಸ್ಸು ಸ್ಟೇರಿಂಗ್ ಮೇಲಿರಲಿ. ಯಾಕೆಂದರೆ ಮನಸ್ಸು ನೆಟ್ಟು ಚಾಲನೆ ಮಾಡಿದರೆ ಆನಂದ. ಮೈಮರೆತರೆ ಗೋವಿಂದ.

ಚಿತ್ತಚಾಂಚಲ್ಯವಿಲ್ಲದ ಚಾಲನೆಗೆ ಅಮೂಲ್ಯ ಹತ್ತು ಸಲಹೆಗಳು

* ವಾಹನ ಚಲಾಯಿಸುತ್ತಿರುವಾಗ ಮೊಬೈಲ್ ಫೋನ್ ಬಳಸದಿರಿ. ಕರೆ ಮಾಡುವುದು/ ಸಂದೇಶ ಓದುವುದು ಬರೆಯುವುದು ಮಾಡಬೇಡಿ. ತುರ್ತು ಕರೆ ಬಂದಾಗ ವಾಹನ ಪಕ್ಕಕ್ಕೆ ನಿಲ್ಲಿಸಿ ಗಂಟೆಗಟ್ಟಲೆ ಮಾತನಾಡಿ. ಮಾತನಾಡಿ ಮುಗಿದಮೇಲೆ ಗಾಡಿ ಸ್ಟ್ರಾಟ್ ಮಾಡಿ.

* ಮಹಿಳೆಯರೇ ನೀವು ವಾಹನ ಚಾಲನೆ ಮಾಡುತ್ತಿರುವಾಗ ತುಟಿಗೆ ಲಿಪ್ ಸ್ಟಿಕ್ ಹಚ್ಚದಿರಿ. ಆಗಾಗ ಕೂದಲನ್ನೂ ತೀಡುತ್ತ ಪೋಸ್ ಕೊಡದಿರಿ. ಪೌಡರ್, ಸ್ನೋ ಹಚ್ಚುತ್ತ ಸವಾರಿ ಮಾಡದಿರಿ. ಪುರುಷರಿಗೂ ಒಮ್ಮಮ್ಮೆ ಡ್ರೈವಿಂಗ್ ಮಾಡುವಾಗ ಸೌಂದರ್ಯ ಪ್ರಜ್ಞೆ ಜಾಗೃತವಾಗುವುದುಂಟು. ತಲೆಬಾಚುವುದು, ಕೋಟ್ ಸರಿಪಡಿಸುವುದು ಇತ್ಯಾದಿಗಳನ್ನೆಲ್ಲ ಮಾಡದಿರಿ. ಮ್ಯೂಸಿಕ್ ಸಿಸ್ಟಮ್ ಮೇಲೆ ಜಾಸ್ತಿ ಗಮನ ನೀಡದಿರಿ.

* ಡ್ರೈವಿಂಗ್ ಮಾಡುತ್ತ ಓದುವುದು, ಬರೆಯುವುದು ಮಾಡಬೇಡಿ. ಮ್ಯಾಪ್ ವೀಕ್ಷಣೆ ಕೂಡ ವಾಹನ ನಿಲ್ಲಿಸಿ ಮಾಡಿ.

* ವಾಹನ ಚಲಾಯಿಸುತ್ತಿರುವಾಗ ಪಾನೀಯ ಕುಡಿಯುವುದು ಮತ್ತು ತಿಂಡಿತಿನಿಸು ತಿನ್ನುವುದು ಮಾಡಬೇಡಿ.

* ಜೋರಾಗಿ ಮ್ಯೂಸಿಕ್ ಇಟ್ಟು ವಾಹನ ಚಲಾಯಿಸದಿರಿ. ಮೆಲುವಾಗಿ ಸಂಗೀತ ಕೇಳುವುದು ನಿಮ್ಮ ಮನಸ್ಸನ್ನೂ ಹೆಚ್ಚು ಆಹ್ಲಾದಕರವಾಗಿಸುತ್ತದೆ. ಜೋರಾಗಿ ವಾಲ್ಯೂಮ್ ಇಟ್ಟು ಹೆಡ್ ಫೋನ್, ಇಯರ್ ಫೋನ್ ಬಳಸುವುದು ಮಾಡದಿರಿ.

* ಹೊರಜಗತ್ತಿನ ಕುರಿತು ಗಮನವಿರಲಿ. ಅಂಬ್ಯುಲೆನ್ಸ್ ಹಾರ್ನ್ ಹಾಕುತ್ತಿದ್ದರೆ ದಾರಿಬಿಡಿ. ಪಾದಚಾರಿಗಳು ಅಡ್ಡಬರುತ್ತಿದ್ದಾರೆಯೇ ಗಮನಿಸಿ.

* ವಾಹನದಲ್ಲಿ ಮಕ್ಕಳಿದ್ದರೆ ಅವರಿಗೆ ಸೀಟು ಬೆಲ್ಟ್ ಹಾಕಿರಿ. ಇಲ್ಲದಿದ್ದರೆ ನಿಮ್ಮ ಗಮನ ಹೆಚ್ಚು ಅವರ ಮೇಲೆಯೇ ಇರುತ್ತದೆ.

* ಸಿಗರೇಟು ಸೇದುವುದು ಕೆಟ್ಟದು. ವಾಹನ ಚಲಾಯಿಸುವಾಗ ಸೇದುವುದಂತು ಅಪಾಯಕಾರಿ. ಸಿಗರೇಟ್ ಉರಿಸುವಾಗ ನಿಮ್ಮ ಗಮನ ಎಲ್ಲೆಲ್ಲೂ ಹೋಗುತ್ತದೆ. ಅದರ ಬೂದಿಯನ್ನು ಆಶ್ ಟ್ರೇಗೆ ಹಾಕುವಾಗ ನಿಮ್ಮ ಗಮನ ರಸ್ತೆಯ ಮೇಲಿರೋದಿಲ್ಲ.

* ವಾಹನ ಚಲಾಯಿಸುತ್ತಿರುವಾಗ ಹಿಂದಿನ ಸೀಟಿನತ್ತ ಆಗಾಗ ತಿರುಗುವುದು, ಅಲ್ಲಿಟ್ಟ ಬ್ಯಾಗಿಗೆ ಕೈ ಹಾಕುವುದು ಮಾಡಬೇಡಿ.

* ಡ್ರೈವಿಂಗ್ ಮಾಡುತ್ತಿರುವಾಗ ರಸ್ತೆಯ ಬದಿಯಲ್ಲಿರುವ ಸೀನರಿಗಳು, ಜಾಹೀರಾತು ಬೋರ್ಡ್ ಗಳನ್ನು ನೋಡುತ್ತ ಮೈಮರೆಯಬೇಡಿ.

ಪ್ರಾಣ ಯಾವತ್ತೂ ಅಮೂಲ್ಯ. ಅದು ನಿಮ್ಮದಾಗಿರಬಹುದು. ರಸ್ತೆಯಲ್ಲಿರುವ ಪಾದಚಾರಿಗಳದಾಗಿರಬಹುದು. ಅಥವಾ ಇತರ ವಾಹನ ಚಾಲಕರಾದಗಿರಬಹುದು. ನಿಮ್ಮ ಚಿತ್ತ ಚಾಂಚಲ್ಯದಿಂದ ಅಮೂಲ್ಯ ಜೀವಹಾನಿ, ಅಪಘಾತ, ಅನಾಹುತ ತಪ್ಪಿಸಲು ಈ ಅಮೂಲ್ಯ ಸಲಹೆ ಪಾಲಿಸಿರಿ. ಹ್ಯಾಪಿ ಡ್ರೈವಿಂಗ್...

More from DriveSpark

Article Published On: Friday, July 1, 2011, 16:13 [IST]
English summary
Attention Drivers:. Please avoid distraction while driving. Don't look outside for Beautiful advertising posters, Never use a cell phone while driving, Don't do makeup for your beautiful face in driving. Here is more useful tips for happy driving. Just drive here.
Read more on ಕಾರು tips car vehicle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+