ವಾಹನ ಸಾಲ ಪಡೆಯುವರಿಗೆ ಸಾಲದ ಸಲಹೆಗಳು

Loan
ಇತ್ತೀಚೆಗೆ ನಿಮಗೊಂದು ಬೈಕ್/ಕಾರು ಬೇಕೆಂದೆನಿಸುತ್ತದೆ. ಜೊತೆಗೆ ಮಾರುಕಟ್ಟೆಗೆ ಇತ್ತೀಚೆಗೆ ಆಗಮಿಸಿದ ಕಾರು ಅಥವಾ ಬೈಕ್ ನಿಮ್ಮ ಗಮನ ಸೆಳೆದಿರುತ್ತದೆ. ತಕ್ಷಣ ನೀವು ಶೋರೂಂ ಗೆ ಹೋಗಿ ವಿಚಾರಿಸುತ್ತೀರಿ. ನೀವು ವಾಹನ ಖರೀದಿಸುತ್ತೀರಿ ಅಂತ ಗೊತ್ತಾದಗ ಸಾಲ ನೀಡಲು ಹಲವು ಹಣಕಾಸು ಸಂಸ್ಥೆಗಳು ಕೈಬೀಸಿ ಕರೆಯುತ್ತವೆ. ವಾಹನ ಸಾಲ ಪಡೆಯಲು ಇಲ್ಲಿದೆ ಕೆಲವು ಸಲಹೆಗಳು.

* ವಾಹನ ಸಾಲ ಪಡೆಯಲು ನೇರವಾಗಿ ಬ್ಯಾಂಕನ್ನು ಸಂಪರ್ಕಿಸುವುದು ಒಳ್ಳೆಯದು. ಯಾವುದೇ ಥರ್ಡ್ ಪಾರ್ಟಿ ಮೂಲಕ ವಾಹನ ಸಾಲ ಪಡೆದರೆ ಅವರಿಗೂ ಪಾಲು ನೀಡಬೇಕಾಗುತ್ತದೆ. ಒಂದಿಷ್ಟು ಪೇಪರ್ ಕೆಲಸ ನಿಮಗೆ ಜಾಸ್ತಿ ಅನಿಸಬಹುದು. ಆದರೆ ನೀವೇ ಬ್ಯಾಂಕಿನೊಂದಿಗೆ ನೇರ ಸಂಪರ್ಕವಿಟ್ಟುಕೊಳ್ಳುವುದು ಒಳ್ಳೆಯದು.

* ವಾಹನ ಸಾಲ ಪಡೆಯಲು ನೀವು ಹತ್ತಿರದ ಬ್ಯಾಂಕಿಗೆ ಹೋಗುತ್ತೀರಿ. ಆಗ ಬ್ಯಾಂಕ್ ಒಂದು ಉಳಿತಾಯ ಖಾತೆ ಮಾಡುವಂತೆ ಸೂಚಿಸುತ್ತದೆ. ನೀವು ಆ ಬ್ಯಾಂಕಿನ ಖಾತೆ ಹೊಂದಿಲ್ಲವಾದರೆ ಹೊಸದಾಗಿ ಆರಂಭಿಸಬೇಕಾಗುತ್ತದೆ.

* ದಾಖಲೆಗಳು: ಈ ದಿನಗಳಲ್ಲಿ ನಿಮ್ಮ ಪಾನ್ ಕಾರ್ಡ್ ವಾಹನ ಸಾಲಕ್ಕೆ ಅತ್ಯಂತ ಅಗತ್ಯವಾದ ದಾಖಲೆಯಾಗಿದೆ. ನಿಮ್ಮ ಇತ್ತೀಚಿನ ಒಟ್ಟಾರೆ ಒಂದು ವರ್ಷದ ಸ್ಯಾಲರಿ ಸ್ಟೇಟ್ ಮೆಂಟನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ. ನೀವು ನೇರವಾಗಿ ಬ್ಯಾಂಕಿನ ಮ್ಯಾನೆಜರನ್ನು ಸಂಪರ್ಕಿಸಿದರೆ ನಿಮ್ಮ ಸಾಲದ ಪ್ರಕ್ರಿಯೆ ಸುಲಭವಾಗುತ್ತದೆ. ಏಜೆಂಟ್ ಗಳ ಸಹವಾಸ ವಾಹನ ಸಾಲದ ಆರೋಗ್ಯಕ್ಕೆ ಒಳ್ಳೆಯದ್ದಲ್ಲ ಎಂದು ಹೆಚ್ಚಿನವರ ಅಭಿಪ್ರಾಯ.

* ನೀವು ಸಾಲ ಪಡೆಯಲು ದೇಶದ ಬೃಹತ್ ಬ್ಯಾಂಕುಗಳನ್ನೇ ಸಂಪರ್ಕಿಸಬೇಕೆಂದಿಲ್ಲ. ನಿಮ್ಮ ಊರಿನಲ್ಲಿರುವ ಸಣ್ಣ ಸಮುದಾಯ ಬ್ಯಾಂಕಿನಲ್ಲೂ ಕಡಿಮೆ ಬಡ್ಡಿದರದಲ್ಲಿ ಸಾಲ ದೊರಕಬಹುದು. ನೀವು ಸ್ವಉದ್ಯೋಗಿಯಾಗಿದ್ದರೆ ಸಂಬಂಧಿಸಿದ ಸೊಸೈಟಿಗಳಲ್ಲೂ ಸಾಲ ದೊರಕಬಹುದು. ಅಲ್ಲೂ ವಿಚಾರಿಸಿ. ವಿವಿಧ ಬ್ಯಾಂಕುಗಳಲ್ಲಿರುವ ವಾಹನ ಸಾಲದ ಕುರಿತು ಒಂದಿಷ್ಟು ಅಧ್ಯಯನ ಮಾಡಲು ಮರೆಯದಿರಿ.

ವಾಹನ ಸಾಲ ಪಡೆಯಲು ಅಗತ್ಯವಿರುವ ಸಾಮಾನ್ಯ ಅರ್ಹತೆಗಳು
* ವಯಸ್ಸು: ಹೆಚ್ಚಿನ ಬ್ಯಾಂಕುಗಳಲ್ಲಿ ವಾಹನ ಸಾಲಕ್ಕೆ ಕನಿಷ್ಠ ವಯಸ್ಸು 18, ಸ್ವ ಉದ್ಯೋಗಿಗಳಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.
* ವೇತನ ಪಡೆಯುವ ಉದ್ಯೋಗಿ ಪ್ರಸಕ್ತ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಕನಿಷ್ಠ ಒಂದು ವರ್ಷವಾದರೂ ದುಡಿದಿರಬೇಕು.
* ಸ್ವ ಉದ್ಯೋಗಿ ಕನಿಷ್ಠ 2 ವರ್ಷ ವಹಿವಾಟು ಮಾಡಿರಬೇಕು.
* ಕನಿಷ್ಠ ಕಾರ್ ಸಾಲದ ಮೊತ್ತ ಸಾಮಾನ್ಯವಾಗಿ 1 ಲಕ್ಷ ರೂಪಾಯಿ.

More from DriveSpark

Article Published On: Friday, July 22, 2011, 11:00 [IST]
English summary
Auto Loan Tips: How you go about your vehicle financed? Bank or Dealers? How its better for the customer that he deals directly with the bank than thru a 3rd party. Read this tips.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+