ಹ್ಯಾಪಿ ಜರ್ನಿ: ಸವಾರಿಗೆ ಮುನ್ನ ವೈಪರ್ ಕೇರ್ ಮರೆಯದಿರಿ

Wiper care Tips
ಹೆಚ್ಚಿನ ಜನರು ಡ್ರೈವಿಂಗ್ ಗೆ ಮುನ್ನ ಕಾರಿನ ಸುರಕ್ಷತೆಯತ್ತ ಗಮನ ನೀಡುತ್ತಾರೆ. ಟೈರ್ ಟ್ರಿಡ್ ಸರಿಯಾಗಿದೆಯೇ? ಎಂಜಿನ್ ಸರಿಯಾಗಿದೆಯೇ? ಸಾಕಷ್ಟು ಇಂಧನ ಇದೆಯೇ? ಬ್ರೇಕ್ ಸರಿಯಾಗಿದೆಯಾ? ಹೀಗೆ ಎಲ್ಲಾ ವಿಭಾಗಗಳನ್ನು ನೋಡುತ್ತಾರೆ. ಆದರೆ ಮಳೆಗಾಲದಲ್ಲಿ ಕಾರಿನ ವೈಪರ್ ಸರಿಯಾಗಿದೆಯೇ ಎಂದು ನೋಡಲು ಹೆಚ್ಚಿನವರು ಮರೆಯುತ್ತಾರೆ.

ನೀವು ಬೆಂಗಳೂರಿನಿಂದ ಆಗುಂಬೆಗೆ ಪ್ರಯಾಣ ಬೆಳೆಸುತ್ತಿರಿ ಅಂದುಕೊಳ್ಳೋಣ. ತುಮಕೂರು ಅಥವಾ ಶಿವಮೊಗ್ಗಕ್ಕೆ ಮುಟ್ಟಿದಾಗ ನಿಮ್ಮ ಕಾರಿನ ವೈಪರ್ ಕೈಕೊಡುತ್ತದೆ. ಆಗುಂಬೆ ಹತ್ತಿರವಾದಗ ಅಲ್ಲಿ 17 ಸೆಂಟಿಮೀಟರ್ ಮಳೆ ಸುರಿಯುತ್ತಿರುತ್ತದೆ. ನಿಮ್ಮ ಪ್ರಯಾಣ ಗೋವಿಂದ. ಅಲ್ಲೇ ನಿಲ್ಲಬೇಕಾಗುತ್ತದೆ. ಅಥವಾ ಅಪಘಾತವಾಗುವ ಸಾಧ್ಯತೆಯೂ ಇದೆ. ಹೀಗಾಗಿ ವೈಪರ್ ಕೇರ್ ಅತ್ಯಂತ ಅಗತ್ಯ.

ಪ್ರತಿದಿನ ಪ್ರಯಾಣಕ್ಕೆ ಮುನ್ನ ಕಾರಿನ ಎಲ್ಲಾ ಭಾಗಗಳ ಕುರಿತು ಕಾಳಜಿ ವಹಿಸುವುದು ಅಗತ್ಯ. ಮಳೆಗಾಲದಲ್ಲಿ ವೈಪರ್ ಸರಿಯಿದೆಯೇ ಎಂದು ನೋಡದೇ ಪ್ರಯಾಣ ಆರಂಭಿಸಬೇಡಿ. ವಾಹನ ಡ್ರೈವಿಂಗ್ ಮಾಡುವಾಗ ಎದುರಿನ ರಸ್ತೆ ಸ್ಪಷ್ಟವಾಗಿ ಕಾಣಬೇಕಾದ್ದು ಅತ್ಯಂತ ಅಗತ್ಯ. ಕೆಟ್ಟಿರುವ ವೈಪರ್ ಅಪಾಯಕಾರಿ.

ವೈಪರ್ ಹಾಳಾಗುವುದು ಹೇಗೆ? ಧೂಳು, ಬಿಸಿಲು, ಎಣ್ಣೆಯಂಶಗಳು ವೈಪರ್ ಹಾಳುಗೆಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾತಾವರಣ ತಂಪಾಗಿದ್ದರೆ ವೈಪರ್ ಗಟ್ಟಿಯಾಗುತ್ತದೆ. ಬಿಸಿಲಿಗೆ ವೈಪರ್ ರಬ್ಬರ್ ಬೇಗ ಹಾಳಾಗುತ್ತದೆ. ವೈಪರಿನಲ್ಲಿರುವ ರಬ್ಬರ್ ಭಾಗ ಹಾಳಾಗುವುದು, ಕಳಚಿಕೊಳ್ಳುವುದು ಬೇಗ.

ವೈಪರ್ ಕೇರ್ ಹೀಗೆ ಮಾಡಿರಿ
* ಮಳೆಗಾಲದಲ್ಲಿ ವಾಹನದಲ್ಲಿ ಡ್ರೈವಿಂಗ್ ಮಾಡುವ ಮುನ್ನ ವೈಪರ್ ಸಮರ್ಪಕವಾಗಿದೆಯೇ ಪರಿಶೀಲಿಸಿರಿ.
* ವೈಪರ್ ನಲ್ಲಿ ಹಿಡಿದಿರುವ ಧೂಳು, ತೇವವನ್ನು ಸ್ವಚ್ಛ ಮಾಡುತ್ತಿರಿ.
* ಪ್ರತಿ ಎರಡು ವರ್ಷಕ್ಕೊಮ್ಮೆ ಅಥವಾ 6 ಸಾವಿರ ಮೈಲು ಪ್ರಯಾಣಕ್ಕೊಮ್ಮೆ ವೈಪರ್ ಬ್ಲೇಡ್ ಬದಲಾಯಿಸಿರಿ.
* ವೈಪರ್ ಬ್ಲೇಡ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಕೇವಲ ರಿಫಿಲ್ ಬದಲಾಯಿಸಿದರೆ ಸಾಕು. ಅಂದ್ರೆ ರಬ್ಬರ್ ಭಾಗಗಳನ್ನು ಬದಲಾಯಿಸಿರಿ. ಪೂರ್ತಿ ವೈಪರ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇದ್ದರೆ ವೈಪರ್ ಬ್ಲೇಡ್ ಕೂಡ ಬದಲಾಯಿಸಿರಿ.

More from DriveSpark

Article Published On: Tuesday, July 5, 2011, 13:28 [IST]
English summary
Make sure your wiper is in good working condition. Couple of tips to maintain/replace/repair wiper and wind shield, particularly while you embark on a long distance journey in the rainy season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+