ವಾಹನ ಸಾಲ : ದಟ್ಸ್ ಕನ್ನಡ ಮಾರ್ಗದರ್ಶಿ

By * ಸಂಪಾದಕ

ವಾಹನವೊಂದನ್ನು ಖರೀದಿಸಬೇಕೆಂದು ನೀವು ಬಹುದಿನದಿಂದ ಕನಸು ಕಾಣುತ್ತಿರಬಹುದು. ದೂರದಲ್ಲಿರುವ ಕಚೇರಿಗೆ ದಿನನಿತ್ಯ ಸಾಗಲು ಒಂದು ದ್ವಿಚಕ್ರ ವಾಹನವಿದ್ದಿದ್ದರೆ ಅಂತ ನೀವು ಯೋಚಿಸಬಹುದು. ಅಥವಾ ಹೆಂಡತಿ ಮಕ್ಕಳೊಂದಿಗೆ, ಅಪ್ಪ ಅಮ್ಮನೊಂದಿಗೆ ಸುತ್ತಾಡಲು ಒಂದು ಫ್ಯಾಮಿಲಿ ಕಾರು ಖರೀದಿಸುವ ಆಲೋಚನೆಯೂ ನಿಮಗಿರಬಹುದು.

ಕಾರು/ಬೈಕ್/ಸ್ಕೂಟರ್ ಖರೀದಿಸಲು ಬೇಕಾದ್ದು ದುಡ್ಡು. ದುಡ್ಡು ಯಾರು ಕೊಡ್ತಾರೆ ಸ್ವಾಮಿ? ನಿಮ್ಮಲ್ಲಿ ಹತ್ತು ಲಕ್ಷ ಕ್ಯಾಷ್ ಇದ್ದರೂ ನೀವು ಪೂರ್ತಿ ಹಣ ಕೊಟ್ಟು ವಾಹನ ಖರೀದಿಸಲು ಇಚ್ಚಿಸುವುದಿಲ್ಲ. ಹಾಗೆ ಖರೀದಿಸಬಾರದಂತೆ. ನಿಮಗೆ ಸಾಲ ಬೇಕೆಂದಾಕ್ಷಣ ನೆನಪಿಗೆ ಬರುವುದು ಬ್ಯಾಂಕ್.

ನಿಜ. ವಾಹನ ಸಾಲ ಪಡೆಯಲು ಬ್ಯಾಂಕಿಗಿಂತ ಬೆಸ್ಟ್ ಮೂಲ ಇನ್ನೊಂದಿಲ್ಲ. ಬ್ಯಾಂಕುಗಳಿಂದು ಗ್ರಾಹಕರಿಗೆ ಪೈಪೋಟಿಗೆ ಬಿದ್ದು ವಾಹನ ಸಾಲ ನೀಡುತ್ತಿವೆ. ವಾಹನ ಸಾಲ ಮೇಳ, ಕಡಿಮೆ ಬಡ್ಡಿದರ, ಹಬ್ಬದ ಆಫರ್ ಅಂತ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿವೆ. ಇನ್ನೇನು ದೀಪಾವಳಿ ಬರ್ತಾಯಿದೆ.

ಇಂತಹ ಸಮಯದಲ್ಲಿ ನಿಮಗೆ ಕೊಂಚ ಸಂದಿಗ್ಧತೆಯೂ ಆಗಬಹುದು. ಯಾರು ಹಿತವರು ಈ ಬ್ಯಾಂಕಿನೊಳಗೆ ಅಂತನೂ ಅನಿಸಬಹುದು. ವಾಹನ ಸಾಲ ಯಾರು ಕೊಡುತ್ತಾರೆ? ಹೇಗೆ ತೊಗೊಳೋದು? ಯಾವ ಬ್ಯಾಂಕ್ ಆಗಬಹುದು? ಯಾವ ಬ್ಯಾಂಕ್ ಬೇಡ? ಹೀಗೆ ಹಲವು ಪ್ರಶ್ನೆಗಳು ನಿಮ್ಮಲ್ಲಿರಬಹುದು.

ದಟ್ಸ್ ಕನ್ನಡ ವಾಹನ ವಿಭಾಗದ ವರದಿಗಾರರೆಲ್ಲ ಈಗ ಬ್ಯಾಂಕ್ ಗಳನ್ನು ಸುತ್ತುತ್ತಿದ್ದಾರೆ. ಯಾವ ಬ್ಯಾಂಕ್ ನಮ್ಮ ಓದುಗರಿಗೆ ಒಳ್ಳೆಯ ವಾಹನ ಸಾಲ ನೀಡುತ್ತಿದೆ ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಪ್ರತಿ ಬ್ಯಾಂಕ್ ನ ವಾಹನ ಸಾಲ ವಿಭಾಗವನ್ನೂ ತಲಾಷ್ ಮಾಡಿ ನಿಮ್ಮ ಮುಂದಿಡಲಿದ್ದಾರೆ.

ನಾಳೆಯಿಂದ ದಿನಕ್ಕೊಂದು ಬ್ಯಾಂಕ್ ನಿಮ್ಮ ಮುಂದಿರಲಿದೆ. ಜೊತೆಗೆ ವಾಹನ ಸಾಲ ಪಡೆಯುವುದು ಹೇಗೆ? ಪಾಲಿಸಬೇಕಾದ ಎಚ್ಚರಿಕೆಯೇನು? ಯಾವ ರೀತಿಯ ಪ್ರೊಸಿಜರ್ ಗಳಿವೆ? ಹೀಗೆ ಬೇಜಾನ್ ಸಲಹೆ, ಮಾಹಿತಿ, ಅನುಭವ ಕಥನಗಳನ್ನು ನೀವು ಓದಲಿದ್ದೀರಿ. ವಾಹನ ಸಾಲ ಖರೀದಿಸಿದವರು, ಖರೀದಿಸಲು ಯೋಚಿಸುತ್ತಿರುವರ ಕಣ್ಣು ದಟ್ಸ್ ಕನ್ನಡದ ಮೇಲಿರಲಿ.

More from DriveSpark

Article Published On: Monday, July 18, 2011, 16:10 [IST]
English summary
How to avail automobile loan from Banks in Bangalore? Which bank is ideal for you and why? Oneindia-Kannada will bring a series of introductions to Banks ( both private and Public Sector) engaged in financing vehicle loans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+