ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

Written By:

ಬ್ಲ್ಯಾಕ್ ಬಾಕ್ಸ್ (ಕಪ್ಪು ಪೆಟ್ಟಿಗೆ) ಮಾದರಿಯಲ್ಲೇ ಕಾರ್ಯನಿರ್ವಹಿಸುವ ಡ್ರೈವರ್ ರೆಕಾರ್ಡರ್ ಆ್ಯನ್‌ಲೈಸರ್ ಪ್ರೊಸೆಸರ್ ಎಕ್ಸ್‌ಟ್ರ್ಯಾಕ್ಟರ್ ಸ್ಟಿಸ್ಟಮ್ (ಡಿಆರ್‌ಪಿಇಎಸ್) ಅನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಭಿವೃದ್ಧಿಪಡಿಸುವುದರ ಬಗ್ಗೆ ನಾವು ವರದಿ ಮಾಡಿದ್ದೆವು.

ಅಷ್ಟಕ್ಕೂ ಬ್ಲ್ಯಾಕ್ ಬಾಕ್ಸ್ ಅಂದರೇನು? ವಿಮಾನಗಳಲ್ಲಿ ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದನ್ನು ಕಂಡು ಹುಡುಕಿದವರು ಯಾರು? ಬಣ್ಣ ಯಾವುದು? ಹೀಗೆ ಕಪ್ಪು ಪೆಟ್ಟಿಗೆ ಬಗ್ಗೆ ಹತ್ತು ಹಲವಾರು ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ನಿಮ್ಮಲ್ಲಿರುವ ಈ ಎಲ್ಲ ಕುತೂಹಲಕ್ಕೆ ಪರಿಹಾರವಾಗಿ ನಮ್ಮ ಕನ್ನಡ ಡ್ರೈವ್ ಸ್ಪಾರ್ಕ್ ತಂಡವು ವಿಸೃತವಾದ ಲೇಖನದೊಂದಿಗೆ ನಿಮ್ಮ ಮುಂದಿಗೆ ಬಂದಿದ್ದು, ಖಂಡಿತವಾಗಿಯೂ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ನಿಮಗೆ ನೆರವಾಗಲಿದೆ.

ಏನಿದು ಬ್ಲ್ಯಾಕ್ ಬಾಕ್ಸ್..?

'ಬ್ಲ್ಯಾಕ್ ಬಾಕ್ಸ್' ಉಪಕರಣವನ್ನು ಸಂಶೋಧನೆ ಮಾಡಿದವರು ಆಸ್ಟ್ರೇಲಿಯಾದ ಡೇವಿಡ್ ವಾರೆನ್. ಇದರಲ್ಲಿ ಫ್ಲೈಟ್ ಡಾಟಾ ರೆಕಾರ್ಡರ್ (FDA) ಹಾಗೂ ಕಾಕ್ ಪಿಟ್ ವೈಸ್ ರೆಕಾರ್ಡರ್ (CVR) ಗಳೆಂಬ ಎರಡು ವಿಧಗಳಿವೆ. 1953ನೇ ಇಸವಿಯಲ್ಲಿ ವಿಶ್ವದ ಮೊತ್ತ ಮೊದಲ ವಾಣಿಜ್ಯ ಉದ್ದೇಶಿತ ಜೆಟ್ ಕಾಮೆಟ್ ವಿಮಾನ ಅಪಘಾತಕ್ಕೀಡಾದ ಸಂದರ್ಭದಲ್ಲಿ ವಾರೆನ್ ಮನದಲ್ಲಿ ಬ್ಲ್ಯಾಕ್ ಬಾಕ್ಸ್ ಸಂಶೋಧನೆಗೆ ಬಗ್ಗೆ ಯೋಚನೆ ಹೊಳಿಯಿತು. ಆರಂಭದಲ್ಲಿ ತೊಡಕುಗಳು ಎದುರಾದರೂ 1956ನೇ ಇಸವಿಯಲ್ಲಿ ಪ್ರಯೋಗಾರ್ಥ ಉಪಕರಣವವೊಂದನ್ನು ರಚಿಸಿದರು. ವಿಶ್ವ ವಿಮಾನಯಾನ ಸುರಕ್ಷತೆಗೆ ಡೇವಿಡ್ ವಾರೆನ್ ಸಂಶೋಧನೆ ವಿಶ್ವಕ್ಕೆ ನೀಡಿದ ಪ್ರಮುಖ ಕೊಡುಗೆಯಾಗಿದೆ.

ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಬ್ಲ್ಯಾಕ್ ಬಾಕ್ಸ್ ಬಗ್ಗೆ ಇನ್ನಷ್ಟು ಕುತೂಹಲಕಾರಿ ವಿಚಾರಗಳನ್ನು ತಿಳಿದುಕೊಳ್ಳೋಣವೇ...

ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಬ್ಲ್ಯಾಕ್ ಬಾಕ್ಸ್ ಉಪಕರಣದಲ್ಲಿ ಎರಡು ಪ್ರಮುಖ ಭಾಗಗಳಿವೆ. ಒಂದು ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್. ಇನ್ನೊಂದು ಫ್ಲೈಟ್ ಟಾಟಾ ರೆಕಾರ್ಡರ್. ಇದರ ಪೈಕಿ ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಎಂಬ ಉಪಕರಣ ಡಿಜಿಟಲ್ ಆಗಿ ಕಾಕ್‌ಪಿಟ್‌ನೊಳಗೆ ನಡೆಸಿದ ಎಲ್ಲ ಸಂಭಾಷಣೆಗಳನ್ನೂ ದಾಖಲಿಸುತ್ತದೆ. ಅವಘಡಗಳ ಸಂದರ್ಭ ಹಾಗೂ ಮೊದಲು ಪೈಲಟ್‌ಗಳ ಧ್ವನಿ ರೆಕಾರ್ಡ್ ಆಗಿರುತ್ತದೆ. ಹಾಗಾಗಿ ಇದು ಯಾವುದೇ ವಿಮಾನ ದುರಂತವಾದರೂ, ಅದು ಹೇಗಾಯಿತೆಂದು ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಉಪಕರಣವಾಗಿ ಮಹತ್ವ ಪಡೆದಿದೆ.

ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಕಪ್ಪು ಪೆಟ್ಟಿಗೆಯೊಳಗಿರುವ ಇನ್ನೊಂದು ಭಾಗವಾದ ಪ್ಲೈಟ್ ಡಾಟಾ ರೆಕಾರ್ಡರ್ ಕೂಡಾ ಮಹತ್ವದ್ದಾಗಿದ್ದು, ಇದು ವಿಮಾನದ ವೇಗೋತ್ಕರ್ಷ, ಎಂಜಿನ್, ಗಾಳಿಯ ವೇಗೆ, ವಿಮಾನವಿದ್ದ ಎತ್ತರ, ರಾಡಾರ್ ಇರುವ ಸ್ಥಳ ಸೇರಿದಂತೆ ಹಲವು ಮಾಹಿತಿಗಳನ್ನು ನೀಡುತ್ತದೆ. ಈ ಎಲ್ಲ ಮಾಹಿತಿಗಳ ಮೂಲಕ ವಿಮಾನ ದುರಂತಕ್ಕೆ ಕಾರಣವನ್ನು ತಜ್ಞರು ಪತ್ತೆ ಹಚ್ಚುತ್ತಾರೆ.

ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಈ ಕಪ್ಪು ಪಟ್ಟಿಗೆಯು ಶೂ ಬಾಕ್ಸ್‌ನಷ್ಟು ದೊಡ್ಡದಿದ್ದು, ಇದರ ಹೊರಕವಚ ಪ್ರತಿಫಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊರಕವಚ ಸ್ಟೀಲ್‌ನಿಂದ ಆವೃತವಾಗಿದೆ. ಈ ಪೆಟ್ಟಿಗೆ ಯಾವುದೇ ಉಷ್ಣತೆಯನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ನೀರಿನಲ್ಲಿ ಮುಳುಗಿದರೂ ತನ್ನಳೊಗೆ ಹೊಂದಿರುವ ಯಾವುದೇ ಮಾಹಿತಿಗಳನ್ನು ಕಳೆದುಕೊಳ್ಳುವುದಿಲ್ಲ ಹಾಗೂ ನಾಶವಾಗುವುದಿಲ್ಲ.

ಎಲ್ಲಿ ಆಳವಡಿಸಲಾಗುತ್ತದೆ..?

ಎಲ್ಲಿ ಆಳವಡಿಸಲಾಗುತ್ತದೆ..?

ಯಾವುದೇ ವಿಮಾನ ದುರಂತವಾದರೂ ಅತಿ ಕಡಿಮೆ ಹಾನಿಯಾಗುವ ಭಾಗವೆಂದರೆ ವಿಮಾನದ ಬಾಲವಾಗಿದೆ. ಆದ್ದರಿಂದ ಈ ಉಪಕರಣವನ್ನು ಬಾಲದ ಸಮೀಪ ಅತ್ಯಂತ ಭದ್ರವಾಗಿ ಆಳವಡಿಸಲಾಗುತ್ತದೆ. ಬಹಳಷ್ಟು ಅವಘಡಗಳಲ್ಲಿ ಕಪ್ಪು ಪೆಟ್ಟಿಗೆ ಹೊರಭಾಗವೆಲ್ಲ ಜರ್ಜರಿತವಾಗಿ ಮೆಮೋರಿ ಯುನಿಟ್ ಮಾತ್ರ ಲಭ್ಯವಾಗುತ್ತದೆ.

ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

20 ಸಾವಿರ ಅಡಿ ಸಮುದ್ರದ ತಳಭಾಗದಲ್ಲೂ 24 ಗಂಟೆಯವರೆಗೆ ಸುಸ್ಥಿತಿಯಲ್ಲಿರುವಂತೆ ಕಪ್ಪು ಪೆಟ್ಟಿಗೆ ತಯಾರಿಸಲಾಗುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್‌ನಿಂದ ಕಪ್ಪು ಪೆಟ್ಟಿಗೆ ಚಾರ್ಜ್ ಆಗುತ್ತದೆ. ವಿಮಾನ ಗಾತ್ರ ಆಧರಿಸಿ ವೋಲ್ಟೇಜ್ ನಿರ್ಧಾರ. ಅಫಘಾತ ಸಂಭವಿಸುವುದಕ್ಕೆ ಮೊದಲೇ ವಿಮಾನದಲ್ಲಿ ವಿದ್ಯುತ್ ಸೌಲಭ್ಯ ನಿಂತು ಹೋಗಿದ್ದರೆ, ಕೊನೆಕ್ಷಣದ ರೆಕಾರ್ಡಿಂಗ್ ಇಲ್ಲವಾಗುತ್ತದೆ.

ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ವಿಮಾನ ಅಪಘಾತ ಸಂಭವಿಸಿದ ನಂತರ ಕಪ್ಪು ಪೆಟ್ಟಿಗೆ ಸಿಕ್ಕರೆ ವಿಮಾನ ಅಪಘಾತಕ್ಕೆ ಕಾರಣಗಳನ್ನು ಪತ್ತೆ ಹಚ್ಚಬಹದು. ಭಾರತದಲ್ಲಿ ಎಲ್ಲಿಯೇ ವಿಮಾನ ಅಪಘಾತ ಸಂಭವಿಸಿದರೂ, ಮೊದಲು ಕಪ್ಪುಪೆಟ್ಟಿಗೆಯನ್ನು ಪಡೆದ ಮೇಲೆ ಅದನ್ನು ಸಿವಿಲ್ ಏವಿಯೇಷನ್‌ನ ಪ್ರಮುಖ ಕಚೇರಿಯಿರುವ ದೆಹಲಿಗೆ ರವಾನಿಸಲಾಗುತ್ತದೆ. ಅಲ್ಲಿಯೂ ಯಾವುದೇ ಕಾರಣದಿಂದ ಮಾಹಿತಿ ಪಡೆಯಲು ಸಾಧ್ಯವಾಗದೆ ಇದ್ದರೆ, ಕಪ್ಪು ಪೆಟ್ಟಿಗೆಯನ್ನು ವಿಮಾನ ತಯಾರಾದ ಸಂಸ್ಥೆಗೆ ಸಲ್ಲಿಸಿ ಅಲ್ಲಿಂದ ಮಾಹಿತಿ ಪಡೆದುಕೊಳ್ಳುವ ಕೆಲಸವನ್ನು ಮಾಡಲಾಗುತ್ತದೆ.

ಬ್ಲ್ಯಾಕ್ ಬಾಕ್ಸ್ ಬಣ್ಣ ಯಾವುದು?

ಬ್ಲ್ಯಾಕ್ ಬಾಕ್ಸ್ ಬಣ್ಣ ಯಾವುದು?

ಕಪ್ಪು ಪೆಟ್ಟಿಗೆ ಉಪಕರಣಕ್ಕೆ ಹೆಸರು ಕಪ್ಪುಪೆಟ್ಟಿಗೆ ಎಂದಾದರೂ ಇದು ಕಪ್ಪು ಬಣ್ಣದ ಪೆಟ್ಟಿಗೆಯಲ್ಲ. ಕಡು ಕಿತ್ತಳೆ ಕೇಸರಿ ಬಣ್ಣವನ್ನು ಹೊಂದಿರುತ್ತದೆ. ಕಿತ್ತಳೆ ಬಣ್ಣದ ಈ ಪೆಟ್ಟಿಗೆಯನ್ನು ಕಪ್ಪು ಪೆಟ್ಟಿಗೆ ಎಂಬ ಹೆಸರಿಡಲು ಕಾರಣವಾದರೂ ಏನು ಎಂಬ ಸಂಶಯ ಸಹಜವಾಗಿಯೇ ಹುಟ್ಟಿಕೊಳ್ಳಬಹುದು. ವಾಸ್ತವದಲ್ಲಿ ಇದು ಕಿತ್ತಳೆ ಬಣ್ಣ ಹಾಗೂ ಹೊಳೆಯುವ ಬಿಳಿ ಪಟ್ಟಿ ಹೊಂದಿರುತ್ತದೆ. ಅವಶೇಷಗಳಲ್ಲಿ ಸುಲಭವಾಗಿ ಗುರುತಿಗೆ ಸಿಗಲಿ ಎಂಬ ಉದ್ದೇಶದಿಂದ ಈ ಬಣ್ಣ, ವಿಮಾನಪಘಾತವಾದಾಗ ಹೊರಹೊಮ್ಮುವ ಕಪ್ಪುಹೊಗೆಗೆ ಸಾಂಕೇತಿಕವಾಗಿ ಈ ಹೆಸರು ಬಂದಿದೆ ಎಂಬುದು ಕೆಲವರ ಅಭಿಪ್ರಾಯ. ದುರಂತವಾದ ಸಂದರ್ಭದಲ್ಲಿ ಈ ಪೆಟ್ಟಿಗೆಯ ಮೂಲಕ ಮಾಹಿತಿ ಪಡೆಯುವ ಕಾರಣ ಇದನ್ನು 'ಬ್ಲ್ಯಾಕ್ ಬಾಕ್ಸ್' ಎನ್ನುತ್ತಾರೆ. ಹಾಗಾಗಿ ಪೆಟ್ಟಿಗೆಯ ಬಣ್ಣ ಯಾವುದಾದರೂ, ದುರಂತದ ರಹಸ್ಯವನ್ನು ಅಡಗಿಸಿಟ್ಟ ಪೆಟ್ಟಿಗೆಯಾಗಿರುವ ಮೂಲಕ ಅದು ತನ್ನ ನಿಜ ಬಣ್ಣಕ್ಕಿಂತಲೂ ಭಾವನಾತ್ಮಕವಾಗಿ ಕಪ್ಪು ಪೆಟ್ಟಿಯಾಗಿಯೇ ಕಾಡುತ್ತದೆ.

ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಇನ್ನು 2010ನೇ ಇಸವಿಯಲ್ಲಿ ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಮಂಗಳೂರಿನ ಬಜ್ಪೆ ವಿಮಾನ ಸಮೀಪ ಅಪಘಾತಕ್ಕೀಡಾದ ದುರಂತ ದೃಶ್ಯಗಳು ಇನ್ನು ಮಾಸದೇ ಉಳಿದಿದೆ. ಈ ಘಟನೆಯಲ್ಲಿ 150ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು.

ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಆ ಬಳಿಕ ಕೆಲವು ದಿನಗಳ ಕಾಲ ನಡೆಸಿದ ಅವಿರತ ಶೋಧದ ನಂತರ ಕೊನೆಗೂ ಬ್ಲ್ಯಾಕ್ ಬಾಕ್ಸ್ ಪತ್ತೆ ಹಚ್ಚುವಲ್ಲಿ ತನಿಖಾ ತಂಡ ಯಶಸ್ವಿಯಾಗಿತ್ತು.

ಇದೀಗ ಬ್ಲ್ಯಾಕ್ ಬಾಕ್ಸ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

English summary
Popularly referred to as a "black box" by the media, the data recorded by the FDR is used for accident investigation, as well as for analyzing air safety issues, material degradation and engine performance.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more