ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ವೈವಿಧ್ಯಮಯ ಆಯ್ಕೆಗಳು, ನಿರಂತರವಾಗಿ ಹೆಚ್ಚುತ್ತಿರುವ ಖರೀದಿ ಸಾಮರ್ಥ್ಯ ಮತ್ತು ಸುಲಭವಾದ ಹಣಕಾಸು ಆಯ್ಕೆಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಕಾರನ್ನು ಖರೀದಿಸುವುದು ತುಂಬಾ ಸುಲಭವಾಗಿದೆ. ಜೊತೆಗೆ ಕಾರು ಚಾಲನೆ ಮಾಡುವುದನ್ನು ಕಲಿಯುವುದು ಇನ್ನೂ ಸುಲಭ. ಆದರೆ ವಾಹನದ ಮೈನ್ಟೇನನ್ಸ್ ಹೇಗೆ ಮಾಡಬೇಕು ಎಂಬು ಮಾತ್ರ ಹಲವರಿಗೆ ಗೊತ್ತಿಲ್ಲ.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಇದೇ ಕಾರಣಕ್ಕೆ ವಾಹನ ಕೊಂಡ ಆರು ತಿಂಗಳು ಅಥವಾ ವರ್ಷಕ್ಕೆ ಕಾರಿನಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗಳನ್ನು ದೂರ ಮಾಡಲು ನಾವು ಈ ಕೆಳಗೆ ತಿಳಿಸಿರುವ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಕಾರುಗಳನ್ನು ಹಲವು ವರ್ಷಗಳವರೆಗೆ ಉತ್ತಮವಾಗಿರಿಸಿಕೊಳ್ಳಬಹುದು. ಇದಕ್ಕಾಗಿ ಕಾರು ಮಾಲೀಕರು ಕೆಲವು ಪ್ರಮುಖ ಕಾರ್ ನಿರ್ವಹನಾ ವಿಧಾನಗಳನ್ನು ತಿಳಿದುಕೊಳ್ಳಬೇಕು.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಎಂಜಿನ್ ಆಯಿಲ್

ಕಾರಿನ ಎಂಜಿನ್ ಆಯಿಲ್ ಕೇವಲ ವಾಹನದ ಪರ್ಫಾಮೆನ್ಸ್ ಹಾಗೂ ಉತ್ತಮ ಮೈಲೇಜ್ ನೀಡುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಎಂಜಿನ್ ಆಯಿಲ್ ನಿಮ್ಮ ಕಾರಿನ ಎಂಜಿನ್ ಅನ್ನು ಲೂಬ್ರಿಕಟ್‌ಗೊಳಿಸಿ, ತಂಪಾಗಿಸಲು ಮತ್ತು ಉತ್ತಮವಾಗಿರಿಸಲು ಸಹಕಾರಿಯಾಗಿದೆ ಎಂಬುದು ಹಲವರಿಗೆ ತಿಳಿದಿಲ್ಲ.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಆದ್ದರಿಂದ ಕಾರಿಗೆ ಬೇಕಾದಷ್ಟು ಎಂಜಿನ್ ಆಯಿಲ್ ಇಲ್ಲದಿದ್ದರೇ ಮೂರು ವಿಷಯಗಳಿಗೆ ಕಾರಣವಾಗಬಹುದು. ಉಷ್ಣ ಅವನತಿ (ಲ್ಯಾಕ್ಕರ್ ಮತ್ತು ಕಾರ್ಬೊನೇಸಿಯಸ್ ಡೆಪೋಸಿಟ್ಸ್), ಆಕ್ಸಿಡೀಷನ್ (ವಾರ್ನಿಷ್ ಮತ್ತು ಸ್ಲಡ್ಸ್), ಸಂಕುಚಿತ ತಾಪನ (ಮಸಿ ಮತ್ತು ಟಾರ್) ಇವೆಲ್ಲವೂ ನಿಮ್ಮ ಕಾರಿನ ಎಂಜಿನ್‌ನಲ್ಲಿ ಸೇರಿಕೊಂಡು ಪ್ರಮುಖ ಭಾಗಗಳ ನಡುವಿನ ಘರ್ಷಣೆ ಹೆಚ್ಚಾಗುತ್ತದೆ.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಇದರಿಂದ ವಾಹನಕ್ಕೆ ಹೆಚ್ಚಿನ ಹಾನಿಯಾಗಬಹುದು, ಕಡಿಮೆ ಮೈಲೇಜ್ ಮತ್ತು ಕೆಟ್ಟ ಪರ್ಫಾಮೆನ್ಸ್‌ಗೆ ಕಾರಣವಾಗುತ್ತದೆ. ಹಾಗಾಗಿ ಪ್ರತಿ ಕಾರ್ ಮಾಲೀಕರು ತಿಳಿದಿರಬೇಕಾದ ವಿಷಯವೆಂದರೆ ಕಂಪನಿಯವರು ತಿಳಿಸಿದ ಉತ್ತಮ ದರ್ಜೆಯ ಎಂಜಿನ್ ಆಯಿಲ್‌ ಅನ್ನು ವಾಹನಕ್ಕೆ ಬಳಸಬೇಕು.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಸ್ಪೇರ್ ಟೈರ್

ಕಾರಿನಲ್ಲಿ ಬಿಡಿ ಟೈರ್ ಅನ್ನು ಇಟ್ಟುಕೊಳ್ಳುವುದು ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ ಪ್ರಮುಖ ವಿಷಯ. ಜೊತೆಗೆ ಕಾರ್ ಮಾಲೀಕರು ಟೈರ್ ಬದಲಾಯಿಸಲು ಅಗತ್ಯವಿರುವ ಸಾಧನಗಳನ್ನು ಇಟ್ಟುಕೊಂಡಿರಬೇಕು, ಅಲ್ಲದೇ ನೀವೆ ಫಿಟ್ ಮಾಡವುದನ್ನು ಅರಿತುಕೊಂಡಿರಬೇಕು. ಇನ್ನು ಪ್ರಮುಖವಾಗಿ ಟೈರ್ ಬದಲಾವಣೆಯ ಸಮಯದಲ್ಲಿ ಜ್ಯಾಕ್ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಇದನ್ನು ಮರಿಯದಿರಿ.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ವಿಂಡ್ ಷೀಲ್ಡ್ ವೈಪರ್ ಬ್ಲೇಡ್ಸ್

ಯಾವಾಗಲೂ ವಿಂಡ್‌ಶೀಲ್ಡ್ ವೈಪರ್ ಬ್ಲೇಡ್‌ಗಳನ್ನು ಉತ್ತಮ ಸ್ಥಿತಿಯಲ್ಲಿ ಇರಿಸಬೇಕು. ಏಕೆಂದರೆ ಸವೆದ ವೈಪರ್ ಬ್ಲೇಡ್‌ಗಳೊಂದಿಗೆ ಮಳೆಯಲ್ಲಿ ಚಾಲನೆ ಮಾಡಿದವರಿಗೆ ಇದರ ಸಮಸ್ಯೆ ತಿಳಿದೇ ಇರುತ್ತದೆ. ವೈಪರ್ ಬ್ಲೇಡ್‌ಗಳು ವಾಹನದ ಅತ್ಯಂತ ನಿರ್ಣಾಯಕ ಘಟಕಗಳಲ್ಲಿ ಒಂದಾಗಿದ್ದು, ವೈಪರ್ ಬ್ಲೇಡ್‌ಗಳು ಆರು ತಿಂಗಳೊಳಗೆ ಹಾಳಾಗುವುದರಿಂದ ಅವನ್ನು ನಿಯಮಿತವಾಗಿ ಬದಲಿಸಬೇಕು. ಕಾರನ್ನು ಬಿಸಿಲಿನಲ್ಲಿ ನಿಲ್ಲಿಸಿದಾಗ ಹೆಚ್ಚಿನ ಶಾಖದಿಂದಾಗಿ ಬ್ಲೇಡ್‌ಗಳ ರಬ್ಬರ್ ಗಟ್ಟಿಯಾಗುತ್ತವೆ. ಗಟ್ಟಿಯಾದ ರಬ್ಬರ್, ವಿಂಡ್ ಶೀಲ್ಡ್ ಅನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಹಾಗಾಗಿ ಬಿಸಿಲಿನಲ್ಲಿ ನಿಲ್ಲಿಸಬೇಡಿ.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಪ್ರಮುಖ ಆಯಿಲ್‌ಗಳು

ಕಾರಿಗೆ ಕೇವಲ ಎಂಜಿನ್ ಆಯಿಲ್ ಮಾತ್ರ ಮುಖ್ಯವಲ್ಲ, ಬದಲಿಗೆ ಕಾರನ್ನು ಉತ್ತಮವಾಗಿಡಲು ಹಲವು ಆಯಿಲ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಂಪನಿಯವರು ಶಿಫಾರಸು ಮಾಡಿದ ಸರ್ವಿಸ್‌ ಟೈಮ್‌ ಪ್ರಕಾರ ಅನೇಕ ಇತರ ಆಯಿಲ್‌ಳನ್ನು ಬದಲಾಯಿಸಬೇಕಾಗುತ್ತದೆ. ಅವುಗಳಲ್ಲಿ ಐದು ಆಯಿಲ್‌ಗಳು ಅತ್ಯಂತ ನಿರ್ಣಾಯಕವಾಗಿರುತ್ತವೆ.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಎಂಜಿನ್ ಆಯಿಲ್

ಕೂಲೆಂಟ್

ಪವರ್ ಸ್ಟೀರಿಂಗ್ ಫ್ಲೂಯಡ್

ಬ್ರೇಕ್ ಫ್ಲೂಯಡ್

ವಿಂಡ್ ಷೀಲ್ಡ್ ವಾಷರ್ ಫ್ಲೂಯಡ್

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳು

ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳು ವರ್ಷ ಕಳೆದಂತೆ ಮಬ್ಬಾಗುತ್ತವೆ. ಆದ್ದರಿಂದ, ಅವುಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಉತ್ತಮ. ಅವುಗಳಿಂದ ಬರುವ ಬೆಳಕಿನ ವ್ಯವಸ್ಥೆಯ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸುವುದರಿಂದ ಕೆಲವೊಮ್ಮೆ ಎದುರಾಗುವ ಅಪಾಯಕಾರಿ ಸಂದರ್ಭಗಳನ್ನು ತಪ್ಪಿಸಬಹುದು. ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳಿಂದ ಸರಿಯಾದ ಬೆಳಕು ಬರುತ್ತಿಲ್ಲ ಎಂದು ತಿಳಿದ ತಕ್ಷಣ ದುರಸ್ತಿ ಮಾಡಿಸಿ.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಕಾರು ನಿರ್ವಹಣೆ

ಕಾರ್‌ ಮೇನ್ಟೇನನ್ಸ್‌ನಲ್ಲಿ ಪ್ರಮುಖವಾದದ್ದು, ಕಂಪನಿಯವರು ಶಿಫಾರಸು ಮಾಡಿದ ಸರ್ವಿಸ್ ವೇಳಾಪಟ್ಟಿಗೆ ಅನುಗುಣವಾಗಿರುವುದು. ನಿಮ್ಮ ಕಾರು ಉತ್ತಮ ಸ್ಥಿತಿಯಲ್ಲಿದ್ದರೂ ಸಹ ನಿಗದಿಪಡಿಸಿದ ಸರ್ವಿಸ್‌ಗಳನ್ನು ಅನುಸರಿಸುವ ಅಗತ್ಯವಿದೆ. ನಿಮ್ಮ ಕಾರು ಸರಾಗವಾಗಿ ಕೆಲಸ ಮಾಡಲು ಕೆಲವು ನಿರ್ಣಾಯಕ ಆಯಿಲ್‌ಗಳ ಬದಲಾವಣೆ, ವೀಲ್ ಬ್ಯಾಲೆನ್ಸಿಂಗ್/ಜೋಡಣೆ ಮತ್ತು ಫಿಲ್ಟರ್‌ಗಳ ಬದಲಾವಣೆ ಅತ್ಯಗತ್ಯವಾಗಿರುತ್ತದೆ.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಎಮರ್ಜೆನ್ಸಿ ರೋಡ್‌ಸೈಡ್ ಕಿಟ್

ಕಾರು ಯಾವಾಗ ಕೆಟ್ಟುನಿಲ್ಲುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಆದ್ದರಿಂದ ಎಮರ್ಜೆನ್ಸಿ ಕಿಟ್‌ನೊಂದಿಗೆ ನಿಮ್ಮ ಕಾರನ್ನು ಹೇಗೆ ರಕ್ಷಿಸುವುದು ಎಂಬುದನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ಕಾರ್ ಮಾಲೀಕರಿಗೆ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಹಾಗಾಗಿ ಎಮರ್ಜೆನ್ಸಿ ಕಿಟ್ ಇಟ್ಟುಕೊಳ್ಳುವುದರ ಜೊತೆಗೆ ಅದರ ಬಳಕೆಯನ್ನು ತಿಳಿದುಕೊಳ್ಳಿ.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಫಸ್ಟ್ ಏಡ್ ಕಿಟ್

ಅಗ್ನಿಶಾಮಕ (ಫೈರ್ ಎಸ್ಟಿಂಗ್ವಿಷರ್)

ಜಂಪರ್ ಕೇಬಲ್‌ಗಳು

ಯುಟಿಲಿಟಿ ಟೂಲ್ (ಸ್ವಿಸ್ ಆರ್ಮಿ ನೈಫ್)

ರೈನ್ ಕೋಟ್

ಛತ್ರಿ

ರಿಫ್ಲೆಕ್ಟಿವ್ ವಾರ್ನಿಂಗ್ ಟ್ರೈಯಾಂಗಲ್

ಟೈರ್ ಗೇಜ್

ಗ್ಲೌಸ್

ಚಿಂದಿಗಳು (ರ್ಯಾಗ್ಸ್)

ಡಕ್ಟ್ ಟೇಪ್

ಫೋಮ್ ಟೈರ್ ಸೀಲಾಂಟ್

ಫ್ಲ್ಯಾಶ್‌ಲೈಟ್

ಹೆಚ್ಚುವರಿ ಬ್ಯಾಟರಿಗಳು

ಟೋ ರೋಪ್

ಬೆಚ್ಚಗಿನ ಕಂಬಳಿ

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಬ್ರೇಕ್‌ಗಳು

ಬ್ರೇಕ್‌ಗಳು ಅತ್ಯಂತ ನಿರ್ಣಾಯಕ ಸುರಕ್ಷತಾ ವೈಶಿಷ್ಟ್ಯವಾಗಿದ್ದು ಅದನ್ನು ಎಂದಿಗೂ ನಿರ್ಲಕ್ಷಿಸಬಾರದು. ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಗಮನಿಸಿ, ಬ್ರೇಕ್ ಹಾಕಿದಾಗ ಸ್ಟೀರಿಂಗ್ ವೀಲ್ ಕಂಪಿಸುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ. ಕಂಪಿಸಿದರೆ ಬ್ರೇಕ್‌ಗಳನ್ನು ಆದಷ್ಟು ಬೇಗ ಪರೀಕ್ಷಿಸಿ ಸರಿಪಡಿಸಿಕೊಳ್ಳಿ.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಉತ್ತಮ ಮೆಕ್ಯಾನಿಕ್ ಇರಲಿ

ಅಂತಿಮವಾಗಿ ಉತ್ತಮ ಮೆಕ್ಯಾನಿಕ್ ಅನ್ನು ಹುಡುಕಿಟ್ಟುಕೊಳ್ಳಿ. ಅಧಿಕೃತ ಡೀಲರ್‌ಶಿಪ್‌ನಲ್ಲಿ ನಿಮ್ಮ ಕಾರನ್ನು ಸರ್ವಿಸ್ ಮಾಡಲು ಶಿಫಾರಸು ಮಾಡಲಾಗಿದ್ದರೂ, ನಿಮ್ಮ ಮನೆ ಬಳಿ ವಿಶ್ವಾಸಾರ್ಹ ಮೆಕ್ಯಾನಿಕ್ ಒಬ್ಬರನ್ನು ಹೊಂದಿರುವುದು ಇನ್ನೂ ಒಳ್ಳೆಯದು.

ಪ್ರತಿಯೊಬ್ಬ ಕಾರು ಮಾಲೀಕ ತಿಳಿದಿರಬೇಕಾದ 10 ವಿಷಯಗಳು: ಇವು ಖಂಡಿತ ಕಾರಿನ ಬಾಳಿಕೆ ಹೆಚ್ಚಿಸುತ್ತವೆ!

ಮೂಲ ಕಾರ್ ನಿರ್ವಹಣೆ ಹಂತಗಳು ಯಾವುವು?

ಪ್ರತಿಯೊಬ್ಬ ಕಾರು ಮಾಲೀಕರು ಮಾಡಬೇಕಾದ ಕೆಲವು ಮೂಲಭೂತ ಕಾರು ನಿರ್ವಹಣೆ ಇಲ್ಲಿದೆ.

ಟೈರ್ ನಿರ್ವಹಣೆ

ಆಯಿಲ್ ಬದಲಾವಣೆ ಮತ್ತು ಆಯಿಲ್ ಫಿಲ್ಟರ್ ಬದಲಿ

ಫ್ಲೂಯಡ್ ಟಾಪ್-ಅಪ್ ಮತ್ತು ಬದಲಾವಣೆ

ಬೆಲ್ಟ್ ಮತ್ತು ಹಾಸ್ ನಿರ್ವಹಣೆ

ವೈಪರ್ ಬ್ಲೇಡ್ ಬದಲಿ

ಬ್ರೇಕ್ ನಿರ್ವಹಣೆ

Most Read Articles

Kannada
English summary
10 Important Things Every Car Owner Should Know These Will Increase Car Life
Story first published: Thursday, July 28, 2022, 13:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X